ಸವಿತಾ ದೇಶಮುಖ ಅವರ ಕವಿತೆ “ಪ್ರೀತಿ ಕಳೆದುಹೋಗಿದೆ…”
ಕಾವ್ಯ ಸಂಗಾತಿ ಸವಿತಾ ದೇಶಮುಖ “ಪ್ರೀತಿ ಕಳೆದುಹೋಗಿದೆ…” ಮನೆ ಮೂಲೆ ಮೂಲೆಯಲಿ ಹುಡಕಿದೆನಿನ್ನ ಪುಟ್ಟ ಹೆಜ್ಜೆಯ ಸದ್ದು ಕೇಳದೆಆತುರದಿ ಓಡಿಬರುವ ನಿನ್ನ ನೋಟದ,ನೆನಪಾಗಿ ಹೃದಯ ತುಂಬಿ ಕಾಡುತ್ತಿದೆ.!!೧!! ತಿಂಡಿ ಬಟ್ಟಲೂ ಹಾಗೆಯೇ ಉಳಿದಿದೆ,ಕಾಯುತ ನಿನ್ನ ದಾರಿ ನೋಡುತ್ತಿದೆ.ಎಲ್ಲಿ ಹೋದೆ ಕಣ್ಮರೆಯಾಗಿ ಹೊರಟೆನಿನ್ನಿಲ್ಲದೆ ಮನವು ಖಾಲಿಯಾಗಿದೆ.!!೨!! ಮಡಿಲ ಮೇಲೆ ಮಲಗಿದ ಕ್ಷಣಗಳು,ಮನದಾಳದಿ ಜೀವಂತವಾದ ದಿನಗಳುಮುದ್ದಿನ ಮ್ಯಾವ್ ಮ್ಯಾವ್ ಕೇಳಿದ ಕ್ಷಣಕಣ್ಣಂಚಿನಲಿ ಕಂಡ ನಿನ್ನ ತುಂಟಾಟಗಳು!!೩!! ಕರೆಗೆ ಕಿವಿಗೊಡದೆ ಗಾಳಿಗೆ ತೂರಿದ ಓಟಬೇಡವೆಂದರು ಮತ್ತೆ ನನ್ನ ಮನೆಗೆ ಬಂದ ಆಟನಿನ್ನ ಪುಟ್ಟ ಪಾದಗಳ ಗುರುತು ಕಂಡರೆ,ನಲಿ ನಲಿದಾಡಿದ ದಿನಗಳ ನೆನಪಿನ ಕಾಟ!!೪!! ದುಃಖದ ಮೋಡಗಳ ದೂರವಾಗದದುಅದೇತ್ತೋ ದೂರ ಮರೆಯಾಗಿ ಹೋದೆನೀ ನೇಟ್ಟಿದ ಪ್ರೀತಿ ಕಳೆದು ಹೋಗದು,ನೆನಪುಗಳ ಬೆಳಕು ಎಂದಿಗೂ ಆರದು. !!೫!! ಹೃದಯ ನಿನ್ನನು ದೂರ ತಿಳ್ಳಿದರೂ ನೀಕಲಿಸಿದ ಪ್ರೀತಿ ಹಿಡಿಸಿದೆ ಮನಸ್ಸಿಗೆ,ಆ ನಿನ್ನ ಮುದ್ದು ಕಣ್ಣುಗಳು, ನಿಷ್ಕಲ್ಮಶಆ ಪುಟ್ಟ ಮುಖ, ನನ್ನ ದಿನದ ನಗು!!೬!! ಆ ಚೂಪಾದ ಕಿವಿಗಳು ಹೆಜ್ಜೆಯ ಸದ್ದಿಗೆಎಚ್ಚರವಾಗಿ ನಿಲುವ ನಿನ್ನ ಮೈಮಾಟದಸೊಬಗು, ಸವಿಯಲು ಹಬ್ಬವಾಗಿತ್ತು ನನಗೆನೀ ಬಂದರೆ ಮನೆ ತುಂಬಾ ಜೀವ ತುಂಬಿತ್ತ !!