ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಅಭಿನಂದನೆಗಳು

ಸಂಗಾತಿ ಪತ್ರಿಕೆಗೆ ಬರೆಯುತ್ತಿರುವನಾಲ್ವರು ಲೇಖಕಿಯರಿಗೆ ಇಂದು ವಿವಿಧ ಪ್ರಶಸ್ತಿಗಳು ದೊರಕಿದ್ದು ಪತ್ರಿಕೆ ಆ ನಾಲ್ವರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತಿದೆ ಅಕ್ಷತಾ ಕೃಷ್ಣಮೂರ್ತಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡುವ ಮಯೂರ ವರ್ಮ ಪ್ರಶಸ್ತಿ ಪಡೆದಿದ್ದಾರೆ ಶ್ರೀದೇವಿ ಕೆರೆಮನೆ ಕನ್ನಡ ಸಾಹಿತ್ಯ ಪರಿಷತ್ ನೀಡುವಸುಮನ್ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ ವಿಭಾ ಪುರೋಹಿತ್ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ರೂಪಶ್ರೀ ಎನ್.ಆರ್ ಕನ್ನಡ ಸಾಹಿತ್ಯ ಪರಿಷತ್ತಿನ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ ************************************************************************

ಅಭಿನಂದನೆಗಳು Read Post »

ಕಾವ್ಯಯಾನ

ಅವಳ ಕಣ್ಣುಗಳು

ಕವಿತೆ ಅವಳ ಕಣ್ಣುಗಳು ಡಾ. ಪ್ರೇಮಲತ ಬಿ. ಅವಳ ಕಣ್ಣುಗಳು ಅವನನ್ನುನಿರುಕಿಸುವುದೇ ಹೀಗೆನಿಧಾನವಾಗಿ ಪರೀಕ್ಷಿಸುವಂತೆಯಾರೆಂದು ಯಾವತ್ತೂ ನೋಡಿರದ ಹಾಗೆಆಳವಾಗಿ ಕತ್ತರಿಸುವ ಬಗೆ ಅವಳು ಅತ್ತಿತ್ತ ಹರಿಸುವ ನೋಟದಲ್ಲಿಇಡೀ ಜೀವಿತದಿ ಕಂಡಿರದ್ದಕ್ಕಿಂತಹೆಚ್ಚು ನೋಡಿಬಿಡುತ್ತಾನೆ ಅವನುದೀಪಗಣ್ಣುಗಳು ಆಳವಾಗಿ ಯೋಚಿಸುತ್ತನಿಷ್ಯಬ್ದವಾಗಿ ಪ್ರಕಟಿಸುತ್ತವೆತಟ್ಟನೆ ಒಂದು ಕಥೆಯನ್ನು ಬರೆಯುತ್ತಹೊಸಲೋಕದ ಕವಿತೆಯೊಂದನ್ನು ಹಾಡುತ್ತಇವನು ನಿಂತ ನೆಲ ಕಂಪಿಸುವ ಹಾಗೆ ಅವಳ ಕಣ್ಣೋಟದ ಕೊಲೆಗಡುಕನಿಗೆಇವನು ಬಲಿಯಾದ್ದು ಇದೇ ಮೊದಲಲ್ಲಕೊನೆಯೂ ಇಲ್ಲಅವಳ ನೋಟವೇ ಹಾಗೆಅವನ ಹೊರಮೈ ಭಾವಗಳ ಬಟ್ಟೆಕಳಚಿ ನಗ್ನವಾಗಿಸುವ ಹಾಗೆಒಳಮೈಯ ಬೇಗುದಿಗಳಿಗೆ ತಿದಿಯನ್ನುಒತ್ತಿ ಜ್ಯೋತಿ ಬೆಳಗಿಸುವ ಹಾಗೆ ಅವನು ಮಿಡಿಯುತ್ತಾನೆಅವಳು ರೆಪ್ಪೆ ಬಡಿದಾಗೆಲ್ಲ ಹೊಸದೊಂದುಎಪಿಸೋಡಿಗೆ ಕಾಯುವ ವೀಕ್ಷಕನಂತೆಕೊನೆಯಿರದ ಆಳಗಳಲಿ ಮುಳುಗೇಳುತ್ತದೃಷ್ಟಿಗೆ ದೃಷ್ಟಿ ಬೆರೆಸಿ ಕುಣಿಯುತ್ತಚಪ್ಪಾಳೆ ತಟ್ಟಿ ಕೆಲವೊಮ್ಮೆತಾನೇ ಅವಳಂತೆ ಮಗದೊಮ್ಮೆ! ****************************

ಅವಳ ಕಣ್ಣುಗಳು Read Post »

