ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ನನ್ನೊಳಗೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ನನ್ನೊಳಗೆ“ ನನ್ನೊಳಗೆ ಬೆಳಕೊಂದುಮೌನವಾಗಿ ಹೊಳೆಯಿತು,ಮೋಡದಾಚೆ ಹುಡುಕಿದ ಕಣ್ಣುಮನದೊಳಗೆ ಮರಳಿತು. ನದಿಯಂತೆ ದಿನ ಹರಿದು,ಗಾಳಿಯಂತೆ ಸುಖ ಸರಿದು;ಜಿಂಕೆಯ ಭಯ, ಸಿಂಹದ ಉರಿಒಂದೇ ಎದೆಯಲಿ ಬೆರೆತು. ಹುಟ್ಟಿನ ಕಂಬನಿ ಹನಿಯಲಿ,ತಾಯಿ ನಗುವಿನ ಹೊನಲಲಿ;ದುಃಖದ ಕಾವು, ಸುಖದ ತಂಪುಒಂದೇ ಮನದ ನೆರಳಲಿ. ಕಲ್ಲಿನ ಗುಡಿ ದಾಟಿದರೂಕಾಣದ ಸತ್ಯ ಉಳಿಯಿತು,ಕಣ್ಣು ಮುಚ್ಚಿದ ಮೌನದಲಿಆತ್ಮದೀಪ ಹೊತ್ತಿತು. ಬಂಧದ ಬೇರು ಮನದಲಿ,ಮುಕ್ತಿಯ ಹೂವು ಮನದಲಿ;ಮನ ಹಸಿರಾದ ಕ್ಷಣದಲಿಬದುಕು ಹೂವಾಯಿತು. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ನನ್ನೊಳಗೆ” Read Post »

ಕಾವ್ಯಯಾನ, ಗಝಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ಸಿಡಿಲು ಅಬ್ಬರಿಸಿದರೂ ಮಳೆಯು ಭರವಸೆಹುಟ್ಟಿಸಿದೆ ಗೆಳೆಯಾಮಿಡಿದು ಅಂತರಂಗದಲಿ ಮೂಡಿದ ಭಾವಗಳಮುಟ್ಟಿಸಿದೆ ಗೆಳೆಯಾ ಸುರಿದ ಧಾರೆಯೊಳಗೆ ಮಿಂದ  ಇಳೆಯಲಿತಂಪಿನ ಸಿಂಚನವಲ್ಲವೇಹರಿದು ಧಾರಾಕಾರವಾಗಿ ನದಿಯ ಸೇರುವಾಸೆಮೆಟ್ಟಿಸಿದೆ ಗೆಳೆಯಾ ವಸಂತ ತರುಲತೆಗಳಲಿ ಹಸಿರು ರಂಗವಲಿಎರಚುತ ಬಂದನುಹೊಸತು ಕನಸುಗಳ ಬಿತ್ತಲು ಆಸೆಗಳಕಟ್ಟಿಸಿದೆ ಗೆಳೆಯಾ ಕುಣಿದ ವಸುಂಧರೆಯ ಒಡಲು ಹರುಷದತೋರಣ ಬಿಡಿಸಿದೆತಣಿದ ರೈತಾಪಿವರ್ಗಕೆ ಮೂಡಿದ ಭಯವನುಅಟ್ಟಿಸಿದೆ ಗೆಳೆಯಾ ರಾಧೆಯ ಮನದಂಗಳದ ತೋಟದಿ ನಲಿದಿವೆಬಣ್ಣಬಣ್ಣದ ಹೂವುಗಳುಮಧುರ ಅನುಭೂತಿಯಲಿ ಬದುಕ ಮೌಲ್ಯವಗಿಟ್ಟಿಸಿದೆ ಗೆಳೆಯಾ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

ಕಾವ್ಯಯಾನ

ಶ್ರೀದೇವಿ .ಮ.ಗುಮ್ಮಗೋಳ ಕವಿತೆ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ”

ಕಾವ್ಯ ಸಂಗಾತಿ ಶ್ರೀದೇವಿ .ಮ.ಗುಮ್ಮಗೋಳ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ” ಅಪ್ಪನಿಲ್ಲದ ಮನೆಯೊಳಗೆನೋವು ನುಂಗಿ ಕಷ್ಟಸಹಿಸಿದೈರ್ಯ ವಹಿಸಿ…..ಮಕ್ಕಳನ್ನು ಸಾಕಿಬೆಳಸಿದಳಮ್ಮಮಕ್ಕಳೆಲ್ಲ ಬೆಳದು ಹೆಮ್ಮರವಾಗಿದ್ದಾರೆಮಕ್ಕಳೆಲ್ಲ ತಮ್ಮದೆಂಬ ನೆಲೆಯಲ್ಲಿಅಮ್ಮನಿಗ ಜೇಡರಬಲೆಯಲ್ಲಿ… ಹೆಗಲ ಮೇಲೆ ಹೊತ್ತು ಅಪ್ಪ ತಿರುಗುವಾಗನನ್ನ ಕೂಗು ಮುಗಿಲು ಮುಟ್ಟುತ್ತಿತ್ತುಅಪ್ಪಿನಿಲ್ಲದೇ ತಬ್ಬಲಿಗಳಾಗಿ….ಪ್ರಭಲ ಶಕ್ತಿಗಳ ಬಲಿಗಳಾಗಿ….ನಮ್ಮ ಕೂಗು ಕೇಳುವರಿರಲಿಲ್ಲತುತ್ತು ಕೂಳಿಗಾಗಿ ಅಮ್ಮಮುಸುರಿ ತಿಕ್ಕುತ ಅಲೆದಿದ್ದಳಲ್ಲ….. ಅಪ್ಪನಿಲ್ಲದ ಮನೆ ಈಗಉಪ್ಪರಗಿಯಲ್ಲಿದ್ದೂ ಅನಾಥಭಾವ….ಅಮ್ಮ ಕೇವಲ ಅಣ್ಣ-ಅತ್ತಿಗೆಯರ ಕೈಗೊಂಬೆಮರದಿಂದ ಬೇರ್ಪಟ್ಟ ರಂಬೆಕೊಂಬೆಜೀವವಿದ್ದು ನಿರ್ಜಿವದ ತೊಗುಲುಗೊಂಬೆ ಮನೆಗೆ ಬಂದಾಗಲೆಲ್ಲನೀ ಕುಳಿತ ಕುರ್ಚಿ, ಚಸ್ಮ, ಪೆನ್ನು, ಪುಸ್ತಕ ಬಣಗುಡುತ್ತಿವೆಕಣ್ಣಂಚಿನಲ್ಲಿ ಆರ್ದತೆ ತುಂಬಿಕೊಂಡುಮರೆಮಾಚುತ್ತೇನೆ ನೋವ….