Day: September 26, 2020

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ

ಅನುಭವ ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ             ಪ್ರತಿ ಡಿಸೆಂಬರ್ ೨೨ಕ್ಕೆ ನಮ್ಮ ಶಾಲೆಯ ವಾರ್ಷಿಕೋತ್ಸವ, ಯಾವಾಗಲು ವಾರ್ಷಿಕೋತ್ಸವ ಮುಗಿದ ಬಳಿಕ ನಮಗೆ ಕ್ರಿಸ್ಮಸ್ರಜೆ. ರಜೆ ಕಳೆಯಲೆಂದೇ ಅಜ್ಜನ ಮನೆಗೆ ಹೋದೆವು. ನಮ್ಮ ಹಾಗೆ ಕ್ರಿಸ್ಮಸ್ ರಜೆ ಕಳೆಯಲು ನಮ್ಮಜ್ಜನ ದಾಯಾದಿಗಳ ಮನೆಮಕ್ಕಳೂ ಬಂದಿದ್ದರು. ಒಂದು ರೀತಿ ಮಕ್ಕಳ ಸೈನ್ಯವೇ ಸರಿ. ನಿಮ್ಮ ಶಾಲೆ ಹೇಗೆ? ನಿಮ್ಮ ಶಾಲೆಯಲ್ಲಿ ಏನೇನು ಕಲಿಸುತ್ತಾರೆ? ನಿಮಗೆ ಯಾವ ಟೀಚರ್ ಇಷ್ಟ? ಯಾರು ಹೇಗೆ ಬಯ್ಯುತ್ತಾರೆ? ಇತ್ಯಾದಿಗಳ ಚರ್ಚೆ ಮಾಡುತ್ತಿದ್ದೆವು. ರಜೆಗೆಂದು […]

ಕಣ್ಣ ಕಸ

ಅನುವಾದಿತ ಕವಿತೆ ಕಣ್ಣ ಕಸ ಕನ್ನಡ ಮೂಲ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ಈ ಕಸ ಹೇಗೆಬಿತ್ತೋ ಗೊತ್ತಿಲ್ಲಕಣ್ಣಿಂದ ಇಳಿವಒಂದೊಂದೇ ಹನಿಗಾಗಿಕಾಯುತಿರುವೆಕರವಸ್ತ್ರದ ತುದಿಸೆರಗಿನ ಚುಂಗುಉಫ್..ಅಂತಊದಿದ ಮಗಳ ಉಸಿರುಯಾವುದಕ್ಕೂ ಸಿಗದೆಅವಿತು ಕಾಡಿಸುತಿದೆ ತುಂಬಿದ ಕಣ್ಣುಗಳಲ್ಲಿಜಗತ್ತನ್ನು ನೋಡುವುದೂಒಂದು ಅನುಭವ ತಾನೇಹೀಗಂದುಕೊಳ್ಳುತ್ತಲೇಕನ್ನಡಿಯ ಮುಂದೆ ಬಂದುಮನಸ ಓಲೈಸಲುಹೆಣಗುತಿರುವೆ ಈ ನಶ್ವರ ಬದುಕಲ್ಲಿಪ್ರತಿ ಘಳಿಗೆಯನಿರಿಯುತಿದೆಕಣ್ಣ ತುಂಬ ಬಾವುಕಣ್ಣೊಳಗೆ ಬಿದ್ದ ನೋವು I just don’t knowHow this speck of dustGot in to the eyeAnd haunting me hiding inside.And […]

ಕವಾಟಗಳ ಮಧ್ಯೆ ಬೆಳಕಿಂಡಿ

ಕವಿತೆ ಕವಾಟಗಳ ಮಧ್ಯೆ ಬೆಳಕಿಂಡಿ ಸುತ್ತು ಗೋಡೆಗಳ ಕಟ್ಟಿತೆರೆಯದ ಕವಾಟಗಳ ಮಧ್ಯೆನಾನೆಂಬ ನಾನು ಬೇಧವಳಿದುಒಂದಾಗಲಿಜೀವ ಪರಮಾತ್ಮಸಂತ ಶರಣರ ಅಹವಾಲು ನೋವಿರದ ಹಸಿದ ಸ್ವಾರ್ಥಬರಡಾದ ಎದೆಯ ಅಮೃತಬರಿದೆ ಬಡಿಯುವ ಮಿಡಿತ ಕಳೆದು ಹೋಗಿಹ ನಾವುಕದ ತಟ್ಟಿ ಕರೆಯೋಣಇಂದಲ್ಲ ನಾಳೆ ತೆರೆದೀತುತಟ್ಟಿದ ಕೈಗಳ ತಬ್ಬೀತುಸಂತ ಶರಣರು ನಕ್ಕಾರು. ***************************