ಇತರೆ, ಪ್ರಬಂಧ

ಶಿಶುತನದ ಹದನದೊಳು ಬದುಕಲೆಳಸಿ…

ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ… ಲಕ್ಷ್ಮಿ ನಾರಾಯಣಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ ಬಾಲ್ಯದ ದಿನಗಳು ಮತ್ತೆ ಜೀವ ತಳೆಯುತ್ತವೆ. ಕನಸುಗಳು ಗರಿಬಿಚ್ಚಿ ಕುಣಿಯತೊಡಗುತ್ತವೆ. ನೆನಪಿನ ದೋಣಿಯಲ್ಲಿ ತೇಲುತ್ತಾ, ಕಾಲಾತೀತ ಭಾವಪ್ರಪಂಚಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ. ಆದರೆ ಯಾವುದೇ ದಿನಪತ್ರಿಕೆಯ ಮುಖಪುಟದ ಸುದ್ದಿ, ಅಂತೆಯೇ ಟಿವಿ ಚ್ಯಾನೆಲ್-ಗಳ ಆರ್ಭಟ ಓದಿದೊಡನೆ/ನೋಡಿದೊಡನೆ ಕನಸಿನ ಈ ಸುಂದರ ಲೋಕ ನುಚ್ಚುನೂರಾಗಿ ಹೋಗುತ್ತದೆ. ದುರಂತಗಳ ಸರಮಾಲೆ –- ರಾಜಕೀಯ ದೊಂಬರಾಟ, ರೇಪ್, ಕೊಲೆ, ಸುಲಿಗೆ, ವಂಚನೆ, ಭಯೋತ್ಪಾದನೆ, ಅಪಘಾತ, ಈಗಂತೂ ಕೊರೊನಾ ಕೊರೊನಾ ಸಹಸ್ರನಾಮ ಕಣ್ಣಿಗೆ ಹೊಡೆಯುವಂತೆ ರಾರಾಜಿಸುತ್ತಿರುತ್ತದೆ. ಕೇವಲ ಯೋಚಿಸಿದರೂ ಭಯ, ಜಿಗುಪ್ಸೆ ಹುಟ್ಟಿಸುವ ಮಾನವನ ಅತೀ ಆಸೆ, ತೀರದ ದಾಹ -– ಹಣ, ಅಧಿಕಾರ, ಭೋಗಲಾಲಸೆಗಳೇ ನಮ್ಮನ್ನು ಈ ದುಃಸ್ಥಿತಿಗೆ ದೂಡಿವೆ. ಇದಕ್ಕೆ ಕಾರಣ, ಪರಿಹಾರ ಏನೆಂದು ಯೋಚಿಸಬೇಡವೇ? ಜೀವ ಪ್ರಪಂಚದಲ್ಲಿ ಮನುಷ್ಯ ಮಾತ್ರ ಕನಸು ಕಾಣಬಲ್ಲ, ನಗಬಲ್ಲ ಅದ್ಭುತ ಸಾಮರ್ಥ್ಯ ಪಡೆದಿದ್ದಾನೆ. ಇತರ ಯಾವ ಪ್ರಾಣಿಯೂ – ಪ್ರಾಣ ಇರುವುದೆಲ್ಲವೂ ‘ಪ್ರಾಣಿ’ಯೇ – ನಗುವುದೂ ಇಲ್ಲ, ಕನಸು ಕಾಣುವುದೂ ಇಲ್ಲ. ಹುಲಿ, ಸಿಂಹಗಳಂತಹ ಕೂರ ಪ್ರಾಣಿಗಳೂ ಕೂಡಾ ಭಾವನೆಗಳಿಗೆ, ನಾವು ತೋರುವ ಪ್ರೀತಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ. ಇದಕ್ಕೆ ಏಕೈಕ ಅಪವಾದವೆಂದರೆ ಮನುಷ್ಯ ಪ್ರಾಣಿ ಮಾತ್ರ! ಪ್ರೀತಿಗೆ ದ್ರೋಹ; ನಂಬಿಕೆ, ವಿಶ್ವಾಸಕ್ಕೆ ಪ್ರತಿಯಾಗಿ ಮೋಸ, ದಗಲ್ಬಾಜಿ ಎಲ್ಲವನ್ನೂ – ತನ್ನವರನ್ನೂ ಸೇರಿಸಿ – ಭಾವನಾರಹಿತವಾಗಿ, ಅಷ್ಟೇ ಚಾಣಾಕ್ಷತನದಿಂದ ಮನುಷ್ಯ ಮಾಡಬಲ್ಲ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಏನು ಎಂದರೆ ಯಾವಾಗ ಮನುಷ್ಯ ಕನಸು ಕಾಣುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೋ ಆವಾಗಲೆಲ್ಲಾ ಭಾವನೆಗಳಿಗೆ ಎರವಾಗುತ್ತಾನೆ. ಎಲ್ಲಿಲ್ಲದ ದುರಂಹಕಾರ ಆತನ ರಾಕ್ಷಸೀ ಪ್ರವೃತ್ತಿಯನ್ನು ಬಡಿದೆಬ್ಬಿಸಿ, ವಿನಾಶದಂಚಿಗೆ ಆತನನ್ನು ತಳ್ಳುತ್ತದೆ. ಸುನಾಮಿ, ಭೂಕಂಪಗಳಂತಹ ಪ್ರಕೃತಿ ವಿಕೋಪಗಳು, ಹಾಗೆಯೇ ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೊನಾ ವೈರಸ್-ನಂತಹ ಮಹಾವ್ಯಾಧಿಜನಕ ಹೆಮ್ಮಾರಿಗಳು ಉಂಟುಮಾಡುವ ವಿನಾಶಕ್ಕಿಂತಲೂ ಹೆಚ್ಚು ದುರಂತವನ್ನು ಕೆಟ್ಟ ಮನಸ್ಸಿನ ಕೇವಲ ಒಬ್ಬನೇ ಒಬ್ಬ ಮನುಷ್ಯ ಮಾಡಬಲ್ಲ! ಇದರಿಂದ ಬಿಡುಗಡೆ ಬೇಕಾದರೆ, ಮನುಷ್ಯ ಮತ್ತೆ ತನ್ನ ಬಾಲ್ಯದ ಮುಗ್ಧ, ಸ್ನಿಗ್ಧ ಭಾವಪ್ರಪಂಚಕ್ಕೆ ಹಿಂತಿರುಗಬೇಕು. ಸಹಜ ಮುಗ್ಧತೆ, ನಗು, ನಲಿವು, ಸಂಭ್ರಮಗಳ ಆ ದಿನಗಳನ್ನು ಪುನಃ ಜೀವಂತಗೊಳಿಸಬೇಕು. ಕನಸು ಕಾಣಬೇಕು. ಇದಕ್ಕೆ ಪೂರಕವಾಗಿ ಸಾಹಿತ್ಯ, ಸಂಗೀತ, ನಾಟಕ ಇತ್ಯಾದಿ ಭಾವ ಪ್ರಧಾನ ಮಾಧ್ಯಮಗಳಲ್ಲಿ ಅಭಿರುಚಿ ಬೆಳೆಸಿಕೊಂಡು ಮನಸ್ಸನ್ನು ಉದಾತ್ತ ಭಾವಗಳತ್ತ ಹರಿಯಬಿಡಬೇಕು. ಕನಸು ಕಾಣುವ, ಶಿಶುವಿನೋಪಾದಿಯಲ್ಲಿ ನಿರ್ಮಲವಾಗಿ ನಗುವ ಸಹಜ ಪ್ರವೃತ್ತಿಗೆ ಮತ್ತೆ ಮರಳಬೇಕು. ಪ್ರಸಿದ್ಧ ಆಂಗ್ಲ ದಾರ್ಶನಿಕ ಕವಿ ವಿಲಿಯಂ ಬ್ಲೇಕ್-ನ (೧೭೫೭-೧೮೨೭) ‘Auguries of Innocence’ ಎಂಬ ಕವನದಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ: It is right it should be so Man was made for Joy & Woe And when this we rightly know Thro the World we safely go ಕಷ್ಟ, ಸುಖಗಳನ್ನು ಅನುಭವಿಸಲೆಂದೇ ದೇವರು ಮನುಷ್ಯನನ್ನು ಸೃಷ್ಟಿಸಿ ಈ ಪ್ರಪಂಚಕ್ಕೆ ತಂದ. ಇದರಲ್ಲಿ ಮನುಷ್ಯನಿಗೆ ಆಯ್ಕೆಯ ಅವಕಾಶವೇ ಇಲ್ಲ. ಎರಡನ್ನೂ ಅನುಭವಿಸಬೇಕು. ಹಾಗಿದ್ದಾಗ ಅದನ್ನು ಸಮಚಿತ್ತದಿಂದ ಸ್ವೀಕರಿಸುವುದೊಂದೇ ದಾರಿ. ಮಗುವಿಗೂ, ಅನುಭಾವಿಗೂ ಇರುವ ಸಾಮ್ಯತೆ ಎಂದರೆ ಈ ಸಮಚಿತ್ತತೆ; ಅನುಭಾವಿ ನಕ್ಕು ಸುಮ್ಮನಾಗುತ್ತಾನೆ, ಮಗು ಅತ್ತು, ನಗುತ್ತದೆ. ಮರುಕ್ಷಣ ನಕ್ಕದ್ದೇಕೆ, ಅತ್ತದ್ದೇಕೆ ಎಂಬುದನ್ನು ಮರೆತುಬಿಡುತ್ತದೆ. ದೊಡ್ಡವರು ನಾವು ಹೀಗಲ್ಲ. ಎಂದೋ ಆಗಿ ಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ನಿತ್ಯ ದುಃಖಿಗಳಾಗುತ್ತೇವೆ. ವಿಸ್ಮಯ ಎಂದರೆ ಇದು ‘ಸುಖದ ಕ್ಷಣಗಳಿಗೆ’ ಅನ್ವಯವಾಗುವುದಿಲ್ಲ. ಎಂದೋ ಅನುಭವಿಸಿದ ಸುಖವನ್ನು ಮತ್ತೆ ಮತ್ತೆ ನೆನಪಿಸಿಕೊಂಡರೆ ಆಗುವುದು ದುಃಖವೇ ಹೊರತು ಸಂತೋಷವಲ್ಲ! ಬ್ಲೇಕ್-ನ ಕವನದ ಇನ್ನೊಂದೆರಡು ಸಾಲುಗಳನ್ನು ನೋಡೋಣ: The Childs Toys & the Old Mans Reasons Are the Fruits of the Two seasons ಮಗುವಿನ ಆಟಿಕೆಗಳೇ ಅದರ ಪ್ರಪಂಚ ಹಾಗೂ ಸರ್ವಸ್ವ. ಮಲಗಿ ನಿದ್ರಿಸುವಾಗಲೂ ಒಂದು ಗೊಂಬೆಯನ್ನೋ, ಅಥವಾ ಇನ್ಯಾವುದಾರೊಂದು ಆಟದ ವಸ್ತುವನ್ನೋ ಎದೆಗವಚಿಕೊಂಡು ಮಗು ಸುಖ ನಿದ್ರೆಗೆ ಜಾರುವುದನ್ನು ನಾವೆಲ್ಲಾ ಕಂಡವರೇ. ಅಂತೆಯೇ ಜೀವನ ಸಂಧ್ಯಾಕಾಲದಲ್ಲಿರುವ ಒಬ್ಬ ಹಿರಿಯ ತನ್ನ ಅನುಭವದಿಂದ ಮಾಗಿ, ಹಣ್ಣಾಗಿ, ಪಕ್ವವಾಗಿರುತ್ತಾನೆ. ಈಗ ಆ ಹಿರಿಯನ ನಿಜವಾದ ಗಳಿಕೆ, ಆಸ್ತಿ ಎಂದರೆ ಈ ಅನುಭವದ ಮೂಟೆಗಳೇ. ಅವು ಸುಖಾಸುಮ್ಮನೆ ಬಂದವುಗಳಲ್ಲ. ಪ್ರತಿಯೊಂದು ಅನುಭವದ ಹಿಂದೆಯೂ ಒಂದೊಂದು ಕಾದಂಬರಿಗಾಗುವಷ್ಟು ಸರಕು ಇದ್ದಿರಬೇಕು. ಅವನ ಮುಖದ ಸುಕ್ಕುಗಳೇ ಅದಕ್ಕೆ ಸಾಕ್ಷಿ. ಹಲ್ಲಿಲ್ಲದ ಬೊಚ್ಚು ಬಾಯಲ್ಲಿ ಅವನು ನಗುವಾಗ ಅದೆಷ್ಟೋ ಅನುಭವಗಳು ಸದ್ದಿಲ್ಲದೇ ತೂರಿಹೋಗುತ್ತಾವೋ ಏನೋ! ವಾರ್ಧಕ್ಯ ಎಂದರೆ ಮತ್ತೆ ಶಿಶುತನಕ್ಕೆ ಜಾರುವುದು: ಹಣ್ಣೆಲೆಯನ್ನು ನೋಡಿ ಚಿಗುರೆಲೆ ಹಾಸ್ಯ ಮಾಡುವುದೂ ಉಂಟು. ಸಂದಿಗ್ಧ ಕಾಲದಲ್ಲಿ ಕಿರಿಯನಾದವನು ಹಿರಿಯನೊಡನೆ ಪರಾಮರ್ಶೆ ಮಾಡುವುದೂ ಉಂಟು. ತೀರಾ ಚಿಕ್ಕವನಾದರೆ ಕಥೆ ಹೇಳು ಎಂದು ಗೋಗರೆಯುವುದೂ ಉಂಟು. ಹೀಗೆ ಮಗುವಿಗೂ ಮುದಿಯನಿಗೂ ಬಿಡಿಸಲಾರದ ನಂಟು ಉಂಟೇ ಉಂಟು. ಮಗುವಿಗೆ ಆಟವಾಡಲು ಓರಗೆಯ ಸಮವಯಸ್ಕ ಮಕ್ಕಳಿಲ್ಲದಿದ್ದರೆ ಒಳ್ಳೆಯ ಜತೆ ಅಂದರೆ ಆಜ್ಜ, ಅಜ್ಜಿಯೇ ಅಲ್ಲವೇ? ಏಕೆಂದರೆ ಇಬ್ಬರಿಗೂ ಸಮಯದ ಒತ್ತಡ, ಧಾವಂತ ಇಲ್ಲ. ಎಲ್ಲವನ್ನೂ ನಿಧಾನವಾಗಿ ಮಾಡಿದರಾಯಿತು, ಸಲ್ಪ ಹೆಚ್ಚು ಕಡಿಮೆಯಾದರೂ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವ ವಾಸ್ತವ ಹಿರಿಯನಿಗೆ ಅನುಭವದಿಂದ ದಕ್ಕಿದರೆ, ಮಗುವಿಗೆ ಅದು ಸಹಜ ಪ್ರಾಪ್ತಿ. ಅದಕ್ಕಾಗಿಯೇ ಮರಳಿ ಬಾಲ್ಯಕ್ಕೆ ಹೋಗೋಣ. ಬದುಕಿನ ನಿತ್ಯದ ಜಂಜಾಟದಲ್ಲಿ ನಾವು ಕಳೆದುಕೊಂಡ ಆ ಶಿಶು-ಸಹಜ-ವರ್ತನೆಯನ್ನು ಮತ್ತೆ ಆವಾಹಿಸಿಕೊಳ್ಳೋಣ. ಇದು ಕೇವಲ ಹಗಲುಕನಸು, ಸಾಧಿಸಾಲಾಗದ ಗೊಡ್ಡು ಆದರ್ಶ, ಕೈಲಾಗದವ ಮೈ ಪರಚಿಕೊಂಡಂತೆ ಎಂದೆಲ್ಲಾ ಅಂದುಕೊಂಡು ಒಳಗೊಳಗೇ ನೀವೂ ನಗುತ್ತಿಲ್ಲ ತಾನೇ? ಸರಿ ಹಾಗಾದರೆ, ಈ ನೆವದಿಂದಲಾದರೂ ನಿಮ್ಮ ಮುಖದಲ್ಲಿ ಒಂದಿಷ್ಟು ಮುಗುಳ್ನಗೆ ಬಂತಲ್ಲ, ಅಷ್ಟೇ ಸಾಕು ನನಗೆ. ಈಗ ನೋಡಿ, ನಕ್ಕು ಹಗುರಾಗುವುದೊಂದೇ ಇದಕ್ಕಿರುವ ಪರಿಹಾರ ಎಂದು ನೀವೂ ನಂಬುತ್ತೀರಲ್ಲ? ಹಾಗಾದರೆ ಒಮ್ಮೆ ಜೋರಾಗಿ ನಕ್ಕುಬಿಡಿ. ************************************

