ಬರೆಯುವ ನಿತ್ರಾಣದ ತಾಣ
ನೂರುಲ್ಲಾ ತ್ಯಾಮಗೊಂಡ್ಲು
ಬರೆಯುವುದೆಂದರೆ ಬಿಳಿಯಾದ ಪರ್ವತಗಳ ಮೇಲೆ
ಹಾರುವ ಹಕ್ಕಿಗಳ ರುಜುವಲ್ಲ
ಕೊರಳೆತ್ತಿ ಕೂಗುವ ಕೋಗಿಲೆಯ ರೆಕ್ಕೆ ಪುಕ್ಕ
ಗಳೊಳಗಿನ ಹೇನಿನ ಕಡಿತದ ಕುರಿತು ದಾಖಲಿಸುವುದು
ಪಾಡು ಹಾಡಾಗುವ ಮಣ್ಣು ಬೀಜ ಗರ್ಭದ ತಪ್ತತೆ ಆವಾಹಿಸುವುದು
ಹೂವು ಹಣ್ಣು ಪತ್ರ ಮಾಗಿ ಬಾಗಿ ಶಿಶಿರದಲಿ ನಡುಗಿ ಕೊರಗಿ
ಕೊನೆಗೆ ಪತ್ಝಡ್ ನಲಿ ಉದುರುವ
ಅದರ ಕೊನೆಯುಸಿರ ನಾದವನು ಎದೆಗಿಳಿಸುವುದು
ಬರಿ ಬೆಳಗು ಬಣ್ಣಗಳ ಪದಗಳೇ ಬೇಕಿಲ್ಲ
ಸೂರ್ಯ ಚಂದ್ರರ ಕವಿತೆಯ ಬನಿಗೆ
ಕರುಳು ಕತ್ತರಿಸುವ ಕರಾಳ ಇರುಳ ಇಳೆಯಲಿ
ನೆಲ-ನೊಸಲು ಪದಗಳ ನಿಟ್ಟುಸಿರು
ದುಮುಗುಡಬೇಕು ಕಸುಬುದಾರಿಕೆಯಲಿ
ಜನಮನದ ಪ್ರಭುತ್ವದ ಮೋಹ, ದೈವಪರತೆ
ರಂಗಸ್ಥಳದ ಪರದೆ ಹಿಂದಿನ ಗುಲಾಮಿತನವಿದ್ದಂತೆ
ಕಲೆಗೆ ಜೀವಸೆಲೆ ,ಕೃತಜ್ಞತೆ ಇಲ್ಲವೆಂದ ಮೇಲೆ
ಯಾವ ಕಸುಬಿನ ನೆಲೆಯೂ ಕೊಲೆಯ ತಾಣವೇ.
**********
ಧನ್ಯವಾದಗಳು ಮಧು ಸರ್..
ಅತ್ಯಂತ ಮಹತ್ವದ ಸಾಲುಗಳು ಎನ್ಟಿ ಜೀ
ಕವಿತೆ ಧ್ಯಾನಿಸಿ ಬರೆದಂತಿದೆ. ಇದನ್ನು ಓದಿಕೊಂಡರೆ ಹೃದಯಂತರಾಳದಿಂದ ಖಂಡಿತ ಓದಿದವನು ಗಟ್ಟಿ ಕವಿಯಾಗುತ್ತಾನೆ.. ಕವಿ ಮೊದಲು ಕವಿತೆಯ ಕಸುಬುದಾರಿಕೆಯ ಬಗೆಗೆ ಅರಿತುಕೊಳ್ಳಬೇಕು.. ನೀವಿಷ್ಟು ಕವಿತೆಯನ್ನು ತಿಳಿದುಕೊಂಡಿದ್ದೀರಿ ಅಂದರೆ ನೀವೊಬ್ಬ ಉತ್ತಮ ಗಟ್ಟಿ ಕವಿ… ಅಂತ
ಅರ್ಥಪೂರ್ಣ ಸಾಲುಗಳು ನೂರ್
ಬೀಜಿ ತುಂಬ ಧನ್ಯವಾದಗಳು ಪ್ರತಿಕ್ರಿಯೆಗೆ..
ಕವಿತೆ ಅಥವಾ ಬರಹ ನಾನೇಕೆ ಬರೆಯುವೆ ಎಂಬ ಒಂದು ಸೂಕ್ಷ್ಮ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದೆ…
ನಿಮ್ಮ ಹಾರೈಕೆ ಸದಾ…
ಧನ್ಯವಾದಗಳು…
ಧನ್ಯವಾದಗಳು ಬಿದಲೋಟಿ…