ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ
ವಿಭಾ ಪುರೋಹಿತ್
ಓ ನಮ್ಮ ಶಿಕ್ಷಕ
ನೀ ನಮ್ಮ ರಕ್ಷಕ
ಮರೆಯಲೆಂತು ನಿನ್ನ ಸೇವೆ
ಕರೆವ ಜ್ಞಾನ ಹಾಲ ಗೋವೆ
ನಿನಗೆ ನಮ್ಮ ನಮನವು
ನಿನ್ನ ಅಡಿಗೆ ಸುಮನವು————ಧಾರವಾಡದ ಜಿ. ಎಸ್. ಕುಲಕರ್ಣಿ
ಧಾರವಾಡದ ಜಿ.ಎಸ್ . ಕುಲಕರ್ಣಿ ಅವರ ಸಾಲುಗಳು ಇಲ್ಲಿ ನೆನೆಯಬಹುದು
ಮನಃಪಟಲಕ್ಕೆ ಬಂದು ಅಚ್ಚೊತ್ತಿದ ಕೆಲವು ಘಟನೆಗಳನ್ನು ಬರೆಯದೇ ಇರಲಾಗುವುದಿಲ್ಲ.ಎಲ್ಲಿಂದಲೋ ಬಂದ ದಿವ್ಯ ಚೇತನ ಬೆನ್ನುತಟ್ಟಿ ಬರೆಯಲಾರಂಭಿಸಿತು.ಮೂವತ್ತು ವ ರ್ಷಗಳ ಹಿಂದೆ ಓಡಾಡಿದ ಜಾಗ,ಆಟವಾಡಿದ ಸ್ಥಳ,ಮಣ್ಣಿ ಗೆ,ಕಲ್ಲಿಗೆ ಅಕ್ಕರೆಯಿಂದ ಮುತ್ತಿಟ್ಟು ಆಡುತ್ತಿದ್ದ ಕುಂಟಾಟ ಒಂದಾದ ಮೇಲೊಂದು ನೆನಪಿನ ಪರದೆಯ ಮೇಲೆ ಮೂಡಿ ಬಂದವು.ನಾವು ಕಲಿತ ಶಾಲೆ,ಶಾಲಾಪ್ರಾಂಗಣ,ಆಟದ ಮೈದಾನಗಳೆಲ್ಲವು ನಮ್ಮನ್ನು ಕೈಬೀಸಿ ಕರೆಯುತ್ತಿದ್ದಂತೆ ಭಾಸ.ಅದೇ ಧ್ವಜಸ್ತಂಭ,ಹಿಂದೆ ರಾಷ್ಟ್ರೀಯ ಹಬ್ಬಗಳಂದು ಎದೆ ಉಬ್ಬಿಸಿ ನಿಂತು ಅತ್ತಿತ್ತ ಅಲ್ಲಾಡದೆ ‘ ಜನಗಣ ಮನ ‘ ಹಾಡಿ ಸೆಲ್ಯುಟ್ ಮಾಡಿದ್ದು .ಗೆಳೆಯ ಗೆಳತಿಯರೊಡನೆ ತುಂಟಾಟವಾಡಿದ ದಿನಗಳು ಕಣ್ಮುಂದೆ ತೇಲಿ ಹೋದವು.