ಮಾತಿಗಿಳಿಯುತ್ತೇನೆ ಮಾತು ಒಣಗುತ್ತದೆನನ್ನ ಅಂತಾರಾಳದಲ್ಲಿ ಕುಳಿತುಅಪ್ಪ ಬಂದು ಗುಣಗಣಸಿದ ಭಾವ….. ಅಪ್ಪನಿದ್ದಾಗ ಅಮ್ಮನ‌ ಮಾತು ವಟವಟ…ಅಪ್ಪನ ಮೌನದಲ್ಲೂ ಇತ್ತು ಒಂದು ದಿಟ….ಈಗ ಅಮ್ಮನ ಮಾತುಗಳಿಗೆ ಭಾವವಿಲ್ಲಬರಿ ಮೌನ….ಅವಳ ಶಬ್ಧಗಳಿಗೆ ಕಿವಿಗಳಿಲ್ಲ…ರಕ್ಷಣೆಯೇ ಗೌಣ…. ಯಾವ ಆಸರೆಯಿಲ್ಲದ ಅಮ್ಮಗೋಡೆಯಾದರೂ ಆಸರೆಯಾದಿತೆಂದುಗೋಡೆಯ ಮೂಲೆಯೊಂದರಲ್ಲಿ ಕುಳಿತುಕೊಳ್ಳುತ್ತಾಳೆ….ಈಗ ಗೋಡೆಯೂ ಅಭದ್ರಅದಕ್ಕೂ ಕಾಡುತ್ತದೆ ನಿನ್ನ ನೆನಪು…. ಶ್ರೀದೇವಿ .ಮ.ಗುಮ್ಮಗೋಳ

ಶ್ರೀದೇವಿ .ಮ.ಗುಮ್ಮಗೋಳ ಕವಿತೆ “ಅಪ್ಪನಿಲ್ಲದ ಮನೆಯೊಳಗೆ ಅಮ್ಮ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ನಾವಿರೋದೇ ಹೀಗೆ”

ಕಾವ್ಯ ಸಂಗಾತಿ ಎಮ್ಮಾರ್ಕೆ “ನಾವಿರೋದೇ ಹೀಗೆ” ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮಮನೆಗೆ ತಗುಲುವುದೆಂಬ ಪ್ರಜ್ಞೆಯಿಲ್ಲ,ನಮ್ಮ ಮನೆಗೆ ಬೆಂಕಿ ಬಿದ್ದಾಗಲಷ್ಟೇನಾವು ಆರಿಸಲು ಅಣಿಯಾಗುವೆವು ಕಣ್ಣ ಮುಂದೆ ವಂಚನೆ,ಮೋಸನಡೆದರೂ ತಡೆಯುವ ತುಡಿತವಿಲ್ಲ,ನಮ್ಮ ಹತ್ತಿರಕ್ಕೆ ಬಂದಾಗಲಷ್ಟೇನಾವು ಬಿಡದೇ ಹರಿಹಾಯುವೆವು ನಮಗ್ಯಾಕೆ ಇಲ್ಲದ ಉಸಾಬರಿನಮಗೂ ಅದಕೂ ಸಂಬಂಧವಿಲ್ಲ,ನಮಗೆ ಸಂಬಂಧ ಪಟ್ಟಾಗಲಷ್ಟೇಎದೆಯನ್ನುಬ್ಬಿಸಿ ಎದುರಾಡುವೆವು ಬಿಟ್ಟಿ ಉಪದೇಶ ನೀಡುವವರಸಂಖ್ಯೆಗಂತೂ ಕೊರತೆಯೇ ಇಲ್ಲ,ಸ್ವಾರ್ಥದ ಸದುದ್ದೇಶವಿದ್ದರಷ್ಟೇಉದ್ದ ಉಪದೇಶವ ನೀಡುವೆವು ಬಹುತೇಕ ಪ್ರಭು,ಪ್ರಜೆಗಳಲ್ಲಿನಅಹಂಕಾರಕ್ಕ್ಯಾವ ಅಳತೆಗೋಲಿಲ್ಲ,ಕಾಗೆಯ ಬಣ್ಣ ಬಿಳುಪೆಂದರೂಹೂಂ ಎಂದು ಗೋನು ಹಾಕುವೆವು ಒಬ್ಬನೇ ಸೂರ್ಯ ನಿತ್ಯ ಜಗವಬೆಳಗುವುದರ ಪರಿವೇ ನಮಗಿಲ್ಲ,ನಮ್ಮೊಬ್ಬರಿಂದಲೇ ಏನಾದೀತು!ಎಂದು ಮನದಲ್ಲೇ ಮರುಗುವೆವು ಎಮ್ಮಾರ್ಕೆ

ಎಮ್ಮಾರ್ಕೆ ಅವರ ಕವಿತೆ “ನಾವಿರೋದೇ ಹೀಗೆ” Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ‌ ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ‌ ಗಜಲ್ ಮುಗ್ಧ ಜೀವಿಗಳ ರಕ್ತಪಾತಕೆ  ಬೆಚ್ಚಿದ  *ರಾತ್ರಿಗಾಗಿ* ಹಣತೆ ಬೆಳಗುವೆದ್ವೇಷ ಕಲಹ ಕ್ರಾಂತಿಗಳಿಂದ  ನರಳಿದ  *ಧಾತ್ರಿಗಾಗಿ* ಹಣತೆ  ಬೆಳಗುವೆ ತಲ್ಲಣ ಗೊಂಡಿದೆ  ಮನುಕುಲ ಭೀಕರ ಯುದ್ಧಗಳ  ಸಿಡಿಲಿನಿಂದಕವಿದ ಕರಾಳ  ಮುಖವಾಡಗಳ ಕಳಚುವ  *ಖಾತ್ರಿಗಾಗಿ* ಹಣತೆ  ಬೆಳಗುವೆ ನಾನೆಂಬ ಅಹಂಕಾರದ ಕ್ರೂರ ವರ್ತುಲಗಳು   ಸುತ್ತಿವೆ  ಜಗದಗಲಕ್ಷುದ್ರರಲಿ ಅವಿತ  ದುರುಳತನಗಳ ಮೆಟ್ಟುವ  *ಕ್ಷಾತ್ರಿಗಾಗಿ* ಹಣತೆ ಬೆಳಗುವೆ ಭಯದ ನೆರಳುಗಳು ಆವರಿಸಿ  ಹೆದರಿಸುತಿವೆ  ಹೆಜ್ಜೆ  ಹೆಜ್ಜೆಗೆ ಅಲ್ಲವೇಭ್ರಾತೃತ್ವದ ಸ್ನೇಹ ವಿಶ್ವಾಸಗಳು  ಮೆರೆಯುವ  *ಜಾತ್ರಿಗಾಗಿ* ಹಣತೆ  ಬೆಳಗುವೆ ಒಳಗೊಳಗೆ ಉಸಿರುಗಳು ಮೌನವಾಗಿ  ಬಿಕ್ಕುತ್ತಿವೆ ಪ್ರತಿಷ್ಠೆಯ ಜಾಲಗಳಲಿ  ಸಿಲುಕಿ ಬೇಗಂಶಾಂತಿ ಪ್ರೇಮಗಳನು ನೀಡುವ  ದೂತನಾಗಿ  ಬರುವ  *ಯಾತ್ರಿಗಾಗಿ* ಹಣತೆ  ಬೆಳಗುವೆ ಹಮೀದಾಬೇಗಂ ದೇಸಾಯಿ

