ಕಥೆ

ಶಾರದ

ಭಾಗ-2

ಅನಸೂಯ ಎಂ.ಆರ್

Abstract art Stock Photos & Royalty-Free Images | Depositphotos

ವಾಣಿ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದಾಗ ಶಾರದ” ವಾಣಿ ಇಂಜಿನೀಯರಿಂಗ್ ಅಥವಾ ಮೆಡಿಕಲ್ ಸೇರು. ನಾನು ಓದಿಸ್ತೇನೆ” ಎಂದಳು

 “ನನಗಿಷ್ಟವಿಲ್ಲ ಅತ್ತೆ. ನಾನು ನಿನ್ನ ಹಾಗೆ ಟೀಚರ್ ಅಥವ ಲೆಕ್ಚರರ್ ಆಗ್ತೀನಿ”ಎಂದು ಹೇಳಿ B.SC ಗೆ  ಸೇರಿ ಪದವಿ

ಪಡೆದಳು ಮುಂದೆ ಸ್ನಾತಕೋತ್ತರ ಪದವಿಯಲ್ಲೂ ಅಧಿಕ

ಅಂಕಗಳನ್ನು ಪಡೆದಿದ್ದರಿಂದ ಸುಲಭವಾಗಿ ಸರ್ಕಾರಿ ಪ.

ಪೂ. ಕಾಲೇಜಿನ ಉಪನ್ಯಾಸಕಿಯಾದಳು. ಊರಿನಿಂದ ನಲ್ವತ್ತು ಕಿ. ಮೀ. ದೂರವಿದ್ದ ಜಿಲ್ಲಾ ಕೇಂದ್ರದ ಸರ್ಕಾರಿ

ಕಾಲೇಜಿನಲ್ಲೆ ಸಿಕ್ಕಿದ್ದರಿಂದ ಬಸ್ ಪಾಸ್ ಮಾಡಿಸಿ ಮನೆ

ಯಿಂದಲೆ ದಿನವೂ ಹೋಗಿ ಬರುತ್ತಿದ್ದಳು. ಅಂದು ವಾಣಿ

ಕಾಲೇಜಿನಿಂದ ಬಂದವಳೆ”ಅತ್ತೆ, ಅಮ್ಮ ಎಲ್ಲರು ಇವತ್ತು

ಹೊರಗಡೆ ಹೋಗಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು

ಬರೋಣ. ಅಪ್ಪಂಗೂ,ವರುಣ್ಗೂ ಪೋನ್ ಮಾಡಿದೀನಿ

ಸೀದಾ ಅಲ್ಲಿಗೆ ಬರೋಕೆ. ನೀವಿಬ್ಬರೂ ಬೇಗ ರೆಡಿ ಆಗ್ರಿ” ಆಗ ಮಂಗಳಾ”ಯಾಕೆ? ಏನು ಇವತ್ತು”ಎಂದಾಗ “ಅಮ್ಮ

ಅಲ್ಲೇ ಹೇಳ್ತೀನಿ” ಎಂದಳು. ಆಟೋ ಹತ್ತಿ ಕುಳಿತ ಮೇಲೆ

“ಶ್ರೀ ಜ್ಯುಯಲರಿ” ಶಾಪ್ ಎಂದಳು. ಒಳಗೆ ಹೋದಾಗ

“ಓಲೆಗಳನ್ನು ತೋರಿಸಿ ಎಂದಳು. ಇಬ್ಬರಿಗೂ ನನಗೆರಡು ಜೊತೆ ಮುತ್ತಿನ ಓಲೆಗಳನ್ನು ಆಯ್ಕೆ ಮಾಡಿರಿ “ಎಂದಳು.

