ಅನುವಾದ ಸಂಗಾತಿ
ಕವಿತೆ ಸಾವಿಗೊಂದು ಪತ್ರ ಸಾವೇ, ನೀನು ಹುಟ್ಟಿನಿಂದಜೊತೆಗೇ ಬಂದಿರುವೆತಿಳುವಳಿಕೆ ಬಂದಂತೆಭಯದಿಂದ ದೂರವಿರಿಸಿದೆನೆನಪಿಸದೆ, ವಿಳಾಸವೂ ಹುಡುಕದೆ. ವಿಳಾಸ ಬೇಕಿರಲಿಲ್ಲ ಬದುಕಿನುದ್ದಕ್ಕೂ….ನಿರುಮ್ಮಳ ಉಸಿರೆಳೆಯುವಾಗಸ್ವಚ್ಛಂದವಾಗಿ ಸಾಗುವಾಗಪ್ರತೀ ದಿನವು ನೆರಳಂತೆಹೊತ್ತು ಜೀವಿಸುವಾಗಅದಕೇ ನೆನೆಯಲಿಲ್ಲ ನಿನ್ನ. ದೇಹದ ಚಿತ್ರಣ ಬದಲಾಗಿದೆಮುಪ್ಪೆರಗಿ ಕುಂದಿದೆಉಸಿರಿಗೂ ಅಳುಕೇಆಹಾರಕೂ ನಳಿಕೆಶಸ್ತ್ರಕ್ರಿಯೆಗೆಂದು ಅರಿವಳಿಕೆಸಹಜಕ್ರಿಯೆಗಳೆಲ್ಲ ನಿಲ್ಲುತ್ತಿವೆನಿನ್ನನೇ ಬಲವೆಂದು ಕಾಯ್ದಿರುವೆ. ಪರಸೇವೆಗೆ ದೇಹ ಬೀಳದಂತೆನೋವಿಲ್ಲದಂತೆ ನಸುನಕ್ಕೇಫಕ್ಕನೆ ಆರುವ ದೀಪದಂತೆನನ್ನನ್ನೊಮ್ಮೆ ತಬ್ಬುವಿಯಂತೆಬಂದು ಬಿಡು ನೀ ಬಂಧುಸಹಜ ಸವಿನಿದ್ರೆಗೆ ಜಾರಿದಂತೆ..! ————ಕನ್ನಡ ಮೂಲ- ಅಜಿತ ಹೆಗಡೆ, ಹರೀಶಿ A letter to the death Death,you are […]
ಭರವಸೆಯ ಹೊರತು ಬೇರೇನೂ ಉಳಿದಿಲ್ಲ’
ಲಹರಿ ಭರವಸೆಯ ಹೊರತು ಬೇರೇನೂ ಉಳಿದಿಲ್ಲ’ ವಸುಂಧರಾ ಕದಲೂರು ಕವಚಿ ಹಾಕಿದ್ದ ಖಾಲಿ ಮಂಕರಿಯನ್ನು ಬೋರಲಾಕಿದಂತೆ, ಎಲ್ಲಾ ಖಾಲಿಖಾಲಿಯಾದ ಭಾವ. ಹಾಗೆಂದು ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುತ್ತಿದೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ… […]
ಕಾದಿಹೆ ಬಂದುಬಿಡು
