ಕಾವ್ಯ ಸಂಗಾತಿ
ಸುಧಾ ಪಾಟೀಲ
ಸೀತೆಯ ಸ್ವಗತ
ಊರ್ಮಿಳೆ
ಚಿಂತಿಸದಿರು
ಲಕ್ಷ್ಮಣ ಹೋಗುವುದಿಲ್ಲ
ಎಲ್ಲಿಗೂ
ಮರಳಿ ಬರುವನು
ನೀನಿದ್ದಲ್ಲಿಗೇ
ನೀನು ಹೇಳಿದ
ಕೆಲಸ ಮಾಡಿಕೊಂಡು
ಇರುವುದರ
ಬದಲು
ಕಾನನವ ಸುತ್ತಲು
ಬಂದಿರಬಹುದು
ಆದರಿಲ್ಲಿ
ರಾಮ ಮತ್ತು ನನ್ನ
ನಡುವೆ
ಸತತವಾಗಿ ಇದ್ದು
ಕಿರಿಕಿರಿಯ
ಸನ್ನಿವೇಶ
ಏರ್ಪಟ್ಟಿದೆ
ಅದಕ್ಕಾಗಿ ಲಕ್ಷ್ಮಣನನ್ನು
ಏನಾದರೂ ಆಗಲಿ
ಕಳಿಸುವೆ ನಿನ್ನ
ಹತ್ತಿರ
ಅವನನ್ನು ಕಾಡಿಸು
ಪೀಡಿಸು
ಏನನ್ನಾದರೂ ಮಾಡು
ಅವಶ್ಯವಾಗಿ
ಬೀಳ್ಕೊಡುವೆ ನಿನ್ನ
ಅರಮನೆಗೆ
ನೋಡಲಾಗುವುದಿಲ್ಲ
ನನಗೆ
ಊರ್ಮಿಳೆ ನಿನ್ನ
ಸ್ವಗತ ವಿರಹ ನೋವ
ನಿನ್ನ ಬಾನಿನಂಗಳದ
ಚಂದ್ರನ ನೋಡುತ
ಪ್ರಲಾಪಿಸುವ
ರೀತಿಯ
ಬಯಕೆಗಳ
ಕಟ್ಟಿಡುವ ಪರಿಯ
ಸುಧಾ ಪಾಟೀಲ
ಉತ್ತಮ ಹಾಸ್ಯ ವಿಡಂಬನೆ ಜೊತೆಗೆ ಮನುಷ್ಯ ಸಂಬಂಧ ಹುಡುಕುವ ಅತ್ಯುತ್ತಮ ಕವನ ಮೇಡಂ
ಸುಂದರ ಹಾಸ್ಯಮಯ ವಿಶೇಷ ಅಭಿವ್ಯಕ್ತಿ ಮೇಡಂ