Month: September 2020

ಗಝಲ್

ಗಝಲ್ ಎ. ಹೇಮಗಂಗಾ ಬೆರಳುಗಳು ಯಾಂತ್ರಿಕವಾಗಿ ಹೂ ಕಟ್ಟುತ್ತಿವೆ ಮನಸೆಲ್ಲೋ ಕಳೆದುಹೋಗಿದೆಕಂಗಳು ಬರುವಿಕೆಯನ್ನೇ ನಿರೀಕ್ಷಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಪ್ರೀತಿ, ಪ್ರೇಮದಲ್ಲಿನ ಸುಖವೇನೆಂದು ತೋರಿಸಿಕೊಟ್ಟವನು ನೀನುಸವಿನೆನಪಲಿ ಅಧರಗಳು ಬಿರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ನಿನಗಾಗೇ ಮಿಡಿಯುವ ಹೃದಯದಲಿ ನೂರೆಂಟು ತವಕ, ತಲ್ಲಣಗಳುಧಮನಿಗಳು ನಿನ್ನ ಹೆಸರನ್ನೇ ಜಪಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಕಣ್ರೆಪ್ಪೆಯೊಳು ಅವಿತಿಹ ಕನಸು ನನಸಾಗಲು ಕಾಯುವ ಕಾಯಕವಿದುಕಾಲದ ಘಳಿಗೆಗಳು ತಮ್ಮಂತೆ ಸರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ವರ್ಷಗಳು ಉರುಳಿದರೇನು ಹೇಮ ಳ ಒಲವಿಗೆಂದೂ ಮುಪ್ಪು ಬಾರದುತನುವಿನ ಕಣಕಣಗಳೂ ಹಂಬಲಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ […]

ಎದೆ ಮಾತು

ಕವಿತೆ ಎದೆ ಮಾತು ನೀ.ಶ್ರೀಶೈಲ ಹುಲ್ಲೂರು ಕಣ್ಣ ಕೊಳದಲದೋನಮ್ಮೊಲವ ಬಾತುಅವುಗಳೇ ಹೇಳುತಿವೆನನ್ನೆದೆಯ ಮಾತು ಬಾನ ಸಾಗರದಲ್ಲಿನೀ ಹೊಳೆವ ತಾರೆಬೆಳದಿಂಗಳಮಲಿನಲಿನಿರುಕಿಸುವೆ ಬಾರೆ ಸೊಂಪಾದ ತಣ್ಣೆಳಲುನಿನ್ನ ಎದೆ ಬನದಿಬಿರುಬಿಸಿಲು ಅಲ್ಲಿರಲಿವಿರಹ ಕಾನನದಿ ಮಿರುಗುವಾ ಚಂದ್ರನನಗೆಯಾಟ ನೋಡುಮೋಡಗಳ ಹಿಗ್ಗಿನಲಿನಮ್ಮೊಲವ ಹಾಡು ನದಿ ದಡದಿ ಸೊಗಸುನವಿಲ ನಲಿದಾಟಹಕ್ಕಿಗಳ ಕಲರವವುಅದು ರಮ್ಯ ನೋಟ ಒಂಟಿ ಪಯಣ ಸಾಕಿನ್ನುಜೊತೆಯಾಗಿ ಇರುವವರುಷದಿ ಕಂದನ ಕೇಕೆಮಡಿಲಲ್ಲೆ ತರುವ **************************************