ಶಿಶುತನದ ಹದನದೊಳು ಬದುಕಲೆಳಸಿ… Read Post »

ಇತರೆ

ನಾನು,ನನ್ನ ಅನುವಾದವೂ

ಅನುಭವ ನಾನು,ನನ್ನ ಅನುವಾದವೂ ಸಮತಾ ಆರ್. ಒಂದು ದಿನ ಸಂಜೆ ಹೀಗೇ ಸುಮ್ಮನೆ ಕುಳಿತಿರುವಾಗ ಗೆಳತಿ ಸ್ಮಿತಾಳ ಫೋನ್ ಕರೆ ಬಂತು,”ನೋಡೆ,ನನ್ನದೊಂದು ಕವನ ಇಂಗ್ಲಿಷ್ ಗೆ ಅನುವಾದ ಮಾಡಿಸಿದ್ದೇನೆ,ಓದಿ ಹೇಗಿದೆ ಹೇಳು”ಎಂದು ಹೇಳಿ ಹಿಂದೆಯೇ ವಾಟ್ಸಾಪ್ ನಲ್ಲಿ ಕನ್ನಡ ಇಂಗ್ಲಿಷ್ ಎರಡೂ ಪದ್ಯ ಕಳುಹಿಸಿದಳು.ಓದಿದಾಗ ಕನ್ನಡ ಪದ್ಯ ಇಂಗ್ಲಿಷ್  ಅನುವಾದದಲ್ಲಿ ಓದಲು ಚಂದವೆನಿಸಿ  ,ಅವಳಿಗೆ ಕರೆ ಮಾಡಿ ಹೇಳಿದೆ,ಅವಳು ಕೇಳಿ ,ತಮಾಶೆಗೆ,”ಹಾಗಾದರೆ ನನ್ನದೊಂದು ಪದ್ಯ ಕಳಿಸುವೆ, ನೀನೂ ಅನುವಾದಿಸಿ ಖುಷಿ ಪಡು”ಅಂತ ಹೇಳುವುದೇ!! ನಾನೂ ಏನೋ ಒಂದು ಲಹರಿಯಲ್ಲಿ “ಹುಂ” ಎಂದೇನೋ ಹೇಳಿಬಿಟ್ಟೆ ,ಆದರೆ ಅವಳ ಪದ್ಯ ಬಂದು ಕುಳಿತ ಮೇಲೆಯೇ ನಿಜವಾದ ತಲೆನೋವು ಶುರುವಾಗಿದ್ದು.  ಮೊದಲನೆಯದಾಗಿ ನಾನು ಬರಹಕ್ಕೆ ತೊಡಗಿಸಿಕೊಂಡಿದ್ದು ಕೂಡ ಆಕಸ್ಮಿಕವಾಗಿ,ಎಲ್ಲೋ ಒಂದಷ್ಟು ಲಹರಿ,ಲಲಿತ ಪ್ರಬಂಧಗಳ ಮಾತ್ರ ಬರೆದಿರುವುದು.ಓದಿದ್ದು ರಸಾಯನಶಾಸ್ತ್ರ,ಮಾಡುತ್ತಿರುವುದು ಗಣಿತ ಶಿಕ್ಷಕಿಯ ಕೆಲಸ,ಸಾಹಿತ್ಯವನ್ನು ಒಂದು ಹವ್ಯಾಸ ವೆಂಬಂತೆ ಸುಮ್ಮನೆ ನನ್ನ ಪಾಡಿಗೆ ನಾನು ಒಂದಷ್ಟು ಕನ್ನಡ ಕಥೆ,ಕಾದಂಬರಿ ಗಳ ಓದಿಕೊಂಡಿದ್ದೆ.ಕವಿತೆಗಳ ಓದು ಸ್ವಲ್ಪ ದೂರವೇ,ಏಕೆಂದರೆ ಓದಿದರೆ ಅರ್ಥವಾಗದ ಕಷ್ಟ.ಇದರ ಜೊತೆಗೆ ಇಂಗ್ಲಿಷ್ ಭಾಷೆಯ ಜೊತೆ ನಂಟು ಬೆಳದಿದ್ದು ಕೂಡ ಒಂದು ಆಕಸ್ಮಿಕವೇ.ನಾನು ವೃತ್ತಿ ಪ್ರಾರಂಭಿಸಿದ ಮೊದಲ ವರ್ಷಗಳಲ್ಲಿ ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕರ ಕೊರತೆ ಯಿಂದಾಗಿ ,”ಹೇಗೂ ವಿಜ್ಞಾನ ದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ತನಕ ಇಂಗ್ಲಿಷ್ ನಲ್ಲೆ ಕಲಿತಿರುವುದಲ್ಲವೆ ?ನೀವೇ ಇಂಗ್ಲಿಷ್ ಪಾಠ ಮಾಡಿ “ಎಂದ  ಮುಖ್ಯ ಶಿಕ್ಷಕರ ಕೋರಿಕೆಯನ್ನು ಮನ್ನಿಸಿ   ಪ್ರಾರಂಭಿಸಿದ  ಇಂಗ್ಲಿಷ್  ಶಿಕ್ಷಕಿ ಕೆಲಸ ಸುಮಾರು ಹತ್ತು ವರ್ಷಗಳವರೆಗೆ ಎಳೆದುಕೊಂಡು ಹೋಯಿತು. ಈ ಅವಧಿಯಲ್ಲಿ ಮಕ್ಕಳಿಗೆ ಕಲಿಸುವುದರ ಜೊತೆಗೆ ನಾನೂ ಸಾಕಷ್ಟು ಕಲಿತೆ ಎಂದರೆ ತಪ್ಪಾಗಲಾರದು.ಅದರಲ್ಲೂ ಇಂಗ್ಲಿಷ್.ಪದ್ಯಗಳು, ರೈಮ್ಸ್ ಗಳ ಮಕ್ಕಳಿಗೆ ಕಲಿಸುತ್ತಾ ಕಲಿಸುತ್ತಾ ನಾನೇ ಹೆಚ್ಚು ಖುಷಿ ಪಟ್ಟಿದ್ದೇನೆ. ಈ ಹಿನ್ನೆಲೆಯಲ್ಲಿ ಸ್ಮಿತಾ ಕೊಟ್ಟ ಪದ್ಯದ ಅನುವಾದ ಮಾಡಲು ಕುಳಿತಾಗ ಮೊದಲು ಎದುರಾದ ಪ್ರಶ್ನೆ ಸೂಕ್ತ ಪದಗಳನ್ನು ಹುಡುಕುವುದು.ಈಗ ಯಾವುದೇ ಒಂದು ಭಾಷೆಯ ಒಂದು ಪದ ತೆಗೆದುಕೊಂಡರೆ ಅದು ಬರಿ ಒಂದು ಸರಳ ನೇರ ಅರ್ಥವನ್ನೇನು ಹೊಂದಿರುವುದಿಲ್ಲ.ಅದರ ಬಳಕೆಗೆ ಅನುಗುಣವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥ ಕೊಡುತ್ತಾ ಹೋಗುತ್ತದೆ.ಅಲ್ಲದೆ ಭಾಷೆ ಅನ್ನೋದು ಕೇವಲ ಒಂದು ಸಂಪರ್ಕ ಮಾದ್ಯಮ ಮಾತ್ರ ಅಲ್ಲ.ಒಂದು ಭಾಷೆ ಎಂದರೆ ನನಗನ್ನಿಸುವಂತೆ ಅದನ್ನಾಡುವ ಜನರ ಕಲೆ,ಸಂಸ್ಕೃತಿ, ಪರಂಪಾನುಗತವಾಗಿ ಬಂದಿರುವ ನಂಬಿಕೆ,ಆಚರಣೆಗಳು ಎಲ್ಲವೂ ಸೇರಿ ಆಗಿರುವ ಒಂದು ಜೀವಂತ ಪ್ರಕ್ರಿಯೆ ಭಾಷೆ.ಕೆಲವೊಂದು ರೂಡಿ ಆಚರಣೆಗಳು ಒಂದು ಪ್ರದೇಶ,ದೇಶ,ಇಲ್ಲವೇ ಒಂದು ನಿರ್ದಿಷ್ಟ ಜನಾಂಗಕ್ಕೆ ಸೀಮಿತವಾಗಿದ್ದು ಅವುಗಳ  ಸೂಚಿಸುವ ಪದಗಳು ,ಬೇರೊಂದು ಭಾಷೆಯನ್ನಾಡುವ,ಬೇರೆಯೇ ಪ್ರದೇಶಕ್ಕೆ ಸೇರಿರುವ, ಆ ನಿರ್ದಿಷ್ಟ ಆಚರಣೆ, ರೂಡಿಗಳು ಇರದೇ ಇರುವ ಜನರ ಭಾಷೆಯಲ್ಲಿ ಅವುಗಳ ಸೂಚಿಸುವ ಯಾವುದೇ ಪದಗಳು ಇಲ್ಲದಿರಬಹುದು. ಮೂಲಕ್ಕೆ ತೀರ ಹತ್ತಿರದ ಪದ ಬಳಸಿದರೂ ಅಪರಿಚಿತ ವೆನಿಸಬಹುದು.ಹಾಗಾಗಿ ಪದದ ಜೊತೆಗೆ ಅದಕ್ಕೆ ಸಂಬಂಧಿಸಿದ ಎಲ್ಲವನ್ನೂ ಇನ್ನೊಂದು ಭಾಷೆಯಲ್ಲಿ ಹೇಳುವುದು ಕಷ್ಟವೇ.ಉದಾಹರಣೆಗೆ ಹೇಳುವುದಾದರೆ ಸ್ಮಿತಾಳ ಒಂದು ಕವಿತೆಯಲ್ಲಿ ಕೊಡ ಅನ್ನುವ ಪದಕ್ಕೆ ಸಂವಾದಿಯಾದ ಇಂಗ್ಲಿಷ್ ಪದ ಹುಡುಕುವುದು ಬಹಳ ಕಷ್ಟವೇ ಆಯಿತು.