ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.”
ಕಾವ್ಯ ಸಂಗಾತಿ ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.” ಭೂಪಟದ ಗೆರೆಗಳಲಿರಕ್ತದ ಕಲೆಗಳ ಹಸಿವು,ಅಧಿಕಾರದ ಅಮಲಿಗೆಅನಾಥ ಮಗುವಿನ ಅಳುವೇ ನೈವೇದ್ಯ, ಉಕ್ಕಿನ ಹಕ್ಕಿಗಳ ಅಬ್ಬರಕೆಮಣ್ಣಾದವು ಬದುಕು,ಗೆಲುವಿನ ಪಟಾಕಿ ಅಡಿಯಲ್ಲಿಹೂತುಹೋದವು ಸಾವಿರ ಉಸಿರು, ತುತ್ತು ಅನ್ನದ ಪಾತ್ರೆಯಲಿಬೆಂದು ಹೋದವು ಮದ್ದು-ಗುಂಡು,ಮನೆಮಠದ ನೆನಪುಗಳಿಗೆಈಗ ಸ್ಮಶಾನವೇ ಕಡೆಯ ಉಡುಗೊರೆ, ದೇಶಪ್ರೇಮದ ಘೋಷಣೆಯಲಿಕಾಣದಾದವು ಒಲವಿನ ಕಣ್ಣು,ಯುದ್ಧದ ಬೂದಿಯಲಿ ಉಳಿದದ್ದುಬರಿಯ ಬೂದುಬಣ್ಣದ ಮಣ್ಣು, ಗಡಿ ದಾಟದ ಕನಸುಗಳಿಗೆಬಾಂಬುಗಳೇ ಅಂತಿಮ ವಿರಾಮ,ಗೆದ್ದವನ ಅಟ್ಟಹಾಸದಲಿಸತ್ತವನ ಹೆಸರಿಗಿಲ್ಲ ಆರಾಮ, ಬಂಕರಿನ ಕತ್ತಲಲಿ ಬಿಕ್ಕಳಿಸುತಿದೆ ಬಾಲ್ಯ,ಸಮಾಧಿಯ ಮೇಲೆ ನಿಂತು ನಗುತ್ತಿದೆ ಸಾಮ್ರಾಜ್ಯ;ಗೆದ್ದವನ ಇತಿಹಾಸದಲಿ ರಕ್ತದ ವಾಸನೆ,ಸತ್ತವನ ಮನೆಯಲಿ ಬರಿ ಗೋಡೆಯ ಮೌನ ರೋಧನೆ…. ನಾಮದೇವ ಕಾಗದಗಾರ
ನಾಮದೇವ ಕಾಗದಗಾರ “ಗಡಿರೇಖೆಯ ನೆತ್ತರಿನ ಹಬ್ಬ.” Read Post »



