ಕಾವ್ಯ ಸಂಗಾತಿ
ನನ್ನ ಪ್ರೀತಿಯ….
ಡಾ. ನಿರ್ಮಲ ಬಟ್ಟಲ
ಓ….
ನನ್ನ ಪ್ರೀತಿಯ ಪ್ರೀತಿಯೆ
ತೊರೆಯದಿರು ಎಂದು
ನೆಲೆಸಿರು ಪುಟ್ಟ ಹೃದಯದ
ಮಿಡಿತದಲಿ….
ನನ್ನ ಪ್ರೀತಿಯ ಜ್ಞಾನವೆ
ಮಸುಕಾಗದಿರು
ಬೆಳಗುತ್ತಿರು ಸದಾ
ತಿಮಿರ ಕಳೆದು……
ನನ್ನ ಪ್ರೀತಿಯ ನುಡಿಯೆ
ಮೊನಚಾಗದಿರು
ಮೃದುವಾಗಿ ಬೆಸೆಯುತ್ತಿರು
ಮನಗಳನು..
ನನ್ನ ಪ್ರೀತಿಯ ನಾಡೆ
ತಾಯಿಗಿಂತ ಮಿಗಿಲು
ನಿನ್ನ ಮಡಿಲು
ಪೊರೆಯುತ್ತಿರು ಮಮತೆಯಿಂದ…
ನನ್ನ ಪ್ರೀತಿಯ ಜಲವೆ
ಹರಿಯುತ್ತಿರು ಸದಾ
ಹಸಿರ ಉಸಿರಾಗಿ
ಬದುಕ ಭರವಸೆಯಾಗಿ….
ನನ್ನ ಪ್ರೀತಿಯ ಪಕ್ಷಿ ಸಂಕುಲವೆ
ಉಲಿಯುತ್ತಿರಿ ರಾಗಗಳ
ನಾದಮಯವವಾಗಿರಲಿ
ಅವನಿಯ ಮುಂಜಾವು….
ನನ್ನ ಪ್ರೀತಿಯ ಪ್ರಾಣಿಗಳೆ
ಇರಲಿ ನಿಮ್ಮ ಸಹಾಕಾರ
ಕಾಪಿಡಲು
ಪರಿಸರ ಸಮತೋಲನ…..
ನನ್ನ ಪ್ರೀತಿಯ ಮನವೆ
ನೆನಪಿಡು ನನ್ನ ಮನವಿ
ಸ್ಪಂದಿಸು ಮಾನವೀಯತೆಗೆ
ಮಿಗಿಲಾದ ಧರ್ಮವಿಲ್ಲ…
Very nice