ಬಾವಿಯಿಂದ ನೀರು ಸೇದಲು ಕೊಡ ಬಳಸುವ ಬದಲು ವಿದೇಶಗಳಲ್ಲಿ pail ಅನ್ನುವ ಬಕೆಟ್ ಆಕಾರದ ಪಾತ್ರೆ ಬಳಸುತ್ತಾರೆ.ಜ್ಯಾಕ್ ಅಂಡ್ ಜಿಲ್ ಪದ್ಯದಲ್ಲಿ ಬರುತ್ತೇ ನೋಡಿ.ಹಾಗೆ ಯಾವ ಶಬ್ದಕೋಶವನ್ನು  ಹುಡುಕಿದರೂ ಯಾವ ಪದವೂ ಸಮಾಧಾನ ತರದೆ ಕೊನೆಗೆ ಹತ್ತಿರ ಎನಿಸುವ pitcher ಬಳಸಿದ್ದಾಯಿತು. ಹಾಗೆಯೇ ಇನ್ನೂ ಕೆಲವು ಆಚರಣೆ ಗಳ ಗಮನಿಸಿದಾಗ,ಅಯ್ಯಪ್ಪನ ವ್ರತ  ನಮ್ಮ ದೇಶದ ಒಂದು ವಿಶಿಷ್ಟ ಆಚರಣೆ.ಶೋಭಾ ಹಿರೆಕೈ ಅವರ ಪದ್ಯದ ಅನುವಾದ ಏನೋ ಮಾಡಿದೆ,ಆದರೆ.ಅದು ಭಾರತೀಯ ರಲ್ಲದವರು ಓದಿದರೆ ಅವರಿಗೆ, ಆ ವ್ರತ ಮಾಡುವ ಕ್ರಮ,ಅದರ ಹಿನ್ನೆಲೆ,ಹಿಂದಿರುವ ವಿವಾದ ಇವುಗಳೆಲ್ಲ ಗೊತ್ತಿರದಿದ್ದರೆ ,ಕವನ ಅವರನ್ನು ಹೇಗೆ ತಲುಪೀತು?.    ಹಾಗೆಯೇ ಸುನೀತ ರವರ ಒಂದು ಪದ್ಯದಲ್ಲಿ ಬರುವ ಪಂಚಾಯತ್ ಪದ ಕೂಡ ಕಾಡಿಸಿತು.ಬೇರೆ ಬೇರೆ ದೇಶಗಳ ಆಡಳಿತ ವ್ಯವಸ್ಥೆ ಬೇರೆ ಬೇರೆ ಹಾಗಾಗಿ ಎಲ್ಲ ಕಡೆ ಹೊಂದುವಂಥ ಪದಕ್ಕಾಗಿ ತಡಕಾಡಿ, ಕೊನೆಗೆ council ಪದ ಬಳಸಿದರೂ ನನಗೆ ಅಷ್ಟು ಸಮಾಧಾನವಿಲ್ಲ. ಇನ್ನು “ಜಲರಾಶಿ”ಪದ ಬಂದಾಗ.ನನ್ನ ವಿಜ್ಞಾನ ಓದಿದ ತಲೆ “ಛೆ,ಕೇವಲ ಘನ ವಸ್ತುಗಳನ್ನ ಮಾತ್ರ ರಾಶಿ ಮಾಡಲು ಸಾಧ್ಯ,ದ್ರವಗಳನ್ನು ರಾಶಿ ಮಾಡಲಾದೀತೇ”ಎಂದು ಗುಮಾನಿ ಎಬ್ಬಿಸಿ,”ಪದ ಪದ ಅನುವಾದ ಬೇಡ ಬಿಡು “ಎಂದುಕೊಂಡು ಅದನ್ನು aquatic treasure ಮಾಡಿದ್ದಾಯಿತು. ಹಾಗೆ ಇನ್ನೊಂದೆರಡು ಕವನಗಳ ಅನುವಾದಿಸುವಾಗಾ ಇಂಗ್ಲಿಷ್ ಗ್ರಾಮರ್ ಸರಿಯಿದೆಯ?ಅನ್ನುವ ಸಣ್ಣ ಗುಮಾನಿ ಬೇರೆ ಕಾಡಿ ನನ್ನ ಕೆಲವು ಇಂಗ್ಲಿಷ್ ಶಿಕ್ಷಕ ಸ್ನೇಹಿತರನ್ನು ಕೇಳಿದಾಗ ಓರ್ವ ಸ್ನೇಹಿತೆ “ಗ್ರಾಮರ್ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಳ್ಳಬೇಡಿ,ಪದ್ಯದ ಲಯ ತಪ್ಪದ ಹಾಗೆ,ಕೇವಲ ಪದದಿಂದ ಪದ ಅನುವಾದ ಮಾಡುವ ಬದಲು ಇಡಿಯಾಗಿ ಭಾವವನ್ನು ಹಿಡಿಯುವ ಪ್ರಯತ್ನ ಮಾಡಿ”ಎಂದು ಸಲಹೆ ಕೊಟ್ಟರು. ಅದರಂತೆ ಅನುವಾದಿಸಲು ಇರುವ ಕವನವನ್ನು ಮತ್ತೆ ಮತ್ತೆ ಓದಿಕೊಂಡು,ಅನುಮಾನ ಬಂದ ಕಡೆ ಮೂಲ ಕವಿಯ ಬಳಿಯೇ ಮಾತನಾಡಿ, ಮೊದಲಿಗೆ ಮೂಲ ಪದ್ಯ ಏನನ್ನ ಹೇಳಲು ಹೊರಟಿದೆ ಅನ್ನುವುದರ ಕಡೆಗೆ ಗಮನ ನೀಡಲು ಪ್ರಯತ್ನಿಸಿದೆ.ಅದರ ಬಳಿಕವೇ ನನ್ನ ಲಹರಿ ಉಕ್ಕಿದ ಹಾಗೆ ಅನುವಾದಿಸಿದೆ. ಬಳಿಕ ಅನುವಾದವನ್ನು ಮತ್ತೆ ಮತ್ತೆ ಓದಿಕೊಂಡು,ಮೂಲದ ಜೊತೆಗೆ ಹೋಲಿಸಿಕೊಂಡು ಸಾಧ್ಯವಾದಷ್ಟು ತಿದ್ದಿ ತೀಡಿ ನಂತರ ಮೂಲ ಕವಿಗೆ ತೋರಿಸಿ ಅವರು ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವೇ ಸಮಾಧಾನ. ಕವಿತೆ ಯೊಂದನ್ನು ಅನುವಾದಿಸಲು ಕುಳಿತಾಗ ,ಗಣಿತ ಶಿಕ್ಷಕಿಯಾದ ನನಗೆ ಸಮೀಕರಣ ವೊಂದನ್ನು ಬಿಡಿಸಿದ ಹಾಗೆಯೇ ಅನ್ನಿಸುತ್ತದೆ.ಒಂದು ಸಮಸ್ಯೆ ಯನ್ನ ಅರ್ಥೈಸಿಕೊಂಡು,ಅದಕ್ಕೆ ಸೂಕ್ತ ನಿಯಮಗಳು,ಸ್ವಯಂ ಸಿದ್ಧಗಳ  ಬಳಸಿ , ಹಂತ ಹಂತವಾಗಿ ಬಿಡಿಸಿದಾಗ ಸಿಗುವ ಸಂತೋಷವೇ,ನನಗೆ ಕವಿತೆಯೊಂದನ್ನು ಅನುವಾದಿಸಿ ದಾಗ ಕೂಡ ಸಿಕ್ಕಂತಾಗುತ್ತದೆ. ಅನುವಾದಿಸಿದ ಬಳಿಕ  ಸಂಗಾತಿಯಲ್ಲಿ ಪ್ರಕಟಗೊಂಡು ಓದಿದವರಲ್ಲಿ ಕೆಲವರು ನನ್ನನ್ನು ಸಂಪರ್ಕಿಸಿ,”ಅನುವಾದ ಚೆನ್ನಾಗಿ ಮಾಡಿದ್ದೀರಿ,ಮುಂದುವರೆಸಿ “ಎಂದು ಪ್ರೋತ್ಸಾಹಿಸಿದಾಗ ತುಂಬಾ ಖುಷಿಯಾಯಿತು. ನಾನೆಂದೂ ಕವಿತೆ ಬರೆದವಳಲ್ಲಾ ಆದರೆ ಕವಿತೆ ಗಳ ಅನುವಾದ ಮಾಡಲು ಶುರು ಮಾಡಿದ ಬಳಿಕ ಕಾವ್ಯಕ್ಕಿರುವ ಅದ್ಭುತ ಶಕ್ತಿ ಯ ಅರಿವು ಸ್ವಲ್ಪ ಸ್ವಲ್ಪವೇ ಆಗುತ್ತಿದೆ.ಅನುವಾದದಿಂದಾಗಿ ಇನ್ನೊಬ್ಬರ ಭಾವ ಪ್ರಪಂಚದ ಒಂದು ತುಣುಕನ್ನಾದರೂ ನನ್ನದಾಗಿಸಿಕೊಳ್ಳುವ ಸಂಭ್ರಮ.ಇದೊಂದು ರೀತಿ ಕನ್ನಡದ ಪದ್ಯದಿಂದ ಬಸಿರಾಗಿ ಇಂಗ್ಲಿಷ್ ಮಗುವೊಂದನ್ನು ಹೆರುವಂತಹ ಬಾಡಿಗೆ ತಾಯಿಯ ಕೆಲಸದಂತಾಗಿ ಬಿಟ್ಟಿದೆ ನನಗೆ. *******************************

