ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” ಮರೆಯದೇ ಬರೆದು ಬಿಡು ಪ್ರೀತಿ ನಿನ್ನ ಕಂಗಳ ಕಾಂತಿ ಮತ್ತು ನಿನ್ನಮರೆಗುಳಿತನದ ಶಾಂತಿಡಿಮೆನ್ಷಿಯಾ ಎಂದಾಗುವ ಮುನ್ನ ಬರೆದು ಬಿಡು ಪ್ರೀತಿ,ಪ್ರೀತಿ ಮಾಸುವಾ ಮುನ್ನಹೇಳಿಬಿಡು ಪ್ರೀತಿಯ ರೀತಿ! ಒಂದಾನೊಂದು ಕಾಲದ ಕಥೆಗಳು ಕಳೆದು ಹೋಗುವ ಮುನ್ನ,ಕಳೆದ ಕಥೆಗಳು ಧಾರಾವಾಹಿಯಾಗದೇಮಿದುಳ ಬಳ್ಳಿಯಿಂದ ಚಾಚಿಹೃದಯದಿಂದ ಚಿಮ್ಮುತ್ತಕಾಲಾಂತರ್ಗತವಾಗುವ ಮುನ್ನ. ಪ್ರೀತಿ ,ಕಾಲನ ತುಳಿತಕ್ಕೆ ನುಚ್ಚಾಗುವ ಮುನ್ನ ಸೋಸಿ ಬಿಡುನುಚ್ಚಿನ ನೆಚ್ಚಿನ ಪಾಯಸದ ಘಮ ನಾಸಿಕಕ್ಕೆ ತಲುಪುವ ಸುಮುಹೂರ್ತದ ಒಳಗೆ ನೀ ಹೊಗೆಯಾಗಿ ಬಿಡು ಹಬೆಯಾಗಿ ಬಿಡುಕಾಲ ಚಕ್ರನ ವೇಗಕ್ಕೆ ಸಿಲುಕಿ ಸೊಗಸಿ ಬಿಡು ಪ್ರೀತಿ ಇರುವಷ್ಟು ದಿನ ರಾತ್ರಿ ಸಮಯ!! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” Read Post »

ಕಾವ್ಯಯಾನ, ಗಝಲ್

 ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ  ವಾಣಿ ಭಂಡಾರಿ ಗಜಲ್ ಹಚ್ಚಿಟ್ಟ ಹಣತೆ ಎದೆಯನ್ನು ಸುಡುವಾಗ ಬೆಳಕಿನ ತಾಪವನ್ನು ಏನೆಂದು ಶಪಿಸಲಿಮಾತು ಕಳೆದುಕೊಂಡ ನಾಲಿಗೆ ಜೊತೆಗಿರುವಾಗ ಮೌನದ ನೋವನ್ನು ಏನೆಂದು ಕರೆಯಲಿ ಎಲ್ಲ ನಾಟಕ ಬರಿ ಪೊಳ್ಳು ಬಾಳ ಬಯಲಾಟದಲ್ಲಿ ನಡೆಯುತಿದೆ ತಾಲೀಮು ದಿಕ್ಕೆಟ್ಟುಇರುಳ ಬೆಳಕಿನಾಟದಲ್ಲಿ ರಾತ್ರಿ ಸಾವು ಹಗಲಿಗೆ ಹುಟ್ಟು ಕೂಡಿರುವಾಗ ಪ್ರೀತಿಯನ್ನು ಏನೆಂದು ಹೆಸರಿಸಲಿ ಹುಚ್ಚರ ಸಂತೆಯಲ್ಲಿ ತತ್ರಾಣಿ ಕನಸು ಸೋತು ಗೆಲುವಿನ ಕಂದೀಲು ಅಬ್ಬರಿಸುತ್ತಿದೆಜಾತಿ ಧರ್ಮ ಪ್ರೇಮಕ್ಕೆ ಕಾಮದ ಹಣೆಪಟ್ಟಿ ಕಟ್ಟಿರುವಾಗ ಬದುಕನ್ನು ಏನೆಂದು ಬಣ್ಣಿಸಲಿ. ಮೆಚ್ಚಿಸೊ ಹುಚ್ಚು ಹಂಗಿಸೊ ಆಸೆ ಇರದ ಭಾವಗಳು ಜನ್ನತ್ ಗೆ ಧಾವಿಸುತ್ತಿವೆಒಂದು ದಿನದ ಸಾವು ಸೋಲಾಗಿ ಕೈಹಿಡಿವಾಗ ಬಾಳ ಬಣ್ಣವನ್ನು ಏನೆಂದು ತಿಳಿಯಲಿ. ಮೂರ್ಖರ ಮಧ್ಯೆ ಸ್ವರ್ಗಕ್ಕೆ‌ ದಾರಿಕೇಳಬೇಡ ವಾಣಿ ಏಕತಾರಿ ನುಡಿಸುತ್ತ ಸಾಗುಆತ್ಮದ ಬಾಗಿಲು ಮುಕ್ತಿಯನ್ನೇ ಬೇಡುವಾಗ ಕುಹಕಿಗಳ‌ ಮನವನ್ನು ಏನೆಂದು ಚಿತ್ರಿಸಲಿ. ವಾಣಿ ಭಂಡಾರಿ                    

