ಕವಿತೆ
ನಾವು ಆಧುನಿಕ ಗಾಂಧಾರಿಯರು
ಲಕ್ಷ್ಮೀ ಪಾಟೀಲ್
ನೀನು ಅಪಾರವಾದ ಆತ್ಮವಿಶ್ವಾಸ
ತುಂಬಿ ತುಳುಕುವಹೆಣ್ಣೆಂದುಆಗಾಗ ಹೇಳಿ
ನನ್ನನ್ನು ಬಲೂನಿನಂತೆಉಬ್ಬಿಸಿದಾತ
ಖರೇಖರೇಆತ್ಮವಿಶ್ವಾಸದಲ್ಲೇ
ಬದುಕಲು ನಿಂತಾಗ ಬಲೂನಿನ ಹವಾ ತೆಗೆದು
ಇನ್ನೆಂದೂಉಬ್ಬದಂತೆ ಮಾಡಿ ಎಸೆದು ಬಿಟ್ಟ
ಹೆಣ್ಣನ್ನು ಒರೆಗೆ ಹಚ್ಚಿ ಆತ
ಹೀಗೆಯೇ ಉಬ್ಬಿಬದುಕುತ್ತ
ತನಗೊಂದು ಸ್ವಚ್ಛಂದ ಇತಿಹಾಸ ಕಟ್ಟಿಕೊಂಡ
ಆತ್ಮವಿಶ್ವಾಸದಿಂದಹೆಜ್ಜೆ ಹಾಕುವ
ಹೆಣ್ಣನ್ನು ತುಳಿಯುತ್ತಲೇಬಂದ
ಕಣ್ಣಿಗೆ ಪಟ್ಟಿ ಕಟ್ಟಿಕೊಳ್ಳದಿದ್ದರೂ
ಇವರೆಲ್ಲಕರಾಮತ್ತುಗಳನ್ನು
ಕಣ್ಣಲ್ಲಿ ಹಿಂಗಿಸಿಕೊಂಡು
ಒಡಲಲ್ಲಿ ಅರಗಿಸಿಕೊಂಡು
ಕಂಡು ಕಾಣದಂತೆ ಉಂಡು ಉಗುಳದಂತೆ
ಒಡಲದಾವಾಗ್ನಿಗಳನ್ನುಒಳಗೇಒತ್ತಿಕೊಳ್ಳುವ
ನಾವು ಆಧುನಿಕ ಗಾಂಧಾರಿಯರಾಗಿದ್ದೇವೆ
ಅಕ್ಷರಲೋಕಕ್ಕೆತೆರೆದುಕೊಂಡಿದ್ದು
ಪ್ರಜಾಪ್ರಭುತ್ವದಲ್ಲಿಸಂಖ್ಯೆ ಮುಖ್ಯವಾದದ್ದೇಪವಾಡವೆಂಬಂತೆ
ಈಗಲೂ ಮೀಸಲಾತಿ ಆದ್ಯತೆಗೆಧನ್ಯರಾಗಲು
ಕುರುಡು ಪುರುಷನ ಮುಂದೆ ಬೇಡಿಕೆ ಇಟ್ಟು
ಕಣ್ಣಿದ್ದೂಕುರುಡರಂತೆಅವನ ನೆರಳಹಿಂಬಾಲಿಸುವ
ನಾವು ಆಧುನಿಕ ಗಾಂಧಾರಿಯರಾಗಿದ್ದೇವೆ
**************************************
ಒಳ್ಳೆಯ ಸಂವೇದನೆಯ ಬರಹ ಅಭಿನಂದನೆಗಳು ಮೆಡಮ್
Thanku sir