ಶಾಮ

ಕವಿತೆ

ಅರ್ಪಣಾ ಮೂರ್ತಿ

ಮರೆತು ಮರೆತು
ನೆನಪಾಗುವ
ನಿನ್ನ ನೆನಪುಗಳು ನೆನಪಾಗಲೆಂದೆ
ಮರೆವು ಮರೆಸಿ
ನೆನಪಿಸಿದೆ ಈಗ,

ಗೋಕುಲದ
ಸಂಜೆಗಳು
ಹೀಗೆ ನಿನ್ನ
ನೆನಪಿನ ನೆಪದಿಂದ
ಕೆಂಪೇರಿ
ಹಗಲ
ಮರೆಸಿದಾಗೆಲ್ಲ
ನೀನಿಲ್ಲಿ ನನ್ನ
ನೆನಪಿಗಿಳಿದಿರುತ್ತಿ
ನೋಡು,

ಬಿಗಿದ ಗಂಟಲ
ಬಿಕ್ಕು
ನಿನ್ನ ನೆನಪಿಗೆ ನಾನಿಳಿದಿರುವೆನೆಂಬುದ ನೆನಪಿಸಿಬಿಡುವುದು
ಮರೆಯದಂತೆ,

ನೀನೆಂದರೆ ಹೀಗೆ
ನೆನಪಾಗದ
ನೆನಪು
ಮರೆಯಲಾರದ
ಮರೆವು.

*******************************

Leave a Reply

Back To Top