 ವಾಣಿ ಭಂಡಾರಿ ಅವರ ಗಜಲ್ Read Post »

ಇತರೆ

“ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”ವಿಶೇಷ ಲೇಖನ ಎನ್.ಜಯಚಂದ್ರನ್

ವ್ಯಕ್ತಿ ಸಂಗಾತಿ ಎನ್.ಜಯಚಂದ್ರನ್ “ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”  ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಅಮರನಾದ ಮಹಾಕವಿ ರವೀಂದ್ರನಾಥ ಟಾಗೋರ್  ಅವರು ಕೇವಲ ಕವಿ ಮಾತ್ರವಲ್ಲ; ಚಿಂತಕ, ತತ್ವಜ್ಞಾನಿ, ಸಂಗೀತಗಾರ, ಶಿಕ್ಷಣತಜ್ಞ ಹಾಗೂ ಮಾನವತಾವಾದಿಯೂ ಆಗಿದ್ದರು. “ಗೀತಾಂಜಲಿ” ಮೂಲಕ ವಿಶ್ವಮಾನ್ಯತೆ ಪಡೆದ ಈ ಮಹಾನ್ ಕವಿ, ಭಾರತದ ಮೊದಲ ನೊಬೆಲ್ ಪುರಸ್ಕೃತ ಸಾಹಿತ್ಯಸಾಧಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಉತ್ತರ ಕನ್ನಡ ಜಿಲ್ಲೆಯ ಕಾರವಾರದೊಂದಿಗೆ ಅವರಿಗಿದ್ದ ಆತ್ಮೀಯ ನಂಟನ್ನು ಸ್ಮರಿಸುವುದು ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ.ಕಾರವಾರದ ಪ್ರಕೃತಿ ಠಾಗೋರರ ಮನಸೂರೆಗೊಂಡದ್ದು1882ರ ಅವಧಿಯಲ್ಲಿ ಯುವಕನಾಗಿದ್ದ ಠಾಗೋರರು ತಮ್ಮ ಅಣ್ಣ ಸತ್ಯೇಂದ್ರನಾಥ ಠಾಗೋರರ ಬಳಿಗೆ ಕಾರವಾರಕ್ಕೆ ಬಂದಿದ್ದರು. ಆ ಕಾಲದಲ್ಲಿ ಸತ್ಯೇಂದ್ರನಾಥರು ಬ್ರಿಟಿಷ್ ಆಡಳಿತದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಮುದ್ರ, ಪಶ್ಚಿಮ ಘಟ್ಟಗಳ ಹಸಿರು, ಕಾಳಿ ನದಿಯ ಹರಿವು, ಮೌನಭರಿತ ಸಂಜೆಗಳು – ಇವೆಲ್ಲವೂ ಯುವ ರವೀಂದ್ರನಾಥರ ಕವಿಮನಸ್ಸನ್ನು ಆಳವಾಗಿ ಸ್ಪರ್ಶಿಸಿತು.