ಈ ಸಂಜೆ

ಕಾವ್ಯಯಾನ

ಈ ಸಂಜೆ

ಅಕ್ಷತಾ ಜಗದೀಶ

ಜೊತೆಯಾಗಿ ಮೂಡಿಸಿದೆವು
ನಮ್ಮ ‌ಹೆಸರು‌ ಮರಳಿನ ಮೇಲೆ..
ಕಡಲ ಅಲೆಗಳ ಸ್ಪರ್ಶಿಸುತ
ಜೊತೆಯಾಗಿ ನಡೆದೆವು
ಆ ಸುಂದರ ‌ಸಂಜೆಯಲಿ..

ರವಿ ಆಗಸದಿಂದ ಜಾರಿದರು
ಸಮಯವೇಕೆ ಇಷ್ಟು ಬೇಗ‌
ಓಡುತ್ತಿದೆ ಎಂದು
ಮುನಿಸಿಕೊಂಡೆವು…..
ನಿನ್ನೊಡನೆ ಪಿಸುಗುಡುವಾಗ
ಅಲೆಗಳ ಬೋರ್ಗರೆತವೇ
ಕೇಳಲಿಲ್ಲ ನನಗಂದು….

ಇಂದೆಕೊ ಮತ್ತೆ ಏಕಾಂತ
ನಮ್ಮ ಹೆಸರನ್ನೇಕೊ
ಕಡಲ ಅಲೆಗಳು ಬಂದು
ನುಂಗುತ್ತಿವೆ ಇಂದು…

ಆಗಸದ ಸೂರ್ಯ ಅದೇಕೊ
ನಿಧಾನಗತಿಯಲಿ ಚಲಿಸುತಿಹನೋ..
ಕಡಲೇಕೊ ಬೋರ್ಗರೆದು
ನನ್ನ ನೋಡಿ ಆರ್ಭಟಿಸುತಿದೆ
ಎನ್ನುವಂತೆ ಭಾಸ..

ಮರೆಯಾದೆ ಏಕೆ‌ ನನ್ನ ರಜನಿ
ಅಗಾದ ಕಡಲಿಗೆ ಸೆರುತ್ತಿದೆ
ನೀ ಉಳಿಸಿಹೋದ ಕಂಬನಿ…
ಈ ಸಂಜೆ‌ ನೀ ಜೊತೆಗಿಲ್ಲ
ಆದರೂ….
ಕಡಲ ಅಲೆಗಳಿಗೆ ಸ್ಪರ್ಶಿಸುವುದ
ನಾ ಮರೆತಿಲ್ಲ….‌‌

Leave a Reply

Back To Top