ನಾನು,ನನ್ನ ಅನುವಾದವೂ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಎ.ಕೆ.ರಾಮಾನುಜನ್ ಅವರ ಆಯ್ದ ಪ್ರಬಂಧಗಳು ಎ.ಕೆ.ರಾಮಾನುಜನ್ ಅವರ ಆಯ್ದ ಪ್ರಬಂಧಗಳು                ಅನುವಾದ : ಓ.ಎಲ್. ನಾಗಭೂಷಣÀ ಸ್ವಾಮಿ ಅನುವಾದ : ಓ.ಎಲ್. ನಾಗಭೂಷಣÀ ಸ್ವಾಮಿ ಪ್ರ: ಮನೋಹರ ಗ್ರಂಥಮಾಲಾ ಪ್ರ.ವರ್ಷ :೨೦೧೨ ಬೆಲೆ : ರೂ.೨೦೦.೦೦ ಪುಟಗಳು: ೩೫೦ ಕನ್ನಡದವರೇ ಆಗಿದ್ದರೂ ಇಂಗ್ಲಿಷ್‌ನಲ್ಲೇ ತಮ್ಮ ಪ್ರಮುಖ ಸಾಹಿತ್ಯ ಕೃತಿಗಳನ್ನು ರಚಿಸಿದ ಎ.ಕೆ.ರಾಮಾನುಜನ್ ಅವರು ಸಾಹಿತ್ಯ, ಭಾಷೆ, ಸಂಸ್ಕೃತಿ ಚಿಂತನೆ, ತೌಲನಿಕ ಅಧ್ಯಯನ ಮೊದಲಾದ ಹಲವಾರು ಮಹತ್ವದ ವಿಚಾರಗಳ ಕುರಿತಾಗಿ ಬರೆದ ಪ್ರಬಂಧಗಳನ್ನು  ಓ.ಎಲ್. ನಾಗಭೂಷಣ ಸ್ವಾಮಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.  ಭಾರತೀಯ ಚಿಂತನಾಕ್ರಮ,  ಮುನ್ನೂರು ರಾಮಾಯಣ : ಐದು ನಿದರ್ಶನಗಳು,  ಭಾಷಾಂತರದ ಕುರಿತು ಮೂರು ಚಿಂತನೆಗಳು, ಮಹಾಭಾರತದಲ್ಲಿ ಪುನರುಕ್ತಿ ಎಂಬ ಪ್ರಬಂಧಗಳು ಭಾರತೀಯ ಸಾಹಿತ್ಯಗಳ ಬಹುಮುಖತೆಯನ್ನುಹಾಗೂ ಬಹುಪಠ್ಯಗಳ ಲಭ್ಯತೆಯನ್ನುತಿಳಿಸುತ್ತವೆ. ‘ಅಲ್ಲಮ ಕವಿತೆ ಯಾಕೆ ಒಗಟಲ್ಲ’ ಎಂಬ ಪ್ರಬಂಧವು  ಅಲ್ಲಮನ ಅನುಭಾವಿ ಕವಿತೆಗಳ ಕುರಿತು ಚರ್ಚಿಸುತ್ತದೆ.     ಮಹಾದೇವಿಯಕ್ಕ, ಬಂಗಾಳಿ ಭಕ್ತಿ ಕವಿ ಗೋವಿಂದ ದಾಸ, ಇಂಗ್ಲಿಷಿನ ಜಾನ್ ಡನ್ ಕವಿಯ ಹೋಲಿ ಸಾನೆಟ್ಸ್ ಸರಣಿಯ ೧೪ನೆಯ ಕವಿತೆ, ಮತ್ತು ಜಾರ್ಜ್ ಹರ್ಬರ್ಟ್ ಕವಿಯ ‘ಲವ್’ಎಂಬ ನಾಲ್ಕು ಕವಿತೆಗಳ ಮೂಲಕ ‘ಭಕ್ತಿ ವೈವಿಧ್ಯ’ಎಂಬ ಪ್ರಬಂಧದಲ್ಲಿ ಭಕ್ತಿಕಾವ್ಯದ ಕುರಿತಾದ ಚರ್ಚೆ ಮಾಡುತ್ತಾರೆ. ‘ಹೂಬಿಡುವ ಮರ’ ಎಂಬ  ಒಂದು ಕಥೆಯ ಮೂಲಕ ಹೆಣ್ಣು ಕೇಂದ್ರಿತ ಕಥೆಗಳ ಕೆಲವು ಲಕ್ಷಣಗಳನ್ನು ಚರ್ಚಿಸುತ್ತಾರೆ.  ಭಾರತೀಯ ಮಹಾಕಾವ್ಯಗಳ ಕಥೆಗಳಿಗಿಂತ ಭಿನ್ನವಾದ ಸಂಸ್ಕೃತಿಯು ಕಲ್ಪಿಸಿರುವ  ಪರ್ಯಾಯ ಸಾಧ್ಯತೆಗಳನ್ನು ಒಳಗೊಂಡಿರುವ  ಹೆಂಗಸರ ಕಥೆಗಳನ್ನು ತಮ್ಮ ಕ್ಷೇತ್ರಕಾರ್ಯದ ಟಿಪ್ಪಣಿಗಳಿಂದ ಆಯ್ದು ಹೇಳುತ್ತಾರೆ. ತಮ್ಮ ಬಾಲ್ಯದಲ್ಲಿ ಅಡುಗೆ ಮನೆಯಲ್ಲಿ   ಅಜ್ಜಿ, ಅತ್ತೆ, ಅಡುಗೆಯವರ ಬಾಯಿಂದ ಕೇಳಿದ ಕಥೆಗಳನ್ನೂ ಅವರ ದನಿಗಳನ್ನೂ ಕುರಿತು ‘ಕತೆ ಹೇಳುವುದು’ ಅನ್ನುವ ಪ್ರಬಂಧದಲ್ಲಿ ನಿರೂಪಿಸುತ್ತಾರೆ. ‘ಕನ್ನಡ ಜಾನಪದದ ಎರಡು ವಲಯಗಳು’ಎಂಬ ಪ್ರಬಂಧದಲ್ಲಿ ಕನ್ನಡ ಜಾನಪದದ ಪ್ರಕಾರ ಮತ್ತು ವ್ಯವಸ್ಥೆ, ಖಾಸಗಿ ಮತ್ತು ಸಾರ್ವಜನಿಕ ಕತೆಗಳು, ಕಥೆಗಾರರು, ಅಜ್ಜಿಕತೆ ಮತ್ತು ಪುರಾಣ, ಜಾನಪದ ಪುರಾಣ ಮತ್ತು ಪ್ರಾಚೀನ ಪುರಾಣಗಳು, ಗ್ರಾಮದೇವತೆ, ಎರಡು ಬಗೆಯ ಭಾರತೀಯ ದೇವತೆಗಳು, ಆಚರಣೆ ಮತ್ತು ರಂಗಭೂಮಿಗಳ ಕುರಿತಾದ ವಿಸ್ತಾರವಾದ ವಿವರಣೆಗಳಿವೆ. ‘ಸ್ಪೀಕಿಂಗ್ ಆಫ್ ಶಿವ’ ಅನ್ನುವ ಕೊನೆಯ ಪ್ರಬಂಧದಲ್ಲಿ ವೀರಶೈವ ಧಾರ್ಮಿಕ ಚಳುವಳಿಯ ರೂವಾರಿ ಬಸವಣ್ಣನ ‘ಉಳ್ಳವರು ಶಿವಾಲಯವ ಮಾಡುವರು’ ಎಂಬ ವಚನವನ್ನೆತ್ತಿಕೊಂಡು ಪ್ರತಿರೋಧ ಚಳುವಳಿಯ ಆಶಯ ಹಾಗೂ ವೈರುಧ್ಯಗಳ ಕುರಿತಾದ ಚರ್ಚೆಯಿದೆ. ರಾಮಾನುಜನ್ ಅವರ ಸುದೃಢ ಸಹಜ ಮತ್ತು ಸುಲಲಿತವಾದ  ಇಂಗ್ಲಿಷ್ ಬರವಣಿಗೆಯಿಂದ ಅಷ್ಟೇ ಸಶಕ್ತವಾಗಿ ಅನುವಾದವೂ ಬಂದಿದೆ.    ರಾಮಾನುಜನ್ ಅವರ ಚಿಂತನೆಗಳು  ಇಂದಿನ ಕನ್ನಡದ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾದವುಗಳು. ಸಾಹಿತ್ಯ-ಸಂಸ್ಕೃತಿಯ ವಿದ್ಯಾರ್ಥಿಗಳು ಓದಲೇ ಬೇಕಾದವುಗಳು.  ಹೊಸ ತಲೆಮಾರಿನ ಕನ್ನಡದ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಿದ ಈ ಕೃತಿ ಬಹಳ ಉಪಯುಕ್ತ. ,   *************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಕಾವ್ಯಯಾನ