ಕವಿತೆ ಕಾದಿಹೆ ಬಂದುಬಿಡು ಪ್ರೇಮಾ ಟಿ.ಎಂ. ಆರ್ ನಡೆದಿದ್ದೇನೆ ದಂಡೆಯುದ್ದಕ್ಕೆಹೆದ್ದೆರೆಗಳಬ್ಬರದ ಭಯ ಬಂದುಬಿಡುಸೊಕ್ಕಿದಲೆ ನನ್ನ ಕೊಚ್ಚಿಕೊಂಡೊಯ್ಯುವ ಮೊದಲೇ ಬಂದುಬಿಡು ಮೋಡ ಮುಕ್ಕಿದ ತುಂಡು ಸೂರ್ಯದ್ವಾದಶಿಯ ಮುರುಕು ಚಂದ್ರಎದುರುಬದುರು ನಿಂತಿರುವಾಗಲೇಬಂದುಬಿಡು ನನ್ನಹೆಜ್ಜೆಯ ಹೊಂಡದೊಳಗೆಉಪ್ಪುನೀರು ನೆಲೆನಿಂತಿದೆಅಲೆಯೊಳಗೆ ನಾಸುಳಿದು ಹೋಗುವ ಮುನ್ನಬಂದುಬಿಡು ಪಶ್ಚಿಮದಂಚಿಗೆ ಕೆನ್ನೆತ್ತರದ ಹಸೆಮುಗಿಲು ಹಾಡು ಹರಿಯುತಿದೆಕನಸು ಕೆನೆಗಟ್ಟುವದಕ್ಕೂ ಮೊದಲೇಬಂದುಬಿಡು ಸೂರ್ಯ ತಲೆಮರೆಸಿಕೊಳ್ಳುತ್ತಿದ್ದಾನೆತಾರೆಗಳೆದೆಗೆ ಸೊಕ್ಕು ಹೊಕ್ಕಿದೆದಂಡೆ ಮೌನವ ಹೊದ್ದು ಮಲಗುವ ಮುಂಚೆಬಂದುಬಿಡು ಇರುಳು ಜಾರುತಿದೆ ಮುಷ್ಠಿಯೊಳಗಿನ ಮರಳಂತೆ ಸುಳುಸುಳುಕನಸು ಕರಗುವ ಮೊದಲೇ ಮಧುಶಾಲೆಬಿಟ್ಟುಬಂದುಬಿಡು ಎಲ್ಲೋ ಗಾಳಿ ಮರದಮೇಲೆಒಂಟಿಹಕ್ಕಿಯ ಎದೆಕೊರೆವ ಹಾಡುತಟ್ಟಿ […]
ಬದಲಾವಣೆ
ಕಥೆ ವಿಜಯಶ್ರೀ ಹಾಲಾಡಿಯವರ ಹೊಸ ಕತೆ ಬದಲಾವಣೆ ಕುದಿಸಿ ಆರಿಸಿದ ನೀರಿಗೆ ತಂಪಿನ ಬೀಜವನ್ನು ಹಾಕಿ ರುಚಿಗೊಂಚೂರು ಬೆಲ್ಲ ಸೇರಿಸಿ ಚಮಚದಲ್ಲಿ ಕಲಕುತ್ತ ಕುಳಿತಿದ್ದಾಳೆ ಜುಬೇದಾ. ಫ್ಯಾನ್ ತಿರುಗುತ್ತಿದ್ದರೂ ಸೆಖೆಯೇನೂ ಕಮ್ಮಿಯಿಲ್ಲ, ಅಲ್ಲದೇ ಫ್ಯಾನಿಂದ ಬರುವುದೂ ಬಿಸಿಗಾಳಿಯೇ: ಏನೂ ಸುಖವಿಲ್ಲ. “ನೀನು ಕೆಲಸ ಎಂತ ಮಾಡುವುದು ಬೇಡ, ಸುಮ್ಮನೇ ರೆಸ್ಟ್ ತಕೋ. ಹೊತ್ತುಹೊತ್ತಿಗೆ ಸರಿಯಾಗಿ ತಿನ್ನು. ಪುನಃ ಆಸ್ಪತ್ರೆ ಸೇರಿದರೆ ನನ್ನಿಂದಾಗಲಿಕ್ಕಿಲ್ಲ” ಬೆಳಿಗ್ಗೆ ಅಂಗಡಿಗೆ ಹೋಗುವ ಮುಂಚೆ ಎಚ್ಚರಿಸಿ ಹೋಗಿದ್ದಾನೆ ರಹೀಮ. ಅದಲ್ಲದೆ “ಉಮ್ಮ, ನೀವು ಪೂರ್ತಿ […]
ಗುರುವಿನ ಋಣ