ಜ್ಞಾನಕ್ಕೆ ಹ್ಯಾಗೆ ಜಾತಿ ಮತ ಭಾಷೆಗಳ ತಾರತಮ್ಯವಿಲ್ಲ ವೋ,ಅದೇ ರೀತಿ ಬಾಲ್ಯ.ಬಾಲ್ಯ ಜೀವನಾವಸ್ಥೆಯ ಒಂದು ಅದ್ಭುತವಾದ ಘಟ್ಟ.ಎಲ್ಲರೊಡನೆ ಬೆರೆತು ಬಾಳಿದ,ಆಡಿ ದ ಸವಿ ಸವಿ ನೆನಪಿದೆ.ಈರ್ಷೆ,ಮತ್ಸರ ಎಂಬ ಪದಗಳೇ ಗೊತ್ತಿಲ್ಲದ ನಿರ‍್ಮಲ ಮನೋಭಾವ. ಮುಗ್ಧಮನ ಶುದ್ಧ ಮ ನ. ಅಂದಿನ ಪರಿಸರ ಎಷ್ಟೊಂದು ಸಕಾರಾತ್ಮಕ !ಸುತ್ತ ಮುತ್ತಲು ಧಾರ್ಮಿಕವಾಗಿ,ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿ ಕವಾಗಿ ಬೆಳವಣಿಗೆಯಾಗಲು ಸಂಪೂರ್ಣ ಹೇಳಿ ಮಾಡಿಸಿ ದಂತಹ ವಾತಾವರಣ. ಸರ್ವಸದ್ಗುಣಗಳನ್ನು ಹೊಂದಿದಂಥ ನನ್ನ ಬಾಲ್ಯ ಭೂಮಿ ಕೃಷ್ಣಾಪುರ,ಜಿ|| ಯಾದಗಿರಿ. ಮುಂದೊಂದು
ದಿನ ಅಲ್ಲಿಗೆ ಭೇಟಿ ಕೊಡುತ್ತೇನೆಂದು ನಾನು ಅಂದುಕೊಂಡಿರಲೇ ಇಲ್ಲ. ಫೆಬ್ರವರಿ ೧೫,೨೦೧೯ ಆ ಪುನರ್ಮಿಲನದ ಸುಸಂಧಿ.ಇಂಥಹ ಸದಾವಕಾಶವನ್ನು ಕಲ್ಪಿಸಿಕೊಟ್ಟ ಹಳೆಯ ವಿದ್ಯಾರ್ಥಿ ಸಂಘದ ರೂವಾರಿಗಳಿಗೆ ಮನದಲ್ಲಿ ಕೃತಜ್ಞತಾ ಭಾವವಿತ್ತು. ಬೆಂಗಳೂರಿನಿಂದ ಆ ಪುಣ್ಯ ಭೂಮಿಗೆ ಕಾಲಿಟ್ಟ ಕೂಡಲೇ ತಿರುಪತಿಗಿರಿವಾಸ ಶ್ರೀವೆಂಕ ಟೇಶನಂತೆ ಮೊದಲು ದರುಶನ ನೀಡಿದ್ದು ನಮ್ಮ ಸಮಾಜ ಪಾಠದ ಗುರುಗಳಾದ ರಾಮರೆಡ್ಡಿಯವರು.ಮನದಲ್ಲಿ ಉ ಲ್ಲಾಸ,ರೋಮಾಂಚನದೊಂದಿಗೆ ಪುಳಕಿತಗೊಂಡು ಅವರ ಪಾದಗಳಿಗೆ ನಮಸ್ಕರಿಸಿದೆ.
ಹಳೆಯ ವಿದ್ಯಾರ್ಥಿ ಸಂಘದಿಂದ ಹಮ್ಮಿಕೊಂಡಿದ್ದ ಕಾರ‍್ಯ ಕ್ರಮದ ರೂಪುರೇಷೆಯಂತೆ ಪ್ರಥಮವಾಗಿ ಗುರುವೃಂದ ವನ್ನು ಬಿಜಾಸ್ಪೂರ ಶಾಲೆಯಿಂದ ಕೃಷ್ಣಾಪುರ ಕ್ಯಾಂಪ್ ಶಾಲೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.ನೂರಾರು ವಿ ದ್ಯಾರ್ಥಿಗಳು,ಊರಿನಜನರು ಹಾಗೂ ಗುರುಗಳು,ಕಡು ಬಿಸಿಲಿನ ಶಾಖವನ್ನು ಮರೆತು ಗುರುವಂದನೆಯ ಧನ್ಯತೆ ಯ ತಂಪನ್ನು ಸವಿಯುತ್ತ ಹೆಜ್ಜೆಹಾಕಿದರು.ಇದರೊಂದಿಗೆ ಗ್ರಾಮೀಣ ಸೊಗಡಿನ ಡೊಳ್ಳು ಕುಣಿತವು ಸರ್ವರಕಣ್ಮನ ತಣಿಸಿತು.