ಇಬ್ಬರೂ ಸೇರಿ ಆಯ್ಕೆ ಮಾಡಿದ ದೊಡ್ಡ ಮುತ್ತಿನ ಹಸಿರು ಮತ್ತು ಬಿಳಿಯ ಬಣ್ಣದ ಮುತ್ತಿನೋಲೆಗಳನ್ನು ಕೊಂಡು

ಕೊಂಡಳು. ಅಲ್ಲಿಂದ ಸಾಗರ್ ಹೋಟೆಲ್ ಬಳಿ ಕಾದಿದ್ದ

ಮಂಜುನಾಥ ಮತ್ತು ವರುಣ್ ಅವರನ್ನು ಸೇರಿಕೊಂಡ

ಮೇಲೆ ಎಲ್ಲರೂ ಊಟ ಮಾಡಿ ಮನೆ ಸೇರಿದರು.ಆಗ

ವಾಣಿ “ಅತ್ತೆ,ಅಮ್ಮ ಇಬ್ರೂ ಬನ್ರಿ ಇಲ್ಲಿ”ಎಂದು ಕರೆದಳು

ಬಂದಾಗ ಓಲೆಗಳ ಬಾಕ್ಸ್ ತೆಗೆದು “ಇದರಲ್ಲಿ ಯಾವುದು ನಿಮಗಿಷ್ಟ ಆಗುತ್ತೊ ಅದನ್ನು ತಗೊಳ್ರಿ. ಇದು ನನ್ನ ಸ್ವಂತ

ದುಡಿಮೆಯ ಮೊದಲ ಸಂಬಳದಿಂದ ತಂದಿದೀನಿ. ಬೇಡ

ಅನ್ನಬಾರದು”ಅಂದಾಗ ಶಾರದ ಬಿಳಿಯ ಮುತ್ತಿನೋಲೆ, ಹಸಿರು ಮುತ್ತಿನೋಲೆ ತೆಗೆದುಕೊಂಡ ಮಂಗಳ ಮಗಳ ತಲೆಯನ್ನು ನೇವರಿಸಿದರೆ, ಶಾರದ”ಅಂತೂ ನಮ್ಮ ವಾಣಿ

ದುಡಿದು ಸಂಬಳ ತರೋ ಹಂಗಾದ್ಲು. ಯಾವಾಗ್ಲೂ ಹೀಗೆ

ಖುಷಿ ಖುಷಿಯಾಗಿ ಇರಮ್ಮ”ಎಂದಾಗ ವರುಣ್ “ಅಪ್ಪನ್ನ

ನನ್ನನ್ನ ಮರೆತ್ಬಿಟ್ಟೇನಕ್ಕ” “ಹಂಗನ್ಬೇಡಪ್ಪ, ತಡ್ಕೋ ಸ್ವಲ್ಪ”

ಅನ್ನುತ್ತ ಇಬ್ಬರಿಗೂ ಎರಡೆರಡು ಸಾವಿರ ಕೊಟ್ಟು ನಿಮಗೆ

ಇಷ್ಟವಾದ ಬಟ್ಟೆ ತಗೊಳ್ರಿ” ಎಂದು ಕೊಟ್ಟಳು.”ಇಷ್ಟುದಿನ

ನಾವು ನಿನಗೆ ಬಟ್ಟೆ ಕೊಡಿಸಿದ್ರೆ ಈಗ ನೀನು ನಮಗೆ ಬಟ್ಟೆ

ಕೊಡಿಸಂಗಾಯ್ತು. ಆಯ್ತಮ್ಮ ಇನ್ಮುಂದೆ ನಿನ್ನ ಸಂಬಳದ

ಹಣವನ್ನೆಲ್ಲ ಬ್ಯಾಂಕ್ನಲ್ಲಿ ಕೂಡಿಡು”ಎಂದು ಮಂಜುನಾಥ

ಹೇಳಲು ಶಾರದ ಮತ್ತು ಮಂಗಳ ಇಬ್ಬರೂ ಆ ಮಾತಿಗೆ

ಧ್ವನಿಗೂಡಿಸಿದರು.