ಅಗ್ನಿಕುಂಡ

ಕವಿತೆ ಅಗ್ನಿಕುಂಡ ಲಕ್ಷ್ಮೀ ಪಾಟೀಲ್ ಅವರುನಡೆದಸ್ವರ್ಗದದಾರಿಯಲ್ಲಿಅವಳೂಹೆಜ್ಜೆಹಾಕಿಹೊರಟಿದ್ದಾಳೆಅವರುಸ್ವರ್ಗದಿಂದದಾರಿಮಾಡಿಕೊಂಡೇಹುಟ್ಟಿದವರುನಡಿಗೆಸಲೀಸುಅವಳಿಗೊಏರಿಗೆಜೋಲಿತಪ್ಪುತ್ತಿದೆಬದುಕನ್ನೆಲ್ಲಕಣ್ಣಿಟ್ಟುನಡೆದವಳಿಗೀಗಮಂಜುಕವಿದಂತೆಕಣ್ಣಿಗೆಕತ್ತಲೆಆವರಿಸಿದಂತೆನಡಿಗೆನಿಂತುಪಾದಗಳುಕುಸಿದಿವೆಬದುಕಿನಲ್ಲೇನರಕದನೋವುಉಂಡವಳುಸ್ವರ್ಗದಏರಿಗೆಬೆಚ್ಚಿಬಿದ್ದಿದ್ದಾಳೆಇಲ್ಲೇತೆರೆಯಬಾರದೇಒಂದುಕುಂಡಎಂಬಂತೆಕಣ್ಣುಗಳುನಿಸ್ತೇಜಗೊಂಡಿವೆಇವರೆಲ್ಲಸ್ವರ್ಗದಛ್ಹುಮಂತ್ರಗಾಳಿಯಿಂದಬಂದವರುಅದಕ್ಕೇಗಾಳಿಯೊಂದಿಗೆಹೊರಟಿದ್ದಾರೆಹಿಂದೆನೋಡದೆಹುಟ್ಟಿನಮೂಲಸೇರಲುಬೀದಿಗರುಗಳಂತೆಇದ್ದಸ್ವರ್ಗಕ್ಕೋಅಥವಾಇವರೇಕಟ್ಟಿಕೊಳ್ಳುವಇನ್ನೊಂದುಸ್ವರ್ಗಕ್ಕೋ ! ನನಗೂಇಲ್ಲಿನನ್ನಅಗ್ನಿಕುಂಡದಮೋಹಸ್ವರ್ಗನರಕಪಾಪಪುಣ್ಯಗಳಸ್ವತ್ತನ್ನೆಲ್ಲಯಜ್ಞಾಹುತಿಗೊಳಿಸಲುಅಗ್ನಿಕುಂಡಕಾಯುತ್ತಯಾರದೋದೇಹಬೆನ್ನಟ್ಟದಂತೆಕೆಂಡದೊಂದಿಗೆಕೆಂಡವಾಗಲುನನ್ನಾತ್ಮಿಣಿಯೂಸಿದ್ಧಳಾಗಿನಿಂತಿದ್ದಾಳೆಇವರಸ್ವರ್ಗದಲ್ಲಿಮತ್ತೆಭೂಮಿಗೆಬೀಳುವಭಯಮೂಲಪುರುಷಸ್ವರ್ಗದಲ್ಲಿಯೂಸುಖದಿಂದಿರಲಿಲ್ಲಐವರುಗಂಡಂದಿರಆದರದಲ್ಲಿಅಲ್ಲಿಯೂಸೋತರೆಛೆ ! ಪ್ರಮಾದಅಕ್ಷಮ್ಯಅಪರಾಧಶಂತನುಗಂಗೆಯಂತೆವಂಶಕ್ಕೆಮುನ್ನುಡಿಬರೆದುಮತ್ತೊಂದುಮಹಾಭಾರತಕ್ಕೆಕಿಡಿಹೊತ್ತಿಸಬೇಕುಶಾಪಗ್ರಸ್ಥಳಾಗಿಅವತರಿಸಿಗೆದ್ದಗಂಡಸರನೆರಳಾಗಿಮೀಸೆಹೊತ್ತಮುಖಗಳೆಲ್ಲಸೀರೆಯಲ್ಲಿಕವುಚಿಮುಗುಚಿಹೂವಿನಪಕಳೆಮೇಲೆಹಸಿಕಾಮದಗಾಯಬರೆಮೂಡಿಸಿವನವಾಸಯುದ್ಧಕರುಳುಗಳಿಗೆಕತ್ತರಿ.ಭೂಮಿಗೆಬಿದ್ದಸಂಕಟಕ್ಕೆಸಹಿಸುವುದು ಇವರೇಏರಲಿಸುರಲೋಕಸೋಪಾನಇಲ್ಲೊಂದುಭೂದೇವಿಯಅಗ್ನಿಕುಂಡಎದ್ದುಬಿಡಲಿಎಂದಿಗೂಬೇಡಅಪ್ಪನಸೇಡಿನಅಗ್ನಿಕುಂಡ ಓ ! ಮುಂದೆಕಾಯಿದಿರಿಸಿದಸ್ಥಳಕ್ಕೆಗಂಡಂದಿರಭರದನಡೆಸ್ವರ್ಗದಕೌತುಕಹೊತ್ತುಭೂಮೋಹದಾಚೆಭೂಭಾರದಾಚೆಗುರುತ್ವಾಕರ್ಷಣೆಕಳಚುತ್ತಿದೆಕೂಗುಕೆಳದುಆಸೆಹಿಂಗದುಎಲ್ಲೋಸ್ವರ್ಗಸ್ಥಆಕೇಶವಯುಗಪ್ರವೇಶಕ್ಕೆಯುಗಯುಗದತಯಾರಿದೀರ್ಘವಿರಾಮಯುಗಭಾರಕ್ಕೆಭೂದೇವಿ ! ನಿನ್ನಲ್ಲೇನನ್ನಸ್ವರ್ಗತೆರೆದುಬಿಡುಮತ್ತೊಂದುಅಗ್ನಿಕುಂಡಬೆತ್ತಲಾಗಿಬಿದ್ದುಒಪ್ಪಗೊಳ್ಳಲುಮನಭಾರದಸಂಕಟಗಳುಕಿಡಿಕಿಡಿಗಳಸೋಂಕಲುಹೇಗೆಮರೆತೀತುಸೀರೆಅಯ್ಯೋಸೀರೆಯಭಾರತಡೆಯಲಾಗುತ್ತಿಲ್ಲ **********************************************

ಅಗ್ನಿಕುಂಡ Read Post »

ಕಾವ್ಯಯಾನ

ಗಝಲ್

ಗಝಲ್ ರತ್ನರಾಯ ಮಲ್ಲ ಅಂದವನ್ನು ಮುಚ್ಚಿಡಲು ಬಟ್ಟೆಗಳನ್ನು ತರುತಿರುವೆಚಂದವನ್ನು ಹೆಚ್ಚಿಸಲು ಸೀರೆಯನ್ನು ಉಡಿಸುತಿರುವೆ ಅವಯವಗಳ ಇಳಿಜಾರಿನಲ್ಲಿ ಬೆರಳುಗಳು ಸೋಲುತಿವೆಸೌಂದರ್ಯದ ಕೆನೆಯಲ್ಲಿ ಪ್ರೀತಿಯಿಂದ ಅಲೆಯುತಿರುವೆ ಹೇಮವನ್ನು ನಾಚುವ ಕಿವಿಯೋಲೆಗಳನ್ನು ತಂದಿರುವೆಒರಟು ಅಧರಗಳಿಂದ ಕರ್ಣಗಳನ್ನು ಸಿಂಗರಿಸುತಿರುವೆ ಹೃದಯದ ಉದ್ಯಾನದಲ್ಲಿ ಹೂವೊಂದು ಅರಳಿ ನಿಂತಿದೆಹಿಂಬದಿಯಿಂದ ಆಲಂಗಿಸಿ ಲತೆಯನ್ನು ಮುಡಿಸುತಿರುವೆ ತೆಳುವಾದ ಮೈಯ ಕಂಡು ಅರಿವೆಗೂ ತುಸು ಮತ್ಸರ ಮಲ್ಲಿಶೂನ್ಯ ಅಂಗದ ಸೊಬಗಿನಲಿ ನಾನು ಕಳೆದು ಹೋಗುತಿರುವೆ ************************

ಗಝಲ್ Read Post »

ಪುಸ್ತಕ ಸಂಗಾತಿ

ಜಂಜಿ ಡಪಾತಿ ಬೋ ಪಸಂದಾಗೈತಿ!

