ಗಜಲ್
ಅರುಣಾ ನರೇಂದ್ರ
ಕಣ್ಣು ಮುಚ್ಚಿ ನಿನ್ನ ಧ್ಯಾನದಲ್ಲಿ ಇರುವಾಗ ಬೆಳಕಾಗುತ್ತದೆ
ದಿನದ ಕಾಯಕ ಮುಗಿಸಿ ಲೆಕ್ಕ ಒಪ್ಪಿಸುವಾಗ ಕತ್ತಲಾಗುತ್ತದೆ
ಅದೆಷ್ಟು ಹತ್ತಿರ ನೀನು ಕೈಚಾಚಿದರೆ ಸಿಕ್ಕು ಬಿಡುವಿ
ನಾನು-ನೀನು ಬಾನು-ಭೂಮಿ ಎನಿಸುವಾಗ ನೋವಾಗುತ್ತದೆ
ನೆರಳಂತೆ ನೀ ಜೊತೆಗಿರುವಿ ಎಂದುಕೊಂಡೆ ಮುನ್ನಡೆದೆ
ನನ್ನೊಳಗೆ ನೀ ಅಡಗಿ ಹೋಗಿರುವಾಗ ಗೆಲುವಾಗುತ್ತದೆ
ಮೌನವಾದರೂ ನಿನ್ನೆದೆಯ ಪಿಸುಮಾತಿಗೆ ಒಲವು ಕಿವಿಯಾಗುತ್ತದೆ
ತಣ್ಣನೆಯ ಹಿಮದ ಹಣೆ ಬೆವರುವಾಗ ಸುನಾಮಿಯಾಗುತ್ತದೆ
ದಡವಿಲ್ಲದ ಕಡಲಿಗೆ ಒಡಲೆಲ್ಲ ಕಾಲುಗಳಿವೆ ಗೆಳೆಯ
ಸಾವಿಗೂ ಸುಂಕ ಕಟ್ಟುವ ಅರುಣಾ ಮಲಗುವಾಗ ಮರಣವಾಗುತ್ತದೆ
******************
;
ಅರುಣಾ ಗಜಲ್ ಸೊಗಸಾಗಿದೆ