Day: September 17, 2020

ತರಗೆಲೆ

ಅನುವಾದ ತರಗೆಲೆ ಕನ್ನಡ ಮೂಲ: ನಾಗರೇಖಾ ಗಾಂವಕರ್ ಇಂಗ್ಲೀಷಿಗೆ: ಸಮತಾ ಆರ್. ತರಗೆಲೆ ಮರದಡಿಯ ನೆರಳಲ್ಲಿ ಬೆಚ್ಚಗೆ ಇತ್ತು ತರಗೆಲೆ.ಕಾಲಾಂತರದ ಕರಿಯಪ್ಪುಗೆಯಲ್ಲಿ ಮುಂದೊಂದು ದಿನ ಹಾಗೇಕೊಳೆತು ಹೋಗುವುದಿತ್ತುಮರಳಿ ಮಣ್ಣಡಿ ಸೇರಿ. ದಿಗ್ಗನೇ ಬೆಳಗಿದ ನಾಜೂಕುಬೆಳಕಿನ ಹೊಳಪುಅದೇಕೋ ಅರಿವ ಹೊಸೆವ ಅನಂತದ ನೆರಳಡಿತಂದು ನಿಲ್ಲಿಸಿತು.ತರಗೆಲೆಯ ಮಾಸಿದ ಬಣ್ಣಕ್ಕೆ ಹೊಂಬಣ್ಣದ ಹೊಳಪು.ಮತ್ತೆ ಚಿಗುರಿದಂತೆ ಸಂಭ್ರಮ.ನೆಲದ ನಿಯಮದ ಹಾಗೇ.ಮಬ್ಬು ಸರಿಸಿ ‘ ಕಾಣಬಯಸಿದ್ದ ಮನಗಾಣು’ ಎಂದು ಎದೆ ತೆರೆದು ಆಹ್ವಾನಿಸಿಅಪ್ಪಿ ಮುದ್ದಿಸಿತು ಬೆಳಕು. ಬೆಳಕಿನ ದಾರಿಯಲ್ಲಿ ಕಣ್ಢಿಗೆಣ್ಣೆಬಿಟ್ಪು ಹಾಗೇ ನೋಡುತ್ತಲೇಇತ್ತು ತರಗೆಲೆ […]

ನಾನು ದೀಪ ಹಚ್ಚ ಬೇಕೆಂದಿದ್ದೆ

ಪುಸ್ತಕ ವಿಮರ್ಶೆ ನಾನು ದೀಪ ಹಚ್ಚ ಬೇಕೆಂದಿದ್ದೆ ನಮ್ಮ ಕಣಿವೆಯ ಹುಡುಗಿ ಅಕ್ಷತಾ ಕೃಷ್ಣಮೂರ್ತಿ ಕಳಿಸಿದ “ನಾನು ದೀಪ ಹಚ್ಚ ಬೇಕೆಂದಿದ್ದೆ”ಕವನ ಸಂಕಲನ ತಲುಪಿದೆ. ಅಣಶಿ ಘಟ್ಟದ ಶಾಲೆಯೊಂದರಲ್ಲಿ ಕಷ್ಟದಲ್ಲಿ ಕಾರ್ಯ ನಿರ್ವಹಿಸುತ್ತಾ ಬರೆವ ಓದಿನ  ತನ್ನನ್ನೇ ಅರ್ಪಿಸಿಕೊಂಡ ಅವಳ ಜೀವನ ಪ್ರೀತಿಗೆ ಮನಸ್ಸು ಅರಳುತ್ತದೆ.                     ಈಗಿತ್ತಲಾಗಿ ಓದುವುದೇ ಕಡಿಮೆಯಾದ ನನ್ನ ಬದುಕಿನಲ್ಲಿ ಆಗಾಗ ಓದಿಗೆ ಹಚ್ಚಿ ಬರೆಸುವ ಅನೇಕ ಗೆಳತಿಯರಿದ್ದಾರೆ ಎನ್ನುವುದೇ ಖುಷಿಯ ಸಂಗತಿ ಅವರೆಲ್ಲರಿಗೂ ನನ್ನ ರಾಶಿರಾಶಿ ಪ್ರೀತಿ .                              ಅಕ್ಷತಾಳ […]

