ಮತ್ತೆಂದೂ ನಿನ್ನ ನೆನೆಯದೆ!
ನಾನೀಗ
ಬರೆಯುವುದ ನಿಲ್ಲಿಸಿರಬಹುದು
ಹಾಗೆಯೇ
ನಿನ್ನ ನೆನೆಯುವುದನ್ನೂ
ಮೊದಲಿನಂತೆ ಅಕ್ಷರಗಳ ಸಹಕರಿಸುತಿಲ್ಲ
ಹುಟ್ಟಿದ ಶಬ್ದಗಳೂ ಅರ್ಥ ಕೊಡುತಿಲ್ಲ
ಘನಘೋರ ಬದುಕಿನ ಹಲವು ಹಗಲುಗಳು
ಅಸ್ಥವ್ಯಸ್ಥವಾಗಿ ಸರಿದು ಹೋದವು
ಓಡುವ ರೈಲಿನ ಪಕ್ಕದ ಗಿಡಗಂಟೆಗಳಂತೆ
ಆಯ್ದುಕೊಂಡಿದ್ದೆನೆ ನಾನೀಗ
ಇರುಳುಗಳನ್ನು
ಅದು ತಂದೊಡ್ಡುವ ಸಾವಿನಂತಹ ಏಕಾಕಿತನವನ್ನು
ಮೋಡಗಳ ಹಿಂದಿನ ಬೆತ್ತಲೆ ಚಂದ್ರ
ಮೊದಲಿನಂತೆ ಕಣ್ಣಾ ಮುಚ್ಚಾಲೆಯಾಡುವುದಿಲ್ಲ
ಬೀಸುವ ಗಾಳಿಗೂ ಉತ್ಸಾಹದ ಉಸಿರಿಲ್ಲ
ಎಲ್ಲ ಮುಗಿದು ಹೋದವರ ಅಂಗಳದಲ್ಲಿ
ಮಿಂಚು ಹುಳುವೂ ಮಿನುಗುವುದಿಲ್ಲ
ನನ್ನ ಪಾಪಗಳು ನಿರಂತರವಾಗಿ
ಹಿಂಬಾಲಿಸುತ್ತಿಯೆಂಬ
ಅರಿವಿನಲ್ಲಿ ಬದುಕಲೆತ್ನಿಸುತ್ತೇನೆ.
ನಿನ್ನನ್ನು ನೆನೆಯದೆ
ಏನನ್ನೂ ಬರೆಯದೆ!
ಕು.ಸ.ಮಧುಸೂದನ ರಂಗೇನಹಳ್ಳಿ
ಓ…
ಕಲ್ಪನೆ ಗಳ ಹರಿ ಕಾರನೆ..
ಮನದ ಬಾಗಿಲು ತೆಗೆದು ಮುಂದೆ ನಡೆ…
ಅಂಗಳದಲ್ಲಿ ಹಕ್ಕಿಗಳ ಹಿಂಡೊಂದ ಸಾಕು..
ಕವಿದಿರುವ ಕತ್ತಲ ನಡುವೆ
ಸ್ನೇಹದ ಮಿಣುಕುಹುಳ ಮಿನುಗಲಿ.
ಜೀವನ ಕಾವ್ಯದ ಪುಟಗಳಲ್ಲಿ
ನೋವುಗಳ ಪುಟಗಳು ಹಲವಿರಬಹುದು
ಅಂಗಳದಲ್ಲಿ ನಲಿವಿನ ರಂಗೋಲಿ ಮೂಡಲಿ..