Day: September 10, 2020

ರುಬಾಯಿಗಳು

ರುಬಾಯಿಗಳು ಪ.ನಾ.ಹಳ್ಳಿ.ಹರೀಶ್ ಕುಮಾರ್ ೧. ಮಂಕುತಿಮ್ಮನಾಗು ಕೂಡಿಡುವುದು ಬಿಡು ಜಿಪುಣನೆಂಬ ಹೆಸರು ತಪ್ಪೀತು.ಓದಿ ಜ್ಞಾನಿಯಾಗು, ಅಜ್ಞಾನಿಯೆಂಬ ಹಣೆಪಟ್ಟಿ ತಪ್ಪೀತು.ಎಲ್ಲರೊಡನೆ ಒಂದಾಗಿ ಡಿವಿಜಿಯ ಮಂಕುತಿಮ್ಮನಾಗು,ರೌರವ ನರಕ ಲೋಕದ ದರ್ಶನವಾದರೂ ತಪ್ಪೀತು. ೨.ಕರ್ಮ ಹುಲಿಯ ಹೊಟ್ಟೆಯೊಳಗುಟ್ಟಿ ಹುಲಿಯಾದೆವುಹಸುವಿನೊಟ್ಟೆಯೊಳಗುಟ್ಟಿ ಹಸುವಾದೆವುಮನುಷ್ಯನ ಹೊಟ್ಟೆಯೊಳಗುಟ್ಟಿದಾ ಕರ್ಮಕ್ಕೆ,ಹಿಂದೂ ಕ್ರೈಸ್ತ ಜೈನ ಮುಸಲ್ಮಾನರೆಂದಾದೆವು **************************

ಕೆಂಡದ ಕೋಡಿ

ಕೆಂಡದ ಕೋಡಿ ವಿಶಾಲಾ ಆರಾಧ್ಯ ಬೆಳದಿಂಗಳಿನ ರಂಗೋಲಿಯಲೂಚಿತ್ತದಲಿ ನೆತ್ತರಿನ ಚಿತ್ರಗಳು ಮೂಡಿಕತ್ತಲ ಗರ್ಭಕ್ಕಿಳಿದು ಬಸಿರಾಗುತ್ತವೆಸೂಜಿಯ ಮೊನೆಯಲ್ಲಿ ಹುಟ್ಟಿದಮತ್ಸರದ ಕನಸುಗಳುದ್ವೇಷದ ಕೋರೆಹಲ್ಲಿನೊಡನೆಕತ್ತಿಯ ಝಳಪಿನ ತಾಳದಲಿನರ್ತಿಸಲು ಹವಣಿಸುತ್ತವೆ!! ಪಕ್ಷಗಳ ದಾಟಿ ಮಾಸದಮಾಸಗಳಲಿ ಇಣುಕಿ ಕಣ್ಣಲ್ಲೇಕೆಂಡದ ಕೊಂಡ ನಿಗಿನಿಗಿಸಿಮಿನುಗಿ ಮನದ ರಸವನುಕೊತಕೊತನೆ ಕುದಿಸಿ ನಾನುನೀನಿನಮೇಲು ಕೀಳಿನ ಧರ್ಮಾಧರ್ಮದತುಪ್ಪವ ಸುರಿಸಿ ಅಗ್ನಿಗೊಂಡವಮತ್ತೆ ಬಾನ ಕೊನೆವರೆಗೂ ಉರಿಸಿಧಗಧಗಿಸುವ ಹುಚ್ಚು ಕೋಡಿಹರಿಯುತ್ತದೆ!! ಏರಿಯ ದಾಟಿದ ಮತ್ಸರದ ಝರಿಕೊರಳ ಸೀಳೆ ಕಿರುದನಿಗೂಎಡೆಗೊಡದೆ ನೆತ್ತರು ಹರಿದಾಡುತ್ತದೆಆ ನೆತ್ತರಲೇ ಕಾರ್ಕೋಟ ಬೀಜಗಳುಮೊಳಕೆಯೊಡೆಯುತ್ತವೆ ಮತ್ತೆ ಮತ್ತೆ

