Day: November 8, 2022

ಅನುವಾದ

ಅನುವಾದಿತ ಕವಿತೆ-ಅಪರಿಚಿತನು

ಕಾವ್ಯ ಸಂಗಾತಿ

ಅಪರಿಚಿತನು

ಇಂಗ್ಲೀಷ್ ಮೂಲ : ಲಾಂಗ್ ಲೀವ್ (ನ್ಯೂಜಿಲ್ಯಾಂಡ್ ಕವಯತ್ರಿ)

ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)

ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ

Read More
ಕಾವ್ಯಯಾನ

ಲೀಲಾ ಕಲಕೋಟಿ ಕವಿತೆ-ಸಾಗರದ ಸಿರಿ

ಕಾವ್ಯ ಸಂಗಾತಿ ಸಾಗರದ ಸಿರಿ ಲೀಲಾ ಕಲಕೋಟಿ ಸಾಗರದ ಅಲೆಗಳಕಂಡು ನನ್ನೆದೆಯ ಪ್ರಶ್ನೆಹೆಣ್ಣೆ ನಿನ್ನ ಅಲೆಗಳಅಬ್ಬರಕೂ ಅದಕೂಏನು ವೆತ್ಯಾಸ….? ಅದೆಲ್ಲವ ದಂಡೆಗೆ ತಂದುಅಪ್ಪಳಿಸಿ ಶಾಂತವಾಗುವದುಏನೆಲ್ಲ ನಿನ್ನೊಳು ಹುದುಗಿಸಿಕೊಂಡು ಶಾಂತಳಾಗಿರುವಿ ಅದರಲೆಗಳ ಏರಿಳಿತಕಂಗಳಿಗೆ ಸಿರಿಯನಿತ್ತರೆನಿನ್ನ ಕರುಣೆಯಲೆಗಳಏರಿಳಿತ ಹೃದಯಸಿರಿ ಸುತ್ತಲ ಉಸುಕಲಿ ಸಿಂಪಿಶಂಖ,ಚಿತ್ತಾರದೊಡಲುಮನಸೆಳೆವ ಸಿರಿಯಾದರೆಹೆಣ್ಣೇ ನಿನ್ನೊಡಲ ಪ್ರೀತಿಮಮತೆ ಸಿರಿಯೆರೆದುತಲ್ಲೀನಳಾಗಿಹೆ…….! ಸಾಗರದ ತನ್ನೊಡಲೊಳುನದಿಗಳು ಸಿಹಿನೀರಹೀರಿಉಪ್ಪು ನೀರು ನೀಡುವದು ಹೆಣ್ಣೆ ನನ್ನೆದೆಯ ಪ್ರಶ್ನೆ…ಬಾಳಲಿ ಕಹಿಯ ಹೀರುತಎಲ್ಲರಲಿ ಸಿಹಿ ಹಂಚುವನಿನ್ನಾಳ ಅದಕೂ ಮಿಗಿಲು

Read More
ಕಾವ್ಯಯಾನ

ಮಾಜಾನ್ ಮಸ್ಕಿ-ಚಿತೆ

ಕಾವ್ಯ ಸಂಗಾತಿ ಚಿತೆ ಮಾಜಾನ್ ಮಸ್ಕಿ ಕನ್ನಡಿಯು ಸುಳ್ಳಾಗಬಹುದುಮನದ ಪ್ರತಿಬಿಂಬದ ಮುಂದೆ ನೆನಪುಗಳು ಹುಸಿಯಾಗಬಹುದುವರ್ತಮಾನದಲ್ಲಿ ಬಯಸಿದ ಹಣ್ಣು ಸಿಗದೆಕಹಿ ಎಂದು ಹೇಳಲಿ ಹೇಗೆಕಹಿ ಉಂಡ ನಾಲಿಗೆಯಲ್ಲಿ ಅರಿಯದ ಮನಸ್ಸು ಅರಿತಂತೆಅರಿತು ಅರಿಯದಂತೆ ನಟಿಸಿನೆರೆಯುತ್ತಿವೆ ದಿನಗಳು ತಾಪದ ಕೂಪದಲ್ಲಿ ಬೆಂದಜೀವ ಆಹಾರವಾಗಿದೆ ಇದೇನು ಹೊಸದಲ್ಲ ಇಲ್ಲಿಒಂದೊಂದು ರೀತಿಯಲ್ಲಿದಹನವಾಗುತ್ತಿರುವಳು ಹೆಣ್ಣು ಮೊದಲೇ ಹೇಳಬೇಕಿತ್ತುಚಿಂತೆಯ ಚಿತೆಗೆ ಏರುತ್ತಿದ್ದೆನಿನ್ನ ಸಂತೋಷಕ್ಕಾಗಿ…

Read More