ಮಧುವಣಗಿತ್ತಿ

ಕವಿತೆ ಮಧುವಣಗಿತ್ತಿ ಎಚ್ ಕೆ ನಟರಾಜ ಆಕೆಗೆ ದಿನವೂಸಿಂಗರೀಸುವುದೇ ಕೆಲಸಅಕ್ಷರಗಳಿಗೆ ಉಡುಗೆ ತೊಡಿಸಿಅಲಂಕರಿಸಿ ಬಿಳಿ ಹಾಳೆಯ ಮೇಲೇ ಚಿತ್ತಾರಬಿಡಿಸಿ ಶಾಯಿಯ ರಂಗೋಲಿಸೂರ್ಯ ಚಂದ್ರನ ಹೂ ಮಾಲೆ ಮಾಡಿ..ನಕ್ಷತ್ರಗಳನ್ನು ಕೆನ್ನೆ ರಂಗಾಗಿಸಿಭಾವನೆಗಳಿಗೆ ಬಣ್ಣದುಡುಗೆ ತೊಡಿಸಿಕಾಮವನ್ನು.. ಕಾಮವಿಲ್ಲದ ಹೃದಯಭತ್ತಳಿಕೆಯ ಬಾಣವಾಗಿಸಿಪದಪುಂಜದರಮನೆಗೆ ಲಗ್ಗೆಹೀಗೆ ಈ ಮಧುವಣಗಿತ್ತಿ.. ಅಲ್ಲಿಂದ ಇಲ್ಲಿಇಲ್ಲಿಂದ ಅಲ್ಲಿ ಶಭ್ಧಗಳ ನರ್ತನ. ಆಡಂಭರದಾಟಕೂ ಅಂಕುಶ ತೊಡಿಸಿಪ್ರೇಮನಿವೇದನೆ.ಕನಸುಗಳ ಬಗೆದು ಅಲ್ಲೊಂದಷ್ಟು ಹೆಕ್ಕಿಮನದಾಳದಿ ಕುಕ್ಕಿ…. ದುಃಖದಲ್ಲಿ ಬಿಕ್ಕಿ..ನಗುವಿನಾಳದಲಿ ಒಲವ ಬಿತ್ತಿ.. ನಾಚಿನೀರಾದ ರಂಗಿನೋಕುಳಿಯಲಿ..ಮತ್ತೊಂದಷ್ಟು ಪದಗಳ ಮಾಲೆಕಟ್ಟಿ..ಜೋಡಿಸಿ.. ಕಾಡಿಸೀ.. ಕೂಡಿಸಿ.. ತೊಡಿಸಿಅಂತೂ.. ಒಂದು ಅಂತಿಮ […]

ನಾವು ಆಧುನಿಕ ಗಾಂಧಾರಿಯರು

ಕವಿತೆ ನಾವು ಆಧುನಿಕ ಗಾಂಧಾರಿಯರು ಲಕ್ಷ್ಮೀ ಪಾಟೀಲ್ ನೀನು ಅಪಾರವಾದ ಆತ್ಮವಿಶ್ವಾಸತುಂಬಿ ತುಳುಕುವಹೆಣ್ಣೆಂದುಆಗಾಗ ಹೇಳಿನನ್ನನ್ನು ಬಲೂನಿನಂತೆಉಬ್ಬಿಸಿದಾತಖರೇಖರೇಆತ್ಮವಿಶ್ವಾಸದಲ್ಲೇಬದುಕಲು ನಿಂತಾಗ ಬಲೂನಿನ ಹವಾ ತೆಗೆದುಇನ್ನೆಂದೂಉಬ್ಬದಂತೆ ಮಾಡಿ ಎಸೆದು ಬಿಟ್ಟ ಹೆಣ್ಣನ್ನು ಒರೆಗೆ ಹಚ್ಚಿ ಆತಹೀಗೆಯೇ ಉಬ್ಬಿಬದುಕುತ್ತತನಗೊಂದು ಸ್ವಚ್ಛಂದ ಇತಿಹಾಸ ಕಟ್ಟಿಕೊಂಡಆತ್ಮವಿಶ್ವಾಸದಿಂದಹೆಜ್ಜೆ ಹಾಕುವಹೆಣ್ಣನ್ನು ತುಳಿಯುತ್ತಲೇಬಂದ ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳದಿದ್ದರೂಇವರೆಲ್ಲಕರಾಮತ್ತುಗಳನ್ನುಕಣ್ಣಲ್ಲಿ ಹಿಂಗಿಸಿಕೊಂಡುಒಡಲಲ್ಲಿ ಅರಗಿಸಿಕೊಂಡುಕಂಡು ಕಾಣದಂತೆ ಉಂಡು ಉಗುಳದಂತೆಒಡಲದಾವಾಗ್ನಿಗಳನ್ನುಒಳಗೇಒತ್ತಿಕೊಳ್ಳುವನಾವು ಆಧುನಿಕ ಗಾಂಧಾರಿಯರಾಗಿದ್ದೇವೆ ಅಕ್ಷರಲೋಕಕ್ಕೆತೆರೆದುಕೊಂಡಿದ್ದುಪ್ರಜಾಪ್ರಭುತ್ವದಲ್ಲಿಸಂಖ್ಯೆ ಮುಖ್ಯವಾದದ್ದೇಪವಾಡವೆಂಬಂತೆಈಗಲೂ ಮೀಸಲಾತಿ ಆದ್ಯತೆಗೆಧನ್ಯರಾಗಲುಕುರುಡು ಪುರುಷನ ಮುಂದೆ ಬೇಡಿಕೆ ಇಟ್ಟುಕಣ್ಣಿದ್ದೂಕುರುಡರಂತೆಅವನ ನೆರಳಹಿಂಬಾಲಿಸುವನಾವು ಆಧುನಿಕ ಗಾಂಧಾರಿಯರಾಗಿದ್ದೇವೆ **************************************