ಯಾಕೋ ಏನೋ ನಮ್ಮ ಮನೆ ಗಂಡು ಮಕ್ಕಳಿಗೆ ವಿದ್ಯೆ ಅಷ್ಟಾಗಿ ಒಲಿಯಲಿಲ್ಲ. ವರುಣ್  SSLC ಪರೀಕ್ಷೆಯಲ್ಲಿ  ಸಾಧಾರಣ ಅಂಕಗಳನ್ನು ಪಡೆದು ಉತ್ತೀರ್ಣನಾದನು “ಅತ್ತೆ, ನಾನು ಎಲೆಕ್ಟ್ರಿಕಲ್ ಡಿಪ್ಲೋಮೊಗೆ ಸೇರ್ಕಂತಿನಿ” ಎಂದು ಹೇಳಿದಾಗ “ಆಯ್ತು ಅದಕ್ಕೇ ಸೇರಪ್ಪ. ಒಂದು  ವೇಳೆ ಕೆಲಸ ಸಿಗದಿದ್ರು ಸ್ವಂತವಾಗಿ ವ್ಯವಹಾರ ಮಾಡ್ಕ ಬಹುದು”ಎಂದು ಮಂಜುನಾಥನು ಒಪ್ಪಿಗೆ ಸೂಚಿಸಿದ. ವಾಣಿ M.SC.ಗೆ ಸೇರಿದಾಗ ವರುಣ್ ಮೂರು ವರ್ಷದ ಡಿಪ್ಲಮೋ ಮುಗಿಸಿದ ನಂತರ ಒಂದು ವರ್ಷ ಕೆಲಸಕ್ಕಾಗಿ ಪ್ರಯತ್ನಿಸಿದರೂ ಸಫಲವಾಗದಿದ್ದಾಗ ಮಂಜುನಾಥ ತನ್ನ ಸ್ನೇಹಿತನ ಸಹಾಯದಿಂದ ತುಮಕೂರಿನಲ್ಲಿದ್ದ ಖಾಸಗಿ ಎಲಕ್ಟ್ರಿಕಲ್ ಕಂಟ್ರಾಕ್ಟ್ ದಾರರೊಬ್ಬರ ಹತ್ತಿರ ಅನುಭವ ಪಡೆಯಲೆಂದೇ ಒಂದೆರಡು ವರ್ಷ ಕೆಲಸಕ್ಕೆ ಸೇರಿಸಿದ್ದನು ತನ್ನ ಚುರುಕಾದ ವ್ಯವಹಾರ ಜ್ಞಾನ ಹಾಗೂ ಕೆಲಸದಲ್ಲಿನ ಆಸಕ್ತಿಯ ಮೂಲಕವೇ ಮಾಲೀಕರ ಮೆಚ್ಚುಗೆ ಹಾಗೂ ನಂಬಿಕೆಗೆ ಪಾತ್ರನಾಗಿದ್ದನು.ಇದರಿಂದ ಅವನ ಭವಿಷ್ಯದ ಕುರಿತಾಗಿ ಯಾರಿಗೂ ಆತಂಕವಿರಲಿಲ್ಲ. ಆ ದಿನ ಶಾರದ ಶಾಲೆಯಿಂದ ಬಂದು ಕಾಫಿ ಕುಡಿಯುವಾವಾಗ ಮಂಗಳ “ಅಕ್ಕ ನಮ್ಮವರುಣನಿಗೆ ಸ್ವಂತ ಬಿಸಿನೆಸ್ ಮಾಡೋ ಆಸೆ ಈಗ ಹೇಗಿದ್ರೂ ನಮ್ಮ ಅಂಗಡಿ ಪಕ್ಕದ ಮಳಿಗೆ ಖಾಲೀನೆ ಇದೆ. ಬಾಡಿಗೆಗೆ ಕೊಡದೆ ಎಲೆಕ್ಟ್ರಿಕಲ್ ಶಾಪ್ ಇಡೋಣ.   ಅತ್ತೇನ ಕೇಳ್ತೀನಿ ಅಂತಿದ್ದ.ನಿಮಗೇನು ಅನ್ಸುತ್ತೆ”ಎಂದಳು “ಮಂಜುನು ಬರಲಿ ರಾತ್ರಿ ಮಾತಾಡೋಣ. ವಾಣಿದೇನು ಲೈಫ್ ಸೆಟ್ಲಾಗಿ ಬಿಡ್ತು.ಇವನಿಗೂಂದು ವ್ಯವಸ್ಥೆಯಾಗ್ಬೇಕು  “ಇವನು ವಾಣಿಯಂಗೆ ಓದ್ಲಿಲ್ಲನೋಡಕ್ಕ ಇವನಿಗೊಂದು  ಉದ್ಯೋಗ ಅಂತ ಆಗ್ಬಿಟ್ರೆ ನನಗಿನ್ಯಾವ ಚಿಂತೆಯಿರಲ್ಲ” “ಅದಕ್ಯಾಕೆ ಚಿಂತೆ ಮಾಡ್ಬೇಕು.ಎಲ್ಲರು ಓದೀನೇ ಉದ್ಧಾರ ಆಗ್ಬಿಟ್ಟಿದಾರಾ? ಬುದ್ಧಿ ಮತ್ತು ಶ್ರಮಗಳಿದ್ದರೆ ಸಾಕು ಈಗ

