ಅನುವಾದಿತ ಕವಿತೆ-ಅಪರಿಚಿತನು

ಕಾವ್ಯ ಸಂಗಾತಿ

ಅಪರಿಚಿತನು

ಇಂಗ್ಲೀಷ್ ಮೂಲ : ಲಾಂಗ್ ಲೀವ್ (ನ್ಯೂಜಿಲ್ಯಾಂಡ್ ಕವಯತ್ರಿ)

ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)

ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ

ಹಿಂದೊಮ್ಮೆ…
ಒಂದು ಪ್ರೀತಿ ಇತ್ತು
ನಿಜವಾಗಿಯೂ ಎಷ್ಟು ಪರವಶಗೊಳಿಸುವ ಸ್ಮೃತಿಯದು?
ಆ ಪ್ರೇಮ…
ನಾನು ಎಂದೋ ನಾಟಿದಂತಹ ಬೀಜದಂತಹದ್ದು
ನಾನು ಮಾತ್ರವೇ ಮುತ್ತಿಡಬೇಕಾದ ತುಟಿಗಳಂತಹ ಪ್ರೀತಿಯದು
ಕೂಡದ ನನ್ನ ಕಂಗಳಂತಹ ಪ್ರೀತಿ
ಕೈ ಮಣಿಕಟ್ಟಿನೊಂದಿಗೆ…
ಮೆತ್ತಗೆ ನನ್ನ ಬಾಹುಗಳನು ಬೆಸೆದ
ಸುರಕ್ಷಿತವಾದ ಮನೆಯಂತಹ ಪ್ರೀತಿ
ನನಗೆ ನಾನೇ ಆಶ್ಚರ್ಯಗೊಳ್ಳುತ್ತಿರುತ್ತೇನೆ
ಇಷ್ಟು ದಿನಗಳು ಅಸಲು ಹೇಗೆ ಕಳೆದುಕೊಂಡೆ?
ನನಗೆಂದೂ ತಿಳಿಯದಂತಹ ಇಷ್ಟು ಪ್ರೀತಿಯನು!
ಬೆಚ್ಚಗಿನ ಸೂರಿನಂತಹ…
ಹಳೆಯ ನೆನಪಿನಂತಹ…
ಕೂಡದ ಕಂಗಳಂತಹ…
ಮುದ್ದಾಡಬೇಕಾದ ಆ ಅಧರಗಳಂತಹ ಪ್ರೀತಿಯ
ಪಡೆಯದೆ ನಿಜವಾಗಿಯೂ ಹೇಗೆ ತಪ್ಪಿಸಿಕೊಂಡೆ?!

ಇಂಗ್ಲೀಷ್ ಮೂಲ : ಲಾಂಗ್ ಲೀವ್ (ನ್ಯೂಜಿಲ್ಯಾಂಡ್ ಕವಯತ್ರಿ)
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ


One thought on “ಅನುವಾದಿತ ಕವಿತೆ-ಅಪರಿಚಿತನು

Leave a Reply

Back To Top