ಎಂ. ಆರ್. ಅನಸೂಯ ಕವಿತೆ-ಆಕಾಶ ಮಲ್ಲಿಗೆ

ಕಾವ್ಯ ಸಂಗಾತಿ

ಆಕಾಶ ಮಲ್ಲಿಗೆ

ಎಂ. ಆರ್. ಅನಸೂಯ

ಹೆಸರಿಗಷ್ಟೆ ಆಕಾಶ ಮಲ್ಲಿಗೆ
ಬಾಗಿರುವೆ ಭುವಿಯಡೆಗೆ
ಬಿಡಲಾರದೆ ನೆಲದ ನಂಟಿನ ಬೆಸುಗೆ

ಬೆಳೆದಿರುವೆ ಹೀರಿ ಮಣ್ಣಿನ ತಾಕತ್ತು
ಬಾಗಿರುವೆ ನಿಂದರೂ ನೆನೆದು ನಿಯತ್ತು
ಮರೆಯಲಾಗದು ನಡೆದ ಹಾದಿಯ ಯಾವತ್ತೂ

ಏರಿದ ಏಣಿಯ ಒದೆವ ಬದುಕಾಗದೆ
ಕೊಡುವ ಸುಮ್ಮನವರಿತ ಪಾರಿಜಾತದ
ಬದುಕೇ ಮಾದರಿಯಾಯಿತು ನಿನಗೆ

ನೋಡದೆ ಆಕಾಶ
ಬುವಿಯತ್ತ ಬಾಗಿದ
ಆಕಾಶ ಮಲ್ಲಿಗೆಯ ನೆಲ ಪ್ರೀತಿಯೇ ಹೀಗೆ


2 thoughts on “ಎಂ. ಆರ್. ಅನಸೂಯ ಕವಿತೆ-ಆಕಾಶ ಮಲ್ಲಿಗೆ

Leave a Reply

Back To Top