ಹಮೀದಾ ಬೇಗಂ ದೇಸಾಯಿ‌ ಅವರ ಗಜಲ್ Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಗಾದೆಗಳ ಗಣಿ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಮನುಷ್ಯನಿಗೆ ಹೊನ್ನಿನ ರಾಶಿ ಸಿಕ್ಕರೂ ತೃಪ್ತಿಯಾಗುವುದಿಲ್ಲ.ಭವ ಬಂಧನದ ಆಸೆ-ಆಕಾಂಕ್ಷೆಗಳು ಪೆಡಂಭೂತವಾಗಿ ಕಾಡುತ್ತದೆ ಅವನಿಗೆ.ಪ್ರತಿಷ್ಠೆ,ತೋರಿಕೆಯ ಆಸೆ ನುಸುಳುತ್ತದೆ ಅವನ ಮನದೊಳಗೆ.ನೆಮ್ಮದಿಯು ತನ್ನಲ್ಲಿದ್ದರೂ ಅತೀ ನೆಮ್ಮದಿ ಪಡೆಯಲು ಅತ್ಯಂತ ಶ್ರೀಮಂತರ ಸಂಬಂಧಗಳನ್ನು ಬೆಳೆಸಲು ಮುಂದಾಗುತ್ತಾರೆ.ಅವರು ಒಳ್ಳೆಯವರೊ….ಕೆಟ್ಟವರೊ..‌ಮನುಷ್ಯತ್ವದಲ್ಲಿದ್ದಾರೊ….ಅಥವಾ ಅಮಾನುಷತ್ವದಲ್ಲಿ ಮುಳುಗಿದ್ದಾರೊ….ಯಾವುದೂ ಅರಿಯದೆ ಕೇವಲ ಅವರ ಸಿರಿತನದ ಮನೆತನವಿದ್ದರೆ ಸಾಕು,ಸಂಬಂಧ ಬೆಳೆಸಿಬಿಡುತ್ತಾರೆ.ಬಿಳಿಯಾಗಿ ಕಾಣುವುದೆಲ್ಲಾ ಹಾಲಲ್ಲ.ವೇಗವಾಗಿ ಓಡುವ ಮನಸ್ಸಿಗೆ ಏನೆಂದೂ ಕಾಣುವುದಿಲ್ಲ.ಈಗಿನ ಕಾಲದಲ್ಲಿ ಶ್ರೀಮಂತರ ಮನೆತನಗಳಲ್ಲಿ ನಯ  ವಿನಯ ಮರೆಯಾಗಿದ್ದು  ಮದ ಮತ್ಸರ,ಕೋಪ ತಾಪಗಳು ಮತ್ತು ವಿಶ್ವಾಸ ದ್ರೋಹಗಳೆ ಹಲವು ಬಗೆಯಾಗಿರುತ್ತವೆ.ನಾವುಗಳು ನಾವೇ ಆಗಿರಬೇಕು.ಯಾಕೆಂದರೆ ಜೀವನದಲ್ಲಿ ಅನೇಕ ರೀತಿಯ ಆಯ್ಕೆಗಳಿವೆ.ಅದೆಷ್ಟೋ ಆಯ್ಕೆಗಳನ್ನು ಪಡೆಯಲು ಪ್ರಯತ್ನ ಪಡುತ್ತಲೆ ಇರುತ್ತೇವೆ.ಸಣ್ಣ ಪುಟ್ಟ ಸಂತೋಷಗಳನ್ನು ಪೂರೈಸಿಕೊಳ್ಳಲು,ಸ್ವಾರ್ಥದಿಂದ ಆದರೂ ಸಾಧಿಸಿಕೊಳ್ಳುತ್ತೇವೆ.ನಾವೇ ತೋಡಿದ ತೆಗ್ಗಿನಲಿ ಒಂದಾನೊಂದು ದಿನ ಬೀಳುತ್ತೇವೆ.ಇದು ಸತ್ಯ.ಆತುರವೆಂದರೆ ಒಂದಲ್ಲ ಎರಡಲ್ಲ.,ಹತ್ತಾರು ಕೆಲಸ ಕಾರ್ಯಗಳ ಆತುರ.ತಾಳ್ಮೆ ಎಂಬುದು  ಬಹು ದೂರ.ಮಾತಿನ ಆತುರ.,ದುಡುಕುವ ಆತುರ.,ಹತ್ತಾರು ವಿಷಯಗಳ ಆತುರ.,ಪ್ರತಿ ಕೆಲಸಕ್ಕೂ ಆತುರವಾದರೆ ಹಿತವೆನ್ನುವ ಪಲಿತಾಂಶದಲ್ಲಿ ಫೇಲು ಆಗಬಹುದು.ನಮ್ಮೆದುರಿಗೆ ಇರುವವರನ್ನು ಹಿಂದಿಕ್ಕಿ ಓಡಬೇಕು ಎನ್ನುವ ಆತುರ.ಈ ವಿಷಯದಲ್ಲಿ ನಾವುಗಳು ತುಸು ಯೋಚಿಸುವುದಿಲ್ಲ.ನಮಗೆ ನಮ್ಮ ಕೆಲಸವೇ ಬಹು ಮುಖ್ಯ.ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಿಂದ ನಮಗೆ ಆಗುವುದಾದರೂ ಏನಿದೆ? ಅನ್ನುವ ಸ್ವಭಾವವನ್ನು ನಾವುಗಳು ಹೊಂದಿರುತ್ತೇವೆ.ಇದೇ ಕಾರಣಕ್ಕೆ ಸೂಕ್ಷ್ಮವನ್ನು ಅರಿಯದೆ ಹೋಗುತ್ತೇವೆ.ಈ ಮಾತಿನ ಅರಿವು ಇಷ್ಟೆ. ಪ್ರಭಾವಿ ಅಥವಾ ಶ್ರೀಮಂತ ವ್ಯಕ್ತಿಗಳ ಜೊತೆ ನಿಕಟ ಸಂಬಂಧವಿದ್ದರೂ, ಅದರಿಂದ ನಮಗೆ ಯಾವುದೇ ಪ್ರಯೋಜನ ಸಿಗದ ಪರಿಸ್ಥಿತಿಯನ್ನು ವಿವರಿಸುತ್ತದೆ.  ಅಳತೆಗೆ ಸಿಗದ ನೀರನ್ನು ಹೊಂದಿರುವ ಸಮುದ್ರದ ಜೊತೆ ನಮಗೆ ಸ್ನೇಹವಿದ್ದರೂ, ನಮಗೆ ಬೇಕಾದ ಒಂದು ಸಣ್ಣ ಹಿಡಿ ಉಪ್ಪು ಸಿಗದೇ ಹೋದರೆ ಆ ಸ್ನೇಹದಿಂದ ಏನು ತಾನೇ ಪ್ರಯೋಜನ?​ ಅಧಿಕಾರ ಮತ್ತು ಪ್ರಭಾವದ ನೆರಳಿನಡಿಯಲ್ಲಿ​ನಮಗೆ ಸಮಾಜದಲ್ಲಿ ದೊಡ್ಡ ಸ್ಥಾನಮಾನ ಹೊಂದಿರುವವರು ಅಥವಾ ರಾಜಕಾರಣಿಗಳು ಪರಿಚಯವಿರಬಹುದು. ಲೋಕದ ದೃಷ್ಟಿಯಲ್ಲಿ ನಾವು ಅವರ “ಆಪ್ತರು” ಎನಿಸಿಕೊಳ್ಳಬೇಕು.