ಗುರುವಿನ ಋಣ ಜಯಶ್ರೀ ಜೆ.ಅಬ್ಬಿಗೇರಿ ಆಗ ನಾನಿನ್ನೂ ಪುಟ್ಟ ಫ್ರಾಕು ಧರಿಸಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಕಾಲ. ಸದಾ ನನ್ನ ಕೈಯಲ್ಲಿ ಬಿಳಿ ಚೌಕಟ್ಟಿನ ಕರಿ ಪಾಟಿ ಹಿಡಿದು, ಬೆರಳಲ್ಲಿ ಪೆನ್ಸಿಲ್ ಸಿಕ್ಕಿಸಿಕೊಂಡು ದೊಡ್ಡ ಪಂಡಿತರಂತೆ ಗಂಭಿರವಾಗಿ ಬರೆಯುವದನ್ನು ಕಂಡು ನನ್ನಪ್ಪ, ನಮ್ಮವ್ವ ಎಷ್ಟು ಶ್ಯಾನೆ ಅದಾಳ ನೋಡು ಎನ್ನುತ್ತ ಪ್ರೀತಿಯಿಂದ ಹಣೆಗೆ ಹೂ ಮುತ್ತನ್ನಿಕ್ಕಿ ಅಕ್ಷರವನ್ನು ತೀಡಿಸುತ್ತಿದ್ದರು.ಆಗಿನಿಂದ ನನ್ನ ಅಕ್ಷರದ ಹುಚ್ಚು ಮತ್ತಷ್ಟು ಹೆಚ್ಚಿತು. ಅಣ್ಣನ ಜೊತೆ ನಾನೂ ಶಾಲೆಗೆ ಹೋಗಲೇಬೇಕು ಎಂಬ […]
ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ
ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ ವಿಭಾ ಪುರೋಹಿತ್ ಓ ನಮ್ಮ ಶಿಕ್ಷಕನೀ ನಮ್ಮ ರಕ್ಷಕ ಮರೆಯಲೆಂತು ನಿನ್ನ ಸೇವೆಕರೆವ ಜ್ಞಾನ ಹಾಲ ಗೋವೆನಿನಗೆ ನಮ್ಮ ನಮನವುನಿನ್ನ ಅಡಿಗೆ ಸುಮನವು————ಧಾರವಾಡದ ಜಿ. ಎಸ್. ಕುಲಕರ್ಣಿ ಧಾರವಾಡದ ಜಿ.ಎಸ್ . ಕುಲಕರ್ಣಿ ಅವರ ಸಾಲುಗಳು ಇಲ್ಲಿ ನೆನೆಯಬಹುದು ಮನಃಪಟಲಕ್ಕೆ ಬಂದು ಅಚ್ಚೊತ್ತಿದ ಕೆಲವು ಘಟನೆಗಳನ್ನು ಬರೆಯದೇ ಇರಲಾಗುವುದಿಲ್ಲ.ಎಲ್ಲಿಂದಲೋ ಬಂದ ದಿವ್ಯ ಚೇತನ ಬೆನ್ನುತಟ್ಟಿ ಬರೆಯಲಾರಂಭಿಸಿತು.ಮೂವತ್ತು ವ ರ್ಷಗಳ ಹಿಂದೆ ಓಡಾಡಿದ ಜಾಗ,ಆಟವಾಡಿದ ಸ್ಥಳ,ಮಣ್ಣಿ ಗೆ,ಕಲ್ಲಿಗೆ ಅಕ್ಕರೆಯಿಂದ ಮುತ್ತಿಟ್ಟು […]