ಕಾರವಾರದ ನಿಸರ್ಗ ಸೌಂದರ್ಯವನ್ನು ಕಂಡು ಅವರು ಮಂತ್ರಮುಗ್ಧರಾಗಿದ್ದರು. ಕಾರವಾರದ ಸಮುದ್ರತೀರದ ಸಾಯಂಕಾಲವನ್ನು ಕುರಿತು ಅವರು ಬರೆದ ಕೆಲವು ಬರಹಗಳಲ್ಲಿ ಪ್ರಕೃತಿ ಮತ್ತು ಮಾನವ ಆತ್ಮದ ನಡುವಿನ ಆಧ್ಯಾತ್ಮಿಕ ಸಂಬಂಧ ಸ್ಪಷ್ಟವಾಗಿ ಗೋಚರಿಸುತ್ತದೆ. ನಂತರದ ಅವಧಿಯಲ್ಲಿ ಅವರ ಕಾವ್ಯಗಳಲ್ಲಿ ಕಾಣುವ ಪ್ರಕೃತಿ ಸಂವೇದನೆಗೆ ಕಾರವಾರದ ಅನುಭವವೂ ಒಂದು ಪ್ರಮುಖ ಪ್ರೇರಣೆಯಾಗಿತ್ತು ಎಂದು ಸಾಹಿತ್ಯ ಅಧ್ಯಯನಕಾರರು ಅಭಿಪ್ರಾಯಪಡುತ್ತಾರೆ.“ನಿರ್ಜರರ ಸ್ವಪ್ನಭಂಗ” – ಪ್ರಕೃತಿಯೊಳಗಿನ ಆತ್ಮಜಾಗೃತಿಕಾರವಾರ ಪ್ರವಾಸದ ಸಂದರ್ಭದಲ್ಲಿ ಅವರ ಮನಸ್ಸಿನಲ್ಲಿ ಮೂಡಿದ ಭಾವನೆಗಳು ನಂತರ ಹಲವು ಕಾವ್ಯಗಳಲ್ಲಿ ಪ್ರತಿಫಲಿಸಿದವು. ವಿಶೇಷವಾಗಿ “ನಿರ್ಜರರ ಸ್ವಪ್ನಭಂಗ” ಕವನದಲ್ಲಿ ಪ್ರಕೃತಿಯೊಳಗಿನ ಜೀವಚೈತನ್ಯವನ್ನು ಅವರು ಹೀಗೆ ಚಿತ್ರಿಸುತ್ತಾರೆ: “ಇಂದು ಈ ಪ್ರಭಾತದ ರವಿಕಿರಣಹೇಗೆ ಪ್ರವೇಶಿಸಿತು ಜೀವದೊಳಗೆ…” ಈ ಸಾಲುಗಳಲ್ಲಿ ಪ್ರಕೃತಿ ಮಾನವನ ಆತ್ಮವನ್ನು ಜಾಗೃತಿಗೊಳಿಸುವ ಶಕ್ತಿಯಾಗಿ ಕಾಣಿಸುತ್ತದೆ. ಕಾರವಾರದ ನಿಶ್ಶಬ್ದ ಪ್ರಕೃತಿ ಮತ್ತು ಸಮುದ್ರದ ಅಲೆಗಳ ಸಂಗೀತವು ಈ ಕಾವ್ಯಭಾವನೆಗೆ ಹಿನ್ನೆಲೆಯಾದವು ಎನ್ನುವುದು ಅತಿಶಯೋಕ್ತಿಯಲ್ಲ.“ಗೀತಾಂಜಲಿ” – ವಿಶ್ವಕ್ಕೆ ಭಾರತದ ಆತ್ಮಧ್ವನಿ1913ರಲ್ಲಿ ಗೀತಾಂಜಲಿ ಕೃತಿಗೆ ನೊಬೆಲ್ ಪ್ರಶಸ್ತಿ ಲಭಿಸಿದಾಗ ಭಾರತೀಯ ಸಾಹಿತ್ಯ ವಿಶ್ವದ ಗಮನಸೆಳೆಯಿತು. “Where the mind is without fear…” ಎಂಬ ಅವರ ಅಮರ ಕಾವ್ಯಪಂಕ್ತಿಗಳು ಇಂದಿಗೂ ಮಾನವ ಸ್ವಾತಂತ್ರ್ಯದ ಘೋಷಣೆಯಾಗಿ ಓದಲಾಗುತ್ತವೆ.ಅದರ ಕನ್ನಡಾರ್ಥ ಹೀಗಿದೆ: “ಭಯವಿಲ್ಲದ ಮನಸ್ಸು ಇರುವಲ್ಲಿ,ತಲೆ ಎತ್ತಿ ನಿಲ್ಲುವ ಮಾನವ ಇರುವಲ್ಲಿ,ಜ್ಞಾನವು ಮುಕ್ತವಾಗಿರುವಲ್ಲಿ…” ಠಾಗೋರರ ಸಾಹಿತ್ಯದಲ್ಲಿ ರಾಷ್ಟ್ರಪ್ರೇಮ ಇದ್ದರೂ ಅದು ಸಂಕುಚಿತ ರಾಷ್ಟ್ರಭಾವನೆಯಲ್ಲ; ಮಾನವತೆಯ ಆಧಾರದ ವಿಶ್ವಸೌಹಾರ್ದದ ಕನಸಾಗಿತ್ತು.