ಮಾಜಾನ್ ಮಸ್ಕಿ-ಚಿತೆ

ಕಾವ್ಯ ಸಂಗಾತಿ

ಚಿತೆ

ಮಾಜಾನ್ ಮಸ್ಕಿ

ಕನ್ನಡಿಯು ಸುಳ್ಳಾಗಬಹುದು
ಮನದ ಪ್ರತಿಬಿಂಬದ ಮುಂದೆ

ನೆನಪುಗಳು ಹುಸಿಯಾಗಬಹುದು
ವರ್ತಮಾನದಲ್ಲಿ

ಬಯಸಿದ ಹಣ್ಣು ಸಿಗದೆ
ಕಹಿ ಎಂದು ಹೇಳಲಿ ಹೇಗೆ
ಕಹಿ ಉಂಡ ನಾಲಿಗೆಯಲ್ಲಿ

ಅರಿಯದ ಮನಸ್ಸು ಅರಿತಂತೆ
ಅರಿತು ಅರಿಯದಂತೆ ನಟಿಸಿ
ನೆರೆಯುತ್ತಿವೆ ದಿನಗಳು

ತಾಪದ ಕೂಪದಲ್ಲಿ ಬೆಂದ
ಜೀವ ಆಹಾರವಾಗಿದೆ

ಇದೇನು ಹೊಸದಲ್ಲ ಇಲ್ಲಿ
ಒಂದೊಂದು ರೀತಿಯಲ್ಲಿ
ದಹನವಾಗುತ್ತಿರುವಳು ಹೆಣ್ಣು

ಮೊದಲೇ ಹೇಳಬೇಕಿತ್ತು
ಚಿಂತೆಯ ಚಿತೆಗೆ ಏರುತ್ತಿದ್ದೆ
ನಿನ್ನ ಸಂತೋಷಕ್ಕಾಗಿ…


Leave a Reply

Back To Top