ಡಾ . ಮಮತ (ಕಾವ್ಯ ಬುದ್ಧ)

ಕಾವ್ಯ ಸಂಗಾತಿ

ಕನ್ನಡಮ್ಮನ ತೇರು

ಡಾ . ಮಮತ (ಕಾವ್ಯ ಬುದ್ಧ)

ಕನ್ನಡಮ್ಮನ ತೇರು
ತೇರ ನೋಡಿರಿ ಕನ್ನಡಮ್ಮನ ತೇರನೋಡಿರಿ
ಪಂಚ ಕಳಸದ ಹೊನ್ನಹೊಳಪಿನ ತೇರ ನೋಡಿರಿ
ನಾಲ್ಕು ಯುಗ ನಾಲ್ಕು ಚಕ್ರದ ತೇರ ನೋಡಿರಿ.

ಸಪ್ತ ಸಾಗರದಾಚೆ ಮಿಂಚುವ ಸಪ್ತ ಅಂಕಣ ತೆರಿದು
ಅಷ್ಟ ದಿಕ್ಕಿಗೆ ಅಷ್ಟಭೋಗದಿ ಚಲಿಸುವ ತೆರಿದು
ನವರಸಗಳ ನವರತ್ನ ಹೊಳಹಿನ ಕನ್ನಡಮ್ಮನ ತೆರಿದು
ದಶರೂಪಕಗಳ ದಿಕ್ಕಿಗೊಯ್ಯ ಕನ್ನಡ ಪೆರ್ಮೆ ತೆರಿದು

ಕಾಳಿದಾಸ ಕುಮಾರವ್ಯಾಸ ಷಡಕ್ಷರಿ ಸರ್ವಜ್ಞ
ಲಕ್ಷ್ಮೀಶ ಹರಿಹರಾದಿ ಬಾಳೆಕಂದಿನ ತೇರಿದು
ಪಂಪ ರನ್ನ ಪೊನ್ನರಿಹರು ವಸನ ಸಿಂಗಾರದಾಳಿ
ಕನ್ನಡ ಹಿರಿಮೆಯ ಕೀರ್ತಿ ಪತಾಕೆಯ
ಬಿಎಂಶ್ರೀ ತೀನಂಶ್ರೀ ಮಾಸ್ತಿ ಪುತಿನ ಡಿವಿಜಿ
ಬೆಂದ್ರೆ ಗೋಕಾಕ್ ಮುಗಳಿ ಗೌರೀಶ್ ಇನಾಂದಾರ್
ಬಸವ ಪಂಜೆ ವೀಸಿ ಕಂಡೆ೦ಗೊಡ್ಲು ರಾಮಾನುಜ
ಶಿಶುನಾಳ ಕರೀಂ ನಿಸಾರ ವಾಲಿಕಾರ ಅಡಿಗ
ಕೆಎಸ್ಎನ್ ಇತ್ಯಾದಿ ಮೆರೆದಿಹರು ತೆರುದ್ದಗಲಕ್ಕೂ
ಬಣ್ಣ ಬಣ್ಣದ ಓಕಳಿಯಾಡುತ ನಗುತ ನಡೆದಿಹರು
ಕನ್ನಡ ಸಮೀರಾ ಪುಳಕಕೆ ಪಟಪಟ ಹಾರು ಕುಣಿದಿಹರು
ಚುತಷ್ ಅಂಕಣದ ಅಂದಕೆ ಕೈಲಾಸಂ ರಾಜರತ್ನಂ ಕಸ್ತೂರಿ ಬೀಚಿ
ನಗೆ ಗೊಂಬೆಗಳ ಆಟನೋಡಿರಿ ಕನ್ನಡ ಕಂಪು ನಗೆಯ ಕಾಣಿರಿ
ತ್ರಯ ಅಂಕಣದಲ್ಲಿ ಜಗದ ಸರದ ಗೆಜ್ಜೆಕಟ್ಟಿ ಕುಣಿವ
ಕಾರಂತರ ನೋಡಿರಿ ನಾಟಕ ಕಾರಂತರ ಕಾಣಿರಿ

ಅಬ್ಬಕ್ಕ ಅತ್ತಿಮಬ್ಬೆ ಹೊನ್ನಮ್ಮ ಮನೋರಮೆ
ಅಕ್ಕ ಬಸವ ಕಲ್ಯಾಣದಲ್ಲಿ ಪೋಣಿಸಿ ತಂಡ ಮಾಲೆ
ಸಿಂಗಾರ ತೇರ ನೋಡಿರಿ ಕನ್ನಡಮ್ಮನ ಅಂಕನಂಕಣ ತೇರ ನೋಡಿರಿ
ಕನ್ನಡ ಗಣ ಕೋಗಿಲೆ ಕನಕ ಪುರಂದರ ಹರಿದಾಸರಂತೆ ಜೋಷಿ
ಅಶ್ವತ್ ಸುಬ್ಬಣ್ಣ ಅತ್ರಿ ಹುಕ್ಕೇರಿ ಹಳಬಂಡಿ ಹೊಸಕೋಟೆ
ಜೋಳದರಾಶಿ ಛಾಯಾ ರತ್ನಮಾಲ ಕಸ್ತೂರಿ
ಗಂಗೂಬಾಯಿ ಶ್ಯಾಮಲಾ ಆದಿ
ಹಾಡುತಿಹರು ರಾಮಾಯಣ ಭಾರತ ಭಾಗವತ ಭಾವ ಪದಗಳ
ಕನ್ನಡ ನಿನಾದ ಕಂಠದಲ್ಲಿ ತೇರ ಮುಂಚೂಣಿಯಲಿ
ಹಳಗನ್ನಡ ನಡುಗನ್ನಡ ಹೊಸಗನ್ನಡ ಹೊಸತು ಕವನಗಳ
ಹೊಸರಾಗದಲಿ ಹೊಸಭಾವದಲಿ ಹರಿದಿದೆ ಮೆರೆದಿದೆ
ಕನ್ನಡ ಹಿರಿಮೆ ಗರಿಮೆ ಚಂಪೂ ಕಾವ್ಯದಿಂ ನವ್ಯದವರೆಗೆ
ಕಾವ್ಯಾಮೃತವಾಗಿ ಕನ್ನಡ ಜೇನಾಗಿ

