ಕಾವ್ಯ ಸಂಗಾತಿ
ಸಾಗರದ ಸಿರಿ
ಲೀಲಾ ಕಲಕೋಟಿ
ಸಾಗರದ ಅಲೆಗಳ
ಕಂಡು ನನ್ನೆದೆಯ ಪ್ರಶ್ನೆ
ಹೆಣ್ಣೆ ನಿನ್ನ ಅಲೆಗಳ
ಅಬ್ಬರಕೂ ಅದಕೂ
ಏನು ವೆತ್ಯಾಸ….?
ಅದೆಲ್ಲವ ದಂಡೆಗೆ ತಂದು
ಅಪ್ಪಳಿಸಿ ಶಾಂತವಾಗುವದು
ಏನೆಲ್ಲ ನಿನ್ನೊಳು ಹುದುಗಿಸಿ
ಕೊಂಡು ಶಾಂತಳಾಗಿರುವಿ
ಅದರಲೆಗಳ ಏರಿಳಿತ
ಕಂಗಳಿಗೆ ಸಿರಿಯನಿತ್ತರೆ
ನಿನ್ನ ಕರುಣೆಯಲೆಗಳ
ಏರಿಳಿತ ಹೃದಯಸಿರಿ
ಸುತ್ತಲ ಉಸುಕಲಿ ಸಿಂಪಿ
ಶಂಖ,ಚಿತ್ತಾರದೊಡಲು
ಮನಸೆಳೆವ ಸಿರಿಯಾದರೆ
ಹೆಣ್ಣೇ ನಿನ್ನೊಡಲ ಪ್ರೀತಿ
ಮಮತೆ ಸಿರಿಯೆರೆದು
ತಲ್ಲೀನಳಾಗಿಹೆ…….!
ಸಾಗರದ ತನ್ನೊಡಲೊಳು
ನದಿಗಳು ಸಿಹಿನೀರಹೀರಿ
ಉಪ್ಪು ನೀರು ನೀಡುವದು
ಹೆಣ್ಣೆ ನನ್ನೆದೆಯ ಪ್ರಶ್ನೆ…
ಬಾಳಲಿ ಕಹಿಯ ಹೀರುತ
ಎಲ್ಲರಲಿ ಸಿಹಿ ಹಂಚುವ
ನಿನ್ನಾಳ ಅದಕೂ ಮಿಗಿಲು
ಅತ್ಯಂತ ಮಾರ್ಮಿಕವಾಗಿ ಮೂಡಿ ಬಂದ ಕವನ… ಹಮೀದಾ ಬೇಗಂ ಸಂಕೇಶ್ವರ.