ಶಂಕರ್ ಪಡಂಗ ಕಿಲ್ಪಾಡಿ ಅವರ ಕವಿತೆ ನೆನಪು

ದಾಳಿಯನಿಡುತ್ತಿವೆ ಬಾಲ್ಯದ ನೆನಪುಗಳು
ನಿದ್ದೆ ಬಾರದ ರಾತ್ರಿಯಲಿ,
ಹಿಂದೆ ಕೂಡಿರಲು ಕನಸುಗಳು
ತಂದೆ ತಾಯಿ, ಅಣ್ಣ ಅಕ್ಕ ,ತಂಗಿ ತಮ್ಮಂದಿರು,
ಎಷ್ಟೊಂದು ಅತ್ಮೀಯತೆ,
ಅವಿನಾಭಾವ ಸಂಬಂಧಗಳು,
ಒಂದು ಐಸ್ ಕ್ಯಾಂಡಿಯನ್ನು ಎಲ್ಲರೂ ಕಚ್ಚಿ ತಿಂದು ಸಂಭ್ರಮಿಸಿದಾಗ
ಕಿಚ್ಚು ಹಚ್ಚೆಂದಿತ್ತು
ಮನಸ್ಸು
ನಾಕಕ್ಕೆ..!
ಅದರೆ
ತಬ್ಬಲಿಯಾದೆ ಮೊದಲ ಬಾರಿ ಅಪ್ಪ ಅಮ್ಮ ನ ಕಳೆದು,
ತಬ್ಬಲಿಯಾದೆ ಎರಡನೇ ಬಾರಿ ಒಡಹುಟ್ಟಿದವರೇ ದಾಯಾದಿಗಳಾದಾಗ,
ಮೊಳಕೆ ಬರುವಾಗಲೇ ಕರುಳ ಕುಡಿಯ ಚಿವುಟಿದಾಗ ಕೊನೆಯಬಾರಿ ತಬ್ಬಲಿಯಾದೆ,ಯಾಕೆ ಈ
ಬದುಕು…?
ಸಂಬಂಧ,ಅತ್ಮೀಯತೆ ಇಲ್ಲದ ,
ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!

——————————-

Leave a Reply

Back To Top