ಮುಂದುವರಿಬಹುದು.ನೀನೇನು ಚಿಂತೆ ಮಾಡ್ಬೇಡ”  

ಅಂದು ರಾತ್ರಿ ಎಲ್ಲರ ಊಟವಾದ ನಂತರ ಶಾರದಳೇ “ವರುಣ್, ಎಲೆಕ್ಟ್ರಿಕಲ್ ಶಾಪ್ ಇಡೋಕ್ಕೆ ಬಂಡವಾಳನ ಎಲ್ಲಿಂದ ಹೇಗೆ ವ್ಯವಸ್ಥೆ ಮಾಡ್ಬೇಕು ಅಂತ ಪ್ಲಾನ್ ಏನು ಮಾಡಿದೀಯಾ?”ಎಂದು ಕೇಳಿದಳು”ಅತ್ತೆ ಅಪ್ಪ ಒಂದು 

ಸ್ಟಲ್ಪ ಬಂಡವಾಳ ಕೊಡಲಿ.ಅಂಗಡಿಗೆ ಹೇಗೂ ಬಾಡಿಗೆನ

ಕೊಡಬೇಕಾಗಿಲ್ಲ ಆದ್ದರಿಂದ ಬ್ಯಾಂಕ್ ನಲ್ಲಿ ಸಾಲವನ್ನು

ಕೊಡಿಸಲಿ. ಸಾಲ ತೀರಿಸೊ ಜವಾಬ್ದಾರಿನೂ ನಂದೆ” ಆಗ  

ಮಂಜುನಾಥ “ಅಕ್ಕ ಇನ್ನು ವಾಣಿದು ಮದ್ವೆ ಆಗಿಲ್ಲ. ಇನ್ನ

ಒಂದೆರಡು ವರ್ಷ ಅವರತ್ರನೇ ಕೆಲ್ಸ ಮಾಡಿ ಅನುಭವ

ಆಗಲಿ ವಾಣಿ ಮದ್ವೆ ಆದ ಮೇಲೆ ಅವನು ಹೇಳಿದಂಗೆ 

ಮಾಡಿಕೊಡ್ತೀನಿ”ಎಂದು ಹೇಳಿದ.”ಈಗಾಗಲೇ ಮೂರು ವರ್ಷದ ಅನುಭವ ಆಯ್ತು ಕಣಪ್ಪ ನಾನೇ ಸ್ವಂತ ಶಾಪ್ ಇಟ್ಟು ನಡಿಸೋ ಅಷ್ಟು ಜವಾಬ್ದಾರಿ ಬಂದಿದೆ. ನಾನೇನೂ ಇನ್ನು ಚಿಕ್ಕಹುಡುಗ ಅಲ್ಲ. ಎಲ್ಲರೂ ಸಪೋರ್ಟ್ ಮಾಡ್ರಿ” ಎಂದನು. “ಆಯ್ತು ಮಂಜು, ನೀನು ನಿನ್ನ ಕೈಲಾದಷ್ಟು ಕೊಡು ನನ್ನ ಕೈಲಾದಷ್ಟು ನಾನು ಕೊಡ್ತೀನಿ. ಉಳಿದಿದ್ದಕ್ಕೆ ಬ್ಯಾಂಕ್ ಲ್ಲಿ ಸಾಲ ತೆಗೆದುಕೊಡು. ಸಾಲದ ಹಣ ಅವನೇ ಕಟ್ಟಬೇಕು”ಎಂದು ತೀರ್ಮಾನವಾದ ಖುಷಿಯಲ್ಲಿ ತಮ್ಮ ವರುಣನ ಮುಖ ಅರಳಿದಾಗ ವಾಣಿ “ಅಂಗಡಿಗೆ ಏನಂತ ಹೆಸರಿಡ್ತೀಯಾ ವರುಣ” ಮಂಜು ತಕ್ಷಣವೇ “ಶಾರದಾ ಎಲೆಕ್ಟ್ರಿಕಲ್ಸ್”ಎನ್ನುತ್ತಿದ್ದಂತೆ ಎಲ್ಲರು ಚಪ್ಪಾಳೆ ಹಾಕಿದರು. ಎರಡು ತಿಂಗಳೊಳಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ತಿರುಗಾಡುತ್ತ ವರುಣ್ ಎಲ್ಲ ಕೆಲಸಗಳನ್ನು ಮುಗಿಸಿದನು   ಶುಭ ಮುಹೂರ್ತದಲ್ಲಿ ಅಂಗಡಿಯನ್ನು ಪ್ರಾರಂಭಿಸಿದನು 

