ಕಾದಂಬರಿ ಕುರಿತು
ಕರ್ವಾಲೊ
ಪೂರ್ಣಚಂದ್ರ ತೇಜಸ್ವಿ
ಅರುಣಾ ರಾವ್
[10:21 AM, 11/7/2020] ARUNA RAO: ಪೂರ್ಣ ಚಂದ್ರ ತೇಜಸ್ವಿ ನನ್ನ ಯಾವತ್ತಿನ ಫೇವರೇಟ್ ರೈಟರ್. ಅವರ ಎಲ್ಲ ಕಾದಂಬರಿಗಳೂ ನನ್ನ ಬಳಿ ಇವೆ ಎಂದು ಹೇಳಿಕೊಳ್ಳಲು ನನಗೆ ಖುಷಿ. ಪ್ಯಾಪಿಲಾನ್, ಚಿದಂಬರ ರಹಸ್ಯ, ಅಬಚೂರಿನ ಫೋಸ್ಟ ಆಫೀಸ್, ತಬರನ ಕತೆ, ಅಡ್ವೆಂಚರ್ ಸೀರೀಸ್, ಅಲೆಮಾರಿ ಅಂಡಮಾನ್ ಎಲ್ಲವೂ ನನ್ನ ಪುಸ್ತಕ ಖಜಾನೆಯನ್ನು ಶ್ರೀಮಂತಗೊಳಿಸಿವೆ.ತೇಜಸ್ವಿಯವರ ಕಾದಂಬರಿಗಳು ಕೇವಲ ಮನರಂಜನಾ ಸಾಧನವಾಗಿರದೆ ಬುದ್ದಿಗೆ, ಮಂಥನಕ್ಕೆ ಆಹಾರವನ್ನು ಒದಗಿಸುತ್ತದೆ.ತೀರ ಇತ್ತೀಚೆಗಷ್ಟೇ ಅಂದರಡ ಲಾಕ್ ಡೌನ್ ನ ಅವಧಿಯಲ್ಲಿ ಮೂರನೇ ಬಾರಿಗೆ ಓದಿ ಮುಗಿಸಿದ ‘ಕರ್ವಾಲೋ’ ಕಾದಂಬರಿಯ ಬಗ್ಗೆ ಒಂದಷ್ಟು ಅನಿಸಿಕೆ.
ಕರ್ವಾಲೋ ಹೆಸರೇ ಬಹಳ ವಿಚಿತ್ರ. ಕಾದಂಬರಿ ಓದಲು ಕೈಗೆತ್ರುಕೊಳ್ಳುವ ಮೊದಲು ಅದು ಒಂದು ಊರೇ? ಪ್ರಾಣಿಯೇ? ಸಸ್ಯವೇ? ಇವೆಲ್ಲ ಕುತೂಹಲವನ್ನು ಮೂಡಿಸುತ್ತದೆ. ಕಾದಂಬರಿ ಕಾಲು ಭಾಗ ಮುಗಿದ ನಂತರವೇ ನಮಗೆ ಕರ್ವಾಲೋರವರನ್ನು ಪರಿಚಯಿಸುತ್ತಾರೆ ಲೇಖಕರಾದ ತೇಜಸ್ವಿ. ಕಾದಂಬರಿಯ ಆರಂಭದಲ್ಲಿ ಮೂಡುಗೆರೆಯ ಮಲೆ,ಮಳೆ, ಜೇನು ಸಾಕಾಣಿಕೆ, ಆಗಾಗ ಕೆಟ್ಟು ನಿಲ್ಲುವ ಜೀಪು, ಯಾವಾಗಲೂ ಜೊತೆಗಿರುವ ಕಿವಿ( ನಾಯಿ) ಇವೆಲ್ಲದರ ಮಧ್ಯೆ ತಮ್ಮ ಜಮೀನನ್ನು ಮಾರಿಬಿಡಬೇಕೆಂಬ ಲೇಖಕರ ಪ್ರಯತ್ನ ಸಾಗುತ್ತಿರುವಾಗಲೇ ‘ಮಂದಣ್ಣ ಎಂಬ ಪಾತ್ರದ ಪರಿಚಯವಾಗುತ್ತದೆ. ಈತ ಕಾದಂವರಿಯುದ್ದಕ್ಕೂ ಒಬ್ಬ ರಹಸ್ಯ ವ್ಯಕ್ಕಿಯಾಗಿ ಉಳಿದು ಕುತೂಹಲ ಮೂಡಿಸತೊಡಗುತ್ತಾನೆ. ಸಾಮಾನ್ಯ ಜೀನು ಸಾಕಾಣಿಕಾ ಕೆಲಸಗಾರನಾಗಿ, ಸರ್ಕಾರಿ ಪ್ನ್ಯೂನ್ ಕೆಲಸಕ್ಕಾಗಿ ಗೋಗರೆಯುವ ಈತನ ಬಗ್ಗೆ ಸ್ವತ: ತೇಜಸ್ವಿಯವರಿಗೇ ಜಿಗುಪ್ಸೆ. “ಮದುವೆಯಾಗದ ಹೊರತು ಹುಚ್ಚು ಬಿಡದು, ಹುಚ್ಚು ಹೋಗದ ಹೊರತು ಮದುವರಯಾಗದು” ಎಂಬ ಗಾದೆಯಂತೆ ಕೆಲಸ ಸಿಗದ ಹೊರೆತು ರಾಮಣ್ಣನ ಮಗಳು ರಾಮಿಯನ್ನು ಮದುವೆಯಾಗಲಾರದ ಪರಿಸ್ಥಿತಿ ನಿರ್ಮಾಣವಾಗಿ,
ಮಂದಣ್ಣ ಯಾವ ಕೆಲಸದಲ್ಲೂ ಆಸಕ್ತಿ ತೋರದೆ ಹೋದುದರಿಂದ ಕರ್ವಾಲೋರಂತಹ ವಿಜ್ಞಾನಿಯೇ ಮುಂದೆ ನಿಂತು ಮಂದಣ್ಣನ ಮದುವೆ ಮಾಡಿಸಬೇಕಾಗುತ್ತದೆ. ಮಂದಣ್ಣನ ಜೊತೆ ಊರು, ಕಾಡುಗಳನ್ನು ಅಲೆಯುವ ತಮ್ಮ ಬಗ್ಗೆ ಜನರು ತಪ್ಪು ತಿಳಿಯುತ್ತಿದ್ದಾರೆಂದು ಗೊತ್ತಿದ್ದರೂ ತಲೆ ಕೆಡಸಿಕೊಳ್ಳದೆ ತಮ್ಮ ಕೆಲಸದ ಕಡೆ ಗಮನ ಹರಿಸುವ ಕರ್ವಾಲೋರ ನಡತೆ ಅನುಕರಣೀಯ.
ಮದುವೆಯಾದ ಮಂದಣ್ಣ ಬಟ್ಟಿ ಸಾರಾಯಿ ಕೇಸಿನಲ್ಲಿ ಜೈಲು ಪಾಲಾದಾಗಲೂ ಅವನ ನೆರವಿಗೆ ನಿಲ್ಲುತ್ತಾರೆ ಕರ್ವಾಲೋ. ಇದು ಕಾದಂಬರಿಕಾರರಿಗೆ ಮತ್ತು ಕರ್ವಾಲೋರ ಖಾಸಾ ಫೋಟೋಗ್ರಾಫರ್ .ಪ್ರಭಾಕರನಿಗೂ ಬಹಳ ಸೋಜಿಗವನ್ನುಂಟು ಮಾಡುತ್ತದೆ. ಸ್ವತಃ ಲಾಯರ್ ಗೊನ್ಸಸಾಲ್ ವೆನ್ಸ್, ಕರ್ವಾಲೋರಂತಹ ಗೌರವಾನ್ವಿತ ವ್ಯಕ್ತಿಯನ್ನು ಇಂತಹ ಕೇಸಿನಲ್ಲಿ ಇನ್ವಾಲ್ವ್ ಮಾಡೋದು ಹೇಗೆ? ಎಂದು ಮುಜುಗತ ಪಡುತ್ತಾರೆ. ಆದರೆ ಕರ್ವಾಲೋ ಈ ಬಾರಿಯೂ ಸ್ವಲ್ಪವೂ ಹಿಂಜರಿಯದೆ ಕೋರ್ಟಿಗೆ ಬಂದು ಮಂದಣ್ಣನ ಪರವಾಗಿ ಸಾಕ್ಷಿ ಹೇಳಿ ಅವನನ್ನು ಬಿಡಿಸುತ್ತಾರೆ.
