Month: August 2021

ನೇಪಥ್ಯ ಸೇರಿದ ಗುಡಿಹಳ್ಳಿ ಹೆಜ್ಜೆ ಗುರುತು

ಗುಡಿಹಳ್ಳಿಗೆ ರಂಗಭೂಮಿ ಬಗ್ಗೆ ವಿಶೇಷ ಒಲವು ಆಸಕ್ತಿ. ವೃತ್ತಿ ಹಾಗೂ ಹವ್ಯಾಸಿ ನಡುವೆ ಕೊಂಡಿಯಾಗಿ ಬರಹ ಬರೆದ. ಹೆಚ್ವು ವೃತ್ತಿ ಕಲಾವಿದರ ಕಡೆಯೇ ವಾಲಿದ್ದ. ಹತ್ತಾರು ಆ ವೃತ್ತಿ ಕಲಾವಿದರ ಜೀವನಚರಿತ್ರೆ, ಪರಿಚಯ, ವಿಶ್ಲೇಷಣೆಯ ಕೃತಿ ಹೊರ ತಂದ.

ಮಲ್ಲಿಗೆ ಮೊಗ್ಗುಗಳು

ರಸಿಕನ ಕೈ ಸೇರಿದ ಮಲ್ಲಿಗೆ
ಮುಂಗೈ ಸುತ್ತಿಕೊಂಡಿವೆ
ಗೆಜ್ಜೆಯ ಗಲ್ ಗಲ್ ನಿಂದ
ದಣಿದು ಮೂಲೆ ಗುಂಪಾಗಿವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—40 ಆತ್ಮಾನುಸಂಧಾನ ಆಗೇರ ಸಮಾಜದ ತರುಣನಿಗೆ ಪ್ರಾಧ್ಯಾಪಕ ಹುದ್ದೆ”— ಎಂದು ಸುದ್ದಿಯಾದೆ : ಧಾರವಾಡ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಎರಡು ವರ್ಷಗಳು ಕಳೆದು ಹೋದದ್ದೇ ತಿಳಿಯಲಿಲ್ಲ. ಬಹುಪಾಲು ತಂಪಾಗಿಯೇ ಇರುವ ಪ್ರಾಕೃತಿಕ ಪರಿಸರ, ಬಯಲು ಸೀಮೆಯ ಆಪ್ತವೆನ್ನಿಸುವ ಕನ್ನಡ ಭಾಷೆಯ ಸೊಗಸು, ಮತ್ತೆ ಮತ್ತೆ ಕರ್ನಾಟಕ ವಿದ್ಯಾವರ್ಧಕ ಸಂಘದ, ಕನ್ನಡ ವಿಭಾಗದ ಕಾರ್ಯಕ್ರಮಗಳು, ಅಲ್ಲಿಗೆ ಬಂದು ಹೋಗುವ ಹಿರಿ-ಕಿರಿಯ ಲೇಖಕರು, ಕವಿಗಳು, ವಿದ್ವಾಂಸರು ಇವರನ್ನೆಲ್ಲ ನೋಡುವುದೇ ಕೇಳುವುದೇ […]

ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ

‘ಭಕ್ತಾದಿಗಳೇ, ನೀವೆಲ್ಲರೂ ಭಯಭಕ್ತಿಯಿಂದ ಹಮ್ಮಿಕೊಂಡಂಥ ಈ ವಿಶೇಷ ಪೂಜೆಯು ಸಂಪನ್ನವಾಗಿರುವುದನ್ನು ನೋಡಿದಿರಿ. ಹಾಗಾಗಿ ಈ ಮಹಾ ಧಾರ್ಮಿಕವಿಧಿಯನ್ನು ನೀವೆಲ್ಲ ಯಾಕೆ ಆಚರಿಸಬೇಕು? ಇದನ್ನು ನಡೆಸುವುದರಿಂದ ನಿಮ್ಮೆಲ್ಲರ ಯಾವ ಯಾವ ರೂಪದ ಮನೋಭೀಷ್ಟಗಳು ನೆರವೇರುತ್ತವೆ ಎಂಬುದನ್ನು ನಿಮಗೆಲ್ಲ ಅರ್ಥವಾಗುವಂತೆ ವಿವರಿಸುವುದು ನಮ್ಮ ಕರ್ತವ್ಯ!’ ಎಂದ ಗುರೂಜಿಯವರು ಒಮ್ಮೆ ನೆಟ್ಟಗೆ ದೃಢವಾಗಿ ಕುಳಿತು ತಮ್ಮ ಮಾತನ್ನು ಮುಂದುವರೆಸಿದರು.

