ಗಜಲ್ ದುನಿಯಾ
ಗಜಲ್
ಮಾಜಾನ್ ಮಸ್ಕಿ
ಕಾದು ಕಾದು ಸೋತು ನೋವಿನಲ್ಲೆ ಬೆರೆತೆನು
ಹೊದ್ದಿಹ ನಿರೀಕ್ಷೆಗಳ ಕಂತೆಯನೆ ಕಳಚಿದೆನು
ಸಂಶಯದಿ ಮೆತ್ತನೆಯ ಗಾದಿಯೇನೊ ಹಾಸಿದೆ
ಅರಿಯದೆ ತನ್ನತನವ ಪರಾಧಿನತೆಗೆ ಜಾರಿದೆನು
ನಡೆವ ಹಾದಿಯಲ್ಲಿ ಹೂವ ರಾಶಿ ಚೆಲ್ಲಿತ್ತು
ಅಡಿಗಿಟ್ಟ ಮುಳ್ಳನ್ನು ನಲಿವಿನಲೆ ಸ್ಪರ್ಶಸಿದೆನು
ನನ್ನೀ ಒಲವನ್ನು ಅಷ್ಟೇಕೆ ಪರೀಕ್ಷಿಸಿದೆ ನೀ
ಆಗಿರುವೆ ನೋಡಿಲ್ಲಿ ಪ್ರೀತಿಯಲ್ಲೆ ನಾಸ್ತಿಕನು
ಪ್ರೇಮದ ಸೌಧವನ್ನೇ ತೊರೆದಿರುವೆ ‘ಮಾಜಾ’
ಬೇವಫಾ ಮಾಡಿದ ಗಾಯದಲ್ಲೆ ಬಳಲಿದೆನು