ಕೆಲವು ದಿನಗಳಾದ ಮೇಲೆ “ಅತ್ತೆ,ಇದು ನನ್ನ ಮೊದಲನೆ

ಲಾಭ. ನೀನು ಅಮ್ಮ ನಿಮಗೇನು ಇಷ್ಟಾನೋ ತಗೊಳ್ಳಿ”

ಹಣವನ್ನು ಕೊಡುತ್ತ ಹೇಳಿದ.” ನಮಗೇನು ಬೇಡ ಕಣಪ್ಪ ಮೊದಲು ಬ್ಯಾಂಕ್ ಸಾಲ ತೀರ್ಸು.ಆಮೇಲೆ ಕೊಡೋದು

ಇದ್ದೇ ಇದೆ” ಶಾರದ ಹೇಳಿದಳು.ಆಗ ಮಂಗಳ ” ಹೌದು ಬ್ಯಾಂಕಿಗೆ ಕಟ್ಟಪ್ಪ”ಎಂದಳು. ಎಲ್ಲರೂ ಆ ರಾತ್ರಿ ಊಟಕ್ಕೆ 

ಕುಳಿತಾಗ ಶಾರದ ವರುಣ್ ಹಣ ತಂದುಕೊಟ್ಟ ವಿಷಯ

ಹೇಳಿ ಬ್ಯಾಂಕ್ ಸಾಲ ತೀರ್ಸಲು ತಿಳಿಸಿದೆ ಎಂದಳು. ಆಗ

ಮಂಜುನಾಥ ಹೆಮ್ಮೆಯಿಂದ “ನಮ್ಮ ಮನೇಲಿರೊ ಐದು ಜನ ಇದೀವಿ ಅದ್ರಲ್ಲಿ ನಾಲ್ಕು ಜನ ದುಡಿತೀವಿ” ಹೇಳಿದ

ಕೂಡಲೆ ವಾಣಿ ” ಅಪ್ಪ, ನಾವು ಐದು ಜನರು ದುಡೀತಾ ಇದೀವಿ ಕಣಪ್ಪ. ನಾವು ನಾಲ್ಕು ಜನ ಹೊರಗಡೆ ದುಡಿದ್ರೆ

ಅಮ್ಮ ಮನೆಯೊಳಗೆ ದುಡೀತಾಳೆ.”ತಕ್ಷಣವೇ ಶಾರದ

“ಸರ್ಯಾಗಿ ಹೇಳಿದೆ ಕಣೆ”ಎಂದು ಅವಳ ಬೆನ್ನು ತಟ್ಟಲು

“ಆಯ್ತು ಮಗಳೆ ಒಪ್ಕಂಡೆ. ಅದಕ್ಕೆ ಹೇಳೋದು ನಾನು

ನನ್ನ ಮಗಳು ಜಾಣೆ ಅಂತ” ಎಂದು ಹೇಳಿದವನು ತಕ್ಷಣ

ಹೆಂಡತಿ ಕಡೆ ನೋಡುತ್ತಾ” ತಪ್ಪಾಯ್ತು ನಮ್ಮ ಮಗಳು” 

ಎನ್ನಲು ಎಲ್ಲರೂ ನಕ್ಕು ಬಿಟ್ಟರು.

(ಕೊನೆಯ ಕಂತು ಬುದವಾರ)

Leave a Reply

Back To Top