ವಿಶಾಲವಾದ ಶಾಲಾ ಪ್ರಾಂಗಣ ಗುರುವಂದನಾ ಕಾರ‍್ಯಕ್ರ ಮದ ಮೆರವಣಿಗೆಗೆ ಹಾತೊರೆಯುತ್ತಿದ್ದಂತೆ ಕಂಡಿತು. ಪ್ರತಿ ಯೊಬ್ಬರಿಗೂ ಮಂದಹಾಸ ಬೀರಿ ಮಡಿಲಲ್ಲಿ ಕೂರಿಸಿಕೊಂ ಡಿತು ನಮ್ಮ ತರಗತಿಗೆ ಕಲಿಸಿದ ಗುರುಗಳು ಕೇವಲ ನಾಲ್ಕು ಜನ ಮಾತ್ರ ಹಾಜರಿದ್ದರು.ಉಳಿದವರು ನಮ್ಮನ್ನಗಲಿದ್ದಾ ರೆಂದು ತಿಳಿದು ತುಂಬ ನೋವಾಯಿತು.ಇನ್ನೊಮ್ಮೆ ಅವರ ದರ್ಶನ ಸಾಧ್ಯವಾಗಲಿಲ್ಲವೆಂದು ಮನ ಕೊರಗಿತು.ಗುರು ವೃಂದಕ್ಕೆ ಸನ್ಮಾನಿಸಲಾಯಿತು.ನಂತರ ಗುರುಗಳೆಲ್ಲರು ತಾವು ಅನು ಭವಿಸಿದ ಬದುಕಿನ ಸತ್ವಯುತ ನುಡಿಗಳನ್ನಾಡಿ ಸಭೆಯನ್ನು ಮೂಕ ವಿಸ್ಮಿತಗೊಳಿಸಿದರು. ಅಪಾರ ಜೀವನಾನುಭವ ವುಂಡವ ಅವರ ಕಣ್ಣುಗಳು ಒದ್ದೆಯಾದವು. ಹನಿ ಹನಿ ನೆನ ಪಿನ ಬುತ್ತಿಯನ್ನು ಸವಿಸವಿಯಾಗಿ ಹೃದಯ ತುಂಬಿ ಹಂಚಿಕೊಂಡರು.
ಈ ವೇದಿಕೆಯಲ್ಲಿ ಮತ್ತೊಂದು ಅಪರೂಪದ ಕ್ಷಣ ನಮಗೆಲ್ಲ ಕಾದಿತ್ತು.ನಮ್ಮ ಹಿರಿಯ ಗುರುಗಳಾದ ಶ್ರೀ ರಾಮರೆಡ್ಡಿಯ ವರ ಪುಸ್ತಕದ ಬಿಡುಗಡೆ ಸಮಾರಂಭ. ಪುಸ್ತಕದ ಹೆಸರು“ ಚೌಚೌಇಂಗ್ಲೀಷ “.ಇದರಲ್ಲಿ ನಾನು ಗ್ರಹಿಸಿದಂತೆ ಮೂರು ವಿಶೇಷತೆಗಳಿವೆ.ಮೊದಲನೆಯದಾಗಿ ಪುಸ್ತಕದ ಮುನ್ನುಡಿ ಶಿಷ್ಯನಿಂದ ಬರೆಯಲ್ಪಟ್ಟಿರುವುದು.ಎರಡನೇಯದಾಗಿ ಪುಸ್ತಕವು ಲೋಕಾರ್ಪಣೆಗೊಂಡಿದ್ದು ಅವರ ವಿದ್ಯಾರ್ಥಿಗಳ ಹಸ್ತದಿಂದಲೇ,ಹಾಗೂ ಮೂರನೇಯದು ಆಂಗ್ಲಭಾಷೆ ಯನ್ನು ‘ ಕಬ್ಬಿಣದಕಡಲೆ ‘ ಎಂದು ಭಾವಿಸುವ ಸರಕಾರಿ ಕನ್ನಡ ಶಾಲೆಯ ಮಕ್ಕಳಿಗೆ ನೀರುಕುಡಿದಷ್ಟೇ ಸುಲಭವಾಗಿ ತಿಳಿಯುವಂತಿರುವ ವಿವರಣಾ ಶೈಲಿ. ಇಳಿವಯಸ್ಸಿನಲ್ಲೂ ರಾಮರೆಡ್ಡಿ ಗುರುಗಳ ಉತ್ಸಾಹ ಮೆಚ್ಚುವಂಥದ್ದು.ಇಂಥ ಗುರುಗಳಿಗೆ ಶಿಷ್ಯರಾದ ನಾವೇ ಧನ್ಯರು.
