ಲೀನವಾಗುವೆ
ಕವಿತೆ
ಸರಿತಾ ಮಧು
ದಟ್ಟ ಕಾನನದ ನಡುವೆ
ದಿಟ್ಟ ಹೆಜ್ಜೆಯನಿಟ್ಟು ನಡೆವೆ
ಸುತ್ತಲೂ ಜೀಂಗುಡುವ ಸದ್ದು
ಕತ್ತನೆತ್ತಲು ಕಾರ್ಮೋಡಗಳ ಕತ್ತಲು
ಅಡಿಇಡಲು ಕಲ್ಲು ಮುಳ್ಳಿನ ಹಾದಿ
ಅಲ್ಲೇ ನಿಂತರೆ ಕ್ರೂರಮೃಗಗಳ ಭೀತಿ
ಮುಗಿಲೆತ್ತರದ ಮರಗಳಿಗೆ ಒರಗಲೇ ಸ್ವಲ್ಪ
ಮುಗಿದ ಹಾದಿಗೊಮ್ಮೆ ತಿರುಗಲೇ ಸ್ವಲ್ಪ
ಭಯ , ಹಾ ! ಭಯ
ದಣಿವ ಲೆಕ್ಕಿಸದೇ ಓಡಿದೆ ಮತ್ತೆ
ನಾ ಕಳೆದುಕೊಂಡ ನನ್ನ ಸಾಮ್ರಾಜ್ಯಕ್ಕೆ
ಅದು ಮಾತ್ರ ಎಂದಿಗೂ ನನ್ನದೇ
ನಾನಲ್ಲಿ , ನಾನು ನನಗಾಗಿ ಮಾತ್ರ
ಏಕಾಂತತೆಯ ಮೌನದೊಳಗೆ
ಲೀನವಾಗುವುದೆನ್ನ ಮನ..
******************************