ಅಂಕಪಟ್ಟಿ ಬಾಲ್ಯ ಪುಸ್ತಕ-ಅಂಕಪಟ್ಟಿ ಬಾಲ್ಯಕವಿ- ರವಿರಾಜ ಸಾಗರಪ್ರಕಾಶನ- ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಟಾನ, ಕಮಲಾಪುರಬೆಲೆ-೧೩೦/- ಸ್ಪರ್ಧಾಲೋಕದಿ ಬೇಕೇ ಬೇಕಂತೆತರತರ ಪ್ರಮಾಣ ಪತ್ರಗಳುಕಷ್ಟವಾದರೂ ಮಾಡಲೇ ಬೇಕಂತೆನಾವು ಬಯಸದ ಪಾತ್ರಗಳು ಇದು ಇಂದಿನ ದಿನಮಾನದ ಎಲ್ಲಾ ಮಕ್ಕಳ ಸಮಸ್ಯೆ. ಮಕ್ಕಳ ಮನಸ್ಸನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ ಹೇಳಿ? ನಮಗೆ ಹೆಚ್ಚು ಅಂಕಕೊಡುವ ರೋಬೋಟ್ ಬೇಕಿದೆಯೇ ಹೊರತು, ನಮ್ಮಿಂದ ಮುದ್ದಿಸಲ್ಪಟ್ಟು, ನಮ್ಮನ್ನೂ ಪ್ರೀತಿಸುವ ಮಗು ಬೇಕಾಗಿಲ್ಲ. ಎಲ್ಲ ಅಪ್ಪ ಅಮ್ಮಂದಿರಿಂದ ಹಿಡಿದು, ಶಿಕ್ಷಣ ಇಲಾಖೆಯಿಂದ ಹಿಡಿದು ಸಮಾಜದ ಎಲ್ಲರಿಗೂ ಮಗುವಿನ […]
ಅಶ್ವತ್ಥಮರದ ಮೇಲೊಂದು ಗುಬ್ಬಿಗೂಡು ಈ ಮರ-ಗಿಡಗಳದ್ದು ಒಂದು ವಿಸ್ಮಯದ ಲೋಕ. ಒಂದಿಂಚು ಕತ್ತರಿಸಿದರೆ ನಾಲ್ಕಾರು ಟಿಸಿಲೊಡೆದು ಚಿಗುರಿಕೊಳ್ಳುವ ಗಿಡ ಕಣ್ಣೆದುರೇ ಮರವಾಗಿ ಬೆಳೆದುಬಿಡುವ ಪ್ರಕ್ರಿಯೆಯೊಂದು ಅಚ್ಚರಿ ಮೂಡಿಸುತ್ತದೆ. ಆ ಬೆಳವಣಿಗೆಯ ಬೆರಗಿನ ಲೋಕದಲ್ಲಿ ದಿನಕ್ಕೊಂದು ಹೊಸ ನೋಟ, ನೋಟದಲೊಂದಿಷ್ಟು ಹೊಸ ಅನುಭವಗಳು ಅವಿತು ಕುಳಿತಿರುತ್ತವೆ. ಹಾಗೆ ಅಡಗಿ ಕುಳಿತ ಅನುಭವಗಳೆಲ್ಲ ಸಮಯ ಸಿಕ್ಕಾಗ ಗಾಳಿ-ಬೆಳಕು-ನೆರಳುಗಳೊಂದಿಗೆ ಮಾತುಕತೆ ನಡೆಸುತ್ತ, ಮಳೆಗೊಂದು ಕೊಡೆ ಹಿಡಿದು ಚಲಿಸುತ್ತ ತಮ್ಮ ಇರುವಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತವೆ. ಗಾಳಿಯೊಂದಿಗೆ ಹಾರಿಬಂದ ಧೂಳಿನ ಕಣವೊಂದು ಎಲೆಯನ್ನಾಶ್ರಯಿಸಿದರೆ, ಬೆಳಕಿನೊಂದಿಗೆ ಬಿಚ್ಚಿಕೊಳ್ಳುವ […]
ಟೈಂ ಮುಗಿಸಿದ ಸಮಯ…..