ಅವರ ಜೊತೆ ನಿಕಟ ಸಂಪರ್ಕದಲ್ಲಿರಬೇಕು  ಎಂದು ಸದಾ ಬಯಸುತ್ತೇವೆ. ಆದರೆ ನಮಗೆ ಒಂದು ಸಣ್ಣ ವೈಯಕ್ತಿಕ ಕೆಲಸ ಅಥವಾ ಸಹಾಯದ ಅವಶ್ಯಕತೆ ಬಂದಾಗ, ಆ ಪ್ರಭಾವಿ ವ್ಯಕ್ತಿಗಳು ನಮಗೆ ನೆರವಾಗದಿದ್ದರೆ ಅದು “ಸಮುದ್ರದ ನೆಂಟಸ್ತಿಕೆಯಂತೆಯೇ  ಸರಿ.​ವ್ಯರ್ಥ ಪ್ರಯತ್ನ ,ವ್ಯರ್ಥ ಹೆಮ್ಮೆಪಡುವುದು ಕ್ಷೀಣಿಸುತ್ತಿದೆ .ದೊಡ್ಡವರ ಪರಿಚಯವಿದೆ ಎಂದು ಜಗತ್ತಿಗೆ ಹೇಳಿಕೊಳ್ಳುವುದು ಸುಲಭ, ಆದರೆ ಆ ಸ್ನೇಹವು  ಫಲ ನೀಡದಿದ್ದಾಗ ಅದು ಕೇವಲ ಒಂದು ಬೃಹದಾಕಾರದ  ಬಲೂನಿನಂತೆ ಎಂದೆನಿಸಿ ಬಿಡುತ್ತದೆ.​ನಿರೀಕ್ಷೆ ಮತ್ತು ವಾಸ್ತವವು ಸುಳ್ಳಾಗಿ ಟುಸ್ ಎನ್ನುವ ಮುಕ್ಭತ್ತಿಯಾಗಿಡುವುದು . ಸಮುದ್ರದ ಅಲೆಗಳು ದಡಕ್ಕೆ ಬಂದು,ಬಡಿದು ಹಿಂದಕ್ಕೆ ಹೋಗುವುದು ನೋಡಲು  ಬಹು ಸುಂದರ, ಆದರೆ ಆ ಅಲೆಗಳು ಮನೆಯ ಬಾಯಾರಿಕೆಯನ್ನು ತಣಿಸಲಾರವು. ​ ಶ್ರೀಮಂತಿಕೆ ಮತ್ತು ಬಡತನದ ನಡುವಿನ ವ್ಯತ್ಯಾಸವು ಬಹಳ ಆಳವೂ,ಅನಂತವೂ ಆಗಿದೆ.​ಶ್ರೀಮಂತ ಕುಟುಂಬಗಳಲ್ಲಿ ಅಥವಾ ದೊಡ್ಡ ಉದ್ಯಮಿಗಳ ಅಡಿಯಲ್ಲಿ ಕೆಲಸ ಮಾಡುವ ಅನೇಕರನ್ನು ನಾವು ನೋಡುತ್ತೇವೆ. ಹೊರಗಿನ ಜನರಿಗೆ ಅವರು ಬಹಳ ಅದೃಷ್ಟವಂತರು ಎಂದು ಅನಿಸುತ್ತದೆ. ಆದರೆ ಆ ಶ್ರೀಮಂತರ ಮನೆಯಲ್ಲೇ ಕೆಲಸ ಮಾಡುವವರಿಗೆ  ಸರಿಯಾದ ಸಮಯಕ್ಕೆ  ಸಂಬಳವಿಲ್ಲದೆ ಅಥವಾ ಜೀವನದ ಮೂಲಭೂತ ಸೌಕರ್ಯಗಳಿಲ್ಲದೆ ಬಡತನದಲ್ಲಿ ಬೆಂದು,ಕೊನೆಗೆ ಅಂಥವರ ಮನೆಯ ಕೆಲಸವನ್ನು ಬಿಟ್ಟು ಹೋಗುವರು. ​”ಕಲ್ಪವೃಕ್ಷದ ಕೆಳಗೆ ನಿಂತರೂ ಬೇಡಲು ಬಾಯಿಯಿಲ್ಲದಂತೆ,ಮೂಕನಾದಂತೆ., ಕೈಯಲ್ಲಿ ಪಾತ್ರೆಯಿಲ್ಲದಿದ್ದರೆ ಮಳೆ ನೀರು ಕುಡಿಯಲು ಸಾಧ್ಯವಿಲ್ಲ.” ಹಾಗೆಯೇ, ಶ್ರೀಮಂತಿಕೆಯ ಸನಿಹವಿದ್ದರೂ ಅದನ್ನು ಹಂಚಿಕೊಳ್ಳುವ ಗುಣ ಅಥವಾ ಅದನ್ನು ಪಡೆಯುವ ಯೋಗ ಎರಡೂ ಮುಖ್ಯವಾಗುತ್ತದೆ. ​ಜ್ಞಾನ ಮತ್ತು ಅನ್ವಯದ ಕೊರತೆಯಿಂದ​ಈ ಮಾತನ್ನು ಕೇವಲ ಹಣಕ್ಕೆ ಸೀಮಿತಗೊಳಿಸದೆ, ಜ್ಞಾನಕ್ಕೂ ಅನ್ವಯಿಸಬಹುದು.​ನಮ್ಮ ಮನೆಯಲ್ಲಿ ಸಾವಿರಾರು ಪುಸ್ತಕಗಳಿರಬಹುದು, ಅಥವಾ ನಮಗೆ ಮಹಾನ್ ವಿದ್ವಾಂಸರ ಪರಿಚಯವಿರಬಹುದು.​ಆದರೆ ನಾವು ಆ ಜ್ಞಾನವನ್ನು ಬಳಸಿಕೊಳ್ಳದಿದ್ದರೆ ಅಥವಾ ನಮಗೆ ಜೀವನದ ಕಷ್ಟಕಾಲದಲ್ಲಿ ಆ ವಿದ್ವಾಂಸರಿಂದ ಒಂದು ತುಸುವಾದರೂ  ಮಾರ್ಗದರ್ಶನ ಸಿಗದಿದ್ದರೆ, ಅದು ನಡುರಾತ್ರಿಯಲ್ಲಿ ಹಿಡಿದ ಕೈದೀವಿಗೆಯಂತೆ ಶೂನ್ಯವಾಗಿರುತ್ತದೆ. ​ಸಂಬಂಧಗಳಲ್ಲಿನ ಪೊಳ್ಳುತನವು​ಇಂದಿನ ಕಾಲದ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಸಾವಿರಾರು “ಸ್ನೇಹಿತರು” ಇರುತ್ತಾರೆ. ಇದು ಸಮುದ್ರದಷ್ಟು ದೊಡ್ಡ ಜಾಲವಾಗಿದೆ.ಆದರೆ ನಮಗೆ ಮಾನಸಿಕವಾಗಿ ನೋವಾದಾಗ ಅಥವಾ ಸಹಾಯದ ಹಸ್ತ ಬೇಕಾದಾಗ ಒಬ್ಬರೂ ಬಾರದಿದ್ದರೆ, ಈ ಸೋಷಿಯಲ್ ಮೀಡಿಯಾ ಸ್ನೇಹವು “ಸಮುದ್ರದ ನೆಂಟಸ್ತನಕ್ಕೆ” ಸಾಕ್ಷಿಯಾಗುತ್ತದೆ.​ಸಮುದ್ರದ ನೀರು: ತುಂಬಾ ಇದೆ, ಆದರೆ ಕುಡಿಯಲು ಯೋಗ್ಯವಲ್ಲ.​ಬಾಹ್ಯ ಸಡಗರವಿದ್ದಂತೆ.