ಗಜಲ್
ಗಜಲ್ ರತ್ನರಾಯಮಲ್ಲ ಮಕ್ಕಳಾಡುವ ಅದಲು-ಬದಲು ದೊಡ್ಡವರು ಆಡುತಿದ್ದಾರೆ ಇಂದುದಡ್ಡತನದಿಂದ ಸಮಾಜದ ನೆಮ್ಮದಿಗೆ ವಿಷ ಹಾಕುತಿದ್ದಾರೆ ಇಂದು ತಲೆ ಹಿಡಿಯುವವರ ದಂಡು ಕೌರವರನ್ನೂ ಮೀರಿಸುತ್ತಿದೆ ಇಂದುಸಾಕ್ಷರರೆ ಮೌಲ್ಯಗಳನು ರಣಹದ್ದುಗಳಂತೆ ತಿನ್ನುತಿದ್ದಾರೆ ಇಂದು ಶೀಲವು ಹಣದ ನಶೆಯಲ್ಲಿ ಶಿಥಿಲವಾಗುತಿರುವುದೆ ಹೆಚ್ಚು ಇಂದುವಾಸನೆಯಲ್ಲಿ ಪರಿಚಿತರೆ ಅಪರಿಚಿತರಾಗಿ ಕೊಲ್ಲುತಿದ್ದಾರೆ ಇಂದು ಮಾಂಸ ಮಾರುವ ಸಂತೆಯಲ್ಲಿ ಮನಸ್ಸು ಅನಾಥವಾಗಿ ನರಳುತಿದೆನಮ್ಮವರೇ ನಮ್ಮ ಮಾನ ಹರಾಜು ಮಾಡಲು ಕಾಯುತಿದ್ದಾರೆ ಇಂದು ಕಲಬೆರಕೆಯ ತಾಂಡವ ಪ್ರೀತಿಯಲ್ಲಿ ಸಹಿಸಲು ಆಗುತಿಲ್ಲ ‘ಮಲ್ಲಿ’ಯಾರನ್ನೂ ದೂರಲಾಗದೆ ಜನರು ದಿನಾಲೂ ಸಾಯುತಿದ್ದಾರೆ ಇಂದು […]
ಗಜಲ್
ಗಜಲ್ ಸಿದ್ಧರಾಮ ಕೂಡ್ಲಿಗಿ ಮನದ ದುಗುಡ ಕಳೆಯಲಿಕ್ಕೆ ಇರುವುದೊಂದು ಕಿಟಕಿ ಜಗದ ತಮವ ತೊಡೆಯಲಿಕ್ಕೆ ಇರುವುದೊಂದು ಕಿಟಕಿ – ಅರಿವ ಕುಡಿದು ಎದೆಯ ತೆರೆದು ಮೂಡಿತೊಂದು ಕನಸು ಬಯಲ ಹಕ್ಕಿ ಮೇಲೆ ಹಾರಲಿಕ್ಕೆ ಇರುವುದೊಂದು ಕಿಟಕಿ – ಏನೊಂದೂ ಇರದ ತಾಣದಿಂದ ತೇಲಿ ಬಂತೊಂದು ರಾಗ ರಾಗದೊಳಗೆ ರಾಗ ಮೂಡಲಿಕ್ಕೆ ಇರುವುದೊಂದು ಕಿಟಕಿ – ಸೂರ್ಯ ಚಂದ್ರ ತಾರೆ ಧೂಮಕೇತು ಮತ್ತದೇ ಕಾಲಚಕ್ರ ಜೀವಸೆಲೆಯ ಸುರುಳಿ ಮೂಡಲಿಕ್ಕೆ ಇರುವುದೊಂದು ಕಿಟಕಿ – ನೊಂದು ಬೆಂದು ದಹಿಸಿಕೊಂಡು ಅರಳಿತೊಂದು […]
ಗಜಲ್
ಗಜಲ್ ಸಿದ್ದರಾಮ ಹೊನ್ಕಲ್ ಹೇಳಬೇಕಾದ ಮಾತೆಲ್ಲವನು ಹೇಳಿಯಾಯಿತು ಮತ್ತೇನು ಮಾಡಲಿಕೇಳಬೇಕಾದ ಮಾತೆಲ್ಲ ಮತ್ತೆ ಕೇಳಿಯಾಯಿತು ಮತ್ತೇನು ಮಾಡಲಿ ತಿಳಿಯದವರಿಗೆ ತಿಳಿಸಬಹುದು ತಿಳಿದು ಮೌನ ಆದರೇನು ಮಾಡಲಿಮನದ ಬಯಕೆ ಬಾಯಿಬಿಟ್ಟು ಕಂಗಾಲಾಯಿತು ಮತ್ತೇನು ಮಾಡಲಿ ಕಾಯ ಕಾಯಬೇಕು ನಿಜ ಆ ಕಾಯುವಿಕೆಗೆ ಕೊನೆ ಯಾವಾಗಪಿಸುಮಾತು