ಡಾ. ನಿರ್ಮಲಾ ಬಟ್ಟಲ ಕವಿತೆಗಳು
ಡಾ. ನಿರ್ಮಲಾ ಬಟ್ಟಲ ಕವಿತೆಗಳು ಕನಸಿರದವಳು ಕನಸುಗಳಿರದವಳು ನಾನುಯಾವ ಕನಸು ಬೇಕುಎಂದು ಕೇಳಿದರೆ ಏನು ಹೇಳಲಿ….? ಕನಸೆಂದರೆ ಕಾಮನಬಿಲ್ಲುನನಗೆ ಕಂಡಷ್ಟೇ ಸುಂದರಕೈಗೆ ಸಿಗದ ಒಲವು….! ಕನಸುಗಳ ಹಿಂದೆದೂಬೆನ್ನಟ್ಟಿ ಓಡಿದವಳಲ್ಲಕಾಡಿದವಳೂ ಅಲ್ಲ….! ಕನಸಿಗೆ ಬಣ್ಣ ತುಂಬುವಕಲೆಗಾರ ಚಿತ್ರಿಸದಿರುಬಣ್ಣಗಳ ಚೌಕಟ್ಟಿನೊಳಗೆಬಯಲ ಪ್ರೀತಿಸುವವಳು ನಾನು..! ಕನಸುಗಳ ಮೀನು ಹಿಡಿವಬೆಸ್ತಗಾರ ಸಿಕ್ಕಿಸದಿರು ನನ್ನಬಲೆಯೊಳಗೆಹರಿವ ನೀರು ಸೇರುವವಳು ನಾನು..! ಕನಸಿಗೆ ರೆಕ್ಕೆ ಕಟ್ಟುವಮಾಯಗಾರಮೋಡಿಮಾಡದಿರುಮುಗಿಲೊಳಗೆನೆಲದೊಳಗೆ ಕಾಲುರಿ ನಿಂತವಳು ನಾನು….! ನನಗಾಗಿನೀನು ಹೊತ್ತು ತಂದನೂರು ಕನಸುಗಳಲಿಯಾವುದನ್ನು ಆರಿಸಲಿ….? ನೀನು ಪ್ರೀತಿಯಿಂದಕೊಟ್ಟರೆ ಯಾವುದಾದರೂ ಸರಿಇಟ್ಟು ಕೊಳ್ಳುವೆನನಸಾಗಿಸುವ ಪಣತೊಟ್ಟುಕೊಳ್ಳುವೆ…! ಕನಸು […]
ಎಂ. ಆರ್. ಅನಸೂಯರವರ ಕವಿತೆಗಳು
ಎಂ. ಆರ್. ಅನಸೂಯರವರ ಕವಿತೆಗಳು ದೇವರ ಲೀಲೆ ಹಸುಗೂಸಿನ ಮುಗುಳ್ನಗೆ ಕಂಡಾಗ ಪರವಶನಾಗಬಹುದು ದೇವರು ಹಸಿದ ಕಂದಮ್ಮನ ಹೊಟ್ಟೆ ತಣಿದಾಗ ತೃಪ್ತಿ ಪಡಬಹುದು ದೇವ ಹಾಲಿನಂಥ ಮಲ್ಲಿಗೆ ಮೊಗ್ಗು ಬಿರಿದಾಗ ಮನ ಸೋಲಬಹುದು ದೇವರು ಹಸಿರುಟ್ಟ ಮಲೆಗಳ ತಂಬೆಲರು ಸುಳಿದಾಡಿದಾಗ ನಿದ್ರಿಸಬಹುದು ದೇವರು ಜಲಧಾರೆಗಳು ಬಿಳಿ ಮುತ್ತುಗಳ ಚೆಲ್ಲಾಡುವಾಗ ಹೆಕ್ಕಲು ಬರಬಹುದು ದೇವರು ಹೊನಲಲ್ಲಿ ಸ್ಪಟಿಕದಂಥ ಜಲ ಹರಿವಾಗ ನೀರಾಟವಾಡಬಹುದು ದೇವರು ಕಾರ್ಮೋಡಗಳಲಿ ಮಿಂಚು ಕೋರೈಸಿದಾಗ ಕಣ್ಬಿಡಬಹುದು ದೇವರು ವೈಶಾಖದ ಮಳೆಗೆ ಇಳೆ ಘಮ ಹರಡಿದಾಗ ಇಷ್ಟ […]
ಕಾಂತರಾಜು ಕನಕಪುರ ಅವರ ಕವಿತೆಗಳು