ಬರೀ ತೋರಿಕೆಗೆ ಕಡಲು.ಆ ಕಡಲಿನ ಪಕ್ಕದಲ್ಲಿ ಮನೆ ಮಾಡಿದವರಿಗೆ ಗೊತ್ತು ಸಾಧಕ ಬಾಧಕಗಳು.ಹಾಗೆನೆ ಉಳ್ಳವರ ಸಂಬಂಧಗಳಲ್ಲಿ ತೋರಿಕೆ ಜಾಸ್ತಿಯಾಗಿ ಅಂತರಂಗದ ಮಿಡಿತ ಕಡಿಮೆಯಾದಾಗ  ಇಂತಹ ಗಾದೆ ಮಾತುಗಳು ಜನ್ಮತಾಳುತ್ತವೆ ​ಈ ಮಾತು ನಮಗೆ ಎರಡು ಬಹು ಮುಖ್ಯ ಪಾಠಗಳನ್ನು ಕಲಿಸಿಕೊಡುತ್ತದೆ.​ಆತ್ಮನಿರ್ಭರತೆ ಮತ್ತು ಗುಣದ ಬೆಲೆ. ಬೇರೆಯವರ ಶ್ರೀಮಂತಿಕೆ ಅಥವಾ ಅಧಿಕಾರವನ್ನು ನೋಡಿ ನಮಗೆ ಏನೋ ಸಿಗುತ್ತದೆ ಎಂಬ ಭ್ರಮೆಯಲ್ಲಿ ಬದುಕಲು ಆಸೆಪಡುತ್ತೇವೆ. ಆ ಆಸೆಯು ಈಡೇರದಿದ್ದಾಗ ಆತ್ಮ ನಿರ್ಭರವಾಗಿ ಅವರ ಒಳ ಗುಣದ ಅರಿವು ಪ್ರತ್ಯಕ್ಷವಾದಾಗ ದೂರಾಗುತ್ತೇವೆ.    ನಮಗೆ ಬೇಕಾದ ‘ಉಪ್ಪನ್ನು’ ನಾವೇ ಸಂಪಾದಿಸಿಕೊಳ್ಳಬೇಕು.​ರಾಜರ ,ರಾಜಕಾರಿಣಿಗಳ,ಜಮೀನ್ದಾರರ ಅದೆಷ್ಟು  ಸಂಪತ್ತು ಇದ್ದರೂ ನಮಗಾಗುವದೇನು?  ಅದು ಯಾರಿಗಾದರೂ ಬಳಕೆಯಾಗುತ್ತದೆಯೇ ಎಂಬುದು ಮುಖ್ಯ. ಉಪ್ಪಿಲ್ಲದ ಊಟ ಹೇಗೆ ರುಚಿಸುವುದಿಲ್ಲವೋ, ಹಾಗೆಯೇ ಮಾನವೀಯತೆ ಇಲ್ಲದ ಮಹಾನ್ ವ್ಯಕ್ತಿಗಳ ಸ್ನೇಹವು ನಿರರ್ಥಕ.​ಸಮುದ್ರದ ಹತ್ತಿರ ವಾಸಿಸಿದರೂ ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಮಗೆ ಬಾರದಿರಲಿ. ನಾವು ಬೆಳೆಸುವ ಸ್ನೇಹವು ಕೇವಲ ಗಾತ್ರದಲ್ಲಿ “ಸಮುದ್ರದಂತೆ” ಇರದೆ, ಗುಣದಲ್ಲಿ “ಶುದ್ಧ ಜಲದಂತೆ” ಇರಲಿ. ಆಡಂಬರದ ಸಂಬಂಧಗಳಿಗಿಂತ ಕಷ್ಟಕ್ಕೆ ಬರುವ ಪುಟ್ಟ ಸಂಬಂಧವೇ ಮಿಗಿಲು. ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಇವರು (ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ) 1998 ರಿಂದ ಕೆ.ಇ.ಬಿ.ಇಲಾಖೆಯಲ್ಲಿ ಲೈನ್ ಮ್ಯಾನ್ ವೃತ್ತಿ ಪ್ರಾರಂಭ.ಪ್ರಸ್ತುತ ಗಂಗಾವತಿ ನಗರದಲ್ಲಿ ಮೀಟರ್ ರೀಡರ್ ಸೇವೆ ಸಲ್ಲಿಸುತ್ತಿದ್ದಾರೆ.ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರರು.ಪ್ರಕಟಿತ ಪುಸ್ತಕಗಳು1)ನಾನಲ್ಲದ ನನ್ನೊಳಗೊಬ್ಬ(ಕವನ ಸಂಕಲನ)2)ನಕ್ಷತ್ರ ಗೊಂಚಲು(ಹಾಯ್ಕು ಗಳ ಸಂಕಲನ)3)ನಂಜು ನುಂಗಿದ ನಗು(ಕವನ ಸಂಕಲನ)4) ನಾಕು ತಾವಿನ ತಿರುವು(ಕವನ ಸಂಕಲನ)5)ನುಡಿದಷ್ಟೆ ನವಿರು(ವಿಮರ್ಶೆ ಕೃತಿ)ಪ್ರಶಸ್ತಿಗಳುಕವಿ ಭೂಷಣ ಪ್ರಶಸ್ತಿಅಡ್ವೈಸರ್ ಸಾಹಿತ್ಯ ಪ್ರಶಸ್ತಿ (ಮಂಡ್ಯ)ರುಕ್ಮಿಣಿ ಬಾಯಿ ಸಾಹಿತ್ಯ ಶ್ರೇಷ್ಠ ಪ್ರಶಸ್ತಿಚೆನ್ನಬಸವೇಶ್ವರ ಸಾಹಿತ್ಯ ಪ್ರಶಸ್ತಿಬೀಚಿ ಸಾಹಿತ್ಯ ಪ್ರಶಸ್ತಿರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ (ಮಾಣಿಕ್ಯ ಪ್ರಕಾಶನ ಹಾಸನ)ಚೆನ್ನವೀರ ಕಣವಿ ರಾಜ್ಯ ಸಾಹಿತ್ಯ ಪ್ರಶಸ್ತಿ (ಧಾರವಾಡ)ಡಾ.ಸಿದ್ಧಲಿಂಗಯ್ಯ ರಾಜ್ಯ ಸಾಹಿತ್ಯ ಪ್ರಶಸ್ತಿ (ಬಸವನ ಬಾಗೇವಾಡಿ)ರಾಜ್ಯ ಮಟ್ಟದ ಹೊಯ್ಸಳ ಸಾಹಿತ್ಯ ಪ್ರಶಸ್ತಿ (ಹಾಸನ.ಮಾಣಿಕ್ಯ ಪ್ರಕಾಶನ)ಕವಿ ಕಾವ್ಯ ಪುರಸ್ಕಾರ (ಮಂಡ್ಯ) ರಾಜ್ಯದ ಅನೇಕ ಪ್ರತಿಷ್ಠಿತ ಸಂಘಟನೆಯಲ್ಲಿ ಕಾವ್ಯ ಕಮ್ಮಟ, ಕವಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ.ಸೇವೆಕಾವ್ಯಲೋಕ (ಗಂಗಾವತಿ )ಸಂಘಟನೆಯಲ್ಲಿ ಕಾರ್ಯದರ್ಶಿಯಾಗಿ 89 ಕವಿಗೋಷ್ಠಿಯನ್ನು ನಿರ್ವಹಣೆ ಮಾಡಿದ್ದಾರೆ.ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿಯಲ್ಲಿ 21ಕವಿಗೋಷ್ಠಿ ನಡೆಸಿದ್ದಾರೆ.ಸಿರಿಗನ್ನಡ ವೇದಿಕೆ ಗಂಗಾವತಿ ತಾಲುಕಾಧ್ಯಕ್ಷರಾಗಿ ಮೂರು ವರುಷ ಸೇವೆ ಮತ್ತು 15 ಕವಿಗೋಷ್ಠಿ ನಡೆಸಿದ್ದಾರೆ.ಶರಣ ಸಾಹಿತ್ಯ ಪರಿಷತ್ ಗಂಗಾವತಿ ಯಲ್ಲಿ ಕಾರ್ಯದರ್ಶಿಯಾಗಿ ಒಂದು ವರುಷ ಸೇವೆ ಮತ್ತು 30 ವಚನ ಶ್ರಾವಣ ನಿರ್ವಹಣೆ.ಸಧ್ಯದಲ್ಲಿಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗಂಗಾವತಿಯ ತಾಲುಕು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ರಾಜ್ಯ ಮಟ್ಟದ ಕವಿ ಕಾವ್ಯ ಸಂಭ್ರಮ ಮತ್ತು ಕವಿ ಸಮ್ಮೇಳನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.ಹಲವು ಕವಿಗೋಷ್ಠಿ ಯ ಅಧ್ಯಕ್ಷತೆ ವಹಿಸಿದ್ದಾರೆ.2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುದುಗಲ್ಲನಲ್ಲಿ ಏರ್ಪಡಿಸಿದ ತಾಲುಕು ಕವಿ ಸಮ್ಮೇಳನದ ಅಧ್ಯಕ್ಷರಾಗಿ, ಅಧ್ಯಕ್ಷತೆ ನಿರ್ವಹಿಸಿದ ಹೆಮ್ಮೆ.

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-29 ಅರ್ಜುನ ಉವಾಚ ಡಾ.ವಿಶ್ವನಾಥ್‌ ಎನ್‌ ನೇರಳೆಕಟ್ಟೆ  ಹೀಗಿದ್ದರು ಸ್ತ್ರೀರಾಜ್ಯದ ಸ್ತ್ರೀಯರು                            ನಮ್ಮ ಕುದುರೆ ಪ್ರವೇಶಿಸಿದ್ದು ಸ್ತ್ರೀರಾಜ್ಯವನ್ನು. ನಾವು ಹೊಕ್ಕದ್ದು ವನಿತಾ ಸೀಮೆಯನ್ನು. ಭಾರವನ್ನು ತಾಳಲಾರದೆ ಧರಣಿ ಕುಗ್ಗಿದೆಯೋ ಏನೋ! ತುಸು ಮುಂದೆ ಹಿಗ್ಗಿದೆಯೋ ಏನೋ! ಎಂಬಂತಿತ್ತು ಅಲ್ಲಿಯ ಭೂಮಿಯ ಸ್ವರೂಪ. ಹೀಗೆ ಏರಿಳಿತಗಳಲ್ಲಿಯೇ ಸಾಗಿದೆವು ನಾವು. ಸ್ತ್ರೀರಾಜ್ಯದ ಬಗೆಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ನನ್ನಲ್ಲಿ ಅಳುಕು ಮೂಡತೊಡಗಿತು. ನನ್ನ ಜೊತೆಗಿದ್ದವರೆಲ್ಲಾ ಸಂಯಮದ ಮನಸ್ಸನ್ನು ಕಾಪಾಡಿಕೊಳ್ಳದಿದ್ದರೆ ಆ ಸ್ತ್ರೀರಾಜ್ಯವನ್ನು ದಾಟಿ ಮುಂದೆ ಹೋಗುವುದು ಸಾಧ್ಯವಿಲ್ಲ ಎಂಬ ಭಯ ನನ್ನಲ್ಲಿ ಉಂಟಾಯಿತು.    ಅಲ್ಲಿದ್ದವರೆಲ್ಲಾ ನಾರಿಯರೇ. ಪುರುಷರು ಜೀವನ ನಡೆಸುವುದಕ್ಕೆ ಅಲ್ಲಿ ಅವಕಾಶವೇ ಇರಲಿಲ್ಲ. ಅಲ್ಲಿದ್ದ ಸ್ತ್ರೀಯರು ಯೌವ್ವನಾವಸ್ಥೆಯನ್ನು ಹೊಂದಿದವರು. ಮಧುಪಾನದಿಂದ ಮತ್ತೇರಿಸಿಕೊಳ್ಳುವ ಚಟವನ್ನು ಇಟ್ಟುಕೊಂಡವರು. ಚೆಲುವಿತ್ತು ಅವರಿಗೆ. ಲಾವಣ್ಯವತಿಯರಾಗಿದ್ದರು. ಬಗೆಬಗೆಯ ಕಲೆಗಳಲ್ಲಿ ಪ್ರೌಢಿಮೆಯನ್ನು ರೂಢಿಸಿಕೊಂಡಿದ್ದರು. ಹಾಡನ್ನು ಇಂಪಾಗಿ ಹಾಡುವ ಕೌಶಲ್ಯವಿತ್ತು. ನೃತ್ಯವನ್ನು ಸೊಂಪಾಗಿ ಮಾಡುವ ಪ್ರತಿಭೆಯಿತ್ತು. ಕೊಳಲನ್ನು ನುಡಿಸುತ್ತಿದ್ದರು ಕೋಗಿಲೆ ಕೊರಳಿನಿಂದ ಧ್ವನಿಸರವು ಹೊಮ್ಮಿದಂತೆ. ವೀಣೆಯನ್ನು ನುಡಿಸುತ್ತಿದ್ದರು ರಸಿಕ ಹೃದಯದಿಂದ ಸ್ವರರಸವು ಚಿಮ್ಮಿದಂತೆ. ಮಾತುಮಾತಿಗೆ ನಗುವ, ಮಾತುಮಾತಿನಲಿ ನಗಿಸುವ ವಿನೋದ ಪ್ರಜ್ಞೆಯಿತ್ತು ಅಲ್ಲಿಯ ವಿನೋದಿನಿಯರಲ್ಲಿ. ಭೋಗಾಸಕ್ತರಾಗಿದ್ದರು ಅಲ್ಲಿನ ವನಿತೆಯರು. ಹೀಗೆ ಸ್ತ್ರೀಗಣವದು, ಸ್ತ್ರೀಗುಣಗಳ ಹೊಂದಿ, ಸ್ತ್ರೀಗಡಣದಲ್ಲಿಯೇ ಬದುಕು ನಡೆಸುತ್ತಾ, ಸ್ತ್ರೀಗಣಿಯೊಂದನ್ನು ನಿರ್ಮಿಸಿತ್ತು ಈ ಭೂಮಿಯೊಳಗೆ.    