Category: ಗಜಲ್ ದುನಿಯಾ

ಗಜಲ್-ರೇಷ್ಮಾ ಕಂದಕೂರ

ಗಜಲ್ಕಣ್ಣಾಲಿಗಳ ಕಿರು ಹನಿಗೆ ಗೊತ್ತು
ಒಳ ವೇದನೆಯ ಉಸಿರಿಗೆ ಗೊತ್ತು

ತಳಮಳದ ಭಾವ ಹಪಹಪಿಗೆ ಸೋತು
ಕಳವಳದ ಸಾರ ಬಸಿರಿಗೆ ಗೊತ್ತು

ತರುಲತೆ ಮಂಪಿನ ಬೇಗೆಗೆ ಸೇರಿತು
ಒಲವ ಮಂದಾರ ಸೊಬಗಿಗೆ ಕಳೆ ಗುಂದಿತ್ತು.

ಆಲಿಂಗನದ ಮಧುರ ತನುವಿಗೆ ತಿಳಿದಿತ್ತು
ಒಡನಾಟದ ಸವಿ ನಲಿವಿಗೆ ಕಂಟಕವಾಗಿತ್ತು

ಕೂಟದ ಆಟ ಅಹಮಿಕೆಯ ಬಲೆಗೆ ಬಿದ್ದಿತು
ನೋಟದ ಕೀಟ ರೇಷಿಮೆಗೆ ವಿಷಾದದ ನಗೆ ಬೀರಿತ್ತು.

ಗಜಲ್ ಜುಗಲ್ ಬಂದಿ

ಗಜಲ್ ಜುಗಲ್ ಬಂದಿ ಜುಲ್ ಕಾಫಿಯಾ ಗಝಲ್ ಸದ್ಭಾವಗಳ ತುಂಬಿಟ್ಟ ಮಾತಲ್ಲಿ ಹೃದಯಗಳ ಗೆಲ್ಲುವುದು ಖಾತ್ರಿಯಾಗಿದೆಸ್ವಾರ್ಥಿಗಳ ಲೋಕದಲ್ಲಿ ಮುಗ್ದ ಮನಸ್ಸುಗಳ ಕದಡುವುದು ಖಾತ್ರಿಯಾಗಿದೆ ಸ್ಫುರಿಸುತಿದೆ ಮನದೊಳಗೆ ಅನುಕ್ಷಣ ನೂತನ ಕನಸುಗಳ ನಿರವದ್ಯ ಚಿಲುಮೆಉದರದ ಕ್ಷುಧೆಗೆ ಕೈಗೂಡದ ಬಯಕೆಗಳ ಹೋಮಿಸುವುದು ಖಾತ್ರಿಯಾಗಿದೆ ಬೆರಗು ಕಣ್ಗಳಿಗೆ ಸಡಗರವು ತೀರವಿಲ್ಲದ ಜ್ಞಾನ ಸಾಗರದ ಸ್ವಚ್ಚಂದ ವಿಹಾರಹರಕಲು ಜೇಬಿಂದ ಆಸರೆಯಿಲ್ಲದ ಆಸೆಗಳ ಬೀಳಿಸುವುದು ಖಾತ್ರಿಯಾಗಿದೆ ಮುರುಕಲು ಮನೆಯೆದುರು ಜಗದ ತಾಪಕೆ ನಲುಗಿದ ಹೂವುಗಳ ತೋರಣಮರಣವೂ ಕರುಣೆ ತೋರದಂತೆ ಜೀವಗಳ ಹಿಂಸಿಸುವುದು ಖಾತ್ರಿಯಾಗಿದೆ ಅಲೆಯುತಿವೆ […]

Back To Top