ಕಾವ್ಯಯಾನ
ಮಲ್ಲಿಗೆ ಮೊಗ್ಗುಗಳು
ಪ್ರೊ. ರಾಜನಂದಾ ಘಾರ್ಗಿ
ಉದಯಿಸಿದ ಸೂರ್ಯನ ನೋಡಿ
ಮಲ್ಲಿಗೆ ಮೊಗ್ಗುಗಳು ಮುಗುಳು ನಕ್ಕಿವೆ
ಬಳ್ಳಿ ತುಂಬ ಬೆಳ್ಳಗೆ ಹರಡಿ
ಸುವಾಸನೆ ಬೀರಿವೆ
ಅರ್ಚಕ ಆಯ್ದ ಮೊಗ್ಗುಗಳು
ಅರಳಿ ಶಿವನ ಮುಡಿ ಎರಿವೆ
ಭಕ್ತರ ಉಡಿ ಸೇರಿವೆ
ಸಾರ್ಥಕತೆಯಿಂದ ಬೀಗಿವೆ
ನಲ್ಲ ಆಯ್ದ ಮಲ್ಲಿಗೆ
ನಲ್ಲೆಯ ಮುಡಿ ಎರಿವೆ
ಸರಸಕೆ ಸಾಕ್ಷಿಯಾಗಿವೆ
ನಾಚಿ ಸಂತೃಪ್ತಿ ಸೂಸಿವೆ
ರಸಿಕನ ಕೈ ಸೇರಿದ ಮಲ್ಲಿಗೆ
ಮುಂಗೈ ಸುತ್ತಿಕೊಂಡಿವೆ
ಗೆಜ್ಜೆಯ ಗಲ್ ಗಲ್ ನಿಂದ
ದಣಿದು ಮೂಲೆ ಗುಂಪಾಗಿವೆ
***************
ಸುಂದರ ಕವನ ಮೆಡಂ
Beautiful
ಚೆಂದದ ಕವಿತೆ ಮೇಡಂ