ಸ್ಮಿತಾ ಭಟ್ ಅವರ ಕವಿತೆಗಳು
ಸ್ಮಿತಾ ಭಟ್ ಅವರ ಕವಿತೆಗಳು ನಾನು ಒಂಟಿಯಾಗುತ್ತೇನೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸುತ್ತುಗಟ್ಟಿದ ನೋವುಗಳ ನಡುವೆದೂರದಲ್ಲೇ ಉಳಿದ ನಗುವಿನೊಂದಿಗೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಮಾತು ಬಿಕ್ಕಿ,ಮೌನ ಉಕ್ಕಿಯಾವ ಕಿವಿಗಳೊಳಗೂ ಹೊಕ್ಕದ ನಿಟ್ಟುಸಿರಿನೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ನನ್ನದೇ ಭಾವಗಳೊಳಗೆ ಯಾರೋ ಪ್ರತಿಭಟಿಸಿಸೆಟೆದು ನಿಲ್ಲುವ ಬಿರುಸಿನ ಮಾತುಗಳೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಹೆಣೆದ ದಾರದ ಮಧ್ಯ-ಸಿಲಕಿದ ಕೀಟದ ಅಮಾಯಕತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ಬರುವ ಕಿರಣಗಳ ತಡೆದುಕದವಿಕ್ಕಿದ ಕೋಣೆಯ ನೀರವತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸಮಾಧಿ ಮೇಲೆ ಇಟ್ಟ ಹೂಗಾಳಿಗೆ ಮೈ ಒಡ್ಡಿ ಇಷ್ಟಿಟ್ಟೇ ಸರಿದುಬೆರ್ಪಟ್ಟುಖಾಲಿ ಖಾಲಿ ಸಪಾಟಿನಲಿ ಉಳಿದ ಮೌನದೊಂದಿಗೆ. ****************************** ಹೇಳಲಾಗುವದಿಲ್ಲ ಆ ಪುಟ್ಟ ಬಾಲ್ಯದಲಿಆಟದಲಿ ಸೋತಿದ್ದುಪೆನ್ಸಿಲ್ ಕದ್ದಿದ್ದುಮೇಷ್ಟ್ರು ಹೊಡೆದದ್ದುಸುಮ್ಮನೇ ಜೋಡಿಸಿದ ಸರಣಿ ಸುಳ್ಳುಗಳುಬಹಿರಂಗವಾಗಿ ಭಯ ಬೀಳಿಸಿದರೂ ಹೇಳಲಾಗುವದಿಲ್ಲ. ಹರಿಯುತ್ತ ಬರುವ ಹರೆಯಹಗೂಽರ ತೆರೆದು ಕೊಳ್ಳುವ ಭಾವಆಗಲೇ ಅಲ್ಯಾರೋ ನೋಟ ಬದಲಿಸಿದ್ದುಮೌನ ಮೊಗ್ಗು ಅರಳಿ ನಕ್ಕಿದ್ದುಸುಮ್ಮನೇ ಬೆವರಿದ್ದುಒಳಗೊಳಗೇ ಅರ್ಥವಾಗುತ್ತಿದ್ದರೂಹೇಳಲಾಗುವದಿಲ್ಲ. ಸಾಕು ಇನ್ನೆಷ್ಟು ದಿನ“ಹೆಣ್ಣು ಅವಳು”ಮದುವೆ ಮಾಡಿ ಮುಗಿಸಿಎಲ್ಲೆಲ್ಲಿಂದಲೋ ಬರುವ ಹಿತ-ವಚನದ ಮುಖ ಹೊತ್ತ ಅಹಿತ.ಕೈಯಲ್ಲಿ ಹಿಡಿದ ಕಾಫಿ ಲೋಟಕಟ ಕಟ ಸದ್ದಿನಲಿ ಕೈಗಿಟ್ಟುಒಳಮನೆ ಸೇರಿಕೊಂಡು ಇಣುಕಿದಾಗಏನಿತ್ತು ಭಾವ!