ಪುಸ್ತಕಪರಿಚಯ ಜಂಜಿ ಡಪಾತಿ ಬೋ ಪಸಂದಾಗೈತಿ! ಚುಕ್ಕಿ ಬೆಳಕಿನ ಜಾಡುಕಾದಂಬರಿಕರ್ಕಿ ಕೃಷ್ಣಮೂರ್ತಿಛಂದ ಪುಸ್ತಕ. ಇದು ಕಥೆಗಾರ ಕರ್ಕಿ ಕೃಷ್ಣಮೂರ್ತಿ ಅವರ ಮೊದಲ ಕಾದಂಬರಿ. ‘ಮಳೆ ಮಾರುವ ಹುಡುಗ’ ‘ಗಾಳಿಗೆ ಮೆತ್ತಿದ ಬಣ್ಣ’ ಅವರ ಪ್ರಕಟಿತ ಕಥಾಸಂಕಲನಗಳು. ಅರಿಕೆಯಲ್ಲಿ ಕೃಷ್ಣಮೂರ್ತಿ ಅವರು ಹೇಳಿಕೊಂಡಂತೆ ‘ ಜಂಜಿ ಡಂಪಾತಿ’ ಎಂಬ ಅಪ್ರಕಟಿತ ಕಥೆಯೊಂದನ್ನು ಓದಿ ಅವರ ಗೆಳೆಯರು ಕಾದಂಬರಿ ಮಾಡಬಹುದು ಎಂದು ಹೊಳಹು ನೀಡಿದ್ದೇ ಈ ಕೃತಿಯ ಹುಟ್ಟಿಗೆ ಕಾರಣ. ಮಲಯೂ ಭಾಷೆಯ ಶಬ್ದ ಈ ಜಂಜಿ ಡಪಾತಿ. ಅಂದರೆ “ಭರವಸೆ ಪೂರೈಸಿದ್ದೇನೆ” ಎಂದರ್ಥ. ವಲಸೆಯ ಕಥನಗಳ ಪ್ರಕಾರಕ್ಕೆ ಸೇರುವ ಕಾದಂಬರಿಯಿದು. ಇತ್ತೀಚೆಗೆ ವಸುಧೇಂದ್ರ, ಡಾ.ಗುರುಪ್ರಸಾದ್ ಕಾಗಿನೆಲೆ, ಎಂ. ಆರ್. ದತ್ತಾತ್ರಿ ಸೇರಿದಂತೆ ಹಲವರು ಈ ವಿಭಾಗದಲ್ಲಿ ಕೃತಿಗಳನ್ನು ಬರೆದಿದ್ದಾರೆ. ಆದರೆ ಮಲೇಷ್ಯಾದ ಕುರಿತು ಕನ್ನಡದಲ್ಲಿ ಬಂದ ಮೊದಲ ಕಾದಂಬರಿಯಿದು. ಸಹಸ್ರಾರು ಕಿಮೀ ಕ್ರಮಿಸುವ ವಲಸೆ ಹಕ್ಕಿಗಳ ಮಾರ್ಗ ನಿರ್ಣಯವು, ನಕ್ಷತ್ರಗಳ ಜಾಡೂ ಸೇರಿದಂತೆ ಹಲವು ಸಂವೇದನೆಗಳನ್ನು ಆಧರಿಸಿದೆ. ಇದಕ್ಕೆ ಸೂಕ್ತವಾಗಿ ದೇಶ ಕುಲಕರ್ಣಿ ಅವರ ಕವನದ ಸಾಲು ‘ ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು..’ಇದರ ಕೊನೆಯ ಭಾಗ ಈ ಕಾದಂಬರಿಗೆ ಶೀರ್ಷಿಕೆಯಾಗಿದೆ. ನೋಡಿ, ದೇಶ ಕುಲಕರ್ಣಿ ಅವರ ಈ ಕವಿತೆಯು ಕಾದಂಬರಿಯ ಅಪರಿಮಿತ ಸಾಧ್ಯತೆಗಳನ್ನು ಸೂಚ್ಯವಾಗಿ ಹೇಳುತ್ತದೆ. “ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡುಇನ್ನಿಲ್ಲವಾಯಿತೆ ಆ ಹಕ್ಕಿ ಹಾಡುಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆಮುರಿದು ಹೋಯಿತೇ ಈಗ ಆ ಪುಟ್ಟ ಗೂಡು” ಅವಕಾಶ ಸಿಕ್ಕರೆ ಹೊರದೇಶಕ್ಕೆ ಹಾರುವ ಆಸೆಯ ನಿರಂಜನ, ಬೇರಿನ ಹುಡುಕಾಟದಲ್ಲಿ ಇರುವ ಶಣ್ಮುಗರತ್ಮಮ್, ತನ್ನ ಮೂಲದ ಕುರಿತು ಅಭಿಮಾನ ಹೊಂದಿರುವ ದುರೈ; ಹೀಗೆ ಇಲ್ಲಿ ಎಲ್ಲರೂ ಚುಕ್ಕಿ ಬೆಳಕಿನ ಜಾಡಿನಲ್ಲಿದ್ದಾರೆ. ಕುತೂಹಲದ ಕಂದೀಲು ಹಿಡಿದು ಸದ್ಯದ ಸನ್ನಿವೇಶಗಳು ಬದುಕಿನ ಅಸಂಗತತೆಯನ್ನು ಇನ್ನೂ ದಟ್ಟವಾಗಿಸುತ್ತಿರುವ ವಾಸ್ತವದ ಶೋಧವಾಗಿಯೂ ಈ ಕೃತಿ ಕಾಣಿಸುತ್ತದೆ. ಈ ಕಾದಂಬರಿಯ ಮುಖ್ಯ ಪಾತ್ರವಾದ ನಿರಂಜನನನ್ನು ಅತ್ಯುತ್ತಮವಾಗಿ ಕರ್ಕಿಯವರು ಕಡೆದಿದ್ದಾರೆ. ಇವನನ್ನು ಪ್ರತಿನಾಯಕ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಆದರೆ ಇಲ್ಲಿ ನಾಯಕನೂ ಇವನೇ! ಇದು ವರ್ತಮಾನದ ಕಟು ಸತ್ಯ ಸಹ ಹೌದು. ಆಫೀಸಿನ ಕೆಲಸದ ಪ್ರಯುಕ್ತ ನಿರಂಜನ ವಿದೇಶಕ್ಕೆ ಹೋದರೆ ಸ್ಟಾರ್ ಹೋಟೆಲಿನಲ್ಲುಳಿದುಕೊಂಡು ಬರುವಾಗ ಅಲ್ಲಿನ ಸೋಪು, ಬ್ರಶ್ಶು, ಬಾಚಣಿಕೆಯನ್ನು ತುಂಬಿಕೊಂಡು ಬರುವ ಮನಸ್ಥಿತಿಯವ. ಪುಕ್ಕಟೆ ಆಸ್ಪತ್ರೆ, ಬಾಡಿಗೆ ಕಾರಿನ ಬಿಲ್ಲನ್ನು ಹೆಚ್ಚು ತೋರಿಸಿ ಕ್ಲೈಮ್ ಮಾಡುವ ಭಾರತದ ಬಹುಸಂಖ್ಯಾತ ಮನಸ್ಥಿತಿಯವನು. ಅದರಲ್ಲಿ ಅವನಿಗೆ ಯಾವುದೇ ಎಗ್ಗುಸಿಗ್ಗಿಲ್ಲ. ಇವಕ್ಕೆಲ್ಲ ಅವನದೇ ಆದ ಸಮರ್ಥನೆಗಳಿವೆ. ಇವು ನಮ್ಮೊಳಗೂ ಇವೆ ಎಂದು ಅನ್ನಿಸದೇ ಇರದು. ಈತ ಹೆಜ್ಜೆ ಹೆಜ್ಜೆಗೂ ಹೇವರಿಕೆಯನ್ನು ಹುಟ್ಟಿಸುತ್ತಾನೆ. ಅತ್ಯಂತ ಸೂಕ್ಷ್ಮವಾದ ಕೃತಿಕಾರ ಮಾತ್ರ ಇಂತಹದೊಂದು ಪಾತ್ರವನ್ನು ಕಡೆತನಕ ಅದೇ ಲಯದಲ್ಲಿ ನಿರ್ವಹಿಸಬಲ್ಲರು. ಮಲೇಷ್ಯಾದ ಕೌಲಾಲಂಪುರದ ಆಸುಪಾಸಿನಲ್ಲಿ ಒಂದು ವಾರದ ಕಾಲ ನಡೆಯುವ ಕಥನವೇ ಈ ಚುಕ್ಕಿ ಬೆಳಕಿನ ಜಾಡು. ತನ್ನ ಕಛೇರಿಯ ಕಾರ್ಯದ ನಿಮಿತ್ತ ಇಲ್ಲಿಗೆ ಆಗಮಿಸುವ ನಿರಂಜನನಿಗೆ ಇಲ್ಲೆ ಒಂದು ನೌಕರಿ ಕಂಡುಕೊಳ್ಳುವ ಆಸೆಯಿರುತ್ತದೆ. ಹಾಗಾಗಿ ಉಳಿದೆರಡು ದಿನಗಳನ್ನು ಕಣ್ಣದಾಸನ್ ಅವರ ಸೋವಿಯ ಹೋಂ ಸ್ಟೇನಲ್ಲಿ ಕಳೆಯುತ್ತಾನೆ. ಆಗಲೇ ಆತ ಪಾಸ್ಪೋರ್ಟ್ ಕಳೆದುಕೊಳ್ಳುವುದು ಮತ್ತು ಕಥೆ ರೋಚಕವಾಗುವುದು.ಮನುಷ್ಯನನ್ನು ಏನೆಲ್ಲ ಘಟನೆ ಮತ್ತು ವಸ್ತುಗಳು ಕಾಡುತ್ತವೆ ಎನ್ನುವುದಕ್ಕೆ ನಿರಂಜನನ ಡಾಂಬರು ಗುಳಿಗೆ ( ನಾಫ್ತಾಲಿನ್ ಮಾತ್ರೆ), ಕಣ್ಣದಾಸನ್ ಜೀವನ,ಶಣ್ಮುಗರತ್ನಮ್ ನ ವಂಶಜರ ಮೂಲದ ಹುಡುಕಾಟ, ದುರೈಯ ನೈಸರ್ಗಿಕ ಕರ್ಪೂರದ ಹುಚ್ಚು ಇಲ್ಲಿ ಸೊಗಸಾದ ಉದಾಹರಣೆಗಳಾಗಿವೆ. ಭೂಮಿಯ ಅಡಿಯ ಸ್ಕ್ಯಾನಿಂಗ್ ಮಾಡುವ ಕೆಲಸ ಮತ್ತು ಅದರ ಯಂತ್ರಗಳನ್ನು ಪೂರೈಕೆ ಮಾಡುವುದು ನಿರಂಜನನ ಕಂಪೆನಿಯ ಕೆಲಸ. ಈಗ ಎಲೆಕ್ಟ್ರಿಕ್ ಕೇಬಲ್, ಗ್ಯಾಸ್ ಲೈನ್, ಓಎಫ್ಸಿ.. ಎನ್ನುತ್ತಾ ಭೂಮಿಯ ಅಡಿಗೆ ಟ್ರಾಫಿಕ್ ಜಾಮಾಗಿದೆ. ಅದನ್ನು ಕಂಡು ಹಿಡಿದು, ಸಮಸ್ಯೆ ನಿವಾರಿಸುವುದು ಅವನ ಕೆಲಸ. ಇದರ ಹಿನ್ನೆಲೆಯಲ್ಲಿ ಒಬ್ಬ ಇವನಿಂದ ನಿಧಿ ಹುಡುಕುವ ಕೆಲಸಕ್ಕೆ ಇವನಿಗೆ ಆಮಿಷ ತೋರಿ ಅಲ್ಲಿ ನಡೆಯುವ ಘಟನೆ ಮಜವಾಗಿದೆ. ಕ್ಯಾಸೆಟ್ ಶ್ರೀಪತಿ, ಜೋಮೋ, ಸಂಗೊಂಗ್ ತಾಸಿ, ಮುರಳೀಧರ, ರೇವತಿ ಪಾತ್ರಗಳು ಕಾದಂಬರಿಯ ಸಣ್ಣ ಸಣ್ಣ ಪ್ರಸಂಗಗಳಲ್ಲಿ ಬಂದು ಹೋದರೂ ಬಹಳ ಹೊತ್ತು ನೆನಪಿನಲ್ಲಿ ಉಳಿಯುತ್ತವೆ. ಸಣ್ಣ ಬುದ್ಧಿಯ, ವಿಪರೀತ ಲೆಕ್ಕಾಚಾರದ ನಿರಂಜನನ ಹೆಜ್ಜೆಯ ಜಾಡನ್ನು ಊಹಿಸುವ ಕೆಟ್ಟ ಕುತೂಹಲವನ್ನು ಓದುಗನಲ್ಲಿ ಸೃಷ್ಟಿಸುವುದರ ಸವಾಲಿನಲ್ಲಿ ಕರ್ಕಿ ಕೃಷ್ಣಮೂರ್ತಿಯವರು ಗೆದ್ದು, ಕಾದಂಬರಿಯ ಕ್ಯಾನ್ವಾಸಿಗೆ ಹಿಗ್ಗಿರುವ ಕೌಶಲ್ಯವು ಸ್ಪಷ್ಟವಾಗಿ ಗೋಚರಿಸುತ್ತದೆ. ಆ ಮೂಲಕ ಕಾದಂಬರಿಯ ಗೆಲುವೂ ಆಗಿದೆ. ಮಲೇಷ್ಯಾದ ಇಂಡಿಯನ್ಸ್ ಅದರಲ್ಲೂ ತಮಿಳರ ಬದುಕು ಮತ್ತು ಸಂಕಟಗಳು, ಭೂಮಿಪುತ್ರರೆಂದು ಕರೆದುಕೊಳ್ಳುವ ಮಲಯೂ ಜನಾಂಗ,ಅಲ್ಲಿನ ಚೀನಿಯರು, ಅಲ್ಲಿಯೂ ತಿಕ್ಕಾಟ ಮಾಡಿಕೊಳ್ಳುವ ಶ್ರೀಲಂಕಾದ ಸಿಂಹಳೀಯರು ಮತ್ತು ತಮಿಳರು, ‘ಒರಾಂಗ್ ಅಸ್ಲಿ’ ಎಂಬ ಬುಡಕಟ್ಟು ಜನಾಂಗ ಹೀಗೆ ಮಲೇಷ್ಯಾದ ಪ್ರಾದೇಶಿಕ ಚಿತ್ರಣ ಈ ಕೃತಿಯಲ್ಲಿ ಚೆನ್ನಾಗಿ ಮೂಡಿಬಂದಿದೆ. ಕೇವಲ ಎರಡು ನೂರು ರೂಪಾಯಿಗಳಲ್ಲಿ ಮಲೇಷ್ಯಾ ದೇಶದ ಪ್ರವಾಸ ಮತ್ತು ನವಿರಾದ ಕಾದಂಬರಿಯ ಓದು ನಮ್ಮದಾಗಲಿದೆ.******************************************************* ಡಾ. ಅಜಿತ್ ಹರೀಶಿ

