ಷರತ್ತು

ಕವಿತೆ

ಷರತ್ತು

ಮಾಂತೇಶ ಬಂಜೇನಹಳ್ಳಿ

ಈಗ ಮಳೆ ಬಿಟ್ಟಿದೆ.
ಅವಳ ನೆನಪುಗಳ ಹದವಾಗಿ,
ಎದೆಯ ಬಾಣಲೆಯೊಳಗೆ,
ಕಮ್ಮಗೆ ಹುರಿಯುವ ಸಮಯ..

ಚಿಟಪಟವೆಂದು ಒಂದಷ್ಟು,
ಜೋಳದ ಕಾಳುಗಳಂತೆ
ನೆನಪ ಬಿಸಿಗೆ ಸಿಡಿದಾವು.
ಸಾವಧಾನಕ್ಕಾಗಿ ನೆನೆವ ಉರಿ ತಗ್ಗಿಸುವುದು,
ಹೃದ್ಯೋಧರ್ಮ.. ನಿಗವಿಡುತ್ತೇನೆ.

ಮಳೆಗೂ ಗೊತ್ತು ಧೋ!!ಎಂದು
ಒಂದೇ ಸಮನೆ ಸುರಿದರೆ,
ಒಬ್ಬ ಪ್ರೇಮಿ ಅವಳಿಗಾಗಿ ಪರಿತಪಿಸುವುದಿಲ್ಲವೆಂದೂ,
ನೆನಪಿಸುವುದಕ್ಕೆ ನೆಲ ರಾಚುವ
ಹನಿಗಳ ಕರತಾಡನ ಸುಖಾ ಸುಮ್ಮನೆ ಅಡ್ಡಿಯಾದೀತೆಂದು.

ಗರಕ್ಕನೆ ನಿಂತು ಬಿಟ್ಟರೆ ಅಬ್ಬಬ್ಬಾ!
ಹುಬ್ಬೆ ಮಳೆ ಸುರಿದು ಸಮ ರಾತ್ರಿಗೆ,
ಮಲಗಿದ ಬೆಳಗಿಗೆ ಮೃದು ನೆಲದಲ್ಲಿ,
ಮನೋಸೆಳೆವ ಅಣಬೆಗಳಂತೆ ಉಬ್ಬುವ
ಆಕೆಯ ನೆನಪುಗಳು ದಾಂಗುಡಿಯಾಗುತ್ತವೆ.

ಮುಂದಿನದ್ದು ನಿರತ ಅನುಭವಿಸುವ,
ನಾನು ಮಾತ್ರ ನನ್ನೊಳಗೆ,
ಆಕೆಯ ಸದಾ ನೆನೆವ ಷರತ್ತಿಗೆ
ಒಳಪಡುತ್ತಲೇ ಇರುತ್ತೇನೆ..

***********************

8 thoughts on “ಷರತ್ತು

Leave a Reply

Back To Top