ಅವಳನ್ನು ಸಂತೈಸುವವರು

ಕವಿತೆ ಅವಳನ್ನು ಸಂತೈಸುವವರು ಮಾಲಾ ಮ ಅಕ್ಕಿಶೆಟ್ಟಿ ಕಳೆದುಕೊಂಡೆ ನನ್ನವನನ್ನ ಶಾಶ್ವತವಾಗಿಮತ್ತೆ ಸಿಗಲಾರ’ ದುಃಖಿಸಿತು ಹೆಣ್ಣುಜೀವಮನದ ನೋವು ಹಂಚಿಕೊಳ್ಳಲುನನ್ನೊಂದಿಗೆ, ಆ ಗೆಳತಿಯ ಹೃದಯನೋವನ್ನು ತಡೆಯಲಾರದೆ, ಸಿಡಿಲುಮಳೆಯಿಲ್ಲದೇ ಬಡಿದಿತ್ತು ಬೇಸಿಗೆಯಲ್ಲಿ ಯಾವತ್ತೂ ಗಂಭೀರ ಮೂರ್ತಿತೂಕದಲ್ಲಿ ಮಾತುಗಳ ಸಂಕಲನಅಪಘಾತದಲ್ಲಿ ಬಾರಲಾರದಲೋಕಕ್ಕೆ ತೆರಳಿದ ಮರಣಒಟ ಒಟ ಎಂದು ಒಟಗುತ್ತಿದ್ದಳುತಡೆಯಲಾರದ ಸೊಲ್ಲುಗಳಲ್ಲಿ ಮೊನ್ನೆ ಇನ್ನೀತರ ಗೆಳೆತಿಯರೊಂದಿಗೆಭೇಟಿಯಾಗಿದ್ದಳು ಇಕೆ ಅಕಸ್ಮಾತ್ನೋವು ನೋವು ಎಂದು ಜರ್ಜರಿತವಾದದೇಹ, ಮತ್ತೆ ಮತ್ತೆ ಒಟಗುಡುತ್ತಿತ್ತುಸ್ಥಿತಿಯನ್ನು ಅರಿಯಲಾರದ ಇತರರುಒಟಗುಟುವಿಕೆ ನೋವು ಅರಿಯದೇ ಬೆಸರಿಸುತ್ತಿದ್ದರು ದುಃಖದ ಸುಣ್ಣದಲ್ಲಿ ಅದ್ದಿತೆಗೆದ ನನ್ನ ದೇಹಕ್ಕೆ ತುಸುಅರ್ಥವಾಗಿತ್ತು […]

ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ

ಲೇಖನ ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ ನಿಂತು ಮಲ್ಲಿಕಾರ್ಜುನ ಕಡಕೋಳ  ಕಳೆದವರ್ಷದವರೆಗೆ ಹೈದ್ರಾಬಾದ್ ಕರ್ನಾಟಕವೆಂದು ಕರೆಯಲಾಗುತ್ತಿದ್ದ  ಕಲಬುರಗಿ ನಾಡನ್ನು ೧೭.೦೯.೨೦೧೯ ರಂದು ಮುಖ್ಯಮಂತ್ರಿ ಯಡಿಯೂರಪ್ಪ  “ಕಲ್ಯಾಣ ಕರ್ನಾಟಕ” ಎಂದು ನಾಮಕರಣ ಮಾಡಿದರು. ಆ ಮೂಲಕ  ಹೈದ್ರಾಬಾದ್ ಕರ್ನಾಟಕ ಕನ್ನಡನಾಡ ಪ್ರಜ್ಞೆಗೆ ಹೊಸವಿನ್ಯಾಸದ ತಾಜಾ ತಾಜಾ ಖುಷಿ ದೊರಕಿದಂತಾಗಿದೆ. ಇದು ಸಾಂಸ್ಕೃತಿಕವಾಗಿ ವಿನೂತನ ಉಮೇದು. ಅಂದು ಕಳಚೂರಿ ಬಿಜ್ಜಳನ ಕಲ್ಯಾಣ ರಾಜ್ಯದ ಮಂತ್ರಿಯಾಗಿದ್ದ ಬಸವಣ್ಣ, ಪ್ರಭುತ್ವದ ಎಲ್ಲೆಮೀರಿ ವಚನಗಳ ಮೂಲಕ ಜನಚಳವಳಿ ರೂಪಿಸಿದ್ದು ಜನಕಲ್ಯಾಣದ ಕಳಕಳಿಯ ದ್ಯೋತಕ. […]

ಅಂಕಣ ಬರಹ ಘೋಷಣೆಗಳ ನಡುವೆ ರೂಪಕಗಳಿಗೂ ಕಾತರಿಸುವ ಕಲ್ಮೇಶ ತೋಟದ್  ಕವಿತೆಗಳು ಕಲ್ಮೇಶ ತೋಟದ್ . ಮೂರು ಗೇಣಿನಷ್ಟೇ ಅಂತರ ಭಾಸವಾಗುತ್ತಿದ್ದ ಬಾನಹಂದರ ನೋಡಲದೆಷ್ಟು ಸುಂದರ ಆಕಾಶ ಭೂಮಿ ಮಂದಾರ ಅಪ್ಪನ ಹೆಗಲದು ಸುಂದರ ಇಂಥ ಭಾವುಕ ಸಾಲುಗಳಲ್ಲಿ ಅಪ್ಪನ ಹೆಗಲನ್ನು ವರ್ಣಿಸಿ ಅಪ್ಪನನ್ನು ಕುರಿತಂತೆ ಈವರೆಗೂ ಇದ್ದ ಇಮೇಜುಗಳಿಗೆ ಮತ್ತೊಂದು ಹೊಸ ರೂಪಕವನ್ನು ಕೊಡಮಾಡಿರುವ ೨೬ರ ಹರಯದ ಯುವ ಕವಿ ಕಲ್ಮೇಶ ತೋಟದ ಅವರ ಕವಿತೆಗಳನ್ನು ಪರಿಚಯಿಸುವುದಕ್ಕೆ ಸಂತೋಷ ಮತ್ತು ಸಂಭ್ರಮಗಳು ಮೇಳೈಸುತ್ತವೆ.  “ಕೌದಿ” ಶೀರ್ಷಿಕೆಯಲ್ಲಿ […]

Back To Top