ಚಂಸು ಪಾಟೀಲ ಎಂಬ ‘ರೈತಕವಿ’

ಚಂಸು ಪಾಟೀಲ ಎಂಬ ‘ರೈತಕವಿ’ ಚಂಸು ಪಾಟೀಲ ಎಂಬ ‘ಪತ್ರಕರ್ತ’, ‘ರೈತಕವಿ’ಯೂ..!ಮತ್ತವನ ‘ಬೇಸಾಯದ ಕತಿ’ಯೂ.!! ನನ್ನ ಪ್ರೀತಿಯ ಗೆಳೆಯ ಚಂಸು ಪಾಟೀಲ ಮೊನ್ನೆ ಭೇಟಿಯಾಗಿದ್ದ ಹಾವೇರಿಯಲ್ಲಿ. ಚಂಸು ತನ್ನ ಇತ್ತೀಚಿನ ಪುಸ್ತಕವಾದ ‘ಬೇಸಾಯದ ಕತೆ’ ಓದಲು ನನಗೆ ಕೊಟ್ಟ. ನನಗೆ ಈ ‘ಬೇಸಾಯದ ಕತಿ’ ಓದುತ್ತಿದಂತೆ ಇದರ ಬಗೆಗೇನೆ ಒಂದು ಬರಹ ಮಾಡೋಣವೆನಿಸಿ ಒಂದು ಈ ಬರಹವನ್ನು ಮಾಡಿದೆ.ಈ ಚಂಸು ‘ರೈತಕವಿ’ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.ಅಷ್ಟೇ ಅಲ್ಲ ಈ ಚಂಸು ಪತ್ರಕರ್ತನೂ ಹೌದು. ಈ […]

ದೇವರ ಲೀಲೆ

ಕವಿತೆ ದೇವರ ಲೀಲೆ ಬಾಪು ಖಾಡೆ ನೀಲಿಯ ಹಾಳೆಗೆ ಚಿತ್ರವ ಬರೆದುಮೇಲಕೆ ಎಸೆದಿರುವೆಶಿವನೇ ಮೇಲಕೆ ಎಸೆದಿರುವೆಮೂಡಣ ರವಿಗೂ ಹುಣ್ಣಿಮೆ ಶಶಿಗೂಸ್ನೇಹವ ಬೆಸೆದಿರುವೆಬೆಳಕಿನ ಸ್ನೇಹವ ಬೆಸೆದಿರುವೆ ತುಂಬಿದ ಅಂಬುಧಿ ಅಲೆಗಳ ಮೇಲೆನರ್ತನ ನಡೆಸಿರುವೆಹರನೇ ನರ್ತನ ನಡೆಸಿರುವೆಹಕ್ಕಿಯ ಹಿಂಡಿನ ಮೆತ್ತನೆ ಮೈಗೆಅಂಗಿಯ ತೊಡಿಸಿರುವೆರಂಗಿನ ಅಂಗಿಯ ತೊಡಿಸಿರುವೆ ಬಳುಕುವ ಬಳ್ಳಿಗೆ ಬಣ್ಣದ ಹೂಗಳಚಿತ್ರವ ಬಿಡಿಸಿರುವೆಚಂದದ ಚಿತ್ರವ ಬಿಡಿಸಿರುವೆಕೋಗಿಲೆ ಕಂಠದಿ ಕಾಣದೆ ಕುಳಿತುವೀಣೆಯ ನುಡಿಸಿರುವೆಚೈತ್ರದ ವೀಣೆಯ ನುಡಿಸಿರುವೆ ಎಲ್ಲೊ ಅವಿತು ಸೋಲು-ಗೆಲುವಿನಸೂತ್ರವ ಹಿಡಿದಿರುವೆಜೀವನ ಸೂತ್ರವ ಹಿಡಿದಿರುವೆನಾಟಕವಾಡಿ ಪಾತ್ರವ ಮುಗಿಯಲುಪರದೆಯ ಸರಿಸಿರುವೆಅಂಕದ ಪರದೆಯ ಸರಿಸಿರುವೆ […]

