Month: May 2020

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಹರವಾದ ಎದೆಯ ಹೊಲ ಹರಗಿ ಮಿದುಗೊಳಿಸಿ ಮಳೆಗಾಗಿ ಕಾಯುತಿರುವೆ| ಕಸ ಕಡ್ಡಿಗಳನು ಎರೆಹುಳುವಿನ ಜರಡಿಯಿಂದ ಸಾಣಿಸಿ ಮಳೆಗಾಗಿ ಕಾಯುತಿರುವೆ|| ಎಲ್ಲೇ ಮೀರಿ ಓಡುವ ಮೋಡಗಳಿಗೆ ಬಲೆ ಬಿಸಿ ನಾಲ್ಕು ಹನಿ ಉದುರಿಸಿ ಬಿಸಿಲು ತಣಿಸುವೆ| ಇಳಿಜಾರಿನ ಎದೆಗೆ ನೀರುಣಿಸಲು ಒಡ್ಡು ಬಿಗಿಗೊಳಿಸಿ ಮಳೆಗಾಗಿ ಕಾಯುತಿರುವೆ|| ಇರಿದು ಹರಿದೋಡುವ ಭಾವದಲೆಗಳಿಗೆ ಅಲ್ಲಲ್ಲಿ ತಡೆಗೋಡೆ ನಿರ್ಮಿಸಿರುವೆ| ಬಾಯ್ದೆರೆದ ರೆಂಟೆ ಸಾಲುಗಳ ಗಂಟಲು ಒಣಗಿಸಿ ಮಳೆಗಾಗಿ ಕಾಯುತಿರುವೆ|| ಮಳೆ ಮೈದುಂಬಿ ಸುರಿದು ಇಳೆಗೆ ಆಲಂಗಿಸಿ ಹಸಿರು ಅಚ್ಛಾದಿಸುವ […]

ಕಾವ್ಯಯಾನ

ನಾನಲ್ಲದ ನಾನು ವಿದ್ಯಾಶ್ರೀಎಸ್ಅಡೂರ್ ಬಂಧಿ ನಾನು ಕೋಟೆ ಕೊತ್ತಲಗಳಲ್ಲಲ್ಲ ನನ್ನದಲ್ಲದ ಬದುಕಿನಲ್ಲಿ, ಬಂಧಿ ನಾನು, ನಾಲ್ಕು ಗೋಡೆಗಳ ನಡುವಲ್ಲಲ್ಲ ಗೊಡ್ಡು ಸಂಪ್ರದಾಯಗಳ ಮುಖವಾಡದಲ್ಲಿ, ಒಂಟಿ ನಾನು, ಈ ಜನಜಾತ್ರೆಯ ನಡುವಲ್ಲಲ್ಲ ನನ್ನ ಮನದ ವಿಶ್ವದಲ್ಲಿ ಒಂಟಿ ನಾನು, ನನಗೆ ನನ್ನವರು ಇಲ್ಲದೆ ಅಲ್ಲ ನನ್ನತನವೆಂಬ ಲೋಕದಲ್ಲಿ. ಮೂಕಿ ನಾನು, ಮಾತ ಮಲ್ಲಯುಧ್ಧದಲ್ಲಲ್ಲ ನನ್ನ ಮೌನವಾದ ಕನಸುಗಳಲ್ಲಿ ಮೂಕಿ ನಾನು, ಈ ಮಾತಿನರಮನೆಯಲ್ಲಲ್ಲ ನನ್ನ ಸ್ವಂತಿಕೆಯ ದಿಗಂತದಲ್ಲಿ. ಬೊಂಬೆ ನಾನು, ನನಗೆ ಭಾವಗಳು ಇಲ್ಲದೆ ಅಲ್ಲ ನನ್ನ ಆವರಿಸಿದ […]