ಹೀಗಿದ್ದ ವನಿತಾ ರಾಜ್ಯವನ್ನು ಪ್ರವೇಶಿಸಿ ಅಲ್ಲಿಂದ ಜೀವಂತವಾಗಿ ಹೊರಬಂದ ಪುರುಷರು ಇರಲಿಲ್ಲ. ಬಂದ ಗಂಡಸರನ್ನು ಆಕರ್ಷಿಸಿ, ಕೊನೆಗೆ ಮರಣವನ್ನೀಯುವ ಕಠೋರತೆಯಿತ್ತು ಅಲ್ಲಿನ ಹೆಂಗಳೆಯರ ಹೃದಯದಲ್ಲಿ. ಸೌಂದರ್ಯಮಯ ದೇಹವನ್ನು ಮುಂದಿಟ್ಟು ಪುರುಷರನ್ನು ಯಮಪಾಶಕ್ಕೆ ಸಿಲುಕಿಸುತ್ತಿದ್ದ ಮೋಹನಾಂಗಿಯರು ಅಲ್ಲಿನವರು.    ಬಂದ ಗಂಡಸರನ್ನು ಕಂಡು ಚೆಲ್ಲುಚೆಲ್ಲಾಗಿ ನೋಡುತ್ತಾ, ಆಸೆಯ ಕಣ್ಣೋಟ ಬೀರುತ್ತಿದ್ದರು. ಆಕರ್ಷಕವಾದ ಭಂಗಿಯಲ್ಲಿ ನಿಂತು, ಕಾಲ ಉಗುರುಗಳಿಂದ ನೆಲವನ್ನು ಕೆರೆಯುತ್ತಾ ಹುಸಿಲಜ್ಜೆಯ ಭಾವವನ್ನು ತೋರಿಸುತ್ತಿದ್ದರು. ಸರಸಗೈಯ್ಯುವ ಸಮಯದಲ್ಲಿ ದೇಹಸಿರಿಯನ್ನು ಉಣಬಡಿಸುತ್ತಾ ಗಂಡಸರಿಗೆ ಹುಚ್ಚು ಹಿಡಿದು ಅವರ ಅರಿವು ಇನ್ನಿಲ್ಲವಾಗುವ ಹಾಗೆ ಮದವನ್ನು ಏರಿಸುತ್ತಿದ್ದರು.    ಇಲ್ಲಿನ ಸ್ತ್ರೀಯೊಡನೆ ಒಮ್ಮೆ ಸರಸಕೇಳಿಗೆ ಇಳಿದ ಬಳಿಕ ಅದೇ ವಿಷಯದಲ್ಲಿ ಸಂಪೂರ್ಣ ಆಸಕ್ತನಾಗಿಬಿಡುತ್ತಿದ್ದ ಇಲ್ಲಿಗೆ ಬಂದ ಪುರುಷ. ಇಲ್ಲಿಂದ ತೆರಳಲು ಅವನಿಗೆ ಮನಸ್ಸೇ ಆಗುತ್ತಿರಲಿಲ್ಲ. ನಾನಾ ಪ್ರಕಾರದ ಕಾಮಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈ ಬಗೆಯಲ್ಲಿಯೇ ಒಂದು ತಿಂಗಳು ಸುಖಿಸುತ್ತಿದ್ದರು. ಉತ್ತಮವಾದ ಸುಗಂಧವನ್ನು ಮೈಗೆ ಬಳಿದುಕೊಂಡು, ಸುಗಂಧ ದ್ರವ್ಯವನ್ನು ಬಾಯಿಗೆ ಹಾಕಿಕೊಂಡು, ತಾಂಬೂಲ, ಮಧುಪಾನ ಮೊದಲಾದವುಗಳ ಮೂಲಕ ಮದನಕೇಳಿಯ ಉತ್ತುಂಗ ಸೊಗವನ್ನು ಅನುಭವಿಸುತ್ತಿದ್ದರು.  ವಿಧವಿಧವಾದ ಬಗೆಯಲ್ಲಿ ಶೋಭಿಸುವ ಕುಸುಮಸಮೂಹಗಳ ಪರಿಮಳಭರಿತವಾದ ಮಕರಂದಗಳನ್ನು ಚಿನ್ನದ ಬಟ್ಟಲಲ್ಲಿ ಸುರಿಯುತ್ತಿದ್ದಳು ಹೆಣ್ಣು. ಆ ಮಕರಂದಕ್ಕೆ ತನ್ನ ತುಟಿಯ ಸಿಹಿಯನ್ನು ಸೇರಿಸುವಂತೆ ಬಟ್ಟಲಿಗೆ ಮುಖವಿಟ್ಟು ಅದನ್ನು ಸವಿಯುತ್ತಿದ್ದಳು. ಉಳಿದ ಮಕರಂದವನ್ನು ನೋಡಿ ನಗು ಬೀರುತ್ತಿದ್ದಳು. ಬಟ್ಟಲನ್ನು ಪುರುಷನ ಬಳಿಗೆ ತೆಗೆದುಕೊಂಡು ಹೋಗಿ ಬಟ್ಟಲಿನಲ್ಲಿದ್ದ ಮಕರಂದವನ್ನು ಇಬ್ಬರೂ ಹಂಚಿಕೊಂಡು ಸವಿಯುತ್ತಿದ್ದರು. ಮಕರಂದದ ಸವಿಯನ್ನು ತೊರೆದು ಇರುವವರಲ್ಲ ಎಂಬಂತೆ ಇಬ್ಬರೂ ಬಿಡದೆ ಮುಖವಿಟ್ಟು ರುಚಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಚಿನ್ನದ ಬಟ್ಟಲಲ್ಲಿ ಮೂಡಿದ ಪುರುಷನ ಬಿಂಬವನ್ನು ಆ ಹೆಣ್ಣು, ಅವಳ ಬಿಂಬವನ್ನು ಆ ಪುರುಷ ಇಬ್ಬರೂ ಕಂಡು ಅನ್ಯೋನ್ಯತೆಯ ಸಂಪ್ರೀತಿ ಭಾವ ಅವರನ್ನು ಆವರಿಸುತ್ತಿತ್ತು. ಬಟ್ಟಲಲ್ಲಿ ತುಂಬಿರುವ ಮಕರಂದ ಮುಗಿದುಹೋದರೆ ಜೊತೆಜೊತೆಗೆ ಅದನ್ನು ಸವಿಯುವ ಗಳಿಗೆಯದು ಮುಗಿದುಹೋಗುವುದು ಎಂಬ ಯೋಚನೆ ಬಂದ ಕ್ಷಣವೇ ಆತುರಾತುರವಾಗಿ ರಸವನ್ನು ಹೀರುವುದನ್ನು ನಿಲ್ಲಿಸುತ್ತಿದ್ದರು. ಬೇಕುಬೇಕೆಂದೇ ವಿಳಂಬ ಮಾಡುತ್ತಿದ್ದರು. ಜೊತೆಜೊತೆಗೆ ಸವಿವ ರಸಗಳಿಗೆಯದು ಅವರಿಗೆ ಮುದವನ್ನು ನೀಡುತ್ತಿತ್ತು.  