ನೋವುಗಳೆ ಲಾಲಿ

ಕಾವ್ಯಯಾನ ನೋವುಗಳೆ ಲಾಲಿ ಶಾಲಿನಿ ಆರ್. ನನ್ನ ನೋವುಗಳೇನನ್ನೊಳಗೆ ಲಾಲಿ ಹಾಡುತ್ತಿವೆಸ್ತಬ್ಧವಾಗಿ ಮಿಡುಕದೆಮೌನದಾಲಾಪನೆಗೆಕಾರುಣ್ಯವಿರಿಸಿಅರಿವಿಲ್ಲದಾ ತಾರುಮಾರಿನಸಂತೆಯೊಳಗೆ ಭಿಕರಿಯಾಗದಂತೆಮೋಸ ಮಾಡದಂತೆಅವುಡುಗಚ್ಚಿ ಕುಳಿತಿವೆಚಳಿಮಳೆಗೆ ರಮಿಸಿಬಯಲ ಸಿಡಿಲಿಗೆಬಸವಳಿದ ನಂಟಿಗೆನನ್ನೊಳಗೆ ಲಾಲಿ ಹಾಡುತಿವೆ, ನನಸಾಗದ ಕನಸಕ್ಯಾನ್ವಸ್ಸಿಗೆ ಹಸಿರಬಣ್ಣ ಹುಡುಕುತಚಿಗುರಿನ ಆಸರೆಯಲಿಮುಳ್ಳು ಕೊನೆ ನಗುತನಾಳಿನ ಜಾವಕೆಕರಿಮೋಡ ಕಾನನದತುಂಬ ಹುಸಿ ಮಳೆತುಂಬಿದಂತೆ ನೋವುತುಟಿಯಂಚಿನ ಕೊನೆಗೆಹುಸಿ ನಗೆಯನಿರಿಸಿನನ್ನೊಳಗೆ ಲಾಲಿ ಹಾಡುತಿವೆ, ನೋವಿನ ಭಾರಹೊತ್ತ ಮನಕೆಬತ್ತಲಾಗುವಿಕೆಯಭಯವಿಲ್ಲ ಶಬ್ಧವಿಲ್ಲತಪ್ತ ಮನದಲಿಮೌನವೇ ಬೆಲ್ಲಶಬ್ಧವೊಡೆದರೆನಿಶಬ್ಧಕೆ ಬೆಲೆಯಿಲ್ಲಮೌನದ ಮೆರವಣಿಗೆಯಲಿಸಿಂಗಾರಗೊಂಡ ಮಾತುಗಳಮದುವೆ ದಿಬ್ಬಣಮಮತೆಯಲಿ ಕನಲಿನೋವು ಮೈದಡವಿನನ್ನೊಳಗೆ ಲಾಲಿ ಹಾಡುತಿವೆ… ****************

ಗಜಲ್

ಮೂರು ಗಂಟಿನ ಸಂಬಂಧ ಸಡಿಲವಾಗಿದೆಂಬ ಭ್ರಮೆ
ಸೂತ್ರ ಕಟ್ಟಿ ಪತಂಗವ ಹಾರಿಸಿರುವೆ ಅವನ ಹುಡುಕಲು

ಗಜಲ್

ಹೃದಯ ಬಡಿತ ಜಡವಾಗಿದೆ ನಿನ್ನಯ ಆಲಿಂಗನವಿಲ್ಲದೆ ಚಕೋರಿ
ರೋಗಿ ವೈದ್ಯನಿಗಾಗಿ ಪರಿತಪಿಸುವಂತೆ ನಿನಗಾಗಿ ಪರಿತಪಿಸುತಿರುವೆ

ಗಜಲ್

ಮೌನವಾದರೂ ನಿನ್ನೆದೆಯ ಪಿಸುಮಾತಿಗೆ ಒಲವು ಕಿವಿಯಾಗುತ್ತದೆ
ತಣ್ಣನೆಯ ಹಿಮದ ಹಣೆ ಬೆವರುವಾಗ ಸುನಾಮಿಯಾಗುತ್ತದೆ

Back To Top