ಕಸಾಪಗೆ ಮಹಿಳಾ ಅಧ್ಯಕ್ಷರು

ಕಸಾಪಗೆ ಮಹಿಳಾ ಅಧ್ಯಕ್ಷರು ಒಂದು ಚರ್ಚೆ ಇವತ್ತಿನ ಚರ್ಚೆಯಲ್ಲಿಅನಿಸಿಕೆ ತಿಳಿಸಿರುವವರು ಸುಧಾ ಆಡುಕಳ ಕ. ಸಾ. ಪ. ಕ್ಕೆ ,ಮಹಿಳಾ ಅಧ್ಯಕ್ಷರು ಯಾಕಿಲ್ಲ!!? ಕ. ಸಾ. ಪ. ಕ್ಕೆ ,       ಮಹಿಳಾ ಅಧ್ಯಕ್ಷರು ಯಾಕಿಲ್ಲ!!? ಸ್ಥಾಪನೆಯಾಗಿ ಶತಮಾನಗಳಾದರೂ ಇನ್ನೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ!?          ಇಂಥದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚರ್ಚೆಯನ್ನಾರಂಭಿಸಿದ ಸಂಗಾತಿ ಪತ್ರಿಕೆಯ ನಿಲುವನ್ನು ತುಂಬು ಹೃದಯದಿಂದ ವಂದಿಸುತ್ತಲೇ, ನನ್ನ ಕೆಲವು ವಿಚಾರಗಳನ್ನು ಸ್ಪಷ್ಟಗೊಳಿಸಬಯಸುತ್ತೇನೆ. ಸಮಾನತೆಯೆಂಬುದು ಸುಲಭವಾಗಿ ರೂಢಿಸಿಕೊಳ್ಳುವ ವಿಷಯವಾಗಿದ್ದರೆ ಮಾನವ ಜನಾಂಗ […]

ಡಾ.ಪಾರ್ವತಿ ಜಿ.ಐತಾಳ್ ಅವರು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಈ ಅಂಕಣದಲ್ಲಿ ಅನ್ಯವಾಷೆಗಳಿಂದ ಕನ್ನಡಕ್ಕೆಅನುವಾದಗೊಂಡ ಕೃತಿಗಳ ಓದಿಗೆ ಪೂರಕವಾಗಿ ಅವುಗಳ ಪರಿಚಯ ಮಾಡಿಕೊಡಲಿದ್ದಾರೆ ಕೊಸಿಮೊ ಕೊಸಿಮೊ ( ಕಾದಂಬರಿ)ಮೂಲ : ಇಟಾಲೋ ಕಾಲ್ವಿನೊಕನ್ನಡಕ್ಕೆ : ಕೆ.ಪಿ.ಸುರೇಶಪ್ರ : ಅಭಿನವಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೦೦ ಪುಟಗಳು : ೨೧೬ ಜಗತ್ಪ್ರಸಿದ್ದ  ಲೇಖಕ ಇಟಾಲೋ ಕಾಲ್ವಿನೋ ಅವರ  ಕಾದಂಬರಿಯ ಇಂಗ್ಲಿಷ್ ಅನುವಾದ ‘ದಿ ಬ್ಯಾರನ್ ಇನ್ ದ ಟ್ರೀಸ್’ ಇದನ್ನು ಸುರೇಶ್ ಅವರು ‘ಕೊಸಿಮೋ’ಎಂಬ ಅದರ ನಾಯಕನ […]

