ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸೂರ್ಯೋದಯ

ಅಬ್ಳಿಹೆಗಡೆ

ರಾತ್ರಿ;;ಹೊದ್ದು ಮಲಗಿದ,ಕತ್ತಲ-
“ಕೌದಿ”ಯಲ್ಲಿ,ಬೆತ್ತಲಾಗುವ ಆಸೆ-
ಹೊತ್ತು,ನಖಶಿಖಾಂತ ಉರಿವ,
ಕಾಮನೆಗಳ ತಂಪಾಗಿಸಲು,
ಮೆಲ್ಲನೆ,ಕಳ್ಳ ಹಜ್ಜೆಯನಿಡುತ್ತಾ,
ಮುನಿಸಿಕೊಂಡಿನಿಯನ ಸಂತೈಸೆ,
ಬಳಿಸಾರಿ,ಬರಸೆಳೆದು,ಬಿಗಿದಪ್ಪಿ,
ಕೆನ್ನೆಗೊಂದು ಸಿಹಿಮುತ್ತನೊತ್ತಲು,
ನಾಚಿ,ರಂಗೇರಿತು ಉಷೆಯ ಕೆನ್ನೆ,
ಕಳೆದುದಾಗಲೆ ಕತ್ತಲೆಯ ನಿನ್ನೆ.
ಉಭಯರ ಮುಖದಲ್ಲೂ-
ಮಂದಹಾಸದ ಉದಯ.
ಜೀವಕೋಟಿಗಳಲ್ಲಿ,
ಭರವಸೆಗಳುದಯ.
ಅದುವೆ,ಸುಂದರ ಶುಭೋದಯ.
ಸೂರ್ಯೋದಯ…. .

**************************

About The Author

Leave a Reply

You cannot copy content of this page

Scroll to Top