Month: October 2021

ಈ ಸಂಜೆ

ಕಾವ್ಯಯಾನ ಈ ಸಂಜೆ ಅಕ್ಷತಾ ಜಗದೀಶ ಜೊತೆಯಾಗಿ ಮೂಡಿಸಿದೆವುನಮ್ಮ ‌ಹೆಸರು‌ ಮರಳಿನ ಮೇಲೆ..ಕಡಲ ಅಲೆಗಳ ಸ್ಪರ್ಶಿಸುತಜೊತೆಯಾಗಿ ನಡೆದೆವುಆ ಸುಂದರ ‌ಸಂಜೆಯಲಿ.. ರವಿ ಆಗಸದಿಂದ ಜಾರಿದರುಸಮಯವೇಕೆ ಇಷ್ಟು ಬೇಗ‌ಓಡುತ್ತಿದೆ ಎಂದುಮುನಿಸಿಕೊಂಡೆವು…..ನಿನ್ನೊಡನೆ ಪಿಸುಗುಡುವಾಗಅಲೆಗಳ ಬೋರ್ಗರೆತವೇಕೇಳಲಿಲ್ಲ ನನಗಂದು…. ಇಂದೆಕೊ ಮತ್ತೆ ಏಕಾಂತನಮ್ಮ ಹೆಸರನ್ನೇಕೊಕಡಲ ಅಲೆಗಳು ಬಂದುನುಂಗುತ್ತಿವೆ ಇಂದು… ಆಗಸದ ಸೂರ್ಯ ಅದೇಕೊನಿಧಾನಗತಿಯಲಿ ಚಲಿಸುತಿಹನೋ..ಕಡಲೇಕೊ ಬೋರ್ಗರೆದುನನ್ನ ನೋಡಿ ಆರ್ಭಟಿಸುತಿದೆಎನ್ನುವಂತೆ ಭಾಸ.. ಮರೆಯಾದೆ ಏಕೆ‌ ನನ್ನ ರಜನಿಅಗಾದ ಕಡಲಿಗೆ ಸೆರುತ್ತಿದೆನೀ ಉಳಿಸಿಹೋದ ಕಂಬನಿ…ಈ ಸಂಜೆ‌ ನೀ ಜೊತೆಗಿಲ್ಲಆದರೂ….ಕಡಲ ಅಲೆಗಳಿಗೆ ಸ್ಪರ್ಶಿಸುವುದನಾ ಮರೆತಿಲ್ಲ….‌‌

ಕಥೆ ಶಾರದ ಭಾಗ-2 ಅನಸೂಯ ಎಂ.ಆರ್ ವಾಣಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದಾಗ ಶಾರದ” ವಾಣಿ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಸೇರು. ನಾನು ಓದಿಸ್ತೇನೆ” ಎಂದಳು  “ನನಗಿಷ್ಟವಿಲ್ಲ ಅತ್ತೆ. ನಾನು ನಿನ್ನ ಹಾಗೆ ಟೀಚರ್ ಅಥವ ಲೆಕ್ಚರರ್ ಆಗ್ತೀನಿ”ಎಂದು ಹೇಳಿ B.SC ಗೆ  ಸೇರಿ ಪದವಿ ಪಡೆದಳು ಮುಂದೆ ಸ್ನಾತಕೋತ್ತರ ಪದವಿಯಲ್ಲೂ ಅಧಿಕ ಅಂಕಗಳನ್ನು ಪಡೆದಿದ್ದರಿಂದ ಸುಲಭವಾಗಿ ಸರ್ಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕಿಯಾದಳು. ಊರಿನಿಂದ ನಲ್ವತ್ತು ಕಿ. ಮೀ. ದೂರವಿದ್ದ ಜಿಲ್ಲಾ ಕೇಂದ್ರದ ಸರ್ಕಾರಿ […]

ರೆಕ್ಕೆಗಳ ಹರವಿದಷ್ಟು ಕಂಬನಿ