ಪ್ರಕೃತಿ, ಮಾನವತೆ ಮತ್ತು ಶಿಕ್ಷಣದ ತ್ರಿವೇಣಿಠಾಗೋರರು ಸಾಹಿತ್ಯದ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಮಹತ್ವದ ಕ್ರಾಂತಿ ತಂದವರು. ಅವರು ಸ್ಥಾಪಿಸಿದ ವಿಶ್ವಭಾರತಿ ಯುನಿವರ್ಸಿಟಿ ವಿಶ್ವಮಾನವೀಯ ಮೌಲ್ಯಗಳ ಪ್ರತೀಕವಾಗಿತ್ತು. ಪ್ರಕೃತಿಯ ಮಧ್ಯೆ ಶಿಕ್ಷಣ ನೀಡಬೇಕು ಎಂಬ ಅವರ ಕನಸು ಕಾರವಾರದಂತಹ ನಿಸರ್ಗತಾಣಗಳಲ್ಲಿ ಪಡೆದ ಅನುಭವಗಳಿಂದಲೇ ಮತ್ತಷ್ಟು ಗಾಢವಾಯಿತೆಂದು ಹೇಳಲಾಗುತ್ತದೆ.ಅವರ ಅನೇಕ ಕಾವ್ಯಗಳಲ್ಲಿ ಸಮುದ್ರ, ಗಾಳಿ, ಮಳೆ, ಹಕ್ಕಿಗಳು ಮತ್ತು ಅರಣ್ಯಗಳು ಜೀವಂತ ಪಾತ್ರಗಳಾಗಿ ಕಾಣಿಸುತ್ತವೆ. ಪ್ರಕೃತಿಯನ್ನು ಕೇವಲ ದೃಶ್ಯವಲ್ಲ, ಆತ್ಮೀಯ ಅನುಭವವಾಗಿ ನೋಡುವ ದೃಷ್ಟಿಯನ್ನು ಅವರು ಸಾಹಿತ್ಯಕ್ಕೆ ನೀಡಿದರು. ಕಾರವಾರದ ಹೆಮ್ಮೆ. ಇಂದು ಕಾರವಾರವನ್ನು ನೆನೆಸಿದಾಗ ಕಾರವಾರ ಕೇವಲ ಪ್ರವಾಸಿ ತಾಣವಲ್ಲ; ಮಹಾಕವಿ ಠಾಗೋರರ ಕಾವ್ಯಸ್ಮೃತಿಗಳನ್ನು ಹೊತ್ತ ಸಾಹಿತ್ಯಭೂಮಿಯೂ ಆಗಿದೆ. ಅವರು ಕೆಲ ದಿನಗಳ ಕಾಲ ಇಲ್ಲಿ ಕಳೆದಿದ್ದರೂ, ಆ ಅನುಭವಗಳು ಅವರ ಸಾಹಿತ್ಯ ಚಿಂತನೆಗೆ ಶಾಶ್ವತ ಸ್ಪರ್ಶ ನೀಡಿದವು.ಕಾಳಿ ನದಿ, ಅರಬ್ಬೀ ಸಮುದ್ರ, ಮೌನಮಯ ಸಂಜೆಯ ಹೊತ್ತು – ಇವುಗಳ ನಡುವೆ ನಿಂತು ನೋಡಿದಾಗ, ಇನ್ನೂ ಎಲ್ಲೋ ಠಾಗೋರರ ಕಾವ್ಯದ ಪ್ರತಿಧ್ವನಿ ಕೇಳಿಬರುವಂತೆ ಭಾಸವಾಗುತ್ತದೆ.ಅಂತಿಮವಾಗಿರವೀಂದ್ರನಾಥ ಠಾಗೋರರು ಕೇವಲ ಒಂದು ಯುಗದ ಕವಿಯಲ್ಲ; ಮಾನವ ಆತ್ಮದ ಶಾಶ್ವತ ಧ್ವನಿ. ಅವರ ಸಾಹಿತ್ಯ ನಮಗೆ ಪ್ರಕೃತಿಯನ್ನು ಪ್ರೀತಿಸಲು, ಮಾನವನನ್ನು ಗೌರವಿಸಲು ಹಾಗೂ ವಿಶ್ವವನ್ನು ಒಂದು ಕುಟುಂಬವಾಗಿ ಕಾಣಲು ಕಲಿಸುತ್ತದೆ.  ಕಾರವಾರದ ಕರಾವಳಿಯಲ್ಲೊಮ್ಮೆ ಅರಳಿದ ಆ ಕಾವ್ಯಚೇತನ ಇಂದು ಕೂಡ ಕನ್ನಡನಾಡಿನ ಮನಸ್ಸಿನಲ್ಲಿ ಜೀವಂತವಾಗಿದೆ ಎನ್.‌ ಜಯಚಂದ್ರನ್