ಅನುವಾದ ಸಂಗಾತಿ

ಒಂದುಕತ್ತಲನ್ನುಎತ್ತಿಟ್ಟುಕೊಂಡಿದ್ದೇನೆ ಕನ್ನಡ ಮೂಲ: ರಾಜು ಹೆಗಡೆ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನಾಗರೇಖಾ ಗಾಂವಕರ್ ರಾಜು ಹೆಗಡೆ ಒಂದು ಕತ್ತಲನ್ನು ಎತ್ತಿಟ್ಟುಕೊಂಡಿದ್ದೇನೆ ಹಕ್ಕಿಗಳನ್ನು ಮಲಗಿಸಿ ಚುಕ್ಕೆಗಳನ್ನು ಎಬ್ಬಿಸಿ ಇನ್ನು ಕೆಲವೇ ಗಂಟೆಗಳಿವೆ ಗಿಡಗಂಟಿಗಳ ಜೊತೆಗೆ ಮಾತಾಡಲು ಆಡದಿದ್ದವರ ಸುದ್ದಿಬೇಡ! ಒಂದೊಂದಾಗಿ ದೀಪ ಆರಿಸುತ್ತೇನೆ ಕತ್ತಲೆ ನನಗೆ ಧೈರ್ಯ ತುಂಬುತ್ತದೆ ಗೋಡೆ ಕೂಡ ಮಾತಾಡುತ್ತಿದೆ ಗಡಿಯಾರದ ಬಾಯಲ್ಲಿ ಎಷ್ಟು ಸಂತೋಷ ಕತ್ತಲೆಗೆ ಸುಮ್ಮನೆ ನಗುತ್ತಿದೆ ಅರಿವೆ ಧರಿಸಿರುವ ನನ್ನ ನೋಡಿ. ಒ ಗೇಟಿನ ಸಪ್ಪಳ ಎಲ್ಲಿ ಅಡಗಿಕೊಳ್ಳಲಿ ದಾರಿಯನ್ನೂ ಬಿಡುವುದಿಲ್ಲ […]

ಕಾವ್ಯಯಾನ

ಮೌನ ಮಲ್ನಾಡ್ ಮಣಿ ನೀರವ ಮೌನ, ಸುಯಿಗುಡುತಿದೆ ತಂಗಾಳಿ, ಒಂದೇ ಸಮ ಜಿಂಗುಟ್ಟುತಿದೆ ಜಿರುಂಡೆ, ಜೆಡ್ಡು ಗಟ್ಟಿದ ಮನಸ್ಸು. ಮಳೆ ತೊಟ್ಟಿಕ್ಕಿದರು,ಮರ ಚಿಗುರೊಡೆದರು ತರಗೆಲೆ ರಾಶಿ ರಾಶಿಯಾಗಿ ಬಿದ್ದಿದೆ. ಮನಸ್ಸು ಮರಗಟ್ಟಿದೆ ಪೈರು ತೆನೆಯೊಡೆದರು, ಒಣಹುಲ್ಲುಗಳ ರಾಶಿಯಲ್ಲಿ. ಕಾಯ ಕಳೆದು ಕೊಂಡಿದೆ ಅಂತಃ ಶಕ್ತಿ, ಕಳೆಬರ ಮಾತ್ರವೇ ಉಳಿದಿದೆ ಮಣ್ಣಿನೊಡಲಿನಲಿ. ಹರಿದ ಅರಿವೆಗೆ ತೇಪೆ ಹಚ್ಚುತ್ತಿದೆ ಅದೇ ಹರಕು ಭಾವ ಮೊಂಡು ಸೂಜಿ ದಾರ ಹಿಡಿದು. ವಸಂತ ಇದ್ದರು ಸಂತಸವಿಲ್ಲ, ಸಂಕ್ರಮಣ ಕಾಲ ಅರಿವಿಲ್ಲ, ಹರಿದಾಡುವ ಭಾವವಿಗ […]