ಮನಸೆಳೆಯುವ ರತಿಕೇಳಿಯಲ್ಲಿ ತಲ್ಲೀನರಾಗುತ್ತಿದ್ದರು. ಹೆಣ್ಣು ತನ್ನ ತುಟಿಯ ಸಿಹಿರಸವನ್ನು ಕುಡಿಸಿ ಪುರುಷನನ್ನು ತಣಿಸುತ್ತಿದ್ದರು. ಮಿಲನದಲ್ಲಿ ಮನವದು ಮುಳುಗಿಹೋಗಿ ಸುಖ ಅವರದ್ದಾಗುತ್ತಿತ್ತು. ಕಾಮಕಲೆಗಳಲ್ಲಿ ಪರಿಣತಳಾದ ಹೆಣ್ಣು ಈ ಮೂಲಕ ಉನ್ನತ ನೆಮ್ಮದಿಯನ್ನು ತನ್ನದಾಗಿಸಿಕೊಳ್ಳುತ್ತಿದ್ದಳು.  ಹಾಗಿದ್ದಾಗಲೇ ಅವಳ ಅಧರದ ಸ್ಪರ್ಶಕ್ಕೆ ಸಿಲುಕಿ ವಿಷವಾದ ಆ ಮಕರಂದ ಅವನಿಗೆ ಪ್ರಾಣಸಂಕಟವನ್ನು ಕೊಡುವ ಕಾಟವನ್ನು ಆರಂಭಿಸುತ್ತಿತ್ತು. ಇನ್ನೇನು ಮರಣ ತನ್ನನ್ನು ಬಂದು ಅಪ್ಪಿಕೊಳ್ಳುತ್ತದೆ ಎಂದು ಬೆದರಿದ ಪುರುಷ ಮಧ್ಯೆಯೇ ಕಾಮಕೇಳಿಯನ್ನು ನಿಲ್ಲಿಸಿಬಿಡುತ್ತಿದ್ದ. ತಕ್ಷಣವೇ ಅವನ ಚರಣಕ್ಕೆ ಎರಗಿ, ಒಪ್ಪಿಸುವ ನಾಟಕವನ್ನಾಡುತ್ತಿದ್ದಳು. ದೈನ್ಯತೆಯನ್ನು ತೋರಿಸುತ್ತಿದ್ದಳು. ಕರುಣೆ ನೋಟ ಹರಿಸುತ್ತಿದ್ದಳು. ಅದಕ್ಕೂ ಅವನು ಸಹಿಸದವನಾದರೆ ಬೊಬ್ಬೆ ಹೊಡೆದು ಅವನನ್ನು ಹೊಡೆಯುತ್ತಿದ್ದಳು, ಕೊಲ್ಲುತ್ತಿದ್ದಳು. ಕೈಗಳಿಂದ ಬಡಿದು ಪ್ರಾಣ ಹೋಗುವವರೆಗೂ ಅವಳು ಸುಮ್ಮನಾಗುತ್ತಿರಲಿಲ್ಲ.  ಸಂಪಿಗೆ ಹೂವಿಗೆ ಮನಸೋತು, ಅದರ ಆಸ್ವಾದನೆಗೆ ಬಂದು, ಹೂ ಬಾಡುವವರೆಗೂ ಮಕರಂದವನ್ನು ಹೀರಿಕೊಂಡಿದ್ದು, ಕೊನೆಗೆ ಅದರೊಳಗಡೆಯೇ ಸಿಲುಕಿ ಮರಣವನ್ನಪ್ಪುವ ದುಂಬಿಯಂತಹ ಸ್ಥಿತಿ ಸ್ತ್ರೀರಾಜ್ಯಕ್ಕೆ ಬಂದ ಪುರುಷರದ್ದು. ಅಲ್ಲಿಗೆ ಬಂದ ಎಲ್ಲಾ ಪುರುಷರಿಗೂ ಇದೇ ಅವಸ್ಥೆ ಒದಗಿಬರುತ್ತಿತ್ತು. ಅಲ್ಲಿದ್ದ ಎಲ್ಲಾ ಮಹಿಳೆಯರೂ ಇದೇ ತೆರದಲ್ಲಿದ್ದರು.  ಹೀಗೆ ಪುರುಷರನ್ನು ಸಾಯಿಸಿದ ಕೆಲವು ಮಹಿಳೆಯರು ತಿಂಗಳು ಕಳೆದಾಗ ಅಗ್ನಿಪ್ರವೇಶ ಮಾಡುತ್ತಿದ್ದರು. ಇನ್ನೂ ಕೆಲವರು ಹೆಣ್ಣುಮಗುವಿಗೆ ಜನ್ಮ ನೀಡುತ್ತಿದ್ದರು. ಹೀಗೆ ಅಲ್ಲಿಯ ಸ್ತ್ರೀಸಂತತಿ ಬೆಳೆಯುತ್ತಲೇ ಬಂದಿತ್ತು. ಹೀಗೆ ವಿಷಾಂಗನೆಯರಾಗಿದ್ದ ಆ ರಾಜ್ಯಕ್ಕೆ ಪ್ರಮೀಳೆ ಎನ್ನುವವಳು ಅರಸಿಯಾಗಿದ್ದಳು.  ನನ್ನ ಜೊತೆಗಿದ್ದವರನ್ನು ಎಚ್ಚರಿಸದೇ ಇದ್ದರೆ ಅಪಾಯವಾಗುತ್ತದೆ ಎನ್ನುವುದು ನನಗೆ ದೃಢವಾಗಿತ್ತು. ಇದುವರೆಗೂ ಪರಾಕ್ರಮವನ್ನಿಟ್ಟುಕೊಂಡು ಯುದ್ಧ ಹೂಡಿದ್ದ ನಾವು ಇದೀಗ ಸಂಪೂರ್ಣ ಬುದ್ಧಿವಂತಿಕೆಯಿAದ, ವಿವೇಚನೆಯಿಂದ ನಡೆದುಕೊಂಡು ಮುನ್ನಡೆಯಬೇಕಿತ್ತು. “ಇಲ್ಲಿನವರು ವಿಷಕನ್ನಿಕೆಯರು. ಕಂಡ ಕೂಡಲೇ ಆಕರ್ಷಿಸುತ್ತಾರೆ. ಅವರೆಡೆಗೆ ಮಾರುಹೋದರೆ ನಿಮ್ಮ ಆಯುಷ್ಯವನ್ನೇ ಅಪಹರಿಸಿಬಿಡುತ್ತಾರೆ. ಕಾಮಕ್ರೀಡೆಯಲ್ಲಿ ಆಸಕ್ತಿ ವಹಿಸದೆ ಬುದ್ಧಿವಂತರಾಗಿರಬೇಕು” ಎಂದು ಹೇಳಿ ಜಾಗೃತಿ ಮೂಡಿಸಿದೆ ನಮ್ಮವರಲ್ಲಿ. ಅರಸಿ ಪ್ರಮೀಳೆ ನಮ್ಮ ಕುದುರೆಯನ್ನು ಕಟ್ಟಿಹಾಕುವ ಲಕ್ಷಣ ತೋರಿತು.    ಡಾ. ವಿಶ್ವನಾಥ ಎನ್ ನೇರಳಕಟ್ಟೆ      

Read Post »

You cannot copy content of this page

Scroll to Top