ನೀನ್ಯಾರು?ಕವಿತೆ-ಕು ಶಿ ಚಂದ್ರಶೇಖರ್ ಸಾಹಿತ್ಯಮೈತ್ರಿ


ಕಾವ್ಯಸಂಗಾತಿ

ನೀನ್ಯಾರು?

ಕು ಶಿ ಚಂದ್ರಶೇಖರ್ ಸಾಹಿತ್ಯಮೈತ್ರಿ

ಏನೋ ಗೊತ್ತಿಲ್ಲ
ಏನು? ಯಾಕೆ ಗೊತ್ತಿಲ್ಲ!
ಎಲ್ಲಾ ತಿರುಗು ಮರಗು

ಮರವೊಂದು ಬೆಳೆದು
ಬೀಜದ ಎದುರು ಕೇಳಬಹುದೇ
ನೀನ್ ಯಾರು?

ಬಿಟ್ಟೆ ಬಿಟ್ಟರೆ ಬಿಟ್ಟ್ಯಾಕೆ
ಬಿಟ್ಟ ಮೇಲೊಂದು ಚಿಂತೆ
ಬಿಟ್ಟಾಯಿತು ಇನು ಮೇಲೆ!

ಇನ್ಯಾಕೆ ನಿನ್ನ ಕಾಡು ಕವಿತೆ
ಬಿಟ್ಟ ಹಗ್ಗವ ಒಮ್ಮೆ ನೋಡುವಾಸೆ
ಅದಲ್ಲವೇ ಕಾಡುವಿಕೆ?

ನೀ ಮರ ಅಂದವರ್ಯಾರು?
ಬೀಜಕ್ಕೂ ನಗು
ಉತ್ತರಿಸು ನಿನ್ನೊಡಲ…
ನೀನ್ಯಾರು?


Leave a Reply

Back To Top