ಜಂಜಿ ಡಪಾತಿ ಬೋ ಪಸಂದಾಗೈತಿ! Read Post »

ಕಾವ್ಯಯಾನ

ನಿಲ್ಲದಿರು ದೂರ

ಕವಿತೆ ನಿಲ್ಲದಿರು ದೂರ ಜಯಶ್ರೀ.ಭ.ಭಂಡಾರಿ ಉಸಿರ ಉಸಿರಲಿ ನಿನ್ನದೆ ಹೆಸರುನೆನಪ ಮೆರವಣಿಗೆಯದು ಹಸಿರುಅರಿತು ಬೆರೆತ ನವನೀತದ ಮೊಸರುಕನಸಕಂಗಳಲಿ ತುಂಬಿದೆ ಉಸಿರು ದೂರದಲಿ ನೀನಿದ್ದರೂ ಇಲ್ಲ ಅಂತರ..ಹುಚ್ಚು ಪ್ರೀತಿಯದು ತೀರದ ದಾಹಕಡಲ ಅಲೆಗಳಾಗಿವೆ ಆಸೆಗಳುಬಂದು ಬಿಡು ತಾಳಲಾರೆ ಈ ವಿರಹ ನೋವ ನಿನ್ನ ಸನಿಹ ಬೇಕೆನಗೆ ನಿರಂತರಬಯಕೆಗಳ ರಂಗೋಲಿಗೆ ರಂಗಾಗುಬಾ ಗೆಳೆಯನೆ ಸಹಿಸಲಾರೆ ಅಂತರಜೊನ್ನಮಳೆ ಜೇನಹೊಳೆ ನೀನಾಗು ಕತ್ತಲೆಯ ಸರಿಸು ಹರಸು ಬಾಬೆಳಕಾಗಿ ಹೃದಯ ಮೀಟು ಬಾಪ್ರೀತಿಯ ಮಹಲಿನ ಅರಸನೆ ಬಾಅಂತರ ಸಾಕು ನಿರಂತರವಾಗಿ ಬಾ ಮುದ್ದುಮಾತಿನ ಮೋಹಗಾರನೆಗೆಜ್ಜೆಸದ್ದಿಗೆ ಮರುಳ ಮಾಯಗಾರನೆಮನದ ರಿಂಗಣಕೆ ಮೆಲ್ದನಿಯಾದವನೆಎದೆಯ ತಲ್ಲಣ ಅರಿತವನೆಶಮನಮಾಡು ಬಾ ನಿರಂತರ ಈ ಹೂ ಸದಾ ನಿನ್ನ ಪೂಜೆಗೆ ಒಲುಮೆಸಿರಿಯೆಅಂತರ ಸಾಕಿನ್ನುಬಾಳದಾರಿಯಲಿ ಅನವರತ ಬೇಕಿನ್ನುನಿಲ್ಲದಿರು ಸಖನೆ ದೂರದೂರ. ****************************

ನಿಲ್ಲದಿರು ದೂರ Read Post »

ಕಾವ್ಯಯಾನ

ಸಂತೆಯಲಿ

ಕವಿತೆ ಸಂತೆಯಲಿ ವಿ.ಎಸ್.ಶಾನಬಾಗ್ ಸಂತೆಯಲಿಕೆಲವರು ಕೊಳ್ಳಲು ಬರುತ್ತಾರೆಕೆಲವರು ನೋಡಲು ಕೊಳ್ಳುತ್ತಾರೆಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲಅಂಗಾಂಗಗಳ ಮಾತು ಖುಲ್ಲ ಮಹಿಳೆಯರು ಹಳೆಯಮಾತಿನಹೊಸ ಚರ್ಯೆ ಚರ್ಚೆ ಸ್ವಪಾಕಸುಕ್ಕುಗಳ ಅಡಗಿಸಿ ಮನೆಯಲಿ ಸ್ವಪಾತ್ರಗಂಡನ ಚಮತ್ಕಾರ ನೂಡಲ್‌ ನಂತಹಪರಿಹಾರಗರತಿಯರನ್ನು ತರಗತಿಗೆ ಕಳುಹಿಸಿಪಿಸುಮಾತಿನಲ್ಲಿ ದ್ವಿಪಾತ್ರಹೌಹಾರಿಸಿದ ಚಿತ್ರ ಪುರುಷರು ಸಂತೆಯಲ್ಲಿಹೆಂಡತಿ,ಬಡ್ತಿ,ಲೋನುಅನುಕಂಪಕ್ಕೆ ಕಾಯುವಶೋಷಿತರು ಪೆಗ್ ನಲ್ಲಿಮೀಟೂ ಕಥಾಸರಣಿ ಯುವಕರುಸಂಜೆ ಸಂತೆಯಲಿ ಸಂದವರು, ಪ್ರೀತಿಯಲಿ ದುಶ್ಯಂತರುಮಾತು ಬೇಡದ ಬರೀ ಸೂಚನೆವಿವರಣೆ, ಹಕ್ಕಿಯಂತೆ ಹಾರಿ ಮಾತು ಮತ್ತೇನೋ ಆದ ಬವಣೆಕೇಳದ ಕಿವಿಗೆ ಹೇಳದ ಬಾಯಿ ನೋಡದ ಕಣ್ಣುಮಾರುವವರ ಎದೆಯಿಂದ ಕೊಳ್ಳುವವರ ಕಣ್ಣ ಹೊರಗೆಯಾರದೋ ಹೊಂಡಕ್ಕೆ ಯಾರದೋ ಮಣ್ಣುಕೀ (ಎಲ್ಲಿದೆ ಹುಡುಕಿ)ಇಲ್ಲದೆ ಮರೆತ ಬಾವುಟಹಾರುತ ಪಟಪಟ ಕವಿಗಳುಸಂತೆಯಲಿ ಸಿಗುವುದು ಕವಿತೆಗೆ ಬದಲಾದ ರೂಪ,ಅನುಭವ ಕಾಡದು ಬರೆ ಅಳಲಿನ ಸ್ವಗತ ರೂಪ?ಅವೇ ಕವಿತೆಗಳು ಪುರವಣಿಗೆಗಳಲಿ ತದ್ರೂಪಮಾತಿನಲ್ಲಿ ವಿಮರ್ಶೆ ಯಾಕೋ ಮೌನ ಕವಿಗೆಕವಿಗೋಷ್ಟಿಯಲಿ ಕವಿಗಳು ಮಂಚದಲಿಸಂತೆಯಲಿ ಓದಿದ ಕವಿತೆಗಳುಹಾರಿಹೋದವುಗಂಗೆಯ ಎಂಟನೇ ಮಗುವಿನಂತೆವಾಟ್ಸಾಪ್ ಕವಿಗಳ ಗುಂಪನ್ನು ಅರಸಿ ಸಂತೆ ಅಮೂರ್ತ ನಿಂತಂತೆಸಂಜಯನ ಕಣ್ಣಂತೆ ************************

ಸಂತೆಯಲಿ Read Post »

You cannot copy content of this page

Scroll to Top