ಗಜಲ್(ಮೇರಿ ಎಲಿಜಿಬತ್ ಫ್ರೇ ಅವರ ಕವಿತೆ ಆಧಾರಿತ)

ಕಾವ್ಯ ಸಂಗಾತಿ

ಗಜಲ್

ಮೇರಿ ಎಲಿಜಿಬತ್ ಫ್ರೇ ಅವರ ಕವಿತೆ ಆಧಾರಿತ)

ಬಾಗೇಪಲ್ಲಿ

ನನ್ನ ಹೂತ ಸ್ಥಳದಲಿ ಸಾಲು ಜನನಿಂತು ಎಂದಿಗೂ ಅಳಬೇಡಿ
ಯಾರ ಸಮಾಧಿಯ ಮೇಲೂ ಸ್ಮಶಾನದಿ ಹೂಗುಚ್ಛ ಇಡಬೇಡಿ

ಸತ್ತನಂತರ ದೊಡ್ಡ ಸುಂಟರಗಾಳಿಯಲಿ ಒಂದಾಗಿರವೆ ನಾನೀಗ
ಗತಿಸಿದವರೆಲ್ಲಾ ಹೂತ ಗುಣಿಯಲಿ ಮಲಗಿಹರೆಂದು ಭಾವಿಸಬೇಡಿ

ಹಿಮಮಣಿಯು ಹೊಳೆದಂತೆ ಕಾಣುವ ವಜ್ರ ಆಗುವೆನು ಬಯಸಿದಾಗ
ಬೆಳಗಿನ ಇಬ್ಬನಿಯು ಎಳಬಿಸಿಲಿನ ಫಳಗುಟ್ಟು ನೋಡ ಮರೆಯಬೇಡಿ

ಪಕ್ವವಾದ ಪ್ರತಿ ಕಾಳಿನ ಮೇಲಿನ ಹೊಳಪಾಗಿಯೂ ನಾನಾಗಬಲ್ಲೆ
ಲಭ್ಯವಿರುವ ಆಹಾರವ ಸಹಜೀವಿಯೊಂದಿಗೆ ಹಂಚದೆ ತಿನ್ನಬೇಡಿ

ಪ್ರಕೃತೀ ಜನ್ಯ ನಾಗಿದ್ದೆ ಅದರಲೇ ವಿಲೀನವಾಗಿ ಪ್ರಕೃತಿಯಾದೆ ತಿಳಿದಿರಿ
ಕೃಷ್ಣಾ! ಪರಿಸರದಿಂ ನಾವು ನನ್ನಿಂದ ಪರಿಸರ ವೆಂದು ಎಂದೂ ತಿಳಿಯಬೇಡಿ


Leave a Reply

Back To Top