ಜ್ಞಾನದ ಹೊತ್ತಿಗೆಗಳು

ಲೇಖನ

ಜ್ಞಾನದ ಹೊತ್ತಿಗೆಗಳು

ಆರ್. ಬಿ. ಪ್ರಿಯಾಂಕ

: ಪುಸ್ತಕಗಳು  ಮಸ್ತಕಗಳ   ತೆರೆಸುತ್ತವೆ,  ಪುಸ್ತಕಗಳು  ಹೃದಯಗಳ  ತಟ್ಟುತ್ತವೆ,   ಪುಸ್ತಕಗಳು  ಮಾತು – ಮನಗಳ ಒಂದು ಮಾಡುತ್ತವೆ,   ಎನ್ನುವoತೆ ಈ ಪುಸ್ತಕಗಳು ಮಾನವನಲ್ಲಿ ಹೊಮ್ಮುವ  ಜಿಜ್ಞಾಸೆಗಳ ಫಲವಾಗಿವೆ.  ಮನುಷ್ಯನ  ಯೋಚನೆಗಳು,  ಕಾರ್ಯಗಳು,  ಸಾಧನೆಗಳು, ಪುಸ್ತಕಗಳ  ರೂಪದಲ್ಲಿ   ಶಾಶ್ವತವಾಗಿರುತ್ತವೆ. ಈ  ಪುಸ್ತಕಗಳು ಪೀಳಿಗೆಯಿಂದ  ಪೀಳಿಗೆಗೆ ಜ್ಞಾನವವನ್ನು  ವರ್ಗಾಯಿಸುವ ಸುಲಭ ಸಾಧನಗಳಾಗಿವೆ.

ಒಳ್ಳೆಯ ವಿಚಾರಗಳನ್ನು, ಮೌಲ್ಯಗಳನ್ನು ಮಾನವನ ಮನದಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ. ಹೆಚ್ಚು ಹೆಚ್ಚು ಓದಿದಂತೆ ನಮ್ಮ ಅಜ್ಞಾನದ ಅರಿವು ನಮಗಾಗುತ್ತದೆ.

ಡಾ ll A.P.J.ಅಬ್ದುಲ್ ಕಲಾಂ  ರವರ ಮಾತಿನಂತೆ ” ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ” ಎಂಬ ನುಡಿಯಂತೆ ಪುಸ್ತಕಗಳು ನಮ್ಮಿಂದ ಎಂದಿಗೂ ದೂರ ಹೋಗದ ಆಪ್ತ ಸ್ನೇಹಿತನಂತೆ.

ಪುಸ್ತಕಗಳು ಜ್ಞಾನದ ಜೊತೆ ಜೊತೆಗೆ ಜೀವನ ಪಾಠವನ್ನು, ಸಹಾಯ – ಸಹಕಾರಗಳನ್ನು ಕಲಿಸುತ್ತವೆ.

” ದೇಶ ಸುತ್ತಿ ನೋಡು ಕೋಶ ಓದಿ ನೋಡು “

ಎಂಬಂತೆ ಪುಸ್ತಕಗಳನ್ನು  ಓದುವುದರಿಂದ ವಿವಿಧ ದೇಶಗಳಲ್ಲಿನ  ಸಾಹಿತ್ಯ, ಕಲೆ,  ಸಂಸ್ಕೃತಿ,  ಹಾಗೂ ಆಚಾರ-ವಿಚಾರಗಳು ತಿಳಿಯುತ್ತವೆ. ಒಬ್ಬ  ವ್ಯಕ್ತಿ  ತಾನಿರುವ ಸ್ಥಳದಲ್ಲಿಯೇ  ಲೋಕದ ಅನುಭವವನ್ನು  ಪುಸ್ತಕಗಳಿಂದ  ಪಡೆಯುತ್ತಾನೆ.   ಪುಸ್ತಕಗಳು ಧರ್ಮ,  ದೇಶ,  ಕಾಲಗಳನ್ನು ಮೀರಿ ಜನಪ್ರಿಯವಾಗಿರುವುದರಿಂದ ಇವು ಸತ್ಯವೂ, ನಿತ್ಯವೂ, ನಿರಂತರವೂ,  ಸುಂದರವೂ  ಆಗಿವೆ.

 ” ಓದಿನ ಸುಖವೊಂದೇ ನಿತ್ಯವಾದದ್ದು,

ಮಿಕ್ಕ ಸುಖಗಳಿಗೆ ನಾವು  ಹಲವರನ್ನು

ಅವಲಂಬಿಸಬೇಕಾಗುತ್ತದೆ

ಎಂಬ ಮಾತಿನಂತೆ,

ಪುಸ್ತಕಗಳು ಸ್ಪಂದನಕ್ಕೆ ಗುರಿಯಾಗಿಸಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ.