ಬಿಸುಮಾತಾಗಿ ಆಟವಾಯಿತು ಮತ್ತೇನು ಮಾಡಲಿ ಪ್ರೀತಿಯಲಿ ಬಿದ್ದವರೆಲ್ಲ ಹುಚ್ಚರೆಂಬ ಸತ್ಯ ಇಡೀ ಜಗವು ಬಲ್ಲದುಸತ್ಯ ಹುಚ್ಚೆನಿಸಿ ಬಾಗಿಲು ಮುಚ್ಚಿಯಾಯಿತು ಮತ್ತೇನು ಮಾಡಲಿ ಹೇಳಿ ಕೇಳಿ ಬೇಸತ್ತು ಬಸವಳಿದು ಹೋಗಿಹನು ನೀ ಬಲ್ಲೆ ಸಾಕಿತರವಲ್ಲ […]
ಗಜಲ್
ಗಜಲ್ ಶ್ರೀ ಲಕ್ಷ್ಮಿ ಅದ್ಯಪಾಡಿ ನಿನ್ನ ಉಸಿರ ರಾಗಕ್ಕಾಗಿ ಹುಡುಕಾಡುತ್ತಿರುವೆನಿನ್ನ ಒಲವ ಪಿಸುನುಡಿಗಾಗಿ ಹುಡುಕಾಡುತ್ತಿರುವೆ.. ಕದ್ದು ನೋಡುವ ಸಾವಿರಾರು ಕಣ್ಣುಗಳ ನಡುವೆನಿನ್ನ ಪ್ರೇಮದ ನೋಟಕ್ಕಾಗಿ ಹುಡುಕಾಡುತ್ತಿರುವೆ.. ನನ್ನ ಕುಡಿ ನೋಟಕ್ಕೆ ಕಾದಿವೆ ನೂರು ಭ್ರಮರಗಳುಕೆನ್ನೆ ಸವರಿದ ಪುಟ್ಟ ಹೂವಿಗಾಗಿ ಹುಡುಕಾಡುತ್ತಿರುವೆ.. ಬಣ್ಣಗಳಲ್ಲಿ ಅದ್ದಿದ ಸಾವಿರ ಕುಂಚಗಳು ಕಾದಿವೆನಿನ್ನ ನೆನಪಿನ ಒಂದು ರೇಖೆಗಾಗಿ ಹುಡುಕಾಡುತ್ತಿರುವೆ ಜಗದ ಬನದೊಳು ಅರಳಿವೆ ವಿಧವಿಧವಾದ ಹೂಗಳುಒಡಲ ಕಂಪು ಸೂಸಿದ ಕಸ್ತೂರಿಗಾಗಿ ಹುಡುಕಾಡುತ್ತಿರುವೆ *****************************
ಗಜಲ್
ಗಜಲ್ ಸಿದ್ದರಾಮ ಹೊನ್ಕಲ್ ನಿನ್ನ ನೋಟ ಬಲು ಹಿತ ನೀಡಿದೆ ನೀ ಕಾಡಿಸುತ್ತ ಕೂಡಬೇಡದಿನಗಳು ದೀರ್ಘವಾಗಿಹವು ಆ ಮಾತನೇ ನೀ ಮುತ್ತಾಗಿಸಬೇಡ ನನ್ನ ಕಣ್ಣ ರೆಪ್ಪೆಗಳು ಕಣ್ಢೀರ ಬಿಸಿಗೆ ಕಣ್ಣೀರು ಮಿಡಿದಿವೆಕಲ್ಲು ಹೃದಯವಲ್ಲ ನಿನ್ನದು ಇಷ್ಟು ಕಠೋರ ನಟನೆಬೇಡ ಬೀಸುವ ತಂಗಾಳಿ ಸೂರ್ಯಚಂದ್ರರ ಸಹಜತೆ ಬೇಡವೆಜಗಕೆ ಬಂದವರಿಗೆಲ್ಲ ಒಂದೊಂದು ಬವಣೆ ನೀ ಚಿಂತಿಸಬೇಡ ನಾನೊಂದು ತೀರ ನೀನೊಂದು ತೀರವೆಂದು ನೊಂದೆಯಲ್ಲಾಮಧ್ಯೆ ಹರಿವ ಪ್ರೇಮದ ಹರಿವು ತಿಳಿಯದೇ ನೀ ಇರಬೇಡ ಇಂದಲ್ಲಾ ನಾಳೆ ವಜ್ರಲೇಪಿತ ಕುಸುಮ ಸುಖದಿ ಅರಳಿತುಕಳವಳಿಸದಿರು […]
ಗಜಲ್