ಪುಸ್ತಕ ಸಂಗಾತಿ

ಆಡು ಕಾಯೋ ಹುಡುಗನ ದಿನಚರಿ ಪುಸ್ತಕ:ಆಡು ಕಾಯೋ ಹುಡುಗನ ದಿನಚರಿ (ಅನುಭವ ಕಥನ) ಲೇಖಕರು:ಟಿ.ಎಸ್.ಗೊರವರ ಪ್ರಕಾಶಕರು:ಪಲ್ಲವ ಪ್ರಕಾಶನ,ಚನ್ನಪಟ್ಟಣ ಶಿವರಾಜ್ ಮೋತಿ ಕಳೆದ ಧಾರವಾಡದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕದಂಗಡಿಗಳ ಬಜಾರಿನಲ್ಲಿ ಮತ್ತೆ-ಮತ್ತೆ ದೋಸ್ತಿಗಳ ಜೊತೆಗೂಡಿ ವಾಲೆಂಟಿಯಾದ್ರೂ ತಿರುಗುತ್ತಿದ್ದಾಗ ಸಂಗಾತದ ಮಳಿಗೆ ಕಣ್ಣಿಗೆ ಬಿದ್ದಿತ್ತು.ಹೋಗಿ ಮಾತಾಡಿಸಿದಾಗ ಈ ಆಡು ಕಾಯೋ ಹುಡುಗನ ದಿನಚರಿ ಪುಸ್ತಕವನ್ನ ಪ್ರೀತಿಯಿಂದ ನನ್ನ ವರ್ತನೆಯನ್ನು ನೋಡಿ ಹವ್ಯಾಸವನ್ನು ಅರಿತುಕೊಂಡಂತೆ ಆಫ್ ರೇಟಿಗೆ ಕೊಟ್ಟಿದ್ದರು.ಉಡಾಳ ಹುಡುಗನಾಗಿ,ಆಡು ಕಾಯುತ್ತಾ,ಎಮ್ಮೆ ಟೀಮಿನವನಾಗಿ ಚೇಷ್ಟೇ-ಕುಚೇಷ್ಟೆಗಳನ್ನೂ ಮಾಡುತ್ತಾ ಬೆಳೆದ ಅಪ್ಪಟ ಹಳ್ಳಿ […]

ಕಾವ್ಯಯಾನ

ಎರಡರ ನಡುವೆ ವಿಭಾ ಪುರೋಹಿತ ಎಲ್ಲಿ ಹೋದರಲ್ಲಿ ಬೆಂಬತ್ತಿ ತೆರೆದ ಕೋರೆಹಲ್ಲು ಎದೆಗುಂಡಿಗೆ ಇರಿಯುತ್ತದೆ ಎನ್ನೆದೆಗುದಿಗಳನು ದಿಕ್ಕೆಡಿಸಿ ಅಡವಿಗೆ ಕೆಡವುತ್ತದೆ ಏನಿದು, ನನಗೇ ಹೀಗಾ ? ಎಲ್ಲರಿಗೂ ಬೆನ್ನಿಗೊಂದು ಭೂತ ವಕ್ಕರಿಸಿಕೊಂಡಿರುತ್ತಾ ? ಎಡಬಲಗಳ ನಡುವೆ ನಡೆಯುವುದು ದುರ್ಬರ !! ವರ್ತಮಾನದ ಕಾಲಗತಿಯಲಿ ದ್ವಂದ್ವ ಗಳ ಆಂತರ್ಯ ಹೆಜ್ಜೆ ಇಡಿಸುತ್ತದೆ ಭ್ರಮೆ ಬಿಡಿಸುತ್ತದೆ ಸಿಕ್ಕದ ದಕ್ಕದ ದೂರದ ಹಾದಿಗೆ !!! ಓಡುತ್ತಾ ಮುಗ್ಗರಿಸುತ್ತ…… ಸಿಗದ ಆಕಾಶಕ್ಕೆ ಛಂಗನೆ ! ಜಿಗಿಸಿ ಲಗ್ಗೆ ಹಾಕುತ್ತದೆ ಕನಸಿನೊಳಗಿನ ಮನಸು ಅಗೋಚರ […]

ಲಹರಿ

ಅಮ್ಮ,ನಾವೂ ನಾಯಿ ಸಾಕೋಣ ಶೀಲಾ ಭಂಡಾರ್ಕರ್ ನಿನ್ನೆ ರಾತ್ರಿಯಿಂದಲೂ ನಮ್ಮ ಮನೆಯಲ್ಲಿ ಏನೋ ಗುಸುಗುಸು ಪಿಸುಪಿಸು ಕೇಳಿಸುತ್ತಿದೆ. ಇಡೀ ದಿನ ಬಿಡುವಿಲ್ಲದೇ ಮನೆಯ ಸ್ವಚ್ಛತೆಯಲ್ಲಿ ತೊಡಗಿದ್ದುದರಿಂದ ಅದರೆಡೆಗೆ ಅಷ್ಟಾಗಿ ಗಮನ ಕೊಡುವ ‌ಮನಸ್ಸಾಗಲಿಲ್ಲ ನನಗೆ. ಇವತ್ತು ಬೆಳಗಿನಿಂದಲೂ ಅತ್ಯಂತ ಶಾಂತ ವಾತಾವರಣ. ಯಾವುದೇ ಏರು ಧ್ವನಿಯ ಮಾತಿಲ್ಲ, ಜಗಳ ಕದನಗಳಿಲ್ಲ. ಕಿರುಚಾಟಗಳಿಲ್ಲ. ಮದ್ಯಾಹ್ನದವರೆಗೆ ಆರಾಮೋ ಆರಾಮ್. ಮದ್ಯಾಹ್ನ ಊಟದ ಸಮಯದಲ್ಲೂ ಒಬ್ಬರಿಗೊಬ್ಬರು ಸಹಕರಿಸಿಕೊಂಡು, ತಟ್ಟೆ, ನೀರು ಇಡುವುದರಿಂದ ಹಿಡಿದು ಮಾಡಿದ ಅಡುಗೆಯನ್ನು ಒಂದೊಂದಾಗಿ ಬಡಿಸುವಾಗಲೂ ಅದೇನು ಶಿಸ್ತು, […]

ನೆನಪುಗಳು

ಹಲಸಿನ ಹಪ್ಪಳ ಸಂಧ್ಯಾಶೆಣೈ ಇವತ್ತು ನಮ್ಮ ಕೆಳಗಿನ ಮನೆಯವರು ಒಂದು ಸಣ್ಣ ತುಂಡು ಹಲಸಿನ ಗುಜ್ಜೆ ಕೊಟ್ಟಿದ್ದರು ..ಅದನ್ನು ಅಕ್ಕಿಯ ಆಳಾವಣದಲ್ಲಿ ಹಾಕಿ ಫ್ರೈ ಮಾಡಿದೆ ..ಆಗ ನನಗೆ ಸೋಮೇಶ್ವರದ ದಿನಗಳು ನೆನಪಾದವು.. ಹೀಗೆ ಬೇಸಿಗೆ ದಿನಗಳಲ್ಲಿ ಮನೆಗೆ ಆಗಾಗ ಹಲಸಿನ ಕಾಯಿ ಬರುತ್ತಿತ್ತು..ಉಪಿಗೆ ಸೋಳೆ ಹಾಕಲು.. ಹಪ್ಪಳ ಮಾಡಲು ಎಂದು.. ಆಗೆಲ್ಲ ಅಮ್ಮ ಹಲಸಿನ ಕಾಯಿಯ ವೈವಿಧ್ಯಮಯ ಪಲ್ಯಗಳನ್ನು ಮಾಡುತ್ತಿದ್ದರು.. ಸೋಳೆ ಹಾಕಲು ತಂದ ಹಲಸಿನ ಕಾಯಿಯ ಉಪಕ್ಕರಿ .ಅದರ ಒಟ್ಟಿಗೆ ಸೌತೆ ಕಾಯಿ ಹಾಕಿ […]