ದ್ವಿತೀಯಾಂಕಣದಲಿ ಕುಳಿತಿಹ ಅದ್ವಿತೀಯ
ಕನ್ನಡಮ್ಮನ ಮುಖಮಂಟಪ ನೋಡಿ ಅಲ್ಲಿ
ಸಾಸಿರ ಕಿರಣ ಕನ್ನಡ ಪ್ರಭೆಯ ನೋಡಿ
ಕನ್ನಡ ಕಾಂಚನ ಮಾಲೆ ನೋಡಿ ಮಂಟಪ
ಸಿಂಗರಿಸಿಪ ನವ ಚೂತ ಪಲ್ಲವ ತೋರಣ ನೋಡಿ

ಪರಿಷ್ಮನ್ನಂದಿರದಲಿ ಬೆಳಗುತಿರ್ಪ ಎಲ್ಲ ಎಲ್ಲ
ವಿದ್ವನ್ಮಣಿಗಳ ಸಾಲು ಸಾಲು ತೇರು ತೊರಣ
ಸಮಸ್ತ ಕನ್ನಡೊಪಾಸಕರ ಅಂಕನಂಕಣ ತೇರು
ಕನ್ನಡಮ್ಮನ ಝಗ ಝಗಿಸುವ ಮುಕಟರತ್ನ ನೋಡಿರಿ
ಆದಿ ಅನಾದಿ ಕನ್ನಡೋಪಾಸಕರ ಮಣಿ ಹೊಳಪ ನೋಡಿರಿ
ಕನ್ನಡ ಕವಯತ್ರಿಯರು ಹೇಮದಾರದಿ ಮಾಡಿದ
ಚಿತ್ತಾರ ‘ಕನ್ನಡಮ್ಮನ ವಸನ ಪೀತಾಂಬರ
ಗಂಗೆ ಯಮನೇ ಕೃಷ್ಣೆ ಗೋದಾವರಿ ಪವಿತ್ರ ಜಲಕುಂಭ
ಹೊತ್ತ ತೇರು ನಿಂದಿದೆ ತುಂಗಾ ತಟದಲ್ಲಿ
ಸಂಭ್ರಮದಿ ತುಂಗಾಮೃತ ಕುಂಭ ತುಂಬುತಿಹರು
ಸಹ್ಯಾದ್ರಿಯ ರಸಋಷಿ ಅಮಿತಾನಂದದಲಿ ಹಿರಿ ಕಿರಿ
ಕನ್ನಡ ಸಾಹಿತಿಗಳ ಹೆಸರಲಿ ಮಂತ್ರ ಪುಷ್ಪಾರ್ಚನೆ ಕನ್ನಡಮ್ಮನಿಗೆ

ಹಲವು ಕರಗಳ ಚಕ್ರ ಮೇಲಿನ ಕಂಡು
ಚಕ್ರಮಲಿನ ಎನ್ನ ವಸನಕೆ ತಾಗಿದೆ ತೇಜಸ್
ತುಸು ದೂರದಿಂ ಜಾಣ್ಮೆಯಲಿ ತೇರನೆಳೆ ಮಗು

ಮಲೆನಾಡ ನೆಲದಿಂ ಕಾವೇರಿ ಎಡೆಗೆ ತೇರ ಯುಗ ಚಕ್ರ ಉರುಳಿತು
ಉಘೇ ಉಘೇ ಕನ್ನಡ ತೇರನೆಳೆದರು ಸಪ್ತ ಸಾಗರಗಳಾಚೆಗೂ
ಭಾರಿಸುತ ಕನ್ನಡ ದಿಂಡಿಮವ ಮನುಜ ಮತ ವಿಶ್ವಪಥ
ವಿಶ್ವಮಾನವ ಸಂದೇಶ ಸಾರುತ ಕನ್ನಡ ಕಂಪ ಬೀರುತ

ಎನಿತು ಯುಗಗಳ ಅಸೆ ಕಂಗಳ ಸಂಭ್ರಮ ಮಂಗಳ
ತೇರು ನಡೆಯಿತು ಸಹ್ಯಾದ್ರಿಯಂ ಮಹಿಷಪುರ ಕಡೆಗೆ
ಕರ್ನಾಟಕ ದರ್ಶನಕೆ

ಬಿಟ್ಟ ಕಣ್ಣು ಬಿಟ್ಟ ಹಾಂಗಿರಲು ಮೂಡಿತು ತಾರಾ ಪುಂಜ
ಬಾನಂಗಳದಿ ಗೋಚರ ಎನಿಸೆನೆಂದರು ಎಣಿಸದಾದೆ
ಸಹಸ್ರ ಸಹಸ್ರ ಕನ್ನಡ ಚೇತನ ನಾಮಸ್ಮರಣೆ
ಕಾಳಿದಾಸ ನಾಲಿಗೆಗೂ ನಿಲುಕದಾಯ್ತು ಪುಣ್ಯ ಎಣಿಕೆ

ಎಲ್ಲರ ನಾಮಪಲುಕಲಾರದ ಎಣಿಸಲಾರದ
ಪಾಮರ ನಾನಾದೆ ಎನ್ನ ಮನ್ನಿಸಿ ಮನ್ನಿಸಿ


Leave a Reply

Back To Top