ಕರೋನಾ ಮತ್ತು ಭಯ ಜ್ಯೋತಿ ಡಿ.ಬೊಮ್ಮಾ ಭಯ ಬೇಡ ಎಚ್ಚರಿಕೆ ಇರಲಿ ಎಂದು ಹೇಳುತ್ತಲೆ ಈಗ ಪ್ರತಿಯೊಬ್ಬರ ಮನದಲ್ಲೂ ಕರೋನಾ ಬಗ್ಗೆ ಭಯ ಮನೆಮಾಡಿದೆ. ಮೇಲೆ ಇದೊಂದು ಸಾಮಾನ್ಯ ಕಾಯಿಲೆ ಎಂದುಕೊಂಡರೂ ಒಳಗೋಳಗೆ ಆತಂಕ ಪಡದವರಿಲ್ಲ.ರೋಗಕ್ಕಿಂತಲೂ ಅದರ ಸುತ್ತಲೂ ಇರುವ ಕ್ಲಿಷ್ಟಕರ ಕಾನೂನುಗಳು ಭಯವನ್ನು ಹೆಚ್ಚಿಸುತ್ತಿವೆ. ಸದ್ಯ ಕರೋನಾ ದಿಂದಾಗುವ ಸಾವಿನ ಪ್ರಮಾಣದಲ್ಲಿ ವಯಸ್ಸಾದವರೆ ಹೆಚ್ಚು. ಅವರಿಗೆ ಮತ್ತೆ ಬೇರೆ ಆರೋಗ್ಯ ಸಮಸ್ಯಗಳು ಇರಬಹುದು.ಬಹಳಷ್ಟು ಸಾವು ಆಸ್ಪತ್ರೆಯಲ್ಲಿ ಅಡ್ಮೀಟ್ ಆದ ಮೇಲೆ ಸಂಭವಿಸುತ್ತಿವೆ. ಅಡ್ಮಿಟ್ ಆದ ಮೇಲೆ […]

ಸಹಜ ನಡಿಗೆಯ ರುದ್ರ ನರ್ತನದ ಭಾವಗಳಂತೆ ಕುಮಾರ್ ಹೊನ್ನೇನಹಳ್ಳಿ‌ ಪದ್ಯಗಳು . ಕುಮಾರ್ ಹೊನ್ನೇನಹಳ್ಳಿ ವೃತ್ತಿಯಿಂದ ಶಿಕ್ಷಕ ಮತ್ತು ಶಿಕ್ಷಕರ ತರಬೇತುದಾರ ಅಂದರೆ ರಿಸೋರ್ಸ್ ಪರ್ಸನ್. ಅವರ ವೃತ್ತಿಯ ಕಾರಣ ಅಂದರೆ ಸಂಪನ್ಮೂಲ ವ್ಯಕ್ತಿಯಾಗಿರುವ ಕಾರಣ ಜಗತ್ತಿನ ಸಮಸ್ತ ಆಗು ಹೋಗುಗಳ ಅರಿವು ಮತ್ತು ಅಂಥ ಸಂಗತಿಗಳು ಒಟ್ಟೂ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಪ್ರಮಾಣಗಳನ್ನೂ ಆನುಷಂಗಿಕವಾಗಿ ಅವರು ಪ್ರಸ್ತಾಪಿಸದೇ ಅನ್ಯ ಮಾರ್ಗಗಳು ಇರುವುದಿಲ್ಲ. ಹಾಗಾಗಿಯೇ ಏನೋ ಇವರ ಕವಿತೆಗಳಲ್ಲಿ ಐತಿಹಾಸಿಕ ವ್ಯಕ್ತಿಗಳೂ ವರ್ತಮಾನದ ಸಂಗತಿಗಳೂ ಆಗೀಗ […]

Back To Top