ನೆಲ ಮುಗಿಲು
ಫಾಲ್ಗುಣ ಗೌಡ ಅಚವೆ.
ಗುಡ್ಡಗಳ ಮಲೆಯನ್ನು ತಬ್ಬಿ ಮಲಗಿದೆ ಬಾನು
ಮುಸುಕಿ ಮುದ್ದಾಡುತಿದೆ ಮಂಜು ತಾನು
ಚಂದಿರನ ರಮಿಸುವ ಅಬ್ಬರದ ಕಡಲಂತೆ
ಹಿಮ ಹೊದಿಕೆ ಹೊದೆಯುತಿದೆ ಇಳೆಯು ತಾನು
ಸಂಗೀತದಾಲಾಪ ಅನುರಣಿಸುತಿದೆ ಇಲ್ಲಿ
ಕಲೆಯ ಸಾಕ್ಷಾತ್ಕಾರ ಸಾಕಾರವಿಲ್ಲಿ
ದಿಗಂತದಾಚೆಯೂ ವ್ಯಾಪಿಸಿದೆ ಅಗಸವು
ಅಲೆವ ನದಗಳನೇರಿ ತಾನು
ಸೂರ್ಯನನು ಮರೆಸುತ್ತ ಏಕಾಂತವ ಸರಿಸಿ
ಲೋಕಾಂತ ಸಾರಿತಿದೆ ಮರವು ತಾನು
ಸಾಲು ಬೆಟ್ಟಗಳೆಲ್ಲ ನಿನ್ನಂತೆ ಕಾಣುತಿವೆ
ಪ್ರಕೃತಿಯಂತಿಹ ನಿನ್ನ ತಬ್ಬಿ ಹಿಡಿದು
ಹೂಮಳೆಯ ದನಿಯಂತ ಹೂನಗೆಯು ನಿನ್ನದು
ಮಳೆಯುಂಟು ನಿನ್ನ ಹೆಸರಿನೊಳಗು!
*******
ಆಹಾ ,ಮೇಘವೇ
ಹೂಮಳೆಯ ದನಿಯಂಥ ಹೂನಗೆಯು ನಿನ್ನದು
ಲೌಲಿಯಾಗಿದೆ ಕಣ್ರಿ ಕವಿತೆ…
ಪ್ರಕೃತಿ ಸೌಂದರ್ಯ ವರ್ಣನೆ ಸೊಗಸಾಗಿದೆ