ಪುಸ್ತಕ ಓದುವಿಕೆ ಒಬ್ಬ ಸಾಮಾನ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡುತ್ತವೆ. ಕಲ್ಪನೆಗಳಿಗೆ ರೆಕ್ಕೆಗಳನ್ನು ಮೂಡಿಸುವ ಮಾರ್ಗವಾಗಿ ಪುಸ್ತಕಗಳು ನಮ್ಮ ನಿತ್ಯ ಬದುಕಿನೊಂದಿಗೆ ಬೆರೆತು  ಹೋಗುತ್ತವೆ.

ನಿಮ್ಮ ಬಳಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಸಿ, ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ,

ಆಹಾರವು ನಿಮ್ಮನ್ನು ಜೀವಂತವಾಗಿಸುವಂತೆ ಮಾಡುತ್ತದೆ, ಪುಸ್ತಕವು ಹೇಗೆ ಜೀವಿಸಬೇಕೆಂದು ಕಲಿಸುತ್ತದೆ.

ಎಂಬ ಡಾ ll ಬಿ. ಆರ್. ಅಂಬೇಡ್ಕರ್ ರವರ ನುಡಿಯಂತೆ,

ಉತ್ತಮ ಪುಸ್ತಕಗಳು  ನಮ್ಮ ಬದುಕಿನ ದಾರಿದೀಪಗಳಾಗಿವೆ. ಜೀವನವನ್ನು ಕಟ್ಟುವ ಶಕ್ತಿಗಳಾಗಿವೆ.

” A room without books is like a body without a soul”

     ಎಂಬಂತೆ ” ಪುಸ್ತಕವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ “.       

ಪುಸ್ತಕಗಳನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಓದಬೇಕು ಅದರಿಂದ ಜ್ಞಾನ ಹೆಚ್ಚುತ್ತದೆ.                     ಕದಿಯಲಾಗದ ಸಂಪತ್ತು ಎಂದರೆ ಅದು ಜ್ಞಾನ.

ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ.

 ಎಂಬಂತೆ ಬಂಗಾರವನ್ನು ಉಜ್ಜಿದಷ್ಟೂ ಹೊಳಪು ಬರುವಂತೆ ಜ್ಞಾನವನ್ನು ಹಂಚಿದಷ್ಟೂ ಹೆಚ್ಚುತ್ತಲೇ ಹೋಗುತ್ತದೆ. ಈ ಜ್ಞಾನ ಪುಸ್ತಕಗಳನ್ನು ಓದುವುದರಿoದ  ಸಿಗುತ್ತದೆ.

ಪುಸ್ತಕಗಳನ್ನು ಓದುವ, ಸಂಗ್ರಹಿಸುವ  ಪ್ರವೃತ್ತಿ  ಪ್ರತಿಯೊಬ್ಬ  ಸುಶಿಕ್ಷಿತನಲ್ಲೂ  ಬೆಳೆಯಬೇಕು. ಮಹಾಕಾವ್ಯಗಳಾದ ರಾಮಾಯಣ,  ಮಹಾಭಾರತ, ಮತ್ತು ಭಗವದ್ಗೀತೆ,  ಬೈಬಲ್, ಕುರಾನ್ ಗ್ರಂಥಗಳು ಹಾಗೂ ಕಾಳಿದಾಸರ ಕೃತಿಗಳು ಇನ್ನೂ ಇತ್ಯಾದಿ ಪುಸ್ತಕಗಳನ್ನು ಮೊದಲು  ಓದಿದವರು ನಂತರದಲ್ಲಿ ಅವುಗಳನ್ನು  ನಿರ್ಲಕ್ಷಿಸಿದ್ದರೆ,  ಇಂತಹ ಮಹಾನ್ ಗ್ರಂಥಗಳ ಹಿನ್ನೆಲೆ ಮತ್ತು ಅವುಗಳ ಮಹತ್ವ  ನಮಗೆ ತಿಳಿಯುತ್ತಿರಲಿಲ್ಲ.

ಸಾಧ್ಯವಾದಷ್ಟು ಪುಸ್ತಕಗಳನ್ನು ಓದಿ ಅವುಗಳನ್ನು ಜೋಪಾನವಾಗಿ  ಸಂಗ್ರಹಿಸಿಡೋಣ. ಎಲ್ಲರ   ಮನೆ-ಮನಗಳಲ್ಲಿ  ಪುಸ್ತಕಗಳು ಬೆಳಗಲಿ ಎಂದು ಆಶಿಸೋಣ…..


One thought on “ಜ್ಞಾನದ ಹೊತ್ತಿಗೆಗಳು

Leave a Reply

Back To Top