ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎರಡು ಕಣ್ಣುಗಳ
ಕಾಂತಿಯಲ್ಲಿ ಹರಡಿದ
ಚಿತ್ರಗಳ ಹುಡುಕುತ್ತಾ
ಸಾಗಿದರೆ ಕಾಣದ
 ಮಾತಿನ ಮೌನ
ಓರೆನೋಟದ ಬಿಗುಮಾನ
ರೆಪ್ಪೆಯಾಚೆಗಿನ ಕುಡಿನೋಟ
ದೂರದುತ್ತರದ ಮಾತುಗಳಲ್ಲಿ
 ಅವಿತ ಒಂದು ಮಾತಿನ ಕಥೆ
ಸಾಲುಗಳಲ್ಲಿ ಹುಡುಕಾಡಿ
ಕೊನೆಯಲ್ಲಿ ಸಿಕ್ಕ ಒಂಟಿ ಪದ
ಮುಖದೊಳಗೆ ಒಲವಿನ
ಒರತೆಯ ಚೆಲ್ಲಿ ನಗುವಾದ
ಮೊಗದ ನಲಿವಿನ ಇರುಳು
ಕತ್ತಲೆಗೆ ಎಸೆದ
ಬೆಳಕಿನ ಹೊಸ ಸಾಲಿನ
ದೀಪದ ಹಣತೆಯ ಸಮಯ
ದಿಟವಾದ ಹಕ್ಕಿ ಗೂಡಿನ
ಸಂವೇದನೆ ಮತ್ತು ಹೊಸತನ
ಎಲ್ಲವೂ ಅಂಕು ಡೊಂಕು
ದಾರಿಯ ನಿರಂತರ
ಚಲನೆಯ ಪ್ರಯತ್ನ
ರೆಪ್ಪೆಯೊಗಳಗಿನ ಗತದ
ನಡುವೆ ಕಾಣದೇ ಮೌನವಾಗಿ
ಉಳಿವ ಸಣ್ಣ ಇರುವೆ
ಪಯಣದ ಪರಿಚಯ
ಪ್ರಶ್ನೆ ಪರಿವೀಕ್ಷಣೆಯ ಆಚೆ
ದೃಢವಾಗಿ ನಿಂತ ಪುಟ್ಟ ದೋಣಿ
ರೆಪ್ಪೆಯ ಒಳಗೆ ಕುಳಿತ
ಚಿತ್ರಗಳಲ್ಲಿ ಕಾಣದ ಗೆರೆಗಳ
ಕಾಣುವ ಚಿತ್ರಗಳು ಸುಮ್ಮನೇ
ನಮ್ಮದು ಎಂಬಂತೆ………


About The Author

Leave a Reply

You cannot copy content of this page

Scroll to Top