ಹಾಯ್ಕುಗಳು

ಹಾಯ್ಕುಗಳು ವಿ.ಹರಿನಾಥ ಬಾಬು ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ ಉರಿವ ಬೆಂಕಿಒಲೆಯ ಮೇಲೆ ಅನ್ನಹಸಿದ ಕಂದ ಸೂರ್ಯ ಸಿಟ್ಟಾದಭೂಮಿ ಬಳಲಿ ಬೆಂಡುಹಾಳಾದ ರೈತ ಜೋರಾದ ಮಳೆಕೊಚ್ಚಿಹೋದ ಫಸಲುಹತಾಷ ರೈತ ತುಂತುರು ಹನಿಪುಲಕಗೊಂಡ ಭೂಮಿಪ್ರಸನ್ನ ಜನ ****************************

ಅಂಕಣ ಬರಹ ರಾತ್ರಿಬಸ್ಸುಗಳೊಂದಿಗೆ ಮಾತುಕತೆ ರಾತ್ರಿಬಸ್ಸಿನಲ್ಲಿ ಎಷ್ಟೆಲ್ಲ ಕನಸುಗಳು ಪಯಣಿಸುತ್ತಿರುತ್ತವೆ; ತಲುಪಬೇಕಾದ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ಹವಾಮಾನಕ್ಕೆ ತಕ್ಕ ಬಟ್ಟೆ ತೊಟ್ಟು ಬೆಳಗೆನ್ನುವ ಬೆರಗಿಗೆ ಕಣ್ಣುಬಿಡಲು ತಯಾರಾಗಿ ಹೊರಟುನಿಂತಿರುತ್ತವೆ! ಬಗಲಲ್ಲೊಂದು ಹಗುರವಾದ ಪರ್ಸು, ಕೈಯಲ್ಲೊಂದು ಭಾರವಾದ ಬ್ಯಾಗು, ಕೂದಲನ್ನು ಮೇಲೆತ್ತಿ ಕಟ್ಟಿದ ರಬ್ಬರ್ ಬ್ಯಾಂಡು ಎಲ್ಲವೂ ಆ ಕನಸುಗಳೊಂದಿಗೆ ಹೆಜ್ಜೆಹಾಕುತ್ತಿರುತ್ತವೆ. ಅವಸರದಲ್ಲಿ ಮನೆಬಿಟ್ಟ ಕನಸುಗಳ ಕಣ್ಣಿನ ಕನ್ನಡಕ, ಕೈಗೊಂದು ವಾಚು, ಬಿಸಿನೀರಿನ ಬಾಟಲಿಗಳೆಲ್ಲವೂ ಆ ಪಯಣದ ಪಾತ್ರಧಾರಿಗಳಂತೆ ಪಾಲ್ಗೊಳ್ಳುತ್ತವೆ. ಅರಿವಿಗೇ ಬಾರದಂತೆ ಬದುಕಿನ ಅದ್ಯಾವುದೋ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಆ […]

ಅಂಕಣಬರಹ ಅದುಮಿಟ್ಟ ಮನದ ಮಾತುಗಳು ಕವಿತೆಗಳಾದಾಗ ಪುಸ್ತಕ- ಸಂತೆ ಸರಕುಕವಿ- ಬಿ ಎ ಮಮತಾ ಅರಸೀಕೆರೆಪ್ರಕಾಶನ- ನಾಕುತಂತಿ  ಬೆಲೆ- ೮೦/-           ಸಿದ್ಧ ಸೂತ್ರ ಬದಲಾಗಬೇಕುಅಜ್ಜಿ ಕಥೆಯಲ್ಲಿಅರಿವು ಜೊತೆಯಾಗಬೇಕುಹೊಸ ಕಥೆಗಳ ಬರೆಯಬೇಕುಅಕ್ಷರ ಲೋಕದಲಿಅಕ್ಷರ ಲೋಕದಲ್ಲಿ ಬದಲಾವಣೆ ಬಯಸುವ ಮಮತಾ ಆಡಲೇ ಬೇಕಾದ ಮಾತುಗಳೊಂದಿಗೆ ನಮ್ಮೆದುರಿಗಿದ್ದಾಳೆ.  ಮಮತಾ ಅಂದರೇ ಹಾಗೆ. ಹೇಳಬೇಕಾದುದನ್ನು ಮನದೊಳಗೇ ಇಟ್ಟುಕೊಂಡಿರುವವಳಲ್ಲ. ಹೇಳಬೇಕಾದುದ್ದನ್ನು ಥಟ್ಟನೆ ಹೇಳಿಬಿಡುವವಳು. ಆ ಮಾತಿನಿಂದ ಏನಾದರೂ ವ್ಯತಿರಿಕ್ತವಾದರೆ ನಂತರದ ಪರಿಣಾಮಗಳ ಬಗ್ಗೆ ಕೊನೆಯಲ್ಲಿ ಯೋಚಿಸಿದರಾಯಿತು ಎಂದುಕೊಂಡಿರುವವಳು. […]

Back To Top