ಕಾವ್ಯಯಾನ ರೆಕ್ಕೆಗಳ ಹರವಿದಷ್ಟು ಕಂಬನಿ ಅಶೋಕ ಹೊಸಮನಿ ದೃಷ್ಟಿ ದೃಷ್ಟಿಯನೆದುರಿಸುವುದು ಸುಲಭದ ಮಾತಲ್ಲ ಸಖಾಎರಡೇ ಎರಡು ಹೆಜ್ಜೆಗಳ ಪ್ರೇಮಆತ್ಮಗಳ ಅನಂತ ಬಿಕ್ಕು ದೇವರು ದೇವರನೆದುರಿಸುವುದು ಸುಲಭದ ಮಾತಲ್ಲ ಸಖಾತೀರಿ ಹೋದವು ಅದೆಷ್ಟೋ ನದಿಗಳುಕಣ್ಮರೆಯಾದರು ಕಡು ತೀರದಷ್ಟು ಸೂರ್ಯ,ಚಂದ್ರರು ಮುಸ್ಸಂಜೆ ಮುಸ್ಸಂಜೆಯನೆದುರಿಸುವುದು ಸುಲಭದ ಮಾತಲ್ಲ ಸಖಾಸುಟ್ಟ ನೆತ್ತರಿನಲಿಬೆಂದ ಕನಸುಗಳ ಮೇಳವು ಖಡ್ಗ ಖಡ್ಗವನೆದುರಿಸುವುದು ಸುಲಭದ ಮಾತಲ್ಲ ಸಖಾಎತ್ತರಕ್ಕೇರಿಸುವಾಗಲೂ ಪ್ರೀತಿಉಕ್ಕೀತು ಶಾಂತಿಯ ಬಾವುಟವು ಸಖಾರೆಕ್ಕೆಗಳ ಹರವಿದಷ್ಟು ಕಂಬನಿತಾಕಿದಷ್ಟು ಒಡನಾಡಿ ನೋಟಗಳುಹಾದಿಗೊಂದಿಷ್ಟು ಕೋರಿಕೆಯೂ

ಜ್ಞಾನದ ಹೊತ್ತಿಗೆಗಳು

ಲೇಖನ ಜ್ಞಾನದ ಹೊತ್ತಿಗೆಗಳು ಆರ್. ಬಿ. ಪ್ರಿಯಾಂಕ : ಪುಸ್ತಕಗಳು  ಮಸ್ತಕಗಳ   ತೆರೆಸುತ್ತವೆ,  ಪುಸ್ತಕಗಳು  ಹೃದಯಗಳ  ತಟ್ಟುತ್ತವೆ,   ಪುಸ್ತಕಗಳು  ಮಾತು – ಮನಗಳ ಒಂದು ಮಾಡುತ್ತವೆ,   ಎನ್ನುವoತೆ ಈ ಪುಸ್ತಕಗಳು ಮಾನವನಲ್ಲಿ ಹೊಮ್ಮುವ  ಜಿಜ್ಞಾಸೆಗಳ ಫಲವಾಗಿವೆ.  ಮನುಷ್ಯನ  ಯೋಚನೆಗಳು,  ಕಾರ್ಯಗಳು,  ಸಾಧನೆಗಳು, ಪುಸ್ತಕಗಳ  ರೂಪದಲ್ಲಿ   ಶಾಶ್ವತವಾಗಿರುತ್ತವೆ. ಈ  ಪುಸ್ತಕಗಳು ಪೀಳಿಗೆಯಿಂದ  ಪೀಳಿಗೆಗೆ ಜ್ಞಾನವವನ್ನು  ವರ್ಗಾಯಿಸುವ ಸುಲಭ ಸಾಧನಗಳಾಗಿವೆ. ಒಳ್ಳೆಯ ವಿಚಾರಗಳನ್ನು, ಮೌಲ್ಯಗಳನ್ನು ಮಾನವನ ಮನದಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ. ಹೆಚ್ಚು ಹೆಚ್ಚು ಓದಿದಂತೆ […]

ದಾರಾವಾಹಿ ಆವರ್ತನ ಅದ್ಯಾಯ-39 ‘ಕೊಡೆಕ್ಕೆನಾ’ ಹೋಟೇಲಿನೆದುರು ವ್ಯಾಪಾರ ಆರಂಭಿಸಿ ಕೈಸುಟ್ಟುಗೊಂಡು ದಿವಾಳಿಯಾದ ಹೇಮಚಂದ್ರನು ಹೈರಾಣಾಗಿದ್ದ ಸಂದರ್ಭದಲ್ಲಿ ತನ್ನ ಹತ್ತಿರದ ಸಂಬಂಧಿಯೊಬ್ಬನ ಸಲಹೆಯ ಮೇರೆಗೆ ಗುರೂಜೀಯವರಲ್ಲಿಗೆ ಬಂದ. ಅವರ ಆಪ್ತ ಸಹಾಯಕ ರಾಘವನ ಕಥೆ ಕೇಳಿ ಬೆಕ್ಕಸ ಬೆರಗಾಗಿ ತಾನು ಕುಳಿತ ಭಂಗಿಯನ್ನೊಮ್ಮೆ ಸೂಕ್ಷ್ಮವಾಗಿ ಸರಿಪಡಿಸಿ ನೆಟ್ಟಗೆ ಕುಳಿತುಕೊಂಡ. ತನ್ನದೂ ಇವನದೇ ಕಥೆ. ಹಾಗಾಗಿ ತನಗೂ ಈ ಗುರೂಜಿಯವರಿಂದ ಪರಿಹಾರ ದೊರಕೀತು ಎಂದುಕೊಂಡು ಉಲ್ಲಸಿತನಾದ. ಅದರ ನಡುವೆಯೂ ಅವನನ್ನೊಂದು ಅನುಮಾನ ಕಾಡಿತು. ಅದನ್ನು ನಿವಾರಿಸಿಕೊಳ್ಳಲು, ‘ನನ್ನದೂ ನಿಮ್ಮದೇ ಸಮಸ್ಯೆ ಮಾರಾಯ್ರೇ. ಆದರೆ ಈ ಗುರೂಜಿಯವರು ಅದಕ್ಕೆ ಯಾವ್ಯಾವ ಬಗೆಯ ಪರಿಹಾರವನ್ನು ಹೇಳಬಹುದೆಂಬ ಐಡಿಯಾ ಇದೆಯಾ ನಿಮಗೆ…?’ ಎಂದು ರಾಘವನನ್ನು ಪ್ರಶ್ನಿಸಿದ. ‘ಅಯ್ಯೋ, ಅದು ಬಿಡಿ. ಅವರು ಯಾವತ್ತೂ ದುಡ್ಡು ಮಾಡುವವರ ಜಾತಿಗೆ ಸೇರಿದವರಲ್ಲ. ಹಾಗಾಗಿ ದೊಡ್ಡ ದೊಡ್ಡ ವಿಧಿಗಳನ್ನೇನೂ ಹೇಳುವುದಿಲ್ಲ. ನಿಮಗ್ಯಾರಾದರೂ ಮಾಟ ಗೀಟ ಮಾಡಿಸಿದ್ದರೆ ಅದರ ನಿವಾರಣೆಗೆ ಕೆಲವು ಪೂಜೆ, ಪುನಸ್ಕಾರಗಳನ್ನು ಹೇಳಬಹುದಷ್ಟೇ. ಎಷ್ಟೆಷ್ಟೋ ಬಡವರ ಸಮಸ್ಯೆಗಳನ್ನು ಅವರು ಕೆಲವೊಮ್ಮೆ ಪುಕ್ಕಟೆಯಾಗಿ ತಮ್ಮ ಮಂತ್ರಶಕ್ತಿಯಿಂದಲೇ ನಿವಾರಿಸಿ ಕಳುಹಿಸಿದ್ದುಂಟು!’ ಎಂದು ವಿಸ್ಮಯ ಸೂಚಿಸುತ್ತ ಹೇಳಿದ. ಅಷ್ಟು ಕೇಳಿದ ಹೇಮಚಂದ್ರ ಪೂರ್ಣ ನಿರಾಳನಾದ. ‘ಹೌದೂ, ನಿಮ್ಮದೆಂಥ ಸಮಸ್ಯೆ ಮಾರಾಯ್ರೇ…?’ ಎಂದು ರಾಘವ ಎತ್ತಲೋ ನೋಡುತ್ತ, ಸಿಗರೇಟಿನ ಹೊಗೆ ಉಗುಳುತ್ತ ಅವನನ್ನು ಪ್ರಶ್ನಿಸಿದ. ‘ನನ್ನದೂ ವ್ಯಾಪಾರದ ಅವಸ್ಥೆಯೇ ಮಾರಾಯ್ರೇ! ಹೊಟೇಲು ಮಾಲಿಕನೊಬ್ಬ ನನ್ನ ಮೇಲೆ ಮಾಟ ಮಾಡಿಸಿರಬೇಕು. ಬರೇ ಆರು ತಿಂಗಳಲ್ಲಿ ಇಪ್ಪತ್ತು ಲಕ್ಷ ಲಾಸ್ ಆಯಿತು. ಅದರ ಮೇಲೆ ಒಂದಷ್ಟು ಸಾಲವೂ ಆಗಿಬಿಟ್ಟಿದೆ. ಆ ಸಾಲಗಾರರ ತೊಂದರೆ ತಾಳಲಾಗದೆ ಜೀವ ತೆಗೆದುಕೊಳ್ಳುವುದೊಂದೇ ದಾರಿ ಅನ್ನುವ ಮಟ್ಟಕ್ಕೆ ಬಂದು ನಿಂತಿದ್ದೆ. ಅಷ್ಟರಲ್ಲಿ ನನ್ನ ಸಂಬಂಧಿಕನೊಬ್ಬ ಈ ಗುರೂಜಿಯವರಲ್ಲಿಗೆ ಕಳುಹಿಸಿಕೊಟ್ಟ!’ ಎಂದ ವಿಷಾದದಿಂದ. ‘ಓಹೋ, ಹೌದಾ… ಇಲ್ಲಿಗೆ ಬಂದಾಯ್ತಲ್ಲ ಇನ್ನು ಮಂಡೆಬಿಸಿ ಬಿಟ್ಟುಬಿಡಿ. ನೀವೆಷ್ಟು ಕಳೆದುಕೊಂಡಿದ್ದೀರೋ ಅದರ ಡಬ್ಬಲ್ ತಿರುಗಿ ನಿಮ್ಮ ಹತ್ತಿರ ಬಂದೇ ಬರುತ್ತದೆ. ಅದಕ್ಕೆ ನಾನು ಭರವಸೆ ಕೊಡಬಲ್ಲೆ!’ ಎಂದು ಎದೆಯುಬ್ಬಿಸಿ ಅಂದವನು, ‘ಹೌದೂ ನಿಮ್ಮನ್ನು ಇಲ್ಲಿಗೆ ಕಳುಹಿಸಿದವನು ನಿಮ್ಮ ಸಂಬಂಧಿಕನೆಂದಿರಲ್ಲ ಆ ಪುಣ್ಯಾತ್ಮನ ಹೇಸರೇನಂದಿರಿ…?’ ಎಂದು ಪ್ರಶ್ನಿಸಿದ. ‘ಪ್ರಕಾಶ ಅಂತ. ಅವನು ನನ್ನ ಹತ್ತಿರದ ಸಂಬಂಧಿಯೇನೂ ಅಲ್ಲ. ಆದರೂ ಕಷ್ಟಕಾಲದಲ್ಲಿ ಅಂಥವರೇ ಆಗುವುದು ಅಂತ ಈಗ ಗೊತ್ತಾಗುತ್ತಿದೆ ಮಾರಾಯ್ರೇ!’ ಎಂದು ಹೇಮಚಂದ್ರ ಅವನನ್ನು ಸ್ಮರಿಸಿದ. ‘ಓಹೋ, ಅವನಾ… ಹೌದೌದು. ಅಂತವರೇ ಆಗುವುದು ಮಾರಾಯ್ರೇ!’ ಎಂದ ರಾಘವ ಇನ್ನು ತನ್ನ ಕೆಲಸವಾಯಿತು ಎಂಬಂತೆ ಎದ್ದು ನಿಂತವನು ಯಾರಿಗೋ ಕರೆ ಮಾಡಲು ನೆನಪಾದಂತೆ ನಟಿಸುತ್ತ ಫೋನೆತ್ತಿಕೊಂಡು, ‘ಆಯ್ತು ನೀವು ಕುಳಿತಿರಿ. ನಾನೀಗ ಬಂದೆ…’ ಎಂದವನು ಮತ್ತೆ ಅವನತ್ತ ತಿರುಗಿಯೂ ನೋಡದೆ ಹೊರಟು ಹೋದ. ಅವನು ಅತ್ತ ಹೋಗುತ್ತಲೇ, ಎಲ್ಲಿಂದಲೋ ಹಾರಿ ಬಂದ ಕಾಗೆಯೊಂದು ಹೇಮಚಂದ್ರನ ನೆತ್ತಿಯ ಮೇಲಿನ ಮರದ ಕೊಂಬೆಯಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ಕ್ರಾವ್ಸ್…ಕ್ರಾವ್ಸ್…ಕ್ರಾವ್ಸ್…! ಎಂದು ಅರಚಿದ್ದು, ಪಿಚಕ್ಕನೆ ಅವನ ಮೇಲೆ ಹಿಕ್ಕೆ ಸುರಿದು ಹಾರಿ ಹೋಯಿತು. ಹೇಮನಾಥ ಬೆಚ್ಚಿಬಿದ್ದ. ಅವನ ಮೈಯಿಡೀ ಕೆಟ್ಟ ವಾಸನೆ ಹೊಮ್ಮತೊಡಗಿತು. ಅಸಹ್ಯದಿಂದ ಎದ್ದು ಸಮೀಪದ ನಳ್ಳಿಯತ್ತ ಧಾವಿಸಿ ತೊಳೆದುಕೊಂಡ. ಆದರೂ ಕೊಳೆತ ಮೀನಿನಂಥ ವಾಸನೆ ಹಾಗೆಯೇ ಉಳಿಯಿತು. ತಲೆಯನ್ನು ಕರವಸ್ತ್ರ್ರದಿಂದ ತಿಕ್ಕಿತಿಕ್ಕಿ ಒರೆಸಿಕೊಂಡು ಮರಳಿ ಅಲ್ಲಿ ಕೂರಲಾಗದೆ ಅಸಹನೆಯಿಂದ ಅಡ್ಡಾಡತೊಡಗಿದ.                                                                                    *** ಹೇಮಚಂದ್ರನೊಡನೆ ಮಾತಾಡಿ ಅಲ್ಲಿಂದ ಮರೆಯಾದ ರಾಘವ ಕೂಡಲೇ ಗುರೂಜಿಯವರಿಗೆ ಕರೆ ಮಾಡಿದ. ಆದರೆ ಆಹೊತ್ತು ಗುರೂಜಿಯವರ ಎದುರಿನಲ್ಲಿ ಶ್ರೀಮಂತ ಜೋಡಿಯೊಂದು ತಮ್ಮ ಜೀವನವೇ ಕಳೆದು ಹೋದಂಥ ದುಃಖದಿಂದ ಕುಳಿತಿತ್ತು. ಗುರೂಜಿಯವರು ಅವರ ಸಮಸ್ಯೆಯನ್ನೂ ಅವರ ಮನೆಯ ವಿವರವನ್ನೂ ಮತ್ತು ವಠಾರದ ಚಿತ್ರಣವನ್ನೂ ಅವರಿಂದಲೇ ಕೆದಕಿ ಕೆದಕಿ ಪ್ರಶ್ನಿಸುತ್ತ ಸಾಕಷ್ಟು ತಿಳಿದುಕೊಂಡವರು