ಮಾನವರಾಗೋಣ
ಕಾವ್ಯಯಾನ ಮಾನವರಾಗೋಣ ಲೀಲಾ ಅ, ರಾಜಪೂತ ನಾನು ಹಿಂದೂ ಎನ್ನುವ ಅಭಿಮಾನ ನನಗೆನೀನು ಮುಸ್ಲಿಂ ಎನ್ನುವ ಹೆಮ್ಮೆ ನಿನಗೆ ಆದರೆ ನನ್ನ ರಾಮ ನನ್ನಿಂದ ಅಸಂತುಷ್ಟನೂನಿನ್ನ ಅಲ್ಲಾಹ್ ನಿನ್ನಿಂದ ಅತೃಪ್ತನೂ ಪಾಪಗಳನು ನಾನು ಮಾಡಿರಬಹುದುಅಫರಾಧಗಳನು ನೀನು ಮಾಡಿರಬಹುದು ಆದರಿಂದೂ ಮನುಷ್ಯತ್ವ ಮರೆತ ಎಮಗೆಶಿಕ್ಷೆ ಆ ದೇವರು ನೀಡುತಿರುವನೇನೋ ಇಂದು ರಾಮ ಮಂದಿರದೊಳು ನನ್ನ ಕರೆಯುತ್ತಿಲ್ಲಖುದಾ ಮಸೀದಿಗೆ ನಿನ್ನ ಕರೆಯುತ್ತಿಲ್ಲ ನಾ ಮಾಡಿದ ತಪ್ಪುಗಳೆಷ್ಟಿವೆಯೋ ಅಷ್ಟೇನಿನ್ನ ತಪ್ಪುಗಳು ಇವೆಯೆನೋ ಬಾ ಸಮಯವಿರುವಾಗಲೇ ಸುಧಾರಿಸಿಕೊಳ್ಳೋಣಮಾನವಿಯತೆಯ ಧರ್ಮ ನಮ್ಮದಾಗಿಸಿಕೊಳ್ಳೋಣ ನಾನು ಅವನಿಗೆ ಭಗವಾನ್ ಎಂದು ಕರೆದೆನೀನು ಅವನಿಗೆ ಅಲ್ಲಾಹ್ ಎಂದು ಕೂಗಿ ಕರೆದೆ ಇರುವವನೂ ಒಬ್ಬನೇ ಅಲ್ಲವೇನಮ್ಮ ರಕ್ತದ ಬಣ್ಣ ಒಂದೇ ಅಲ್ಲವೇ ಹಿಂದೂ ಮುಸ್ಲಿಂ ಭೇದವ ತೊರೆಯೋಣಎಲ್ಲರೊಂದುಗೂಡಿ ಪ್ರೇಮದಿ ಬಾಳೋಣ ಒಂದಾಗಿ ಚೆಂದಾಗಿ ಸತ್ಪ್ರಜೆಗಳಾಗೋಣನಾವೆಲ್ಲರೂ ಭಾರತೀಯರೆನ್ನೋಣ ಇಂದು ನಾ ರಾಮನನ್ನು ಪ್ರಸನ್ನಗೊಳಿಸುವೆನೀನು ಅಲ್ಲಾಹ್ ನನ್ನು ಒಲಿಸಿಕೊಳ್ಳು ಬೇಡೋಣ ಈ ಭೇದ ಭಾವದಿಂದ ಮುಕ್ತಿ ನೀಡೆಂದುಹೇ ಈಶ್ವರ ಅಲ್ಲಾಹ್ ಭಾತೃತ್ವದ ಭಾವ ಕರುಣಿಸೆಂದು ಈ ಭೂಮಿಯ ಮೇಲೆ ಸಾವು ನೋವುಗಳಿಂದ ತತ್ತರಿಸುತ್ತಿದ್ದೇವೆಹೇ ರಾಮ ಪರವರ್ದಿಗಾರ ಒಂದು ಸುಸಂಧಿ ನೀಡು ಈ ಸಂಕಟದಿಂದ ಮುಕ್ತಿ ನೀಡುಮಾನವರಾಗಿ ಬಾಳುವಂತೆ ಆಶೀರ್ವದಿಸು ನಾನು ನೀನು ಕೂಡಿ ಪ್ರಾರ್ಥಿಸೋಣನರಕವಾದ ಈ ಧರೆಯನ್ನು ಸ್ವರ್ಗವಾಗಿಸೋಣ ***********************