ಅನುವಾದ ಸಂಗಾತಿ

ಪ್ರಭುವೆ ಕನ್ನಡ ಕವಿತೆ:ನಂದಿನಿ ವಿಶ್ವನಾಥ ಹೆದ್ದುರ್ಗ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ನಂದಿನಿ ವಿಶ್ವನಾಥ ಹೆದ್ದುರ್ಗ ನಾಗರೇಖಾ ಗಾಂವಕರ್ ಪ್ರಭುವೆ ಹಚ್ಚಿಕೊಂಡ ನಂಬಿಕೆಯೊಂದು ಕಾಯುವ ಬಯಕೆ ಹುಟ್ಟಿಸುತ್ತದೆ ಪ್ರಭುವೇ. ಕಾಲ ಭಾವಗಳ ಮಾಗಿಸಬಹುದು ಬಾಗಬಹುದು ಬಲು ಗಟ್ಟಿ ಎನಿಸಿದ್ದ ಒಳಗಿನ ಒಣ ಅಹಮ್ಮು. ಬರಡು ಎದೆಯಲ್ಲೂ ಕಳೆಹೂವುಗಳು ಅರಳಿ ಅಸಡ್ಡೆಯಲ್ಲಿ ಬಿಗಿದ ಈ ತುರುಬಿಗಿಡುವ ಆಸೆಯುದಿಸಬಹುದು. ಭೂತದ ಬೇತಾಳ ಈ ಹೆಗಲಿಂದ ಜಿಗಿದು ನೇತಾಡಿದ ಮರದಡಿಯಲ್ಲೇ ಕುಳಿತು ಹೊಸ ಮಾದರಿ ಕನಸ ಹೆಣೆಯಬಹುದು. ಹಿಡಿ ಮಣ್ಣಿನಲ್ಲಿ ಜಗ ಅಡಗಿರುವ […]

ಕಾವ್ಯಯಾನ

ಸ್ಮಿತಾ ಅಮೃತರಾಜ್ ಯಾವುದೋ ಒಂದು ಅದೃಶ್ಯ ಗಳಿಗೆಯಲ್ಲಿ ಹೇಗೋ ಬಂದು ನುಸುಳಿಕೊಂಡಿದೆಯಲ್ಲ ನನ್ನ_ನಿನ್ನ ನಡುವಲ್ಲೊಂದು ತೆಳು ಗೆರೆ. ಎಳೆದದ್ದು ನೀನಲ್ಲವೆಂದೆ ನಾನಂತೂ ಮೊದಲೇ ಅಲ್ಲ ಕಂಡೂ ಕಾಣದಂತಿರುವ ಎಳೆ ಸೂಕ್ಷ್ಮ ಗೆರೆ ಹಾಗಾದರೆ ಬಂದದ್ದಾದರೂ ಎಲ್ಲಿಂದ? ಇಂಚಿಂಚೇ ಬೆಳೆಯುತ್ತಿದೆ ಬಲಿಯುತ್ತಿದೆ. ಇಬ್ಬರಿಗೂ ಅದರ ಮೇಲೆ ಅಸಡ್ಡೆ ಎಳೆಯದ ಗೆರೆಯನ್ನು ಅಳಿಸುವುದೇತಕೆ? ಮಿತಿ ಮೀರಿ ಬೆಳೆದು ಗೆರೆಯೇ ಗೊಡೆಯಾದರೆ ನನಗೆ ನೀನು,ನಿನಗೆ ನಾನು ಕಾಣಿಸುವುದಾದರೂ ಎಂತು? ಗೆರೆಯ ಮೊನಚು ಈಗ ಎದೆಯವರೆಗೂ ಬಂದು ತಾಕಿ ಭಯ ಹುಟ್ಟಿಸುತ್ತಿದೆ. ಗೆರೆಗಳು […]

Back To Top