ಮಂದಣ್ಣನಿಗೂ ಕರ್ವಾಲೋರಿಗೂ ಇರುವ ಈ ಗಾಢ ಸಂಬಂಧ “ಎತ್ತಣ ಮಾಮರ ಎತ್ತಣ ಕೋಗಿಲೆ” ಎಂದು ಎಲ್ಲರೂ ಹುಬ್ಬೇರಿಸುವಂತಾಗುತ್ತದೆ. ಹಳ್ಳಿ ಗಮಾರನಾದ ಮಂದಣ್ಣನಿಗಾಗಿ ವಿಜ್ಞಾನಿಯಾದ ಕರ್ವಾಲೋ ಎಂತಹ ಸಹಾಯಕ್ಕೂ ಸಿದ್ಧರಾಗಿರುವ ಸಂಗತಿ ಸ್ವತಃ ತೇಜಸ್ವಿಯವರಲ್ಲಿ ಕೂಡ ಆಶ್ಚರ್ಯದ ಜೊತೆಜೊತೆಗೆ ಅನುಮಾನವನ್ನೂ ಹುಟ್ಟಿಸುತ್ತದೆ. ಆದರೆ ಕರ್ವಾಲೋ ನಂತರ ಹೇಳುವ ವಿಷಯವನ್ನು ಕೇಳಿದ ಮೇಲೆ ಅವರು ಮಂದಣ್ಣನ ಬಗ್ಗೆ ಹೊಂದಿರುವ ಆಸಕ್ತಿಗೆ ಕಾರಣ ಸಿಗುತ್ತದೆ.
ಅದೇನೆಂದರೆ ಈಗ್ಗೆ ಸಾವಿರದ ಎಂಟುನೂರ ಹದಿನೇಳರಲ್ಲಿ ಒಬ್ಬ ಪಾದ್ರಿ ಆಫ್ರಿಕಾದ ಅರಣ್ಯದಲ್ಲಿ ಕಂಡಿದ್ದ ‘ಫ್ಲೇಯಿಂಗ್ ಲಿಸರ್ಡ’ ನ್ನು ಇತ್ತೀಚೆಗಷ್ಟೇ ನಾರ್ವೆ ಕಾಡುಗಳಲ್ಲಿ ಕಂಡಿದ್ದ ಮಂಜಣ್ಣ. ಈ ವಿಷಯವನ್ನು ಕರ್ವಾಲೋರಿಗೆ ತಿಳಿಸಿದಾಗ ಅವರು ರುಮೇನಿಯಾದ ಫ್ರೊಫೆಸರ್ ರೂವಸ್ಕಿ ಹಾಗೂ ಅಮೇರಿಕೆಯ ಸಂಶೋಧನಾ ಸಂಸ್ಶೆಗಳ ಜೊತೆ ಪತ್ರ ವ್ಯವಹಾರ ನಡೆಸಿದ್ದರು. ಕೂಡಲೇ ಹಲವಾರು ಜಾಗತಿಕ ಸಂಸ್ಥೆಗಳು ಈ ಸಂಶೋಧನೆಗೆ ಧನ ಸಹಾಯ ಮಂಜೂರು ಮಾಡಲು ಮುಂದಾಗಿರುವ ವಿಷಯವನ್ನು ತಿಳಿಸಿದರು. ಆಗ ಲೇಖಕರೂ ಸೇರಿ, ಎಲ್ಲರ ಬಾಯಿಂದ ಮಾತೇ ಹೊರಡುವುದಿಲ್ಲ.
ನಂತರ ಅರಣ್ಯದಲ್ಲಿ ಆ ‘ಹಾರುವ ಓತಿ’ ಯ ಅನ್ವೇಷಣೆಗೆ ಬೇಕಾಗುವ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕರ್ವಾಲೋ, ಮಂಜಣ್ಣ, ಲೇಖಕರು, ಶೀನಪ್ಪ, ಪ್ರಭಾಕರ ಜೊತೆಗೆ ಕಿವಿ, ನಾರ್ವೆಯ ಕಾಡಿಗೆ ಹೊರಡುತ್ತಾರೆ. ಅತ್ಯಂತ ಸುದೀರ್ಘವಾದ ಈಚಲು ಕಾಡನ್ನು ಪ್ರಯಾಸದಿಂದ ದಾಟಿ ,ಓತಿಯ ಹುಡುಕಾಟ ಆರಂಭವಾಗುತ್ತದೆ. ಈ ಮಧ್ಯೆ ಕಾಡಿನಲ್ಲಿ ಹಾವಾಡಿಗರ ಎಂಗ್ಟ ಸಹ ಇವರ ತಂಡವನ್ನು ಸೇರಿಕೊಳ್ಲುತ್ತಾನೆ.