ಗಜಲ್ ಅರುಣಾ ನರೇಂದ್ರ ಬಾನು ಬಂಜೆಯಾಗಿದೆ ನಿಲ್ಲು ಮೋಡ ಕಟ್ಟಲಿ ನವಿಲಾಗಿ ಬಿಚ್ಚಿಕೊಳ್ಳುತ್ತೇನೆಭೂಮಿ ಬರಡಾಗಿದೆ ನಿಲ್ಲು ಸೋನೆಸುರಿಯಲಿ ಮಳೆ ಬಿಲ್ಲಾಗಿ ಬಿಚ್ಚಿಕೊಳ್ಳುತ್ತೇನೆ ಹಿಗ್ಗಿರದ ಮೊಗ್ಗಿನೆದೆಯಲಿ ಅದೆಂಥ ಕಠೋರ ಅಡಗಿದೆ ಸಜನಾನಗೆ ಮಿಂಚನ್ನೊಮ್ಮೆ ಮುಡಿಸು ತುಟಿ ಬಿರಿದು ಹೂವಾಗಿ ಬಿಚ್ಚಿಕೊಳ್ಳುತ್ತೇನೆ ಬಿಡಿಸಲಾಗದ ಬಂಧದ ಸಾವಿರಾರು ಎಳೆಗಳು ಸಿಕ್ಕುಗಟ್ಟಿವೆಒಂದೊಂದೇ ಗಂಟು ನಾಜೂಕಾಗಿ ಬಿಡಿಸು ಭಾವವಾಗಿ ಬಿಚ್ಚಿಕೊಳ್ಳುತ್ತೇನೆ ಧಗಧಗಿಸುವ ಬಿಸಿಲ ಝಳಕಿಂತ ಒಡಲ ಬೇಗೆಯೇ ಹೆಚ್ಚು ಸುಡುತ್ತಿದೆನೋವಿರಲಿ ಕಾವಿರಲಿ ಜೊತೆಗೆ ನೀನಿರಲು ಕೊಡೆಯಾಗಿ ಬಿಚ್ಚಿಕೊಳ್ಳುತ್ತೇನೆ ಕಾಲ ಮರೆವೆಂಬ ಮುಲಾಮು ಸವರಿ ಮನದ […]
ಗಜಲ್
ಗಜಲ್ ಸಿದ್ಧರಾಮ ಕೂಡ್ಲಿಗಿ ಪರಿಶ್ರಮದಿಂದ ನೆಲಕೆ ಉದುರಿದ ಬೆವರ ಮುತ್ತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ಕಾಲಗರ್ಭದಲ್ಲಿ ಕರಗಿಹೋಗುವ ಬದುಕಿನ ಚಿತ್ರಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ನಗರಗಳ ತುಂಬಾ ಇರುಳಾದರೆ ಸಾಕು ಬಗೆ ಬಗೆಯ ಭಾವಗಳ ವೇಷಗಳ ಕುಣಿತ ಮಣಿತ ಬೆಳಕಿನಲಿ ವಿನಾಕಾರಣ ಸೋರಿಹೋಗುವ ಕ್ಷಣಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಬೀದಿಯ ಬದಿಯಲ್ಲಿ ಖಾಲಿ ಪಾತ್ರೆಯಂಥ ಹೊಟ್ಟೆ ಖಾಲಿ ತಟ್ಟೆಯಂಥ ಕಣ್ಣುಗಳು ಸಿರಿತನದ ಸೊಕ್ಕಿನಲಿ ಚೆಲ್ಲಿದ ಅನ್ನದ ಅಗುಳುಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಮಸಣದಂತಹ ಖಾಲಿ ಎದೆಯಲಿ ಮಿಡಿತವೊಂದನ್ನು ಬಿಟ್ಟು […]
ಗಜಲ್
ಗಜಲ್ ವೀರಅಮರಸುತೆ ಮನದೊಳಗಿನ ಕಿಚ್ಚಿನಿಂದ ದೀಪ ಹೊತ್ತಿಸಬೇಡ ಗೆಳೆಯನಿರ್ಮಲ ಜ್ಯೋತಿ ಬೆಳಗಿಸು ಅಶಾಂತಿಯ ಕದವ ತಟ್ಟಬೇಡ ಗೆಳೆಯ ಇನ್ನೆಷ್ಟು ದಿನ ಹಗೆಯ ಸಾಧಿಸುವೆ ಹೊಗೆಯ ಹೊತ್ತಿಸುವೆಶರಣಾಗು ಸ್ನೇಹಕೆ ಕರಿನೆರಳ ಗತವನು ಮರುಕಳಿಸಬೇಡ ಗೆಳೆಯ ಇರುವ ಸೇತುವೆಯ ಬೀಳಿಸುವೆ ಮನಸ್ಸು ದೂರ ಮಾಡುವೆ ಏಕೆಬಂಧ ಬೆಸೆಯುವ ನಾವು ಅಡ್ಡಗೋಡೆ ಕಟ್ಟಬೇಡ ಗೆಳೆಯ ತೋರಿಕೆಗೆ ಹಣತೆ ಎಣ್ಣೆಯಾಗೋಣ ಎಂಬ ಜಂಭವೇಕೆಶಮಭಾವಬತ್ತಿಯಾಗಿ ಬೆಳಕ ಬೆಳಗುವ ಬಿರುಗಾಳಿ ಬೀಸಬೇಡ ಗೆಳೆಯ ಸಕಲರ ಬಾಳಿಗೆ ಭಾಗ್ಯಜ್ಯೋತಿಯಾಗುವ ಬಯಕೆ ಎನಗೆ ಸಾಕಿನಂದಾದೀಪಕೆ ತೈಲವಾಗುವ ಪ್ರೀತಿ ಪ್ರಣತಿಯ […]
ಗಜಲ್
ಗಜಲ್ ಶಾಲಿನಿ ಆರ್. ಅನುರಾಗ ಆರಾಧನೆಯಿದೆ ಕಣ್ಣಂಚಿನ ಕೊನೆಯಲಿ ಮಿಂಚು ಸುಳಿದಿದೆ ನಾ ನಿನ್ನೆನೆವಾಗ/ಮನದಾಳದ ಮಾತಲ್ಲಿ ನವಿರಾದ ಭಾವೋತ್ಕರ್ಷ ಸಂಚು ಅಡಗಿದೆ ನಾ ನಿನ್ನ ನೆನೆವಾಗ// ನೆನೆದಷ್ಟು ಮನ ಮೃದುಲತೆಯ ತವರು,ಪೇಮ ಫಲದ ಗೊಂಚಲು/ರಾಗದೊಲವ ಎಲರು ಹಾದಿಗುಂಟ ತೂಗುತಿದೆ ನಾ ನಿನ್ನ ನೆನೆವಾಗ//. ಬಾನಲಿ ಹೊಳೆವ ತಾರೆಗಳ ಕಾಂತಿಗೆ ನಿನ್ನ ವದನ ಚಂದಿರನ ಪ್ರತಿಫಲನವು/ಆಹಾ! ಮನವದು ನಿಲುಕದೆ ಒಲವಿನಂಕಣಕ ಬರೆಯುತಿದೆ, ನಾ ನಿನ್ನ ನೆನೆವಾಗ// ತಂಪೆಲರ ಒಲವಿಗೆ ಮನವು ಆರ್ದ್ರಗೊಂಡು ಕರಗುತಿದೆ/ತನುವದು ಮುದದಿ ತಣಿದುಚರ್ವಿತ ಒಲವು ಹೊನಲಾಗಿದೆ, […]
ಗಜಲ್
ಗಜಲ್ ಸಿದ್ಧರಾಮ ಹೊನ್ಕಲ್ ನಾ ನಿನ್ನ ಎಷ್ಟು ಪ್ರೇಮಿಸುತ್ತಿರುವೆನೆಂದು ನನಗೆ ಸರಿ ಗೊತ್ತಿಲ್ಲನೀ ಇಲ್ಲದೇ ನಾ ಬದುಕಿರಲಾರೆನೆಂದಿಗೂ ಅನ್ನೋದು ಸುಳ್ಳಲ್ಲ ನಿನ್ನನ್ನು ಬೇರೆಯವರು ಒಲಿಸಿಯಾರೆಂದು ಸದಾ ಭಯವಿದೆ ಈ ಹೃದಯಕೆಬಹು ಕಷ್ಟದಿ ಮತ್ತೆ ಮತ್ತೆ ಸಮಾಧಾನಿಸುವೆ ಹಾಗೇನು ಆಗಲಿಕ್ಕಿಲ್ಲ ಏನೇನು ಕಾಳಜಿ ಮಾಡಿ ಸಂಭಾಳಿಸಿಕೊಳ್ಳುವೆ ಅಂತ ನಿನಗೇನು ಗೊತ್ತುಈ ಮನಸ್ಸು ತಕರಾರಿಲ್ಲದೆ ಒಳಗೆ ನೊಯ್ಯುತ್ತಿದೆ ನಿನಗೆ ಅರಿವಿಲ್ಲ ಬೇಡವೆ ಮುಗಿಸು ಈ ಕಣ್ಣುಮುಚ್ಚಾಲೆಯಾಟ ಕಳೆಯಲಿ ಮಧು ಬಟ್ಟಲಲ್ಲಿಎಷ್ಟು ಸಲ ಮನದ ಮಾತು ಹೇಳಿದರೂ ನಿನ್ನ ಮನದ ಹಾಡೇ […]