ಕಾವ್ಯ ಸಂಗಾತಿ
ರೇಖಾ ಉದಯ
ಗಜಲ್


ಹರಿಯುವ ನದಿಗೆ ತಡೆಗೋಡೆ ಕಟ್ಟುವವರು ಯಾರು?
ಕಷ್ಟಗಳಿಗೆ ಹೆದರಿದರೆ ಗುರಿ ಮುಟ್ಟುವವರು ಯಾರು?
ಬಂದದ್ದು ಬರಲಿ ಶಿವನ ದಯೆಯೊಂದಿರಲಿ ಗೆಳೆಯ
ಬೆನ್ನಹಿಂದೆ ನಡೆಸುವ ಹುನ್ನಾರಗಳ ಮೆಟ್ಟುವವರು ಯಾರು?
ಮಾನವೀಯತೆ ಬಂಧ ಕಳಚಿ ಬಿದ್ದದ್ದು ಕಂಡಿಲ್ಲವೇ?
ಹೆದರಿ ಮೆಟ್ಟಿದರೆ ಧೈರ್ಯದ ಬಾಗಿಲು ತಟ್ಟುವವರು ಯಾರು?
ಮಾತಿನ ಗಾಳದಲ್ಲಿ ಮೀನು ಹಿಡಿಯುವವರ ನೆಚ್ಚದಿರು.
ಸ್ವಾರ್ಥದ ಮಹಲಿನಲ್ಲಿ ಪ್ರೇಮದೊಲವನ್ನು ಒಟ್ಟುವವರು ಯಾರು?
ರೇಖೂ ಹೆದ್ದಾರಿಯ ನಡವಲ್ಲೂ ಅಪಘಾತಗಳು ಸಹಜವಲ್ಲವೇ?
ನೀನು ಹಿಂಜರಿದರೆ ಕೆಟ್ಟ ಕ್ರಿಮಿಗಳನ್ನು ಅಟ್ಟುವವರು ಯಾರು?
ರೇಖಾಂಕಿ