ಹಲವಾರು ದಿನಗಳ ನಂತರ ಒಮ್ಮೆ ಲೇಖಕರೊಬ್ಬರೇ ಕುಳಿತಿರುವಾಗ ಅಚಾನಕ್ ‘ಹಾರುವ ಓತಿ’ ಇವರ ಕಣ್ಣಿಗೆ ಬೀಳುತ್ತದೆ. ಇದನ್ನು ಇತರರಿಗೆ ತೋರಿಸಲು ಲೇಖಕರು ಬಹಳ ಪ್ರಯಾಸ ಪಡಬೇಕಾಗುತ್ತದೆ. ಏಕೆಂದರೆ ಅದು ಮರದ ಮೇಲೆ ಕುಳಿತಿದ್ದಾಗ ಮರದ ತೊಗಟೆಯ ಬಣ್ಣವನ್ನು ಹೊಂದಿ, ಮರಕ್ಕೂ ಮತ್ತು ಅದಕ್ಕೂ ಕಿಂಚಿತ್ ಕೂಡ ವ್ಯತ್ಯಾಸವೇ ಇರುತ್ತಿರಲಿಲ್ಲ. ಕೊನೆಗೆ ಮಂದಣ್ಣ, ಶೀನಪ್ಪ, ಎಂಗ್ಟನ ಹರಸಾಹಸದ ನಡುವೆಯೂ ಆ ಹಾರುವ ಓತಿ ಅವರ ಕೈಗೆ ಸಿಗದೆ, ತಪ್ಪಿಸಿಕೊಂಡು ಕಾಡಿನ ಅನಂತದಲ್ಲಿ ಲೀನವಾಗಿಬಿಡುತ್ತದೆ. ಪ್ರಭಾಕರ ತನ್ನ ಕ್ಯಾಮರಾನಲ್ಲಿ ಒಂದಷ್ಟು ಫೋಟೋಗಳನ್ನು ತೆಗೆದದಷ್ಟೇ ಲಾಭವಾಗುತ್ತದೆ.
ಒಟ್ಟಾರೆಯಾಗಿ ಇಡೀ ಕಾದಂಬರಿಯ ಉದ್ದಕ್ಕೂ ಕುತೂಹಲವನ್ನು ಕಾಯ್ದುಕೊಂಡು ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುವ ಕುತೂಹಲಕಾರಿ ಕಾದಂಬರಿಯಲ್ಲಿ ಮಂದಣ್ಣನ ಮದುವೆಯ ಹಾಸ್ಯವೂ ಸೇರಿ ಓದುಗರನ್ನು ರಂಜಿಸುತ್ತದೆ.
**********************
ಅರುಣ ರಾವ್
ಶಾಸ್ತ್ರೋಕ್ತವಾಗಿ ಪೂರ್ತಿ ಕಾದಂಬರಿ ಓದಿ ಕವಿ, ಕಾದಂಬರಿ ಬಗ್ಗೆ ಸಂಕ್ಷಿಪ್ತ ಕನ್ನಡಿ ಹಿಡಿದಿರುವ ನೀವೆಲ್ಲಿ,
ನೀವು ಬರೆದ್ದನ್ನು ತಿಳಿದುಕೊಂಡು, ಅದನ್ನು ವಿಮರ್ಶೆ ಮಾಡುವ ಅರ್ಹತೆ ನಮಗೆಲ್ಲಿ….
‘ಕರ್ವಾಲೋ’ ಕವಿ-ಕಾದಂಬರಿ -ಪಾತ್ರಗಳ ಪರಿಚಯದ ನಿಮ್ಮ ವಿಮರ್ಶೆ, ನಮಗೆ ಕನ್ನಡ ಮೇಷ್ಟ್ರು ಸುಂದರ ರೋಚಕ ಕಥೆ ಹೇಳಿದಂತಿದೆ.
ಧನ್ಯವಾದಗಳು
Madam , Malenadina bagge bere olle books edare thilisuvira…?