ಕಾವ್ಯಯಾನ

ಮೌನ ಮಾತಾದಾಗ

landscape photo of trees on under cloudy sky

ಸರೋಜಾ ಶ್ರೀಕಾಂತ ಅಮಾತಿ

ಎದೆಯಗೂಡೊಳಗೆ ಬಚ್ಚಿಟ್ಟು
ಮರೆಮಾಚಿದ ಮಾತುಗಳೆಷ್ಟೋ!?
ನುಡಿಯದೇ ಮೌನರಾಗವಾದ
ಶ್ರುತಿ,ತಾಳಗಳಿಲ್ಲದ ಹಾಡುಗಳೆಷ್ಟೋ!!?

ತುಟಿಯ ಬಿಟ್ಟು ಹೊರಬರದೇ
ಅಡಗಿಸಿಟ್ಟ ನಲಿವು-ನೋವ ಬಗೆಯ!
ಬಿಡಿ ಬಿಡಿಸಿ ನಿನ್ನ ಮುಂದಿಡುವೆ ನಾನೀಗ
ಕೇಳದಿರಬೇಡ ಗೆಳತಿ ಮನದ ಮಾತೀಗ!!

ಅಳಿಯದೆ ಉಳಿದ ಭಾವಗಳಿಗೆ 
ಜೀವ ಬಂದಿದೆ ಮತ್ತೊಮ್ಮೆ ಈಗ!
ಮನದ ಮೂಲೆಯಲಿ ಅವಿತಿರುವ
ಆಸೆ ಹಕ್ಕಿಗೆ  ಹಾರಲು ರೆಕ್ಕೆ ಬಂತೀಗ!!

ನನ್ನೀ ಮೌನ ಮಾತಾಗಬೇಕೆಂದರೂ
ಬೇಕು ನಿನ್ನ ಸನಿಹ ಸಾಂಗತ್ಯ
ನಾ ಬರೆವ ಲೇಖನಿ ನೀನೆಂಬುದು ಸತ್ಯ!
ಮತ್ತೇ ಮತ್ತೇ ಬಂದು ಸೇರು ನನ್ನ ಕೈಗೆ ನೀ ನಿತ್ಯ

ಮರೆತು ಕೂಡ ಮರೆಯಾಗದಿರು
ಕಂಗಳ ಹೊಳಪಿನಿಂದ!
ಕನಸ ಕಾಣೋ ಕಲ್ಪನೆಯ ಬಗೆಯಿಂದ
ಬಯಸಿದೆ ಮನ ಸದಾ ನಿನ್ನ ಸ್ನೇಹ ಸಂಬಂಧ!!

ಅವಿತು ಕೂತ ಮೌನಪದಗಳಿಗೆಲ್ಲ
ಮಾತೆಂಬ ಕವಿತೆಯಾಗೋ ಹೊಂಗನಸೀಗ!
ನನ್ನೊಲವಿನ ಗೆಳತಿ ಬಂದು ಬಿಡು 
ತುಟಿಯಂಚಿನಿಂದ ಆಚೆಯೀಗ!! 
ಮತ್ತೇ ಮಾತು ಮೌನವಾಗುವ ಮುನ್ನ!!!


Leave a Reply

Back To Top