ಭಾವಸಾಗರದಲ್ಲಿ ತೇಲಿ ಹೋದ ನಮ್ಮನ್ನು ಹೊಟ್ಟೆಯು ತಾಳ ಹಾಕಿ ಬಡಿದೆಬ್ಬಿಸಿತು.ಹಸಿವನ್ನು ತಣಿಸಲು ‘ಜಲೀಲ ಮತ್ತು ತಂಡದವರು’ ಸಜ್ಜಾಗಿನಿಂತಿದ್ದರು.ಶಾಲೆಯ ಪವಿತ್ರ ಮಂದಿರದಲ್ಲಿಯಾವತಾರತಮ್ಯವಿಲ್ಲದೇ ಸಾಲಾಗಿ ಕುಳಿತು ಒಟ್ಟಾಗಿಊಟಮಾಡಿದೆವು.ತಾಯಿಯ ಮಡಿಲಲ್ಲಿ ಕೂತು ಉಂಡಂತೆ ಅನುಭವವಾಯಿತು.ಇದು ಬರಿ ಶಾಲೆಯಲ್ಲ ಮಾತೃಶಾಲೆಯೆಂದೆನಿಸಿತು.ಬಾಲ್ಯದ ಶಾಲಾದಿನಗಳನ್ನು ಮೆಲುಕು ಹಾಕಿಸುವ ಇಂಥ ಗುರುವಂದನಾ ಕಾರ‍್ಯಕ್ರಮ ‘ನ ಭೂತೋ ನ ಭವಿಷ್ಯತಿ’ ಅಂದರೆ ಅತಿಶಯೋಕ್ತಿಯಾಗ ಲಾರದು.
ಕನ್ನಡಮಾದ್ಯಮ ಸರಕಾರಿ ಶಾಲೆ ಎಂದು ಕಡೆಗೆಣಿಸುವವರಿಗೆ ಕೃಷ್ಣಾಪುರ (ಬಿಜಾಸ್ಪೂರ) ಶಾಲೆ ಆದರ್ಶಪ್ರಾಯವಾ ಗಿದೆ.ಈ ಶಾಲೆಯಿಂದಕಲಿತ ವಿದ್ಯಾರ್ಥಿಗಳು ಪ್ರತಿಯೊಂದು ರಂಗದಲ್ಲಿ ಉನ್ನತಿ ಪಡೆದ್ದಿದ್ದಾರೆ.ಅಭಿಯಂತರರು,ವೈದ್ಯ ರು,ಉಪನ್ಯಾಸಕರು,ಶಿಕ್ಷಕರು,ಪತ್ರಕರ್ತರು,ಸಾಹಿತಿಗಳು,ಆರಕ್ಷಕರು,ಸಮಾಜಸೇವಕರು,ಸೈನಿಕರು ಇತ್ಯಾದಿ ಹೀಗೆ ದೇಶ ಕಾಯುವ ಮತ್ತು ದೇಶ ಕಟ್ಟುವ ಕ್ಷೇತ್ರದಲ್ಲಿ ಸೇವೆ ಸ ಲ್ಲಿಸುತ್ತಿದ್ದಾರೆ.ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಬದುಕನ್ನು ತಾ ವೇ ಸಮರ್ಥವಾಗಿ ಸಾಗಿಸಲು ದೃಢವಾದ ನೆಲೆಯನ್ನು ಕಂ ಡುಕೊಂಡಿದ್ದಾರೆ.ಇಂಥ ಸರಕಾರಿ ಶಾಲೆಗಳೇ ಸಮಾಜದ ಇಂದಿನ ಅವಶ್ಯಕತೆಯೂ ಸಹ.
.
**************************************************
Very nice