೭!! ನೀ ಹೋದರೆ ಮೌನವೇ ಉಳಿಯುತ್ತಿತ್ತು.ಮತ್ತೆ ಮತ್ತೆ ಬಂದು ಪ್ರೀತಿ ಹರಿಸಿದ ಬೆಕ್ಕುನೋಡದೆ ಮನದ ಬಾಗಿಲು ಮುಚ್ಚಿದೆ.ಆದರೆ ನೀ ಮಾತ್ರ ಹಠಮಾರಿ ಮಗು, ಮತ್ತೆ ಮತ್ತೆ ಬಂದು ಹೃದಯ ತಟ್ಟಿದ್ದೆ.ಆ ನಿನ್ನ ಮುದ್ದು ಮುದ್ದಾದ ಕಣ್ಣುಗಳು…ಎರಡು ಪುಟ್ಟ ನಕ್ಷತ್ರಗಳು ಹೊಳಪುಒಮ್ಮೆ ನೋಡಿದರೆ ಸಾಕೆನಸದು ….. ಕಲ್ಲಿನ ಮನಕರಗುತ್ತು ಆ ಪುಟ್ಟ ಮುಖ,ಹಾಲಿನ ನೊರೆ ಮೃದು, ಚೂಪಾದ ಕಿವಿಗಳು,ಮಾತು ಕೇಳುತಿರೆ ನೆಟ್ಟಗೇ ನಿಲುವ ಆಟಮೈ ತುಂಬಿದ್ದ ಬಣ್ಣವೋ ದೇವರು ಬಿಡಿಸಿದ ಚಿತ್ರವೊಂದು! ಕಂದು ಮೋಡದ ನಡುವೆಕಪ್ಪು ಮಳೆಯ ಗೆರೆಗಳಂತೆ, ನಿನ್ನ ಮೈಮಾಟಕಣ್ಣಿಗೆ ಹಬ್ಬವಾಗಿತ್ತು.ಪುಟ್ಟ ಹೆಜ್ಜೆಗಳ ಸದ್ದು,ಮೃದುವಾದ ಬಾಲದ ನಾಟ್ಯ ಹೇಳ್ತಿರೋದು, ಸುತ್ತ ಸುತ್ತುವ ನಿನ್ನ ಪ್ರೀತಿ, ಮಾತಿಲ್ಲದಮಮತೆಯ ಭಾಷೆಯಾಗಿತ್ತು.ನಾನು ದೂರಸರಿದರು,ಮತ್ತೇ ಮತ್ತೇ ಬಂದೆ… ಅಂದುಅರಿಯಲಿಲ್ಲ ಅದು ಕೊನೆಯ ಬೆಟ್ಟೆಂದು.. ಈಗ ಮನೆ ತುಂಬಾ ನಿಶ್ಯಬ್ದ, ನಿನು ಪ್ರತಿಮೂಲೆಯಲ್ಲೂ ಜೀವಂತವಾಗಿರುವೆ ಹಾಗೆಮುದ್ದಾದ ಚೇಷ್ಟೆಗಳೆಲ್ಲ ಕಂಗಳ ನೀರುಅದೆಂದು ನಿನ್ನ ಮೋಹದಿ ಸಿಲುಕಿದೆ…. ಎಲ್ಲೋ ಒಂದು ಕಡೆ ನೀ ಇದ್ದರೆ, ಒಮ್ಮೆಮಾತ್ರ ಬಂದು ನೋಡು ಜೀವಾ.ಕಣ್ಣಗಳ ನೋಟಕ್ಕೆ ಕಾಯುತ್ತಿವೆ,ಮನದ ಮನೆಯ ಬಾಗಿಲು ತೆರೆದು ಮತ್ತೇ ಬರುವಿಗಾಗಿ ಕಾಯುತ್ತಿರುವೆ ಸವಿತಾ ದೇಶಮುಖ
ಸವಿತಾ ದೇಶಮುಖ ಅವರ ಕವಿತೆ “ಪ್ರೀತಿ ಕಳೆದುಹೋಗಿದೆ…” Read Post »