ಕೊನೆಯಲ್ಲಿ ತಮ್ಮ ಕವಡೆಗಳನ್ನು ಹರಿಯಬಿಟ್ಟರು. ಅವುಗಳು ಕೆಲವುಕ್ಷಣ ಕುಣಿದು ಕುಪ್ಪಳಿಸಿ ಬಿದ್ದ ಸ್ಥಿತಿಯ ಮೇಲೆ ಲೆಕ್ಕಾಚಾರ ಹಾಕಿದವರು, ‘ನೋಡೀ, ನಿಮ್ಮ ಅನ್ಯೋನ್ಯ ದಾಂಪತ್ಯದಲ್ಲಿ ಈಚೀಚೆಗೆ ಕಂಡು ಬಂದಿರುವ ಮನಸ್ತಾಪಕ್ಕೂ ಮತ್ತು ನಿಮ್ಮ ಆರ್ಥಿಕ ಸಂಕಷ್ಟಕ್ಕೂ ಕಾರಣವೇನೆಂದು ಇಲ್ಲಿ ಸ್ಪಷ್ಟವಾಗುತ್ತಿದೆ. ನೀವು ಹೊಸತಾಗಿ ಕಟ್ಟಿಸಿರುವ ಬಂಗಲೆಯ ವಾಸ್ತುದೋಷವೇ ಈ ಎಲ್ಲ ಅನಾಹುತಕ್ಕೆ ಕಾರಣ! ಆದರೆ ಅದರ ಪರಿಹಾರಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ. ಬಂಗಲೆಯ ಮುಖ್ಯ ದ್ವಾರವನ್ನು ಕಿತ್ತು ನಾವು ಸೂಚಿಸುವ ದಿಕ್ಕಿಗೆ ಇರಿಸಿದರಾಯ್ತು. ಆನಂತರ ನಿಮ್ಮ ಬೆಡ್‍ರೂಮಿಗೆ ನೇರವಾಗಿ ಕಾಣಿಸುವ, ನಿಮ್ಮ ನೆರೆಮನೆಯ ತೋಟದಲ್ಲಿ ಹಳೆಯ ಕಾಟು ಮಾವಿನಮರವೊಂದಿದೆ ಅಂತ ಹೇಳಿದಿರಲ್ಲ ಆ ಮರವು ಪ್ರೇತಾತ್ಮಗಳ ವಾಸ್ಥಸ್ಥಾನವಾಗಿರುವುದೂ ಇಲ್ಲಿ ತೋರಿ ಬರುತ್ತಿದೆ. ಅವು ಮಸ್ಸರಗೊಂಡು ನಿಮ್ಮ ದಾಂಪತ್ಯ ಸುಖಕ್ಕೆ ಕಲ್ಲು ಹಾಕುತ್ತಿವೆ. ಆದಷ್ಟು ಬೇಗ ಆ ಮರವನ್ನು ಕಡಿಸುವ ಏರ್ಪಾಟ್ಟು ಮಾಡಿಸಿ. ಬಳಿಕ ನಾವು ಸೂಚಿಸುವ ಕೆಲವು ಪೂಜಾವಿಧಿಗಳನ್ನೂ ಭಕ್ತಿಯಿಂದ ನೆರವೇರಿಸಿಬಿಡಿ. ಆಮೇಲೆ ನಿಮ್ಮ ಸರ್ವ ಸಮಸ್ಯೆಗಳೂ ನಿವಾರಣೆಯಾಗುತ್ತವೆ, ಚಿಂತಿಸಬೇಡಿ!’ ಎಂದು ಸಲಹೆಯಿತ್ತರು.    ಅಷ್ಟು ಕೇಳಿದ ಹೆಂಗಸು ಸ್ವಲ್ಪ ನಿರಾಳಲಾಗಿ ಗಂಡನ ಮುಖ ದಿಟ್ಟಿಸಿದಳು. ಆದರೆ ಗಂಡಸಿಗೆ ಮರುಕ್ಷಣ ಬೇರೊಂದು ಚಿಂತೆ ಕಾಡಿತು. ‘ಸರಿ ಗುರೂಜಿ. ನೀವು ಹೇಳಿದಂತೆ ಮನೆಯ ದ್ವಾರವನ್ನು ತೆಗೆದು ಬೇರೆಡೆಗಿರಿಸಬಹುದು. ಆದರೆ ಮಾವಿನ ಮರ ಕಡಿಯಲು ನೆರೆಮನೆಯವರು ಒಪ್ಪುತ್ತಾರಾ…?’ ಎಂದು ಪ್ರಶ್ನಿಸಿದ. ‘ಅದೂ ಹೌದು. ಆದರೆ ಅದಕ್ಕೂ ನಮ್ಮ ಬಳಿ ಪರಿಹಾರವಿದೆ ಬಿಡಿ!’ ಎಂದ ಗುರೂಜಿಯವರು ಕುಂಕುಮದ ಕಟ್ಟೊಂದನ್ನು ತೆಗೆದು ಕಣ್ಣುಮುಚ್ಚಿ ಮಂತ್ರಿಸಿ ಅವರ ಕೈಗಿತ್ತು, ‘ಈ ಪ್ರಸಾದವನ್ನು ಆ ಮನೆಯವರಿಗೆ ಕೊಡಿ ಮತ್ತು ಆ ಮರದ ಕುರಿತು ನಾವು ಹೇಳಿದ ವಿಷಯವನ್ನೂ ಅವರಿಗೆ ವಿವರಿಸಿ. ಒಪ್ಪುತ್ತಾರೆ. ಆಗಲೂ ಒಪ್ಪದಿದ್ದರೆ ಮುಂದೇನು ಮಾಡಬೇಕೆಂಬುದನ್ನು ನಾವೇ ಹೇಳುತ್ತೇವೆ. ಯಾವುದಕ್ಕೂ ಆ ಕೆಲಸವಾದ ಮೇಲೆ ಇನ್ನೊಮ್ಮೆ ಬಂದು ಹೋಗಿ!’ ಎಂದು ನಗುತ್ತ ಹೇಳಿದರು. ಆಗ ಆ ದಂಪತಿಗೆ ಧೈರ್ಯ ಬಂತು. ‘ಸರಿ ಗುರೂಜಿ!’ ಎಂದು ಅವರು ನಮ್ರವಾಗಿ ಎದ್ದವರು ಐನೂರರ ಎರಡು ನೋಟುಗಳನ್ನು ಅವರ ಹರಿವಾಣದಲ್ಲಿಟ್ಟು ಕೈಮುಗಿದು ಹೊರಟು ಹೋದರು.    ಶ್ರೀಮಂತ ದಂಪತಿ ಹೊರಗೆ ಹೋದ ಬೆನ್ನಿಗೆ ಮಧ್ಯಮವರ್ಗದ ಜೋಡಿಯೊಂದು ಅಳುಕುತ್ತ ನಾಚುತ್ತ ಗುರೂಜಿಯ ಕೋಣೆಯನ್ನು ಪ್ರವೇಶಿಸಿತು. ಗುರೂಜಿಯವರು ಆ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಹೌದೂ, ಇವರು ಮೂರು ತಿಂಗಳ ಹಿಂದೊಮ್ಮೆ ಬಂದು ಹೋದವರಲ್ಲವಾ…? ಎಂದುಕೊಂಡವರ ಮುಖದಲ್ಲಿ ತಟ್ಟನೆ ಅಸಹನೆಯ ಹೊಗೆಯಾಡಿತು. ಥತ್! ದರಿದ್ರದವುಗಳೆಲ್ಲಿಯಾದರೂ! ಮತ್ತೆ ಯಾಕೆ ವಕ್ಕರಿಸಿದವು? ಎಂದು ಚಿಂತಿಸಿದವರಿಗೆ ಆ ಜೋಡಿಯ ಸಮಸ್ಯೆಯೂ ಮುನ್ನೆಲೆಗೆ ಬಂತು. ಥೂ! ಇವುಗಳು ಕೊಡುವ ಇನ್ನೂರು ರೂಪಾಯಿಗೆ ನಾವು ಇವರಿಗೆ ಸಂತಾನಭಾಗ್ಯ ಕರುಣಿಸಬೇಕಂತೆ. ತಲೆಕೆಟ್ಟವುಗಳು! ಎಂದು ಒಳಗೊಳಗೇ ಬೈದುಕೊಳ್ಳುತ್ತ, ‘ಹ್ಞೂಂ  ಹೇಳಿ ಏನು ವಿಶೇಷ? ಏನಾದರೂ ಸಿಹಿ ಸುದ್ದಿ ತಂದಿದ್ದೀರೋ ಇಲ್ಲವೋ…?’ ಎಂದು ನಗುತ್ತ ಕೇಳಿದರು. ಆದರೆ ಆ ದಂಪತಿಯ ಮುಖಗಳು ಬಾಡಿದವು. ‘ಅದು ಗುರೂಜೀ… ನಾವು ಹೋದ ಸಲ ಬಂದಾಗ ನೀವು ನಮ್ಮ ತೊಂದರೆಯ ನಿವಾರಣೆಗೆ ನಮ್ಮ ಕುಲದೇವರಿಗೆ ಒಂದೂವರೆ ಕಿಲೋ ಉದ್ದಿನ ಬೇಳೆಯನ್ನು ಭಕ್ತಿಯಿಂದ ಸಮರ್ಪಿಸಿಲು ಹೇಳಿದ್ದಿರಿ. ನಾವು ಕೂಡಾ ಹಾಗೆಯೇ ಮಾಡಿದೆವು. ಆದರೆ ಆ ಮೇಲೆ ಮೂರು ತಿಂಗಳು ಕಳೆಯಿತು. ಇನ್ನೂ ಯಾವ ಸೂಚನೆಯೂ ಇಲ್ಲ!’ ಎಂದ ಹೆಂಗಸು ಮತ್ತೆ ತಲೆ ತಗ್ಗಿಸಿ ಕುಳಿತಳು. ಗುರೂಜಿಯವರಿಗೆ ಜಿಗುಪ್ಸೆ ಮೂಡಿತು. ‘ಹೌದಾ ಅಮ್ಮಾ… ಮೂರು ತಿಂಗಳಲ್ಲಿ ಎಷ್ಟು ಬಾರಿ ಕೊಟ್ಟಿದ್ದೀರಿ? ಒಂದೇ ಸಲ ಅಲ್ಲವಾ… ಅದೂ ಒಂದೂವರೆ ಕೇಜಿ ಅಷ್ಟೇ ತಾನೇ. ಅಯ್ಯೋ, ಅಷ್ಟಕ್ಕೆಲ್ಲ ನಮ್ಮ ಈಗಿನ ಯಾವ ದೇವರು ಪ್ರಸನ್ನನಾಗುತ್ತಾನಮ್ಮಾ! ಇನ್ನೊಂದಷ್ಟು ಕಾಲ ಕೊಡುತ್ತಲೇ ಇರು. ದೇವರಿಗೂ ನಾವು ಆಗಾಗ ಸ್ವಲ್ಪ ಕಾಟ ಕೊಡುತ್ತಲೇ ಇರಬೇಕಮ್ಮಾ. ಆಗಲೇ ಅವನೂ ನಮ್ಮಾಚೆ ತಿರುಗಿ ನೋಡುವುದು!’ ಎಂದು ವ್ಯಂಗ್ಯವಾಗಿ ನಗುತ್ತ ಹೇಳಿದರು. ಆಗ ಅವಳ ಗಂಡ, ಗುರೂಜಿಯವರಿಗೆ ಕಾಣದಂತೆ ಹುಬ್ಬುಗಂಟಿಕ್ಕಿ ತಲೆಯನ್ನು ಕೆರೆದುಕೊಂಡ. ‘ಹ್ಞಾಂ! ಅಂದಹಾಗೆ ಇನ್ನು ಮುಂದೆ ಹೀಗೆ ಮಾಡಿ, ಒಂದು ತಿಂಗಳು ಉದ್ದಿನ ಬೇಳೆ ಕೊಟ್ಟರೆ ಮತ್ತೊಂದು ತಿಂಗಳು ತೊಗರಿಬೇಳೆ ಕೊಡಿ. ಅದರಿಂದ ದೇವರು ಸಂಪ್ರೀತನಾಗಿ ನಿಮಗೆ ಖಂಡಿತಾ ಸಂತಾನವಾಗುತ್ತದೆ. ಹೋಗಿ ಬನ್ನಿ!’ ಎಂದು ಗುರೂಜಿಯವರು ನಯವಾಗಿ ಅಂದರು. ಅಷ್ಟು ಕೇಳಿದ ಆ ಬಡಪಾಯಿ ದಂಪತಿ, ‘ಆಯ್ತು ಗುರೂಜಿ. ಎಲ್ಲಾ ನಿಮ್ಮ ಆಶೀರ್ವಾದ!’ ಎಂದು ಕೈಮುಗಿದು ಇನ್ನೂರು ರೂಪಾಯಿಯನ್ನು ಅವರ ಮುಂದಿಟ್ಟು ಹೊರಟು ಹೋದರು. ಅಷ್ಟರಲ್ಲಿ ಗುರೂಜಿಯವರಿಗೆ ರಾಘವನ ಕರೆ ಬಂತು. ಫೋನೆತ್ತಿಕೊಂಡರು. ಅದು ತಮ್ಮ ಸಹಾಯಕನ ಕರೆ ಎಂದು ತಿಳಿದರೂ ಅಭ್ಯಾಸ ಬಲದಂತೆ, ‘ಓಂ ನಾಗಾಯ ನಮಃ ಯಾರು ಮಾತಾಡ್ತಾ ಇರೋದು…?’ ಎಂದರು.    ‘ನಾನು ಗುರೂಜೀ ರಾಘವ…ಹೊರಗಡೆ ಒಂದು ಹೊಸ ಕೇಸು ಬಂದು ಕೂತಿದೆ. ಕೆಂಪು ಶರ್ಟು ಮತ್ತು ಹಳೆಯ ಮಾಡೆಲಿನ ರಾಡೋ ವಾಚು ಧರಿಸಿರುವ ಹೇಮಚಂದ್ರ ಎಂಬವನಿದ್ದಾನೆ. ಸುಮಾರಾದ ಕುಳವೇ. ಹೊಟೇಲ್ ಬ್ಯುಸಿನೆಸ್ಸು. ಯಾರೋ ಮಾಟ ಮಾಡಿಸಿದ್ದಾರಂತೆ. ಈಗ ವ್ಯಾಪಾರ ಮುಳುಗಿ ಇಪ್ಪತ್ತು ಲಕ್ಷ ಲಾಸ್ ಆಗಿದೆಯಂತೆ. ಗಮನಿಸಿ!’ ಎಂದು ಸಂಕ್ಷಿಪ್ತ ಮಾಹಿತಿ ನೀಡಿ ಫೋನಿಟ್ಟ. ‘ಓಹೋ, ಹೌದಾ…, ಸರಿ, ಸರಿ!’ ಎಂದು ಗುರೂಜಿಯೂ ಫೋನಿಟ್ಟವರು ತಕ್ಷಣ ಅಣ್ಣಪ್ಪನನ್ನು ಕರೆದು, ‘ನೋಡನಾ… ಹೇಮಚಂದ್ರ ಎಂಬವನನ್ನು ಒಳಗೆ ಕಳುಹಿಸು…!’ ಎಂದು ಆಜ್ಞಾಪಿಸಿದರು. ಅದಕ್ಕವನು, ‘ಗುರೂಜೀ, ಸುಮಿತ್ರಮ್ಮ ಎಂಬವರು ಅವರಿಗಿಂದ ಮೊದಲು ಬಂದು ಕೂತಿದ್ದಾರೆ…!’ ಎಂದು ಹಲ್ಲುಗಿಂಜಿದ. […]

ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—47 ಆತ್ಮಾನುಸಂಧಾನ ನಾಲ್ಕಾರು ಬಂಧುಗಳ ನಡುವೆ ವಿವಾಹ ಬಂಧನಕ್ಕೆ….. : ಬದುಕು ಅನೇಕ ವಿಧದ ಸಂಬಂಧಗಳ ಬೆಸುಗೆ. ನಮ್ಮ ಜೀವಿತದ ಕಾಲಾವಧಿಯ ಉದ್ದಕ್ಕೂ ಈ ಸಂಬಂಧಗಳ ಬೆಸುಗೆ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಅಂತಹ ಸಂಬಂಧಗಳಲ್ಲಿ ಪ್ರೇಮ ಸಂಬಂಧವೆಂಬುದು ಒಂದು ಅಪರೂಪದ, ವಿಶಿಷ್ಟವಾದ ಭಾವ ಬಂಧ. ಇದು ಗಂಡ-ಹೆಂಡತಿಯ ಸಾಮಾಜಿಕ ಅಂತಸ್ತುಗಳ ರೂಪದಲ್ಲಿ ಸಮಾಜದ ಮುಂದುವರಿಕೆಗೂ ನೆರವಾಗುತ್ತದೆ. ‘ಪ್ರೇಮ’ ಎಂಬುದು ಮುಂಗಡ ಬುಕಿಂಗ್ ಮಾಡುವಂತಹುದಲ್ಲ. ಅದು ಹೊತ್ತು ಗೊತ್ತಿಲ್ಲದೆ ತೀರ ಆಕಸ್ಮಿಕವಾಗಿ ಘಟಿಸುವಂತಹದು. ಅದಕ್ಕೇ ಇರಬಹುದೇನೋ […]

ಪ್ರಿಯ ಕೊಲೆಗಡುಕರೇ

ಕಾವ್ಯಯಾನ ಪ್ರಿಯ ಕೊಲೆಗಡುಕರೇ ಹೇಗಿದ್ದೀರಿ?ಬಹುಶಃ ಚೆನ್ನಾಗಿರುವಿರಿ ನನಗೆ ನೆನಪಿಲ್ಲನಿಮ್ಮ ಮಡಿಲನು ನಾನುತುಂಬಿದ ದಿನನಾನು ಹುಟ್ಟಿದ ಕಾರಣಕ್ಕೆನೀವು ಅಪ್ಪ ಅಮ್ಮರಾದಿರಿಎಂದು ನೀವು ಹೇಳಿಯೇ ಗೊತ್ತು… ನಾನು ಚಿಕ್ಕವಳಾಗಿದ್ದಾಗಊರಿನ ಜಾತ್ರೆಯಲ್ಲಿ ನಾನು ಇಷ್ಟಪಟ್ಟರಾಜಕುಮಾರನ ಬೊಂಬೆಯನ್ನು ಕೊಡಿಸಿನನ್ನ ಆಟವನ್ನು ನಿಮ್ಮ ಸಂಭ್ರಮವಾಗಿಸಿದಿರಿ ಬಹುಶಃ ನನಗೆ ಹನ್ನೆರಡೋಹದಿಮೂರೋ ವಯಸ್ಸಿರಬೇಕುಹೊಟ್ಟೆ ನೋವೆಂದು ಮುಖಕಿವಿಚಿದಾಗಹೆಣ್ಣಾದಳೆಂದು ಊರಿಗೆಲ್ಲಾ ಸುದ್ದಿಹಂಚಿದಿರಿ ಎಲ್ಲವೂ ಸರಿ ಇತ್ತುಅರವಿಂದ ನನ್ನನ್ನು ನೋಡುವವರೆಗೆಇಲ್ಲ ನಾನು ಅವನನ್ನು ಕಾಣುವವರೆಗೆಜಾತ್ರೆಯಲಿ ಕೊಂಡ ಬೊಂಬೆ ರಾಜಕುಮಾರಜೀವತಳೆದು ನನ್ನ ಅರವಿಂದನಾಗಿದ್ದ ಅವನನ್ನು ಕಂಡಂದು ಒಡಲೊಳಗೆಬಣ್ಣದ ಚಿಟ್ಟೆಯೊಂದು ರೆಕ್ಕೆ ಬಡಿದ ಹಾಗೆಮನಸ್ಸು […]

Back To Top