“ಕಾರವಾರದ ಕರಾವಳಿಯಲ್ಲಿ ಅರಳಿದ ಕಾವ್ಯಚೇತನ.”ವಿಶೇಷ ಲೇಖನ ಎನ್.ಜಯಚಂದ್ರನ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಕೊರಳು ಕಂಪಿಸಿ ಬಿಗಿಯಾದರೆ ಪ್ರೇಮಕಣ್ಣೆರಡು ಮಿಳಿಸಿ ಹಸಿಯಾದರೆ ಪ್ರೇಮ ಮನದ ಬಯಲಲ್ಲೆಲ್ಲಾ ಅರಳಿ ಮಲ್ಲಿಗೆಜೀವ ಆಲಾಪಿಸಿ ಬಿಸಿಯಾದರೆ ಪ್ರೇಮ ದೇಹದರಮನೆಯ ತುಂಬಾ ಸಂಚಲನಭಾವ ಬಯಸಿ ಖುಷಿಯಾದರೆ ಪ್ರೇಮ ಹಂಬಲದಲೆ ಬೋರ್ಗರೆದು ಅಪ್ಪಳಿಸಿಆಸೆ ಅಂಕುರಿಸಿ ಹಸಿಯಾದರೆ ಪ್ರೇಮ ಬಯಕೆ ಬಾಂದಳ ಕುಣಿಕುಣಿದು ನಲಿದುಮಿಡಿವ ಎದೆ ಕಲಕಿ ತೃಷೆಯಾದರೆ ಪ್ರೇಮ ನರನಾಡಿಗಳಲಿ ನಾದಂತರಂಗ ಮೃದಂಗಹೃದಯ ಮಂಪರಿಸಿ ನಿಶೆಯಾದರೆ ಪ್ರೇಮ ಅನುಳ ಪ್ರೀತಿಯ ಶಿಶೆ ತುಂಬಿ ತುಳುಕುತ್ತಿರೆಬಾನು ಭುವಿ ರಮಿಸಿ ಒಂದಾದರೆ ಪ್ರೇಮ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ”

ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ”

ಚಂದ್ರನ ಬೆಳಕಲಿ
ಬೆಳ್ಳಿ ತರಂಗ,
ಸೂರ್ಯ ಕಿರಣದಲ್ಲಿ
ಚಿನ್ನದ ಹೊಳಪು

ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ” Read Post »

You cannot copy content of this page

Scroll to Top