ಕಾಂತರಾಜು ಕನಕಪುರ ಅವರ ಕವಿತೆಗಳು ಜಾತಿ ಹೇವರಿಕೆ ಹುಟ್ಟಿಸುವವಿಕಾರ ವೃಕ್ಷಎಲ್ಲಿರುವುದೋ ಬೇರುಯಾರೂ ಅರಿಯರು…ರೆಂಬೆ-ಕೊಂಬೆಗಳು ಲೆಕ್ಕಕ್ಕೆಸಾವಿರಾರು…! ಅವರವರ ಅನುಕೂಲಕೆಯಾರೋ ನೆಟ್ಟರು…ಯಾರೋ ನೀರಿಟ್ಟರು…ಯಾರೋ ಗೊಬ್ಬರ ಕೊಟ್ಟರು…ಹಲವರು ಕಣ್ಣೀರಿಟ್ಟರು…ಅಂತು ಬೆಳೆದು ನಿಂತಿದೆಉದ್ದಂಡ ವಿಷ ವೃಕ್ಷ…! ಈ ಮರದ ನೆರಳು ನೆರಳಲ್ಲ ಅದುಅನುನಯದಿ ನೇಯ್ದ ಉರುಳುಅನುಕೂಲ ಪಡೆದಿಹರು ಕೆಲವರುಸಿಕ್ಕಿಬಿದ್ದು ನರಳುತ್ತಿರುವರು ಹಲವರು ಇನ್ನಾದರೂ…ನಾವು ಹಿಡಿಯಬೇಕಿದೆಅರಿವಿನಿಂದ ಮಸೆದ ಸಮಾನತೆಯ ಅಸ್ತ್ರವನುಕಡಿದುರುಳಿಸಲು ಜಾತಿಯ ವಿಷ ವೃಕ್ಷವನುಆಗ ಮಾತ್ರ ಆಗಬಹುದು ದೇಶದ ಏಳಿಗೆತಪ್ಪಿದರೆ ನಮ್ಮನ್ನು ಕ್ಷಮಿಸದೆಂದೆಂದೂಮುಂಬರುವ ಪೀಳಿಗೆ… ———————– ನಿನ್ನ ಹಾಗೆಯೇ ಇದೆ ಮನದಣಿಯೆ ನೋಡಿ ಮಣಿದೆತುಟಿ […]
ನಂಬಿಕೆ
ಸಾಗರ ಗರ್ಭದೊಳಗಡಗಿದ
ಮೃತ್ಯುದೇವತೆ ಬಳಿಸಾರಿದಂತೆ
ನಂಬಿಕೆ ಕಳೆದು ಹೋಗಿದೆ..//
ಪುಷ್ಪಾ ಮಾಳ್ಕೊಪ್ಪ ಮಿತ – ಹಿತ ಜಗವ ಬೆಳಗುವ ಬಂದುಬಾಲ ಭಾನುವು ಎಂದುಮುತ್ತಿಕ್ಕಲಪ್ಪುದೇನೊ |ತಮವ ಸರಿಸುವುದೆಂದುಜ್ವಲಿಪ ದೀಪವನೆಂದುಮುಟ್ಟಲಪ್ಪುದೇನೊ || ಗಂಗೆ ಯಮುನೆರನ್ನುಕೊಳೆಯ ತೊಳೆಯುವರೆಂದುಅಂಗಳಕೆ ತಪ್ಪುದೇನೊ |ತಪವು ನೇಮಾದಿಗಳುಸನ್ಯಾಸಿಗಲ್ಲದೆಸಂಸಾರಿಗಪ್ಪುದೇನೊ || ಮೈಗೆ ವ್ಯಾಧಿಯು ಎಂದುಮನೆಯ ಮದ್ದೆಂದುಮದ್ದಿಂದೆ ಮರವ ಮಾಡ್ಪುದೇನೊ |ಹಸೆಯು ಹಿತವೆಂದುಹಗಲು ಇರುಳೆರಡುಮಲಗಲಪ್ಪುದೇನೊ || ಮನೆಯ ಮಾಳಿಗೆಯುಸೋರುತಿಹುದೆಂದುಬಂಧುಗಳನೊಡನಿಪ್ಪುದೇನೊ |ಮಮತೆ ಇಹುದೆಂದುಮನುಜ ಮಡಿದರೂಮಡಗಲಪ್ಪುದೇನೊ ||
ಸ್ವಾತಂತ್ರ ಮತ್ತು ಸಮಾನತೆಯ ಗಾಂಧೀಜಿಯ ದೃಷ್ಟಿಕೋನ
ಗಾಂಧೀಜಿ ಮಾನವವತಾವಾದಿಗಳು ಎಲ್ಲ ಜೀವಿಗಳ ಬಗ್ಗೆ ಕಾಳಜಿಯನ್ನೂ ಹೊಂದಿದ್ದರು. ವೈರಿಯನ್ನು ಪ್ರೀತಿಸುವುದು ಎಂಬ ಗುಜರಾತಿ ಗಾದೆಮಾತಿನ ಪ್ರಭಾವ ಅವರ ಮೇಲೆ ಇತ್ತು. ವಿಶ್ವ ಮಾನವರೆಲ್ಲ ಒಂದು. ವಿಶ್ವವೆಲ್ಲ ಒಂದು ಎಂಬ ಅವರ ವೈಚಾರಿಕತೆ ಗ್ರೀನ್ ಮತ್ತು ಬೊಸಂಕ್ಯೂಟ್ (ಃosಚಿಟಿqueಣ) ಅವರನ್ನು ಹೋಲುತ್ತದೆ ಎಂದು ಹೇಳುವರು.
ಪ್ರೊ.ರಾಜನಂದಾ ಘಾರ್ಗಿಯವರ ಕವಿತೆಗಳು
ಪ್ರೊ.ರಾಜನಂದಾ ಘಾರ್ಗಿಯವರ ಕವಿತೆಗಳು