ಕವಿತೆ ಡಾ.ಪ್ರೇಮಲತ ಬಿ ಕೆಲವರಿಗೆ ಸಮಯವಿರುವುದಿಲ್ಲಸಮಯ ಮಾಡಿಕೊಳ್ಳಲು ಸಮಯ ಸಾಕಾಗುವುದಿಲ್ಲನನ್ನ ಬಳಿ ಬಹಳ ಸಮಯವಿದೆಆಳ ಗೆರೆಗಳ ನನ್ನ ಕೈ ಖಾಲಿಯಿದೆ ಹಾಗೆಂದೇ ಸಮಯವನ್ನು ಕೊಲ್ಲಲು ನನ್ನ ಬಳಿಅಸಾಧ್ಯ ಸಾಧ್ಯತೆಗಳಿವೆ ಆದರೆಹಾಗೊಮ್ಮೆ, ಹೀಗೊಮ್ಮೆ ತೂಗುವ ಲೋಲಕದನನ್ನ ಗಡಿಯಾರಕ್ಕೆ ಮುಳ್ಳುಗಳಿಲ್ಲ ಅನಂತ ಚಲನೆಗಳ ಸಂವೇದನೆಯಿಲ್ಲಕೊಂದದ್ದೇನು ತಿಳಿಯುವುದಿಲ್ಲಟಿಕ್-ಟಿಕ ನೆಂದು ಉಲಿದು ಹೇಳಲುನನ್ನೆದೆ ಗಡಿಯಾರಕ್ಕೆ ಧ್ವನಿಯಿಲ್ಲ ರಸ್ತೆಯಲಿ ನಿಂತ ಒಂಟಿ ಜೀವಸಂತೆಯಲ್ಲಿದ್ದರೂ ಕೇಳುವ ನಿರಂತರ ಮೌನಸಮಯದ್ದೇನು ನನಗೆ ಮುಲಾಜುಸಮಯ ಪ್ರಜ್ಞೆಆಳುವುದಿಲ್ಲ ಅವಸರ ಬದುಕ ಕಾಡುವುದಿಲ್ಲಸಮಯ ಕೊಂದ ಪಾಪಪ್ರಜ್ಞೆಯಿಲ್ಲಅರ್ಥಗಳ ಟೈಂ ಮುಗಿಸಿದ ಸಮಯ ನನ್ನೆದುರು […]
ನೈವೇದ್ಯ
ಕವಿತೆ ನೈವೇದ್ಯ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಮೂರು ಕಲ್ಲುಗಳ ಒಲೆನನ್ನ ಮನಸ್ಸು!ಹಳದಿ ಮೈಯ ಕೆಂಪು ನಾಲಗೆಯನ್ನುಊರ್ಧ್ವಕ್ಕೆ ಕೊರಳುದ್ದಕ್ಕೂ ಚಾಚಿ ಚಾಚಿಕಾಯಮಡಕೆಯನ್ನು ನೆಕ್ಕುತ್ತಿರುತ್ತದೆಬೆಂಕಿಬಾಳು! ಒಂದು ದೀರ್ಘ ಕಾಯುವಿಕೆಯಲ್ಲಿಪ್ಲುತಕಾಲಗಳ ಬೇಯುವಿಕೆ…ಅಕ್ಕಿ ಗುಳುಗುಳು ಕುದಿಯುತ್ತ ಅಂಗುಳಅಗುಳು ಅಗುಳೂ ಅನ್ನವಾಗುತ್ತದೆಆಹಾ! ಉದುರುದುರು ಮಲ್ಲಿಗೆ ಹೂವು!ಬಟ್ಟಲು ತುಂಬ ಹರಿದಾಡುವ ಮುತ್ತು!ಅನ್ನ ಜೀವವಾಗುತ್ತದೆ… ಪರಮ ಅನ್ನ! ಬ್ರಹ್ಮ ವಿಷ್ಣು ಮಹೇಶ್ವರ ಪುಟುಪುಟುಅಂಬೆಗಾಲಿಡುತ್ತಿದ್ದಾರೆ…ಚಿಗುರು ಬೆರಳ ಚುಂಚದಲ್ಲಿ ಹೆಕ್ಕಿ ಹೆಕ್ಕಿಬಾಯಿ ಬ್ರಹ್ಮಾಂಡದಲ್ಲಿ ತುಂಬಿಕೊಳ್ಳಲು!ಒಬ್ಬನ ಕೈಯ ಕೆಂದಾವರೆಗೆಮತ್ತೊಬ್ಬನ ಹೊಕ್ಕುಳ ಕುಂಡದ ದಂಟಲ್ಲಿ ನಗುಹುಟ್ಟಿಗೆ ಬದುಕಿನ ನಂಟು!ಹೊಕ್ಕುಳಬಳ್ಳಿ… ಅಮೃತಬಳ್ಳಿ! ಮಗದೊಬ್ಬನ ನೊಸಲಲಿ ಒಲೆಯಬೂದಿಯೆ […]