ವಾರದ ಕವಿತೆ

ಕವಿತೆ ಹಳೆಯ ಮನೆ ಮೇಗರವಳ್ಳಿ ರಮೇಶ್ ಅದೊ೦ದು ವೈಭವದ ಹಳೆಯಕಾಲದಹೆ೦ಚಿನ ಮಹಡಿ ಮನೆ. ನಿತ್ಯ ದೇವರ ಪೂಜೆ, ಹಬ್ಬ ಹರಿದಿನಗ೦ಟೆ ಜಾಗಟೆ ಶ೦ಖ.ಮದುವೆ ಮು೦ಜಿ ನಾಮಕರಣ ಹುಟ್ಟಿದ ಹಬ್ಬಕಿವಿ ತು೦ಬುವ ನಾದಸ್ವರ.ನೀರೆಯರ ಸ೦ಭ್ರಮದ ಸೀರೆಯ ಸರಬರಬಳೆಗಳ ಘಲ ಘಲ.ತೂಗುವ ತೊಟಿಲುಗಳಕ೦ದಮ್ಮಗಳ ಕಿಲ ಕಿಲಮನೆ ಮನಗಳ ತು೦ಬಿ ಹರಿವಜೋಗುಳದ ಮಾಧುರ್ಯ.ಗ೦ಡಸರ ಗತ್ತು, ಗೈರತ್ತುಜಗಲಿಯ ಮೇಲೆ ಊರ ಪ್ರಮುಖರೊಡನೆಹಿರಿಯರ ಒಡ್ಡೋಲಗ.ಮಹಡಿಯ ಹಜಾರದಲ್ಲಿ ಇಸ್ಪೀಟು , ಸಿಗರೇಟು ಬೀಡಿಅಡಿಕೆ ಚಪ್ಪರಕೊಟ್ಟಿಗೆಯ ತು೦ಬ ದನ ಕರ.ಹಜಾರದಲ್ಲಿ ಪೇರಿಸಿಟ್ಟ ಅಡಿಕೆ ಮೂಟೆಪಣತ ತು೦ಬಿದ ಭತ್ತಉಪ್ಪಿನ […]

ವಿವಾಹ ವ್ಯವಸ್ಥೆ- ಒಂದು ಚರ್ಚೆ

ಚರ್ಚೆ ವಿವಾಹ ವ್ಯವಸ್ಥೆ- ಒಂದು ಚರ್ಚೆ ಚಂದಕಚರ್ಲ ರಮೇಶ ಬಾಬು ಹೊಸ ತಲೆಮಾರಿನ ವಿವಾಹಗಳು ವೈವಿಧ್ಯತೆ ಸಂತರಿಸಿಕೊಂಡಿರುವುದರಿಂದ ಈಗ ನಮ್ಮ ಸಮಾಜದಲ್ಲಿನ ವಿವಾಹ ವ್ಯವಸ್ಥೆಯ ಬಗ್ಗೆ ಒಂಚೂರು ಚರ್ಚೆ ಮಾಡುವ ಎಂತಾಗಿದೆ. ನಮಗೆ ಕಾಣುವ ಹಾಗೆ ವಿವಾಹಗಳಲ್ಲಿ ಎರಡು ರೀತಿಯ ಪ್ರಭಾಗಗಳು ಕಾಣುತ್ತವೆ. ಗಂಡು ಹೆಣ್ಣು ಪ್ರೀತಿಸಿ ತಾವೇ ನಿರ್ಣಯಿಸಿಕೊಂಡು ಮದುವೆ ಯಾಗುವುದು (ಪ್ರೇಮ ವಿವಾಹ)  ಮತ್ತೊಂದು ಸಾಂಪ್ರದಾಯಿಕವಾಗಿ ನಡೆದು ಬಂದ ರೀತಿಯಲ್ಲಿ ಮನೆಗೆ ದೊಡ್ಡವರು ಹೆಣ್ಣು ನೋಡಿ ನಿಶ್ಚಯಿಸಿ ಮದುವೆ ಮಾಡುವುದು ( ಅರೇಂಜ್ಡ್ ಮ್ಯಾರೇಜ್) […]

Back To Top