ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನನ್ನ ಪ್ರೀತಿಯ

ಡಾ ದಾನಮ್ಮ ಝಳಕಿ

ಓ ನನ್ನ ಪ್ರೀತಿಯ ಮಕ್ಕಳೇ
ಮನೆ ಮನದ ಹೂವುಗಳೇ
ದೇಶದ ದೀಪಗಳೇ
ಜಗದ ಕನಸುಗಳೇ

ಓ ನನ್ನ ಪ್ರೀತಿಯ ಮಕ್ಕಳೇ
ಸತ್ಯ ಅಹಿಂಸೆ ಉಸಿರಾಗಿರಲಿ
ಸ್ನೇಹ ಪ್ರೀತಿ ಪದರಲ್ಲಿರಲಿ
ದೀನದಲಿತರಲಿ ಕರುಣೆಯಿರಲಿ

ಓ ನನ್ನ ಪ್ರೀತಿಯ ಮಕ್ಕಳೇ
ಪ್ರಾಮಾಣಿಕತೆ ನಡೆಯಲ್ಲಿರಲಿ
ಧೈರ್ಯ ನಿಮ್ಮ ಮನದಲ್ಲಿರಲಿ
ನಿಷ್ಟೆ ಬದ್ಧತೆ ಜೀವನದಲ್ಲಿರಲಿ

ಓ ನನ್ನ ಪ್ರೀತಿಯ ಮಕ್ಕಳೇ
ತಂದೆತಾಯಿ ನೋಯಿಸದಿರಿ
ಗುರುಗಳಿಗೆ ನಿಂದೆ ಮಾಡದಿರಿ
ಹಿರಿಯರಿಗೆ ಕಷ್ಟ ಕೊಡದಿರಿ

ಓ ನನ್ನ ಪ್ರೀತಿಯ ಮಕ್ಕಳೇ
ಮನೆಗೆ ಮಾಣಿಕ್ಯದಂತಿರಿ
ಊರಿಗೆ ಹೆಮ್ಮೆ ಪುತ್ರರಾಗಿರಿ
ದೇಶಕ್ಕೆ ಸತ್ಪ್ರಜೆಯಾಗಿರಿ

ಓ ನನ್ನ ಪ್ರೀತಿಯ ಮಕ್ಕಳೇ
ನನ್ನ ಆಶಯ ಕವನದಂತೆ
ದೇಶದ ಭವಿಷ್ಯದ ನಕ್ಷತ್ರದಂತೆ
ಜಗದಲಿ ಬೆಳಕು ಚೆಲ್ಲಿ
ಬಾಳಿ ನೂರು ವರುಷ ಹರುಷದಲಿ


About The Author

Leave a Reply

You cannot copy content of this page

Scroll to Top