Day: September 9, 2020

ಏಕಾಗ್ರತೆಯ ಬೆನ್ನೇರಿ ಗೆಲುವಿನ ನಗೆ ಬೀರಿ ಅಯ್ಯೋ! ನನ್ನ ಎಲ್ಲ ಕೆಲಸಗಳು ಅರ್ಧಂಬರ್ಧ. ಯಾವುದೂ ಪೂರ್ಣ ಮಾಡೋಕೆ ಆಗುತ್ತಿಲ್ಲ ಏಕಾಗ್ರತೆ ಇಲ್ಲದೇ ನನಗೆ ಅಡಚಣೆ ಆಗ್ತಿದೆ.ಇದನ್ನು ಸಾಧಿಸೋದು ಹೇಗೆ ತಿಳಿಯುತ್ತಿಲ್ಲ? ಎನ್ನುವುದು ಇತ್ತೀಚಿನ ಅನೇಕ ವಿದ್ಯಾರ್ಥಿಗಳ ಮತ್ತು ದಾವಂತದ ಬದುಕಿನಲ್ಲಿ ಕಾಲು ಹಾಕುತ್ತಿರುವ ಬಹುತೇಕ ಜನರ ದೊಡ್ಡ ದೂರು. ಏಕಾಗ್ರತೆಯಿಲ್ಲದೇ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ಎಲ್ಲದರಲ್ಲೂ ವೈಫಲ್ಯತೆಯ ನೋವು ಕಾಡುತ್ತದೆ. ಒತ್ತಡದ ಕೂಪದಲ್ಲಿ ಬಿದ್ದವರೆಲ್ಲ ಸುಲಭವಾಗಿ ಏಕಾಗ್ರತೆಯನ್ನು ಕಳೆದುಕೊಂಡು ನರಳುತ್ತಾರೆ. ಯಾವುದೇ ಒಂದು ನಿರ್ದಿüಷ್ಟ […]

ಹೇ ರಾಮ್

ಕವಿತೆ ಹೇ ರಾಮ್ ನೂತನ ದೋಶೆಟ್ಟಿ ಸುತ್ತ ಕ್ಲಿಕ್ಕಿಸುವ ಕ್ಯಾಮರಾ ಕಣ್ಣುಗಳುಚಿತ್ರಪಟದಲ್ಲಿ ಸೆರೆಯಾದದ್ದೇನೋ ಹೌದು ಇದು ಯಾರ ಸಮಾಧಿ?ಪ್ರಶ್ನೆಗೆ ಅಪ್ಪನ ಮೆದು ಉತ್ತರಪೋಸು ಕೊಡುವವರ ಪಕ್ಕದಲ್ಲಿಹಿಡಿಯಾದ ನಾನು ಘೋಡ್ಸೆಯನು ಬಣ್ಣಿಸುವವರ ಮಾತುಎದೆ ಹಿಂಡಲಿಲ್ಲಇತಿಹಾಸ ಹೇಳಿತ್ತು ನಿನ್ನೆಗೆ ಮರುಗಬೇಡ ಗುಂಡಿಗೆ ಎದೆಯೊಡ್ಡಿದವಗೆಕಾವಲು ಬಂದೂಕುಗಳುವಿಪರ್ಯಾಸಕ್ಕೂ ಮಿತಿ ಇರಬೇಕು ತತ್ವಗಳೋ ಹೊದಿಕೆ ಹೊದ್ದ ಪುಸ್ತಕಗಳುಬಾಕ್ಸ್ ಆಫೀಸಿನಲ್ಲಿ ಗಾಂಧೀಗಿರಿಯ ಲೂಟಿಖಾದಿಯ ಫ್ಯಾಷನ್ ಮೇಳಸ್ವದೇಶಿ ಬೇಲಿಗೆ ವಿದೇಶಿ ಗೂಟನಾನೊಬ್ಬನೇ ‘ ನಗ್ನ ಫಕೀರ’ **********************************************************

ಮನುಷ್ಯತ್ವ, ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆ’ ಎಂ.ಟಿ.ನಾಯ್ಕ ಶಿಕ್ಷಕ, ಕವಿ  ಎಂ.ಟಿ.ನಾಯ್ಕ ಕುಮಟಾ ತಾಲ್ಲೂಕಿನ ಹೆಗಡೆ. ಹೈಸ್ಕೂಲ್ ಹಂತದಿಂದಲೇ ಬರವಣಿಗೆ ಪ್ರಾರಂಭಿಸಿದವರು. ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ವಾಚನ, ಆಕಾಶವಾಣಿ ಧಾರವಾಡ ಮತ್ತು ಕಾರವಾರ ಕೇಂದ್ರಗಳಲ್ಲಿ ಸುಮಾರು ಐದು ಬಾರಿ ಕಾವ್ಯವಾಚನ ಮಾಡಿದ್ದಾರೆ. ಕ್ರೈಸ್ಟ್ ಕಾಲೇಜು ಬೆಂಗಳೂರು , ಜೆ ಎಸ್. ಎಸ್ ಕಾಲೇಜು ಧಾರವಾಡ ಗಳಲ್ಲಿ ನಡೆದ  ಬೇಂದ್ರೆ ಸ್ಮೃತಿ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿವೆ. ಬೆಂಗಳೂರಿನ  ಸಾಂಸ್ಕೃತಿಕ ಪತ್ರಿಕೆ ` ಸಂಚಯ […]

Back To Top