ಅಪ್ಪನ ಬಡತನ ,ಅಮ್ಮನ ನೋವು,ಸಂಬಂಧಿಗಳ ಕುಹಕಇಲ್ಲ ಏನನ್ನೂ ಹೇಳಲಾಗುವುದಿಲ್ಲ. ಕಣ್ಣು ನೂರಾರು ಕನಸ ಹೊತ್ತುಹೊಸ್ತಿಲು ದಾಟುವಾಗಅಪ್ಪನ ಬಿಕ್ಕು,ಅಮ್ಮನ ಗುಕ್ಕುತಿರು-ತಿರುಗಿ ಆರ್ದ್ರವಾಗಿ ನೋಡುವಅದೇ ಬೆಚ್ಚನೆಯ ಗೂಡುಕಣ್ಣೀರಿನ ಹೊರತಾಗಿಅಲ್ಲಿ ಘಟಿಸುವ ಯಾವ ಭಾವವನ್ನೂ ಹೇಳಿಕೊಳ್ಳಲಾಗುವದಿಲ್ಲ. ಸಂತೆ ಮುಗಿದ ಬೀದಿಯಲಿಒಂಟಿಯಾಗಿ ನಿಂತುಅಂಟಿ ಕೊಂಡಿದ್ದು ಏನು ಎಂದುತಿರುಗಿ ನೋಡಿಕೊಳ್ಳುವಾಗರಥದಿಂದ ಒಂದೊಂದೇ ಹೂ ಉದುರಿತನ್ನದೇ ಕಾಲಿಗೆ ತುಳಿವಾಗಖುಷಿ,ಕನಸು,ನೋವು,ಹಿಂಸೆಏನನ್ನೂ ಹೇಳಿಕೊಳ್ಳಲಾಗುವುದಿಲ್ಲ ನಡೆವ ದಾರಿಗೆ ಕಲ್ಲಿಟ್ಟುಎಡವಿದಾಗ ನಕ್ಕವರು ಅದೆಷ್ಟೋಈಗ ಎದ್ದು ನಡೆದಿದ್ದೇನೆ ತಲೆ ಎತ್ತಿಆಡಿಕೊಂಡವರ ಎದುರುಅದರೀಗ ಏನೂ ಹೇಳಬೇಕು ಅನ್ನಿಸುವುದಿಲ್ಲ. ————————— ನಿತ್ಯ ಮುನ್ನುಡಿ ಕವಿತೆ ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕುಮುನ್ನೆಲೆಗೆ ಬಂದು ಕಾಡುವ ವಿಚಾರಗಳ ನಡುವೆಯೂ . ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆಈ ಕೋಗಿಲೆಯ ಉಲಿಗೆಇಂದು ಹುರುಪಿದೆ ನೊಡು. ಸುತ್ತುವ ಸಾಲುಗಳಿಗೀಗಹೊಸ ಭಾವಗಳ ಅಲಂಕಾರಉಪಹಾರದ ಗಡಿಬಿಡಿಯಲ್ಲಿಉಪಯೋಗಿಸಲಾಗದೇ ಉಳಿದ ಅಕ್ಷರ. ಮೈಮುರಿದು ಏಳುವಾಗಿನ ತೀವ್ರತೆಅಲ್ಲಲ್ಲಿ ನಿಂತು ಅತುತ್ಸಾಹದಲಿ ಹೊಕ್ಕನಿರುತ್ಸಾಹ.ಪಾತ್ರೆಗಳ ಲಗುಬಗೆಯಲಿ ಗಲಬರಿಸಿಅಂಗಿಗೆ ಅಂಗೈ ಒರೆಸಿಕೊಂಡು-ಉಳಿದ ಹನಿಗಳ ತಾಕಿದ ಹಾಳೆ ಆರ್ದ್ರಊಟದ ತಯಾರಿಯಲ್ಲಿ ಮನಸು ಮಗ್ನ. ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವಅದೇ ಭಾವಗಳ ಮುಂದುವರಿದ ಭಾಗಕನ್ನಡಿಯ ಮುಂದೆ ಅರಳಿ ಮರಳುವಾಗಅಡುಗೆ ಮನೆಯಿಂದ-ಸೀದ ವಾಸನೆಯೊಂದು ಮೂಗಿಗೆ ರಾಚಿ,ಮುದ್ದಾದ ಸಾಲುಗಳೆಲ್ಲ ಈಗ ಕಮಟು. ಸಿಡಿಮಿಡಿಯ ಮನಸುಇಳಿವ ಕಣ್ಣಾಲಿಗಳನೂ ತಡೆದು ಎದೆಯೊಳಗೊಂದು ಕಾರ್ಮೋಡ-ಕರಗಿಸಲೊಂದು ಸಮಾಧಾನ,ಇರಲಿ ರಾತ್ರಿಯವರೆಗೂ ಸಮಯವಿದೆಏನಾದರೊಂದು ಗೀಚಲೇ ಬೇಕು. ದಿನದ ಕಟ್ಟ ಕಡೆಯ ದೋಸೆ ಹಿಟ್ಟಿನ ಹದ ಮುಗಿಸಿಬಿಡುಗಡೆಯ ನಿಟ್ಟುಸಿರುಮುದಗೊಂಡ ಮಂದ ಬೆಳಕಿನಲಿಲಹರಿಗೆ ಬಂದ ಸಾಲು ತಡಕಾಡುವಾಗಹೆಪ್ಪು ಹಾಕಿದ ಪಾತ್ರೆಯ “ಧಡಾರ್ “ಸದ್ದು. ಸಿಕ್ಕ ಸಾಲುಗಳ ಮರೆತು ಬೆಳಗಿನ ಚಿಂತೆ.ರಾತ್ರಿ ಕೈ ಮೀರುತ್ತಿದೆ,ಬೆಳಿಗ್ಗೆ ಬೇಗ ಏಳಬೇಕಿದೆ,ಮನಸು ದೇಹ ಎರಡರದೂಕಳ್ಳ ಪೋಲೀಸ್ ಆಟ.ನಾಳೆ ನೋಡೋಣ ಎನ್ನುವಲ್ಲಿಗೆ ಕವಿತೆ ಪೂರ್ಣಗೊಳ್ಳುತ್ತದೆ. ******************************
ಸ್ಮಿತಾ ಭಟ್ ಅವರ ಕವಿತೆಗಳು Read Post »





